ಕೆಎಂಇಆರ್‌ಸಿ ಅನುದಾನಕ್ಕಾಗಿ ಕೆಲಸ ಮಾಡಿದ್ದೇನೆ

ಜಿಲ್ಲಾ ಪತ್ರಕರ್ತರ ಸಂಘ ಶುಕ್ರವಾರ ಚಿತ್ರದುರ್ಗದಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ವರ್ಗಾವಣೆಯಾಗಿರುವ ಡಿಸಿ ಟಿ.ವೆಂಕಟೇಶ್ ಅವರನ್ನು ಸನ್ಮಾನಿಸಲಾಯಿತು. ಎಡಿಸಿಬಿ.ಟಿ.ಕುಮಾರಸ್ವಾಮಿ,ವಿನಾಯಕ್‌ತೊಡರ್‌ನಾಳ್, ಜುಂಜಣ್ಣ,ರವಿಮಲ್ಲಾಪುರ,ಚAದ್ರು,ದ್ವಾರಕನಾಥ್,ತಿಪ್ಪೇಸ್ವಾಮಿ,ನಾಗರಾಜ್‌ಕಟ್ಟೆ ಮತ್ತಿತರರು ಇದ್ದರು.
ಜಿಲ್ಲಾ ಪತ್ರಕರ್ತರ ಸಂಘ ಶುಕ್ರವಾರ ಚಿತ್ರದುರ್ಗದಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ವರ್ಗಾವಣೆಯಾಗಿರುವ ಡಿಸಿ ಟಿ.ವೆಂಕಟೇಶ್ ಅವರನ್ನು ಸನ್ಮಾನಿಸಲಾಯಿತು. ಎಡಿಸಿಬಿ.ಟಿ.ಕುಮಾರಸ್ವಾಮಿ,ವಿನಾಯಕ್‌ತೊಡರ್‌ನಾಳ್, ಜುಂಜಣ್ಣ,ರವಿಮಲ್ಲಾಪುರ,ಚAದ್ರು,ದ್ವಾರಕನಾಥ್,ತಿಪ್ಪೇಸ್ವಾಮಿ,ನಾಗರಾಜ್‌ಕಟ್ಟೆ ಮತ್ತಿತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಜಿಲ್ಲೆ ಜನರ ವಿಶ್ವಾಸವನ್ನೂ ಎಂದಿಗೂ ಮೆರೆಯಲಾರೆ
  • ನಿರ್ಗಮಿತ ಜಿಲ್ಲಾಽಕಾರಿ ಟಿ.ವೆಂಕಟೇಶ್ ಭಾವುಕ ನುಡಿ
  • ಪತ್ರಕರ್ತರ ಸಂಘದಲ್ಲಿ ಅಭಿನಂದನಾ ಸಮಾರಂಭ
ಚಿತ್ರದುರ್ಗ: ಜಿಲ್ಲೆ ಜನರ ಪ್ರೀತಿ,ವಿಶ್ವಾಸವನ್ನು ಯಾವತ್ತೂ ಮರೆಯಲಾಗದೆದು ವರ್ಗಾವಣೆಯಾಗಿರುವ ಜಿಲ್ಲಾಽಕಾರಿ ಟಿ.ವೆಂ ಕಟೇಶ್ ಹೇಳಿದರು.
ಜಿಲ್ಲಾ ಕರ‍್ಯನಿರತ ಪತ್ರಕರ್ತರ ಸಂಘ,ನಗರದ ಪತ್ರಕರ್ತರ ಭವನದ ಡಾ.ಬಿ.ಆರ್.ಅಂಬೇಡ್ಕರ್ ಸಭಾಂಗಣದಲ್ಲಿ ಶುಕ್ರವಾರ ಏರ್ಪ ಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ವಿವಿಧ ಜಿಲ್ಲೆಗಳಲ್ಲಿ ನಾನಾ ಹುದ್ದೆಗಳಲ್ಲಿ,ಚಿತ್ರದುರ್ಗದಲ್ಲಿ ಈ ಹಿಂದೆ ಮೂರೂವರೆ ವರ್ಷ ಎಸಿ ಹಾಗೂ ೨ ವರ್ಷ,೮ ತಿಂಗಳ ಕಾಲ ಡಿಸಿ ಯಾಗಿ ಕರ್ತವ್ಯ ನಿರ್ವಹಿಸಿದ್ದೇನೆ. ಆದರೆ ಪತ್ರಕರ್ತರ ಅಭಿನಂದನೆಗೆ ಪಾತ್ರವಾಗಿರುವುದು ಇದೇ ಮೊದಲು. ನನ್ನ ಸೇವೆ ಸಾಧನೆ ಅಲ್ಲ,ಸರ್ಕಾರದ ಜವಾಬ್ದಾರಿ ಪ್ರಾಮಾಣಿಕವಾಗಿ ನಿರ್ವಹಿಸಿದ ತೃಪ್ತಿ ನನಗೆ ಇದೆ.
