ಕನ್ನಡ ಮಾಧ್ಯಮ ಅಭ್ಯರ್ಥಿಗಳ ಮೀಸಲು ಹೆಚ್ಚಳಕ್ಕೆ ಶಿ-Áರಸು

ಕನ್ನಡ ಅಭಿವೃದ್ಧಿ ಪ್ರಾಽಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ಅವರ ಅಧ್ಯಕ್ಷತೆ ಚಿತ್ರದುರ್ಗದದಲ್ಲಿ ವಿವಿಧ ಇಲಾಖೆಗಳಲ್ಲಿ ಕನ್ನಡ ಅನುಷ್ಠಾನ ಪ್ರಗತಿ ಪರಿಶೀಲನೆ ಜರುಗಿತು. ಡಿಸಿ ಟಿ.ವೆಂಕಟೇಶ್,ಡಾ.ಸAತೋಷ ಹಾನಗಲ್ಲ ಇತರರು ಇದ್ದರು.
ಕನ್ನಡ ಅಭಿವೃದ್ಧಿ ಪ್ರಾಽಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ಅವರ ಅಧ್ಯಕ್ಷತೆ ಚಿತ್ರದುರ್ಗದದಲ್ಲಿ ವಿವಿಧ ಇಲಾಖೆಗಳಲ್ಲಿ ಕನ್ನಡ ಅನುಷ್ಠಾನ ಪ್ರಗತಿ ಪರಿಶೀಲನೆ ಜರುಗಿತು. ಡಿಸಿ ಟಿ.ವೆಂಕಟೇಶ್,ಡಾ.ಸAತೋಷ ಹಾನಗಲ್ಲ ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಡಾ.ಪುರುಷೋತ್ತಮ ಬಿಳಿಮಲೆ ಹೇಳಿಕೆ
  • ಸರೋಜಿನಿ ಮಹಿಷಿ ವರದಿ ಅನುಷ್ಠಾನ ಪರಿಶೀಲನೆ
  • ಶಾಲೆಗಳಿಗೆ ಕನ್ನಡ ದಿನಪತ್ರಿಕೆಗಳ ಪೂರೈಕೆ
ಚಿತ್ರದುರ್ಗ: ಕನ್ನಡ ಮಾಧ್ಯಮ ಅಭ್ಯರ್ಥಿಗಳಿಗೆ ನೇಮಕಾತಿಯಲ್ಲಿರುವ ಶೇ.೫ ಮೀಸಲಾತಿಯನ್ನು ಶೇ.೧೦ಕ್ಕೆ ಏರಿಸುವಂತೆ ರಾಜ್ಯಸರ್ಕಾರಕ್ಕೆ ಶಿ -Áರಸು ಮಾಡಲಾಗುವುದು ಎಂದು ಕನ್ನಡ ಅಭಿವೃದ್ಧಿ ಪ್ರಾಽಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ಹೇಳಿದರು. ಡಿಸಿ ಕಚೇರಿಯಲ್ಲಿ ಬುಧವಾರ ಕನ್ನಡ ಅನುಷ್ಠಾನ ಕುರಿತ ಪ್ರಗತಿ ಪರಿಶೀಲನೆ ಸಭೆ ಬಳಿಕ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಸರ್ಕಾರಿ,ಖಾಸಗಿ ವಲಯಗಳ ಉದ್ಯೋಗದಲ್ಲಿ ಕನ್ನಡಿಗರ ಪ್ರಾತಿನಿಧ್ಯ ಕಡಿಮೆಯಾಗಿದೆ. ಎಸ್ಸೆಸ್ಸೆಲ್ಸಿವರೆಗೆ ಕನ್ನಡದಲ್ಲಿ ಓದಿದವರಿಗೆ ರಾ ಜ್ಯಸರ್ಕಾರ ನೇಮಕದಲ್ಲಿ ಮೀಸಲಾತಿ ಹೆಚ್ಚಿಸಿದರೆ ಕನ್ನಡಿಗರಿಗೆ ಉದ್ಯೋಗಾವಕಾಶಗಳು ಹೆಚ್ಚಾಗುತ್ತವೆ. ಹೊರಗುತ್ತಿಗೆಯಲ್ಲೂ ಕನ್ನಡಿಗರ ಆದ್ಯತೆಗೆ ಶಿ-Áರಸು ಮಾಡಲಾಗುವುದು. ರಾಜ್ಯದ ಖಾಸಗಿ ವಲಯಗಳಲ್ಲಿ ಕನ್ನಡಿಗರಿಗೆ ಮೀಸಲಾತಿ ನೀಡ ಬೇಕೆಂಬ ಬಹು ದಿನಗಳ ಬೇ ಡಿಕೆ ಇದ್ದು,ಸರೋಜಿನಿ ಮಹಿಷಿ ವರದಿ ಖಾಸಗಿ ಕಂಪನಿಗಳಲ್ಲಿ ಅನುಷ್ಠಾನ ಕುರಿತಂತೆ ಪ್ರಾಽಕಾರ ಪರಿಶೀಲಿಸಲಿದೆ ಎಂದರು.
