ಭದ್ರಾ ನೀರು ಹರಿಸುವುದಕ್ಕೆ ಹೆಚ್ಚು ಆದ್ಯತೆ

ಚಿತ್ರದುರ್ಗದ ಕಾಂಗ್ರೆಸ್ ಕಚೇರಿ ಮುಂಭಾಗ ಗುರುವಾರ ಟಿ.ರಘುಮೂರ್ತಿ ಅವರಿಗೆ ಬೃಹತ್ ಹೂವಿನ ಹಾರ ಹಾಕಿ, ಪುಷ್ಪ ಮಳೆ ಸುರಿಸಿ ಸ್ವಾಗತಿಸಲಾಯಿತು. ಎಂ.ಕೆ.ತಾಜ್‌ಪೀರ್, ಕೆ.ಎಂ.ಹಾಲಸ್ವಾಮಿ, ಮರುಳಾರಾಧ್ಯ, ಎನ್.ಡಿ.ಕುಮಾರ್, ಕೆ.ಪಿ.ಸಂಪತ್‌ಕುಮಾರ್ ಸೇರಿ ಇತರರಿದ್ದರು.
ಚಿತ್ರದುರ್ಗದ ಕಾಂಗ್ರೆಸ್ ಕಚೇರಿ ಮುಂಭಾಗ ಗುರುವಾರ ಟಿ.ರಘುಮೂರ್ತಿ ಅವರಿಗೆ ಬೃಹತ್ ಹೂವಿನ ಹಾರ ಹಾಕಿ, ಪುಷ್ಪ ಮಳೆ ಸುರಿಸಿ ಸ್ವಾಗತಿಸಲಾಯಿತು. ಎಂ.ಕೆ.ತಾಜ್‌ಪೀರ್, ಕೆ.ಎಂ.ಹಾಲಸ್ವಾಮಿ, ಮರುಳಾರಾಧ್ಯ, ಎನ್.ಡಿ.ಕುಮಾರ್, ಕೆ.ಪಿ.ಸಂಪತ್‌ಕುಮಾರ್ ಸೇರಿ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ನಿಷ್ಠಾವಂತರಿಗೆ ಅವಕಾಶ ಖಂಡಿತ
  • ಸಚಿವ ಟಿ. ರಘುಮೂರ್ತಿ ಹೇಳಿಕೆ
  • ಕಾಂಗ್ರೆಸ್ ಜಿ¯್ಲÁ ಕಚೇರಿ

ಚಿತ್ರದುರ್ಗ :

ಜಿ¯್ಲೆಯಲ್ಲಿ ಬರಗಾಲವಿದ್ದು, ಭದ್ರಾ ಮೇಲ್ದಂಡೆ ಯೋಜನೆಯಿಂದ ನೀರು ಹರಿಸುವ ಕಾರ್ಯಕ್ಕೆ ಹೆಚ್ಚು ಆದ್ಯತೆ ನೀಡು ವುದಾಗಿ ನೂತನ ಸಚಿವ ಟಿ.ರಘುಮೂರ್ತಿ ಆಶ್ವಾಸನೆ ನೀಡಿದರು.

ಕ್ರಮವಾಗಿ ನಾಲ್ಕು-ಏಳು ಬಾರಿ ಶಾಸಕರಾದ ಬಿ.ಜಿ. ಗೋವಿಂದಪ್ಪ, ಎನ್.ವೈ. ಗೋಪಾಲಕೃಷ್ಣ ಇಬ್ಬರು ಹಿರಿಯರೂ ನನಗಿಂತ ಹೆಚ್ಚು ಕೆಲಸ ಮಾಡಿದ್ದು, ಸಚಿವರಾಗಬೇಕಿತ್ತು. ಆದರೆ, ಅದೃಷ್ಟ ಎಲ್ಲರಿಗೂ ಸಿಗುವುದಿಲ್ಲ. ಹೈಕಮಾಂಡ್ ನನ್ನ ಅಭಿವೃದ್ಧಿ ಕಾರ್ಯಗಳನ್ನು ಗುರುತಿಸಿ ಮಂತ್ರಿ ಸ್ಥಾನ ನೀಡಿದೆ ಎಂದರು.

