ಗೋವುಗಳ ರಕ್ಷಣೆಯಿಂದ ಆರ್ಥಿಕ ಸಮೃದ್ಧಿ ಮಾತ್ರವಲ್ಲ, ನಮ್ಮ ಮುಂದಿನ ಪೀಳಿಗೆಗೆ ವಿಷಮುಕ್ತ ಅನ್ನ ಮತ್ತು ಸಾತ್ವಿಕ ಆಹಾರ ದೊರೆಯುತ್ತದೆ. ವಾಸ್ತವವಾಗಿ, ಸ್ವದೇಶಿ ಗೋವಂಶದ ಸಂರಕ್ಷಣೆಯು ನಾಡಿನ ಜನಾರೋಗ್ಯ ಮತ್ತು ಪರಿಸರದ ಸಂರಕ್ಷಣೆಯೇ ಆಗಿದೆ. ಈ ನಿಟ್ಟಿನಲ್ಲಿ ಉಭಯ ಸರ್ಕಾರಗಳು ಕ್ರಮ ಕೈಗೊಳ್ಳಬೇಕಿದೆ ಎಂದು ಕೋರಿದರು. ಸುರೇಶ್‌ಬಾಬು, ರುದ್ರೇಶ್, ವಿಪುಲ್ ಜೈನ್, ಗೋಪಿ, ಕನಕರಾಜ್, ವೀಣಾ, ಮಲ್ಲಿಕಾರ್ಜುನ್, ಮಾಲತೇಶ್ ಅರಸ್ ಇತರರಿದ್ದರು.