

ಪ್ರಮುಖ ಮುಖ್ಯಾಂಶಗಳು
ಕೋನಸಾಗರ ಉಣ್ಣೆ ಕೈಮಗ್ಗ ಸಹಕಾರ ಸಂಘದ 8 ನಿರ್ದೇಶಕರ ಸ್ಥಾನಗಳಿಗೆ ಭಾನುವಾರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಚುನಾವಣೆ ನಡೆಯಲಿದೆ. 745 ಮತದಾರರಿದ್ದು, 2 ಮತಗಟ್ಟೆಗಳ ವ್ಯವಸ್ಥೆ ಮಾಡಲಾಗಿದೆ.
ಸಂಘದ ಆರಂಭದಿಂದಲೂ ಇಲ್ಲಿಯವರೆಗೂ ಅವಿರೋಧವಾಗಿಯೇ ನಿರ್ದೇಶಕರ ಆಯ್ಕೆ ನಡೆದಿದೆ. ಈ ಬಾರಿ ಸ್ಪರ್ಧೆಯ ತೀವ್ರತೆಯಿಂದ ಪ್ರಥಮ ಬಾರಿ ಚುನಾವಣೆ ನಡೆಯುತ್ತಿದೆ.