ಬ್ಯಾAಕಿAಗ್,ರೈಲ್ವೇ ನೇಮಕ ಪರೀಕ್ಷೆಗಳನ್ನು ಕನ್ನಡದಲ್ಲೂ ನಡೆಸುವಂತೆ ಒತ್ತಾಯಿಸಿ ಕೇಂದ್ರಕ್ಕೆ ಪತ್ರ ಬರೆಯಲಾಗುವುದು. ಬ್ಯಾಂಕ್‌ಗ ಳಲ್ಲಿ ಕನ್ನಡ ಬಾರದ ಅಽಕಾರಿಗಳಿಂದಾಗಿ ಜನ ಸಾಮಾನ್ಯರಿಗೆ ತೊಂದರೆಯಾಗುತ್ತಿದೆ. ಬ್ಯಾಂಕ್ ಅರ್ಜಿಗಳು ಮತ್ತು ಚಲನ್‌ಗಳು ಕನ್ನಡದ ಲ್ಲಿ ಲಭ್ಯವಾಗಬೇಕು. ಕನಿಷ್ಠ ಒಬ್ಬ ಕನ್ನಡ ಗೊತ್ತಿರುವ ಅಽಕಾರಿ ಇರಬೇಕೆಂದು ಪ್ರಾಽಕಾರ ನಿರ್ದೇಶಿಸಿದೆ ಎಂದರು.
ಮದರಸಾಗಳಲ್ಲಿ ಕನ್ನಡ ಕಲಿಕೆ ಹಾಗೂ ಲಿಂಗತ್ವ ಅಲ್ಪಸಂಖ್ಯಾತರ ಸಮುದಾಯಕ್ಕಾಗಿ ಪ್ರತ್ಯೇಕ ಕನ್ನಡ ಪದಕೋಶ ಸಿದ್ಧಪಡಿ ಸುವ ಯೋ ಜನೆಗಳನ್ನು ರೂಪಿಸಿದೆ. ಪ್ರಾಯೋಗಿಕವಾಗಿ ವಕ್ ಮಂಡಳಿಯ ಆಯ್ದ ೧೮೦ ಮದರಸಾಗಳಲ್ಲಿ ಈಗಾಗಲೇ ೩ ತಿಂಗಳ ಮೂಲ ಕನ್ನಡ ಕಲಿ ಕೆ ಕರ‍್ಯಕ್ರಮ ಯಶಸ್ವಿಯಾಗಿದೆ. ಮುಂದಿನ ಶೈಕ್ಷಣಿಕ ಸಾಲಿನಲ್ಲಿ ೧,೨೦೦ ಮದರಸಾಗಳಿಗೆ ಯೋಜನೆ ವಿಸ್ತರಿಸಲಾಗುವುದು. ಲಿಂಗತ್ವ ಅಲ್ಪ ಸಂಖ್ಯಾತರ ಸಮುದಾಯಕ್ಕಾಗಿ ವಿಶೇಷ ಪದಕೋಶ ಸಿದ್ಧಪಡಿಸಲು ಅಕ್ಕ್ತ್ಯೆÊ ಪದ್ಮಸಾಲಿ,ರೂಬಿ ಹರೀಶ್ ಹಾಗೂ ವಸುಧೇಂದ್ರ ಅವರಂತಹ ತಜ್ಞರ ನೆರವು ಪಡೆಯಲಾಗಿದೆ.
