

ಪ್ರಮುಖ ಮುಖ್ಯಾಂಶಗಳು
ರಥೋತ್ಸವದ ಪ್ರಯುಕ್ತ ದೇವಾಲಯದಲ್ಲಿ ಹೋಮ-ಹವನ, ಗಂಗಾ ಪೂಜೆ, ಗಣಪತಿ ಪೂಜೆ, ಪುಷ್ಪಾರ್ಚನೆ, ಅಭಿಷೇಕ, ಆಚಾರ್ಯ ಪೂಜೆ, ನವಗ್ರಹ ಹೋಮ, ಗುರುಹೋಮ ಹಾಗೂ ಲೋಕಕಲ್ಯಾಣಕ್ಕಾಗಿ ವಿವಿಧ ಧಾರ್ಮಿಕ ಪೂಜಾ ಕಾರ್ಯಗಳು ಜರುಗಿದವು.
ಕಾಳಿಕಾಂಬ ದೇವಿಯ ಉತ್ಸವ ಮೂರ್ತಿಯನ್ನು ರಥದಲ್ಲಿ ಪ್ರತಿಷ್ಠಾಪಿಸಿ, ತೇರುಮಲ್ಲೇಶ್ವರ ಸ್ವಾಮಿ ದೇವಾಲಯದ ಆವರಣದಿಂದ ಸಿದ್ದನಾಯಕ ವೃತ್ತದವರೆಗೆ ಭಕ್ತರು ರಥವನ್ನು ಎಳೆದರು.
ರಥೋತ್ಸವದಲ್ಲಿ ನಾದಸ್ವರ, ಚಂಡೆವಾದ್ಯ, ಡೊಳ್ಳುಕುಣಿತ, ವೀರಗಾಸೆ ಸೇರಿದಂತೆ ವಿವಿಧ ಜಾನಪದ ಕಲಾ ತಂಡಗಳ ಪ್ರದರ್ಶನ ಜನರ ಗಮನ ಸೆಳೆದವು.
ಅರ್ಚಕ ನಾಗರಾಜ್ ಆಚಾರ್ಯ, ವಿಶ್ವನಾಥಾಚಾರ್ಯ, ಮಂಜುನಾಥ್, ರಮೇಶ್, ನವೀನ್, ವಿನಯ್, ಬಸವರಾಜ್, ಜ್ಞಾನಮೂರ್ತಿ, ರವೀಂದ್ರನಾಥ್, ಕಿರಣ್ ಮಿರಜ್ಕರ್ ಇತರರು ಇದ್ದರು.