ಕಬ್ಬಡಿ ಪಂದ್ಯಾವಳಿಯಲ್ಲಿ ಹುಬ್ಬಳ್ಳಿ ತಂಡಗಳಿಗೆ ಪ್ರಥಮ

ಚಿತ್ರದುರ್ಗ ಆಯೋಜಿಸಿದ್ದ ಎರಡು ದಿನಗಳ ಕಾಲ ಜರುಗಿದ ರಾಜ್ಯಕಾನೂನು ವಿಶ್ವವಿದ್ಯಾಲಯದ ಅಂತರ್‌ಮಹಾ ವಿದ್ಯಾಲಯಗಳ  ಹೊನಲು ಬೆಳಕಿನ ಪುರುಷರ ಕಬ್ಬಡಿ ಪಂದ್ಯಾವಳಿಯಲ್ಲಿ ಹುಬ್ಬಳ್ಳಿಯ ಜಿ.ಕೆ.ಕಾನೂನು ಕಾಲೇಜು ತಂಡ ಪ್ರಥಮ ಪಡೆಯಿತು. ಎಚ್. ಹನುಮಂತಪ್ಪ,ಎಂ.ಕೆ.ಫಾತ್ಯರಾಜನ್,ಡಿ.ಕೆ.ಶೀಲಾ, ತಂಡ ನಾಯಕ ಕಾರ್ತಿಕ್ ಇತರರು ಇದ್ದಾರೆ.
ಚಿತ್ರದುರ್ಗ ಆಯೋಜಿಸಿದ್ದ ಎರಡು ದಿನಗಳ ಕಾಲ ಜರುಗಿದ ರಾಜ್ಯಕಾನೂನು ವಿಶ್ವವಿದ್ಯಾಲಯದ ಅಂತರ್‌ಮಹಾ ವಿದ್ಯಾಲಯಗಳ ಹೊನಲು ಬೆಳಕಿನ ಪುರುಷರ ಕಬ್ಬಡಿ ಪಂದ್ಯಾವಳಿಯಲ್ಲಿ ಹುಬ್ಬಳ್ಳಿಯ ಜಿ.ಕೆ.ಕಾನೂನು ಕಾಲೇಜು ತಂಡ ಪ್ರಥಮ ಪಡೆಯಿತು. ಎಚ್. ಹನುಮಂತಪ್ಪ,ಎಂ.ಕೆ.ಫಾತ್ಯರಾಜನ್,ಡಿ.ಕೆ.ಶೀಲಾ, ತಂಡ ನಾಯಕ ಕಾರ್ತಿಕ್ ಇತರರು ಇದ್ದಾರೆ.
Published on