ಪ್ರಾಥಮಿಕ ಹಂತದಿAದ ಪದವಿವರೆಗೆ ಕನ್ನಡ ಪಠ್ಯದಲ್ಲಿ ನಿರಂತರತೆ ಇಲ್ಲದಿರುವುದನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ೧ ರಿಂದ ೧೦ನೇ ತರಗತಿಯವರೆಗಿನ ಶಿಕ್ಷಕರನ್ನು ಒಳಗೊಂಡ ಸಮಿತಿ ಮೂಲಕ ಪಠ್ಯಕ್ರಮ ಸುಧಾರಣೆ ಮಾಡಲಾಗುವುದು. ದೈನಂ ದಿನ ಸಂವಹನಕ್ಕೆ ಪೂರಕ ವಿಶೇಷ ಪಠ್ಯ ಸಿದ್ಧಪಡಿಸಲಾಗಿದೆ. ವಿದ್ಯಾರ್ಥಿಗಳಲ್ಲಿ ಭಾಷೆ ಜ್ಞಾನ ಮತ್ತು ಪ್ರಚಲಿತ ವಿದ್ಯ ಮಾನಗಳ ಅರಿವು ಮೂಡಿಸಲು ಸರ್ಕಾರಿ ಶಾಲೆಗಳಿಗೆ ಕನ್ನಡ ದಿನಪತ್ರಿಕೆಗಳ ಪೂರೈಕೆ ಕುರಿತಂತೆ ಶಿಕ್ಷಣ ಸಚಿವರೊಂದಿಗೆ ಚರ್ಚಿಸುವುದಾಗಿ ಪುರುಷೋತ್ತಮ ಬಿಳಿಮಲೆ ಹೇಳಿದರು.
ಡಿಸಿ ಟಿ.ವೆಂಕಟೇಶ್,ಎಡಿಸಿಬಿ.ಟಿ.ಕುಮಾರಸ್ವಾಮಿ,ಪ್ರಾಽಕಾರದ ಕರ‍್ಯದರ್ಶಿ ಡಾ.ಸಂತೋಷ ಹಾನಗಲ್ಲ,ಅಧ್ಯಕ್ಷರ ಆಪ್ತ ಕರ‍್ಯದರ್ಶಿ ಟಿ.ಎಸ್.-Àಣಿಕುಮಾರ್,ನಾಮನಿರ್ದೇಶಿತ ಸದಸ್ಯ ಡಾ.ಎ.ಬಿ.ರಾಮಚಂದ್ರಪ್ಪ,ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಬಿ.ಎಂ.ಗುರುನಾಥ್,ಜಿಲ್ಲಾ ಕನ್ನಡ ಜಾಗÊತಿ ಸಮಿತಿ ಸದಸ್ಯರಾದ ಚಿಕ್ಕಪ್ಪನಹಳ್ಳಿಷಣ್ಮುಖ,ಸಂಗೇನಹಳ್ಳಿ ಅಶೋಕ್‌ ಕುಮಾರ್,ಡಾ.ಚಿತ್ತಯ್ಯ,ಡಾ.ವೇಂದಾತ ಹಾಗೂ ಅಽಕಾರಿಗಳಿದ್ದರು.
ಶಿಕ್ಷಕರ ಕೊರತೆ
ರಾಜ್ಯಾದ್ಯಂತ ೫೫ ಸಾವಿರಕ್ಕೂ ಹೆಚ್ಚು ಶಿಕ್ಷಕರ ಹುದ್ದೆಗಳು ಖಾಲಿ ಇವೆ. ಮುಂದಿನ ಆರ್ಥಿಕ ವರ್ಷದ ವೇಳೆಗೆ ೨೦-೨೫ ಸಾವಿರ
ಶಿಕ್ಷಕ ರು ನಿವೃತ್ತರಾಗಲಿದ್ದು,೮೦ ಸಾವಿರಕ್ಕೂ ಅಽಕ ಶಿಕ್ಷಕರ ಅಗತ್ಯವಿದೆ. ಪ್ರಸ್ತುತ ಸರ್ಕಾರ ೩೫ ಸಾವಿರ ಅತಿಥಿ ಶಿಕ್ಷಕರ ನೇಮಕ ಮೂಲಕ ತಾತ್ಕಾ ಲಿಕವಾಗಿ ಸಮಸ್ಯೆ ನಿಭಾಯಿಸುತ್ತಿದೆ. ಮಾರ್ಚ್ವೊಳಗೆ ೨೫ಸಾವಿರ ಶಿಕ್ಷಕರ ನೇಮಕಕ್ಕೆÉ ಸರ್ಕಾರ ಮುಂದಾಗಿದೆ. ಚಿತ್ರದುರ್ಗ ಜಿಲ್ಲೆಯಲ್ಲಿ ಶಿಕ್ಷಕರ ಕೊರತೆ,ವಿದ್ಯಾರ್ಥಿಗಳ ಅನುಪಾತದ ವರದಿಗೆ ಸೂಚಿಸಲಾಗಿದ್ದು,ಇದನ್ನಾಧರಿಸಿ ಶಿಕ್ಷಣ ಸಚಿವರೊಂದಿಗೆ ಚರ್ಚಿಸಲಾಗುವುದು ಎಂ ದು ಬಿಳಿಮಲೆ ಅವರು ಹೇಳಿದರು.