ಬೆಂಗಳೂರು ಗ್ರಾಂ.ಜಿಲ್ಲೆಯ ನನಗೆ ಚಿತ್ರದುರ್ಗ ತವರು ಜಿಲ್ಲೆಯಾಗಿದೆ. ಅಽಕಾರಿ ಮಿತ್ರರು ನನ್ನ ನೇಟಿವ್ ಚಿತ್ರದುರ್ಗವೆಂದೇ ಭಾ ವಿಸಿದ್ದಾರೆ. ರೈತನ ಮಗನಾಗಿ ಈ ಜಿಲ್ಲೆಯಲ್ಲಿ ಅತೀ ಹೆಚ್ಚಿನ ಸಂಖ್ಯೆಯಲ್ಲಿರುವ ಎಸ್‌ಸಿ,ಎಸ್‌ಟಿ,ಹಿಂದುಳಿದ ವರ್ಗಗಳು ಹಾಗೂ ಬಡವರ ಸಮಸ್ಯೆಗಳಿಗೆ ಸ್ಪಂದಿಸಲು,ಅವರ ನಾಡಿಮಿಡಿತ ಅರಿಯಲು ಪ್ರಯತ್ನಿಸಿದ್ದೇನೆ. ಸಮಸ್ಯೆಗಳೆಡೆ ಪಾಸಿಟಿವ್ ಆಗಿ ಸ್ಪಂದಿಸಿದರೂ ಸಾಕು ಪರಿಹಾರ ಕಲ್ಪಿಸಲು ಸಾಧ್ಯವಾಗಲಿದೆ.
ಚಿತ್ರದುರ್ಗ,ಬಳ್ಳಾರಿ,ವಿಜಯನಗರ ಹಾಗೂ ತುಮಕೂರು ಗಣಿಬಾಽತ ಜಿಲ್ಲೆಗಳ ಪೈಕಿ,ಚಿತ್ರದುರ್ಗದ ಜಿಲ್ಲೆಗೆ ಕೆಎಂಆರ್‌ಇಸಿಯಿAದ ಜಿಲ್ಲೆಯ ೩೩ ಇಲಾಖೆಗಳಿಗೆ ಒಟ್ಟು ೩೫೭೪ ಕೋಟಿ ರೂ.ಅನುದಾನ ಹಂಚಿಕೆಯಾಗಿದೆ. ಈ ಮೊತ್ತ ಇತರೆ ೩ ಜಿಲ್ಲೆಗಳಿಗಿಂತ ಅತ್ಯಽ ಕವಾಗಿದೆ.
ನಾನು ಡಿಸಿಯಾಗಿ ಅಽಕಾರ ವಹಿಸಿಕೊಳ್ಳುತ್ತಿದ್ದಂತೆ ೧೦-೧೨ ವರ್ಷಗಳಿಗಿಂತ ಕೆ ಎಂಆರ್‌ಇಸಿಯಿAದ ಬಿಡಿಗಾಸು ಬಂದಿರಲಿಲ್ಲ. ಅನುದಾನಕ್ಕಾಗಿ ಬೇತಾಳದಂತೆ ಬೆನ್ನು ಹತ್ತಿದೆ. ಹಾಸ್ಟೆಲ್,ಅಂಗನವಾಡಿ,ಆಸ್ಪತ್ರೆ,ರಸ್ತೆ ಇತ್ಯಾದಿ ಅಭಿವೃದ್ಧಿ ಕಾಮಗಾರಿಗಳಿಗೆ ಟೆಂಡ ರ್ ಆಗಲಿದೆ. ಇನ್ನು ೨ ವರ್ಷಗಳಲ್ಲಿ ಈ ಕಾಮಗಾರಿಗಳಲ್ಲಿ ಪ್ರಗತಿ ಕಾಣಬಹುದಾಗಿದೆ.
ಜಿಲ್ಲೆಯಲ್ಲಿ ನಿವೇಶನ ರಹಿತರಿಗೆ ಅಂದಾಜು ೩೦ ಸಾವಿರ ನಿವೇಶನ ಹಂಚಿಕೆಗೆ ೧೫೦೦ ಎಕರೆ ಜಮೀನು ಕಾಯ್ದಿರಿಸಲಾಗಿದೆ. ಬಗ ರ್ ಹುಕುಂ,ಅರಣ್ಯಹಕ್ಕು ಕಾಯ್ದೆಯಡಿ ಹಕ್ಕುಪತ್ರ ವಿತರಣೆಗೆ ತೆಗೆದುಕೊಂಡಿರುವ ಕ್ರಮ,ಎಸ್‌ಸಿ,ಎಸ್‌ಟಿ ಸಾಗುವಳಿದಾರರಿಗೆ ದಾಖಲೆ ಒದಗಿಸಿ ಹಕ್ಕುಪತ್ರ ಕೊಟ್ಟಿರುವುದು,ಕಂದಾಯ ದಾಖಲೆಗಳ ಡಿಜಿಟಲೀಕರಣ,ಕಂದಾಯ ಗ್ರಾಮ ಮೊದಲಾದ ಹಲವು ಕರ‍್ಯಕ್ರಮಗಳ ಜಾರಿ.
