ಕಡಿಮೆ ತಲಾದಾಯ ಹೊಂದಿರುವ ದೇಶಗಳಲ್ಲಿ ಭಾರತವೂ ಒಂದು

 ಚಿತ್ರದುರ್ಗದಲ್ಲಿ ಮಂಗಳವಾರ ಮಾನವ ಅಭಿವೃದ್ಧಿ ವರದಿ-೨೦೨೫ರ ಕುರಿತು ಆಯೋಜಿಸಿದ್ದ ಕಾರ್ಯಾಗಾರದಲ್ಲಿ ಡಾ. ಆಕಾಶ್ ಮಾತನಾಡಿದರು. ಎಸ್. ಬಸವರಾಜ್, ಡಾ. ರಂಗಸ್ವಾಮಿ ಇತರರಿದ್ದರು.
ಚಿತ್ರದುರ್ಗದಲ್ಲಿ ಮಂಗಳವಾರ ಮಾನವ ಅಭಿವೃದ್ಧಿ ವರದಿ-೨೦೨೫ರ ಕುರಿತು ಆಯೋಜಿಸಿದ್ದ ಕಾರ್ಯಾಗಾರದಲ್ಲಿ ಡಾ. ಆಕಾಶ್ ಮಾತನಾಡಿದರು. ಎಸ್. ಬಸವರಾಜ್, ಡಾ. ರಂಗಸ್ವಾಮಿ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ವಾಸ್ತವ ಅಂಕಿ ಅಂಶಗಳ ಕ್ರೂಢೀಕರಣ
  • ಮಾನವ ಅಭಿವೃದ್ಧಿ ವರದಿ
  • ಜಿಪಂ ಸಿಇಒ ಡಾ.ಆಕಾಶ್ ಹೇಳಿಕೆ
ಚಿತ್ರದುರ್ಗ: ಜಿ¯್ಲÉಯ ಸುಸ್ಥಿರ ಅಭಿವೃದ್ಧಿಗೆ ನಿಖರ ಹಾಗೂ ವಾಸ್ತವ ಅಂಕಿ ಅಂಶಗಳ ಕ್ರೂಢೀಕರಣ ಅಗತ್ಯ ಎಂದು ಜಿಪಂ ಸಿಇಒ ಡಾ. ಆಕಾಶ್ ಅಭಿಪ್ರಾಯಪಟ್ಟರು.
ಜಿಪಂ ಸಭಾಂಗಣದಲ್ಲಿ ಮಾನವ ಅಭಿವೃದ್ಧಿ ವರದಿ-೨೦೨೫, ಸಮಗ್ರ ಮತ್ತು ಸುಸ್ಥಿರ ಜಿ¯್ಲÁ ಅಭಿವೃದ್ಧಿ ದೂರದೃಷ್ಟಿ ಯೋ ಜನೆ-೨೦೩೧ರ ಕುರಿತು ಜಿ¯್ಲÁ ಹಾಗೂ ತಾಲೂಕು ಮಟ್ಟದ ಅಽಕಾರಿಗಳಿಗೆ ಮಂಗಳವಾರ ಆಯೋಜಿಸಿದ್ದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಭಾರತ ೪ನೇ ಅತಿದೊಡ್ಡ ಆರ್ಥಿಕ ವ್ಯವಸ್ಥೆ ಹೊಂದಿರುವ ರಾಷ್ಟçವಾಗಿದೆ. ಆದರೂ ವಿಶ್ವದಲ್ಲೇ ಅತಿ ಕಡಿಮೆ ತಲಾದಾಯ ಹೊಂದಿರುವ ದೇಶಗಳಲ್ಲಿ ಒಂದಾಗಿರುವುದು ವೈರುಧ್ಯ. ಸ್ಥಳೀಯವಾಗಿ ಜನರಿಗೆ ಉದ್ಯೋಗ ದೊರೆತು ಆದಾಯ ಮಟ್ಟ ಹೆಚ್ಚಿದಾಗ ಮಾತ್ರ ಸುಸ್ಥಿರ ಅಭಿವೃದ್ಧಿ ಸಾಧ್ಯ. ಈ ನಿಟ್ಟಿನಲ್ಲಿ ಸರ್ಕಾರಿ ಅಽಕಾರಿಗಳು ಸಂಗ್ರಹಿಸುವ ದತ್ತಾಂಶಗಳು ಅತಿ ಮುಖ್ಯ ಎಂದು ಹೇಳಿದರು.