ರಾ.ಹೆ.ಗಳಲ್ಲಿ ಕನ್ನಡದ ಅದ್ವಾನ
ರಾಷ್ಟಿçÃಯ ಹೆದ್ದಾರಿಗಳಲ್ಲಿ ಕನ್ನಡದ ಬಳಕೆ ಅದ್ವಾನವಾಗಿದೆ ಎಂದು ಬಿಳಿಮಲೆ ಅಸಮಾಧಾನ ವ್ಯಕ್ತಪಡಿಸಿದರು. ಹೆದ್ದಾರಿಗಳಲ್ಲಿ ಕನ್ನಡ ವನ್ನು ಕಡೆಗಣಿಸಲಾಗುತ್ತಿದೆ. ರಾಜ್ಯದ ಅಂದಾಜು ೧.೧೦ ಲಕ್ಷ ಊರುಗಳ ಇಂಗ್ಲಿಷ್‌ನಲ್ಲಿರುವ ಹೆಸರು ದೋಷ ಸರಿಪಡಿಸಲು ಅಭಿಯಾನ ಆರಂಭಿಸಲಾಗಿದೆ. ತಪ್ಪು ಸರಿಪಡಿಸಲು ರಾ.ಹೆ.ಪ್ರಾಽಕಾರದ ಅಽಕಾರಿಗಳಿಗೆ ಸೂಚಿಸಲಾಗಿದೆ. ಕಂದಾಯ ಇಲಾಖೆ ೭೦ ಸಾವಿರ ಊರು ಗಳ ಹೆಸರನ್ನು ಅಕ್ಷರ ಮತ್ತು ಆಡಿಯೋ -ÉÊಲ್‌ಗಳನ್ನು ಸಂಗ್ರಹಿಸಿದೆ ಎಂದು ಪ್ರಾಽಕಾರದ ಅಧ್ಯಕ್ಷರು ತಿಳಿಸಿದರು.
ನಿರ್ಲಕ್ಷ÷್ಯದ ವಿರುದ್ಧ ಶಿಸ್ತು ಕ್ರಮ
ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಅಽನಿಯಮ-೨೦೨೨ಕ್ಕೆ ನಿಯಮಗಳ ರಚನೆ ಕುರಿತು -É.೧೧ರಂದು ಕನ್ನಡ ಮತ್ತು ಸಂಸ್ಕೃತಿ ಇಲಾ ಖೆ ಸಚಿವರು,ಪ್ರಧಾನ ಕರ‍್ಯದರ್ಶಿಗಳ ಸಮ್ಮುಖದಲ್ಲಿ ಸಭೆ ನಡೆಯಲಿದೆ. ನಿಯಮಗಳು ರಚನೆಯಾದರೆ ಕನ್ನಡ ಅನುಷ್ಠಾನ ನಿರ್ಲಕ್ಷಿ÷್ಯಸು ವ ಅಽಕಾರಿಗಳ ವಿರುದ್ಧ ಶಿಸ್ತು ಕ್ರಮಗಳಿಗೆ ಅವಕಾಶ ಸಿಗಲಿದೆ. ಕನ್ನಡ ಅನುಷ್ಠಾನ ವಿಷಯದಲ್ಲಿ ಉಡಾ-Éಯಿಂದ ವರ್ತಿಸುವ ಅಽಕಾರಿ ಗಳ ವಿರುದ್ಧ ಮುಂದಿನ ೨-೩ ತಿಂಗಳಲ್ಲಿ ನಿರ್ಣಾಯಕ ಕ್ರಮ ಕೈಗೊಳ್ಳಲಾಗುವುದು.ಜಿಲ್ಲಾ ಕೆಡಿಪಿ ಸಭೆಯಲ್ಲೂ ಆರಂಭದಲ್ಲೇ ಕನ್ನಡ ಅ ನುಷ್ಠಾನದ ಕುರಿತು ಚರ್ಚಿಯಾಗ ಬೇಕೆಂದು ಜಿಲ್ಲಾಡಳಿತಗಳಿಗೆ ಸೂಚಿಸಲಾಗಿದೆ ಎಂದು ಪುರುಷೋತ್ತಮ ಹೇಳಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net