ನಗರದೊಳಗೆ ಡಿಸಿ ಕಚೇರಿ ಹೊಸ ಕಟ್ಟಡ ನಿರ್ಮಾಣ,ತುಮಕೂರು-ದಾವಣಗೆರೆ ನೇರ ರೈಲು ಮಾರ್ಗ,ಚಿಕ್ಕಜಾಜೂರು-ಬಳ್ಳಾರಿ ಡಬ್ಲಿಂ ಗ್ ರೈಲು ಮಾರ್ಗ,೩೦ ಕೋಟಿ ರೂ.ವೆಚ್ಚದಲ್ಲಿ ಐತಿಹಾಸಿಕ ಪ್ರಸಿದ್ಧ ಚಿತ್ರದುರ್ಗ ಕೋಟೆಯಲ್ಲಿ ಧ್ವನಿ ಮತ್ತು ಬೆಳಕಿನ ವ್ಯವಸ್ಥೆ ಸೇರಿ ಜಿಲ್ಲೆಯ ಪ್ರವಾಸಿ ತಾಣಗಳ ಅಭಿವೃದ್ಧಿಗೆ ತಮ್ಮ ಅವಽ ಕೈಗೊಂಡಿರುವ ಕ್ರಮಗಳ ಕುರಿತು ವಿವರಿಸಿದರು.
ಅಪರ ಜಿಲ್ಲಾಽಕಾರಿ ಬಿ.ಟಿ.ಕುಮಾರಸ್ವಾಮಿ ಮಾತನಾಡಿ,ನಾನು ಮತ್ತು ಡಿಸಿ ಅವರು ವಿಷ್ಣುವರ್ಧನ್-ದ್ವಾರಕೀಶ್ ಜೋಡಿಯಂತೆ ಜಿಲ್ಲೆಯಲ್ಲಿ ಕೆಲಸ ಮಾಡಿದ್ದೇವೆ. ವೆಂಕಟೇಶ್ ಅವರು ಮಾತೃಹೃದಯದ ಅಽಕಾರಿಯಾಗಿದ್ದಾರೆಂದು ಗದ್ಗದಿತರಾದರು. ಅಧ್ಯಕ್ಷತೆ ಸಂಘ ದ ಅಧ್ಯಕ್ಷ ವಿನಾಯಕ್‌ತೊಡರ್‌ನಾಳ್,ಜಿಲ್ಲಾ ವಾರ್ತಾಽಕಾರಿ ಜುಂಜಣ್ಣ,ಪತ್ರಕರ್ತರಾದ ರವಿಮಲ್ಲಾಪುರ,ಎಸ್.ಸಿದ್ದರಾಜು, ಎಂ.ಎನ್. ಅಹೋಬಲಪತಿ,ಹರಿಯಬ್ಬೆ ಹೆಂಜಾರಪ್ಪ ಮಾತನಾಡಿದರು.
ವೀರೇಶ್‌ಅಪ್ಪು,ಮಾರುತಿ,ಜಡೇಕುಂಟೆ ಮಂಜುನಾಥ್, ಮಾರುತಿ,ರವಿಉ ಗ್ರಾಣ,ಕುಮಾರ್ ಮತ್ತಿತರರು,ವಿವಿಧ ಸಂಘಟನೆಗಳ ಪ್ರಮುಖರಿದ್ದರು. ಗಾಯಕ ಡಿ.ಒ.ಮುರಾರ್ಜಿ ಪ್ರಾರ್ಥಿಸಿ ದರು.
ಜಿಲ್ಲಾ ಪತ್ರಕರ್ತರ ಸಂಘ ಶುಕ್ರವಾರ ಚಿತ್ರದುರ್ಗದಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ವರ್ಗಾವಣೆಯಾಗಿರುವ ಡಿಸಿ ಟಿ.ವೆಂಕಟೇಶ್ ಅವರನ್ನು ಸನ್ಮಾನಿಸಲಾಯಿತು. ಎಡಿಸಿಬಿ.ಟಿ.ಕುಮಾರಸ್ವಾಮಿ,ವಿನಾಯಕ್‌ತೊಡರ್‌ನಾಳ್, ಜುಂಜಣ್ಣ,ರವಿಮಲ್ಲಾಪುರ,ಚAದ್ರು,ದ್ವಾರಕನಾಥ್,ತಿಪ್ಪೇಸ್ವಾಮಿ,ನಾಗರಾಜ್‌ಕಟ್ಟೆ ಮತ್ತಿತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net