ದಕ್ಷಿಣ ಕರ್ನಾಟಕ ಭಾಗದ ಜಿ¯್ಲÉಗಳಲ್ಲೇ ಚಿತ್ರದುರ್ಗ ಅತ್ಯಂತ ಕಡಿಮೆ ತಲಾದಾಯ ಹೊಂದಿದೆ. ರಾಜ್ಯದ ಸರಾಸರಿ ತಲಾ ಆದಾಯ ೩ ಲಕ್ಷ ರೂ. ಇದ್ದರೆ, ಜಿ¯್ಲÉಯ ತಲಾ ಆದಾಯ ರೂ. ೧.೭೭ ಲಕ್ಷವಿದೆ. ಜಿ¯್ಲÉಯಲ್ಲಿ ಶೇ. ೫೬.೬೭ರಷ್ಟು ಎಸ್ಸಿ-ಎಸ್ಟಿ ವಿದ್ಯಾರ್ಥಿಗಳು ಸರ್ಕಾರಿ ಶಾಲೆಗಳಲ್ಲಿ ವ್ಯಾಸಾಂಗ ಮಾಡುತ್ತಿದ್ದು, ಬೇರೆ ಜಿ¯್ಲÉಗಳಿಗೆ ಹೋಲಿಸಿದರೆ ಈ ಪ್ರಮಾಣ ಅತಿ ಹೆಚ್ಚಾಗಿದೆ ಎಂದರು.
ಜಿ¯್ಲÉ ಶೈಕ್ಷಣಿಕವಾಗಿ ತುಂಬಾ ಹಿಂದುಳಿದಿದೆ. ದ್ವಿತೀಯ ಪಿಯುಸಿ -Àಲಿತಾಂಶದಲ್ಲಿ ರಾಜ್ಯಕ್ಕೆ ೨೮ನೇ, ಎಸ್ಸೆಸ್ಸೆಲ್ಸಿಯಲ್ಲಿ ೨೩ನೇ ಸ್ಥಾನದಲ್ಲಿದೆ. ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳ ಶೈಕ್ಷಣಿಕ ಸಾಧನೆ ತೀರಾ ಕಳಪೆ ಮಟ್ಟದಲ್ಲಿದೆ. ಇತ್ತೀಚಿನ ಶೈಕ್ಷಣಿಕ ವರದಿಯೊಂದರಲ್ಲಿ ೬ರಿಂದ ೮ನೇ ತರಗತಿಯಲ್ಲಿ ವ್ಯಾಸಾಂಗ ಮಾಡುತ್ತಿರುವ ಶೇ. ೪೮ರಷ್ಟು ವಿದ್ಯಾರ್ಥಿಗಳಿಗೆ ೨ ನೇ ತರಗತಿಯ ಪಠ್ಯ ಪುಸ್ತಕ ಓದಲು ಬರುವುದಿಲ್ಲ.
ಶೇ. ೩೬ರಷ್ಟು ಮಂದಿಗೆ ಎರಡಂಕಿಯ ಕೂಡುವಿಕೆ, ಕಳೆಯುವಿಕೆ, ಗುಣಾಕಾರ ಹಾಗೂ ಭಾಗಕಾರ ಲೆಕ್ಕಗಳನ್ನು ಮಾಡಲು ಬರದಂತಹ ಸ್ಥಿತಿ ಇದೆ. ಇಂತಹ ವಿದ್ಯಾರ್ಥಿಗಳು ಮುಂದೆ ಎಸ್ಸೆಸ್ಸೆಲ್ಸಿ, ಪಿಯುಸಿಯಲ್ಲಿ ಉತ್ತಮ -Àಲಿತಾಂಶ ತರಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.