ಸಂಘಟನೆಯಲ್ಲಿ ತೊಡಗಿದ ಪರಿಣಾಮ ಉನ್ನತ ಸ್ಥಾನಮಾನದ ಜವಾಬ್ದಾರಿ ಲಭಿಸಿದ್ದು, ಇದಕ್ಕೆ ಹಾಲಿ, ಮಾಜಿ ಸಿಎಂ, ವರಿಷ್ಠರು ಕಾರಣ. ಅನ್ಯ ಮಾರ್ಗದಲ್ಲಿ ನಾನು ಸಚಿವನಾಗಿಲ್ಲ. ಕಾಂಗ್ರೆಸ್ ಕಚೇರಿ ದೇಗುಲವಿದ್ದಂತೆ. ನಿಷ್ಠೆಯಿಂದ ಪೂಜಿಸುವವರಿಗೆ ಭಗ ವಂತ ಒಲಿಯುವಂತೆ ಪಕ್ಷಕ್ಕಾಗಿ ದುಡಿದವರಿಗೂ ಉತ್ತಮ ಅವಕಾಶಗಳು ಸಿಗಲಿವೆ. ಆದರೆ, ಕಾಯುವ ತಾಳ್ಮೆ ಇರಬೇಕು ಎಂದು ಸಲಹೆ ನೀಡಿದರು.
ಸ-Áಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಪಿ.ರಘು ಮಾತನಾಡಿ, ಪಕ್ಷದಲ್ಲಿ ಯಾವುದೇ ಅಽಕಾರಕ್ಕಾಗಿ ಆಸೆ ಪಡದೆ ನಿಷ್ಠಾವಂತ ರಾಗಿ ಕೆಲಸ ಮಾಡುತ್ತಿರುವ ಕಾರ್ಯಕರ್ತರಿಗೆ ಶಕ್ತಿ ತುಂಬುವಂತೆ ಸಚಿವರಲ್ಲಿ ಕೋರಿದರು.
ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ನೇರ್ಲಗುಂಟೆ ರಾಮಪ್ಪ ಮಾತನಾಡಿ, ರಘುಮೂರ್ತಿ ಅವರಿಗೆ ಸಚಿವ ಸ್ಥಾನ ಲಭಿಸಿರುವುದು ಸ್ವಾಗತಾರ್ಹ. ಚಿತ್ರದುರ್ಗವನ್ನು ಪ್ರವಾಸಿ ತಾಣವನ್ನಾಗಿಸಿ ಅಭಿವೃದ್ಧಿಯತ್ತ ಕೊಂಡೊಯ್ಯುವಂತೆ ಒತ್ತಾಯಿಸಿದರು.
ಕಾಂಗ್ರೆಸ್ ಜಿ¯್ಲÁಧ್ಯಕ್ಷ ಎಂ.ಕೆ.ತಾಜ್‌ಪೀರ್, ಪದಾಽಕಾರಿಗಳಾದ ಕೆ.ಎಂ.ಹಾಲಸ್ವಾಮಿ, ಕೆ.ಪಿ.ಸಂಪತ್‌ಕುಮಾರ್, ಡಿ.ಎನ್. ಮೈ ಲಾರಪ್ಪ, ಬಿ.ಟಿ.ಜಗದೀಶ್, ಎಚ್. ಶಬ್ಬೀರ್‌ಬಾಷಾ, ಎನ್.ಡಿ.ಕುಮಾರ್, ಮರುಳಾರಾಧ್ಯ, ಕೆ.ಪಿ.ಬಾಬು, ಡಿ.ಟಿ.ವೆಂಕಟೇಶ್, ಎಂ.ಎ.ಸೇತೂರಾಂ, ಆರ್.ಪ್ರಕಾಶ್, ಭೂತೇಶ್, ಎಚ್.ಅಂಜಿನಪ್ಪ, ಆರ್.ಶಿವಣ್ಣ, ನಾಗರಾಜ್, ಜಿಪಂ ಮಾಜಿ ಸದಸ್ಯರಾದ ಆರ್.ನರಸಿಂಹರಾಜ, ಆರ್.ಕೃಷ್ಣಮೂರ್ತಿ ಸೇರಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net