ಪ್ರಮುಖ ಮುಖ್ಯಾಂಶಗಳು

  • ಮೈಸೂರು ತಂಡ ರನ್ನರ್ ಆಫ್
  • ಹೊನಲು ಬೆಳಕಿನ ಟೂರ್ನಿಮೆಂಟ್
  • ಹುಬ್ಬಳ್ಳಿಯ ರಾಜ್ಯಕಾನೂನು ವಿಶ್ವವಿದ್ಯಾಲಯ
ಚಿತ್ರದುರ್ಗ: ಯಾವುದೇ ಕ್ರೀಡೆಯಾಗಿರಲಿ ಕ್ರೀಡಾಪಟುಗಳನ್ನು ಸಮಾನವಾಗಿ ಪ್ರೋತ್ಸಾಹಿಸಬೇಕು ಎಂದು ಶ್ರೀ ಸರಸ್ವತಿ ವಿದ್ಯಾಸಂಸ್ಥೆ ಅಧ್ಯಕ್ಷ, ರಾಜ್ಯಸಭೆ ಮಾಜಿ ಸದಸ್ಯ ಎಚ್. ಹನುಮಂತಪ್ಪ ಹೇಳಿದರು.
ಚಿತ್ರದುರ್ಗದ ಸರಸ್ವತಿ ಕಾನೂನು ಮಹಾ ವಿದ್ಯಾಲಯ, ಹುಬ್ಬಳ್ಳಿಯ ರಾಜ್ಯಕಾನೂನು ವಿಶ್ವವಿದ್ಯಾಲಯದ ಆಶ್ರಯದಲ್ಲಿ ನಗರದ ಹಳೆ ಮಾಧ್ಯಮಿಕ ಶಾಲಾ ಆವರಣದಲ್ಲಿ ಆಯೋಜಿಸಿದ್ದ ೨ ದಿನಗಳ ಕಾನೂನು ವಿವಿ ಅಂತರ್ ಮಹಾ ವಿದ್ಯಾಲಯಗಳ ಹೊನಲು ಬೆಳಕಿನ ಪುರುಷರ ಕಬ್ಬಡಿ ಪಂದ್ಯಾವಳಿಯ ಸಮಾರೋಪದಲ್ಲಿ ವಿಜೇತ ತಂಡಗಳಿಗೆ ಬಹುಮಾನ ವಿತರಿಸಿ ಮಾತನಾಡಿದರು.
ಕಾನೂನು ವಿಶ್ವವಿದ್ಯಾಲಯ ಪ್ರತಿ ವರ್ಷವೂ ಕಬ್ಬಡಿ ಆಟಕ್ಕೆ ಪ್ರೋತ್ಸಾಹ ನೀಡುತ್ತ ಬರುತ್ತಿದೆ. ಪಾಠಗಳ ಜತೆ ಗ್ರಾಮೀಣ ಕ್ರೀಡೆಗ ಳ ಕಡೆಗೂ ಗಮನ ಕೊಡಬೇಕು. ಕ್ರೀಡೆಯಲ್ಲಿ ಗೆದ್ದು ಬಹುಮಾನ ಪಡೆಯುವುದು ಮುಖ್ಯವಲ್ಲ. ಸೋತವರು ಮುಂದೆ ಗೆಲ್ಲುವಂತೆ ಬೆನ್ನು ತಟ್ಟ ಬೇಕೆಂದರು.
ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ.ಖÁಲಿಲ್‌ಖಾನ್,ಸರಸ್ವತಿ ಕಾನೂನು ಕಾಲೇಜು ಪ್ರಾಚಾರ್ಯೆ ಡಾ.ಎ ಂ.ಎಸ್.ಸುಧಾದೇವಿ ಹಾಗೂ ಸರಸ್ವತಿ ವಿದ್ಯಾಸಂಸ್ಥೆ ಕಾರ‍್ಯದರ್ಶಿ ಡಿ.ಕೆ.ಶೀಲಾ ಮಾತನಾಡಿದರು. ಸಂಸ್ಥೆ ಉಪಾಧ್ಯಕ್ಷ -Áತ್ಯರಾಜನ್,ಸರಸ್ವತಿ ಪ್ರೊ-ೆಸರ್‌ಗಳಾದ ಎನ್.ಡಿ.ಗೌಡ, ರವಿಕುಮಾರ್,ರಮೇಶ್, ಕರಿಯಣ್ಣ, ಮುರಳಿ, ಸಂದೇಶ್, ಅಭಿನೇ ತ್ರಿ, ಹರ್ಷ, ಸಾಹಿ ನಿಕಿತಾ ಇದ್ದ ರು. ಸಹಾಯಕ ಪ್ರಾಧ್ಯಾಪಕ ಡಾ.ಎಲ್.ಶ್ರೀಶೈಲ ಸ್ವಾಗತಿಸಿ,ದೈಹಿಕ ಶಿಕ್ಷಣ ನಿರ್ದೇಶಕ ಪಿ.ಸಿ.ಮುರುಗೇಶ್ ವಂದಿಸಿದರು.ಪಂದ್ಯಾವಳಿಯ ಲ್ಲಿ ೩೦ ತಂಡಗಳು ಪಾಲ್ಗೊಂಡಿದ್ದವು.
ಹುಬ್ಬಳ್ಳಿ ಕಾಲೇಜು ತಂಡ ಪ್ರಥಮ
ಚಿತ್ರದುರ್ಗದಲ್ಲಿ ಬುಧವಾರದಿಂದ ಎರಡು ದಿನಗಳ ಕಾಲ ಜರುಗಿದ ರಾಜ್ಯಕಾನೂನು ವಿಶ್ವವಿದ್ಯಾಲಯದ ಅಂತರ್‌ಮಹಾ ವಿದ್ಯಾಲ ಯಗಳ ಹೊನಲು ಬೆಳಕಿನ ಪುರುಷರ ಕಬ್ಬಡಿ ಪಂದ್ಯಾವಳಿಯಲ್ಲಿ ಹುಬ್ಬಳ್ಳಿಯ ಜಿ.ಕೆ.ಕಾನೂನು ಕಾಲೇಜು ತಂಡ ಪ್ರಥಮ, ಮೈ ಸೂರಿನ ವಿ ದ್ಯಾವರ್ಧಕ ಲಾ ಕಾಲೇಜು ತಂಡ ದ್ವಿತೀಯ ಹಾಗೂ ಹುಬ್ಬಳ್ಳಿಯ ಕೆಎಸ್‌ಎಲ್‌ಯು ಲಾ ಸ್ಕೂಲ್ ತಂಡ ೩ನೇ ಹಾಗೂ ಶಿರಸಿಯ ಎಂಇ ಎಸ್ ಲಾ ಕಾಲೇಜು ತಂಡ ೪ನೇ ಸ್ಥಾನವನ್ನು ಪಡೆದುಕೊಂಡಿತು. ಮೈಸೂರು ವಿದ್ಯಾವರ್ಧಕ ಲಾ ಕಾಲೇಜಿನ ಕಾರ್ತಿಕ್ ಬೆಸ್ಟ್ ರೈಡರ್, ಹುಬ್ಬಳ್ಳಿ ಜಿ.ಕೆ.ಲಾ ಕಾಲೇಜಿನ ಕಾರ್ತಿಕ್ ಬೆಸ್ಟ್ ಕ್ಯಾಚರ್ ಹಾಗೂ ಬೆಸ್ಟ್ ಆಲ್ ರೌಂಡರ್ ಆಗಿ ಶಿರಸಿಯ ಕೆಪಿಎಂಇಎಸ್ ಕಾಲೇಜಿನ ದರ್ಶ ನ್ ಹೊರಹೊಮ್ಮಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net