ಜಿ¯್ಲÉಯಲ್ಲಿ ಸಮುದಾಯದ ಆರೋಗ್ಯ, ಪೌಷ್ಟಿಕಾಂಶ, ವಾಣಿಜ್ಯ, ವ್ಯಾಪಾರ, ಕೈಗಾರಿಕೆ ಹಾಗೂ ಕೃಷಿ ಕ್ಷೇತ್ರದಲ್ಲೂ ಅತ್ಯಂತ ಹಿಂದುದಿಳಿದೆ. ಇವುಗಳನ್ನು ಹೋಗಲಾಡಿಸಿ, ಸಾಮಾಜಿಕ ಬದಲಾವಣೆ ತಂದು, ಜಿ¯್ಲÉಯ ಜನರ ಆದಾಯ ಹಾಗೂ ಜೀವನ ಮಟ್ಟ ಸುಧಾರಿಸಲು ಅಗತ್ಯವಿರುವ ಅಂಕಿ-ಅAಶಗಳನ್ನು ಅಽಕಾರಿಗಳು ಕ್ರೋಢಿಕರಿಸಿದರೆ, ಮುಂಬರುವ ವರ್ಷಗಳಲ್ಲಿ ಇವುಗಳ ನಿವಾರಣೆಗೆ ಸರ್ಕಾರ ಯೋಜನೆ ರೂಪಿಸಲು ಸಹಕಾರಿಯಾಗಲಿದೆ ಎಂದು ತಿಳಿಸಿದರು.
ಸರ್ಕಾರದ ಪದನಿಮಿತ್ತ ಜಂಟಿ ಕಾರ್ಯದರ್ಶಿ ಎಸ್. ಬಸವರಾಜ್ ಮಾತನಾಡಿ, ಕಾರ್ಯಾಗಾರದ ಮುಖ್ಯ ಉದ್ದೇಶ ಮಾನವ ಅಭಿವೃದ್ಧಿ ಸೂಚ್ಯಂಕ-೨೦೨೫ರಲ್ಲಿ ಜಿ¯್ಲÉಯ ಜನರ ಜೀವನ ಶೈಲಿ, ಆರ್ಥಿಕ ಮಟ್ಟ ಹಾಗೂ ವಸ್ತುಸ್ಥಿತಿ ಹೇಗಿದೆ ಎಂಬುದನ್ನು ತಿಳಿಯುವುದಾಗಿದೆ. ಇದಕ್ಕಾಗಿ ಅನೇಕ ಇಲಾಖೆ ಅಽಕಾರಿಗಳು ವಿವಿಧ ರೀತಿಯ ಅಂಕಿ-ಅAಶಗಳನ್ನು ವಾಸ್ತವ ನೆಲೆಗಟ್ಟಿನಲ್ಲಿ ನೀಡಬೇಕು. ಇದನ್ನು ಆಧಾರಿಸಿ ಅಭಿವೃದ್ಧಿಗೆ ಸರ್ಕಾರ ಕ್ರಮವಹಿಸಲಿದೆ ಎಂದರು.
ಜಿಪA ಉಪ ಕಾರ್ಯದರ್ಶಿ ಡಾ. ರಂಗಸ್ವಾಮಿ, ಮುಖ್ಯ ಯೋಜನಾಽಕಾರಿ ಸಿ.ಎಸ್. ಗಾಯತ್ರಿ, ಅರ್ಥಶಾಸö ಪ್ರಾಧ್ಯಾಪಕರಾದ ಡಾ. ಹುಚ್ಚೇಗೌಡ, ಡಾ. ಮುನಿರಾಜು ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net