ಚಿತ್ರದುರ್ಗ: ರಾಷ್ಟಿçÃಯ ಸ್ವಯಂಸೇವಕ ಸಂಘದ ಜನ್ಮ ಶತಮಾನೋತ್ಸವ (೧೦೧) ಅಂಗವಾಗಿ ತಾ ಲೂಕು ಘಟಕದಿಂದ ನಗರದಲ್ಲಿ ಶನಿವಾರ ಸಂಜೆ ಆಕರ್ಷಕ ಪಥಸಂಚಲನ ನಡೆಯಿತು.
ಹಿರಿಯರು, ಕಿರಿಯರೆನ್ನದೇ ನೂರಾರು ಮಂದಿ ಗಣವೇಷ ಧರಿಸಿ, ದಂಡದೊAದಿಗೆ ಶಿಸ್ತುಬದ್ಧವಾಗಿ ನಡೆಸಿದ ಪಥಸಂಚಲನ ಗಮನ ಸೆಳೆಯಿತು.
ನಗರದೇವತೆ ಶ್ರೀ ಬರಗೇರಮ್ಮ ದೇವಿ ಸನ್ನಿಧಾನದಿಂದ ಆರಂಭವಾದ ಪಥ ಸಂಚಲನ ಬಿವಿಕೆಎಸ್ ಲೇಔಟ್, ಕನಕವೃತ್ತ, ಅಗಸನಕಲ್ಲು, ಚೋಳಗುಡ್ಡ, e್ಞÁನವಿಕಾಸ ಶಾಲೆ, ನೆಹರು ನಗರ ೨ನೇ ತಿರುವು ಹಾಗೂ ಹೊಳಲ್ಕೆರೆ ಮುಖ್ಯ ರಸ್ತೆ ಮಾರ್ಗವಾಗಿ ಸಂಚರಿಸಿ ಮತ್ತೆ ಬರಗೇರಮ್ಮ ದೇಗುಲದ ಬಳಿ ಮುಕ್ತಾಯಗೊಂಡಿತು. ೩೫೦ಕ್ಕೂ ಹೆಚ್ಚು ಮಂದಿ ಪಾಲ್ಗೊಂಡಿದ್ದರು. ಕೆಲವೆಡೆ ಚಿಣ್ಣರು ರಾಷ್ಟçನಾಯಕರ ಪೋಷಾಕಿನಲ್ಲಿ ಕಂಗೊಳಿಸಿದರು.
ಪಥ ಸಂಚಲನದ ಅಂಗವಾಗಿ ನಗರದ ಹಲವು ವೃತ್ತಗಳಲ್ಲಿ ಭಾರತಮಾತೆ, ಮಹಾಪುರುಷರ ಭಾವಚಿತ್ರಗಳನ್ನು ಇಟ್ಟು ಪೂಜಿಸಿ, ಪುಷ್ಪನಮನ ಸಲ್ಲಿಸಲಾಯಿತು. ಮಾರ್ಗದುದ್ದಕ್ಕೂ ಆಕರ್ಷಕ ರಂಗೋಲಿ ಬಿಡಿಸಿ, ಕೇಸರಿ ತೋರಣಗಳನ್ನು ಕಟ್ಟಿ, ಪುಷ್ಪಮಳೆಗೈದು ಭಗವಾಧ್ವಜಕ್ಕೆ ಅದ್ದೂರಿ ಸ್ವಾಗತ ಕೋರಲಾಯಿತು.
ಸಂಘ ಪರಿವಾರದ ರಾಜಕುಮಾರ್, ನಾಗರಾಜು, ಸುದೀಪ್, ಮೋಹನ್, ದೇವರಾಜ್ ಕೋಟ್ಲ, ಕೃಷ್ಣಮೂರ್ತಿ, ಮಾಜಿ ಶಾಸಕ ಎಸ್.ಕೆ. ಬಸವರಾಜನ್, ಬಿಜೆಪಿ ಸಹ ಪ್ರಭಾರಿ ಎ. ಮುರಳಿ, ಜಿಲ್ಲಾ ಉಪಾಧ್ಯಕ್ಷ ಡಾ. ಸಿದ್ಧಾರ್ಥ ಗುಂಡಾರ್ಪಿ, ಪದಾಽಕಾರಿಗಳಾದ ಮಾಧುರಿ ಗಿರೀಶ್, ವೆಂಕಟೇಶ್ ಯಾದವ್ ಸೇರಿ ಇತರರಿದ್ದರು.
೪೫ ಕಡೆಗಳಲ್ಲಿ ಪಥ ಸಂಚಲನ
ಕಳೆದ ಅಕ್ಟೋಬರ್ನಲ್ಲಿ ಶಾಖಾ ಸಪ್ತಾಹ ಜರುಗಿದ್ದು, ಜಿ¯್ಲೆಯ ಒಟ್ಟು ೩೧೧ ಕಡೆಗಳಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇದರ ಭಾಗವಾಗಿ ಚಿತ್ರದುರ್ಗ ತಾಲೂಕಿನ ೪೫ ಕಡೆಗಳಲ್ಲಿ ಪಥ ಸಂಚಲನ ನಡೆಸಲು ತೀರ್ಮಾನಿಸಲಾಗಿದೆ ಎಂದು ಸಂಘ ಪರಿವಾರದ ಚಂದ್ರಹಾಸ, ಡಾ. ನಾಗರಾಜ್ ತಿಳಿಸಿದರು. ತಾಲೂಕಿನಾದ್ಯಂತ ಆರ್ಎಸ್ಎಸ್ ಸಂಘಟನೆ, ಚಟುವಟಿಕೆ ವಿಸ್ತರಣೆ, ರಾಷ್ಟಿçÃಯ ಪ್ರಜ್ಞೆ ಹಾಗೂ ಸಾಂಸ್ಕೃತಿಕ ಮೌಲ್ಯಗಳನ್ನು ಯುವಸಮೂಹ, ಮಕ್ಕಳಲ್ಲಿ ಬಿತ್ತುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.