

ಪ್ರಮುಖ ಮುಖ್ಯಾಂಶಗಳು
ನಾಯಕನಹಟ್ಟಿ:ಸಾರ್ವಜನಿಕರುದ್ವಿಚಕ್ರ ವಾಹನ ಚಲಾಯಿಸುವಾಗಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕುಎಂದು ಪಿಎಸ್‌ಐ ಜಿ.ಪಾಂಡುರಂಗಹೇಳಿದರು.
ಪಟ್ಟಣದಪೊಲೀಸ್ ಠಾಣೆ ಆವರಣದಲ್ಲಿ ಮಂಗಳವಾರಈ ಕುರಿತು ಕಾರ್ಯಕ್ರಮ ಆಯೋಜಿಸಲಾಗಿತ್ತು.ಸಂಚಾರಿ ನಿಯಮಗಳಕುರಿತ ರಸಪ್ರಶ್ನೆಯಲ್ಲಿ ಗೆದ್ದವರಿಗೆಉಚಿತವಾಗಿ ಹೆಲ್ಮೆಟ್‌ಗಳನ್ನುವಿತರಿಸಿ ಅವರು ಮಾತನಾಡಿದರು.
ಭಾರತಸರ್ಕಾರ ಬಿಡುಗಡೆ ಮಾಡಿದಅಂಕಿ-ಅಂಶಗಳನ್ನುಪಿಎಸ್‌ಐ ಉಲ್ಲೇಖಿಸಿದರು.ದೇಶಾದ್ಯಂತಒಂದು ವರ್ಷದಲ್ಲಿ ಸರಾಸರಿ 4.80ಲಕ್ಷ ಬೈಕ್ಅಪಘಾತಗಳು ಸಂಭವಿಸುತ್ತಿವೆ.ಇದರಿಂದ 1.80ಲಕ್ಷ ಜನರುಸಾವನ್ನಪ್ಪುತ್ತಿದ್ದಾರೆ.ಈ ಹಿನ್ನೆಲೆಯಲ್ಲಿಸರ್ಕಾರ ಮತ್ತು ನ್ಯಾಯಾಲಯಗಳುಇದನ್ನು ಗಂಭೀರವಾಗಿ ಪರಿಗಣಿಸಿವೆ.ಸರ್ಕಾರವು ಹಿಂಬದಿಸವಾರರಿಗೂ ಹೆಲ್ಮೆಟ್ ಕಡ್ಡಾಯಗೊಳಿಸಿದೆಎಂದು ಅವರು ತಿಳಿಸಿದರು.
ಪ್ರಸ್ತುತ,9 ತಿಂಗಳಿಂದ 4ವರ್ಷದ ಮಗುವಿಗೂಹೆಲ್ಮೆಟ್ ಕಡ್ಡಾಯಗೊಳಿಸಲಾಗಿದೆ.ಕೇವಲ ಗಂಟೆಗೆ40 ಕಿ.ಮೀವೇಗದಲ್ಲಿ ಮಾತ್ರ ಚಾಲನೆ ಮಾಡಬೇಕು.ಈ ನಿಯಮ ಉಲ್ಲಂಘಿಸಿದರೆಭಾರಿ ಪ್ರಮಾಣದ ದಂಡ ತೆರಬೇಕಾಗುತ್ತದೆಎಂದು ರಾಜ್ಯ ಉಚ್ಚ ನ್ಯಾಯಾಲಯಆದೇಶಿಸಿದೆ.
"ಪೊಲೀಸರಿಗೆದಂಡ ಪಾವತಿಸುವ ಬದಲು,ಸಾರ್ವಜನಿಕರುಗುಣಮಟ್ಟದ ಹೆಲ್ಮೆಟ್ ಧರಿಸಿ ಜೀವಉಳಿಸಿಕೊಂಡು ಸುಂದರ ಜೀವನ ನಡೆಸಿ"ಎಂದು ಪಿಎಸ್‌ಐಪಾಂಡುರಂಗ ಅವರು ಸಲಹೆ ನೀಡಿದರು.
ರಸಪ್ರಶ್ನೆಯಲ್ಲಿವಿಜೇತರಾದ 25ಜನರಿಗೆಹೆಲ್ಮೆಟ್‌ಗಳನ್ನು ವಿತರಿಸಲಾಯಿತು.
ಪೊಲೀಸ್ಸಿಬ್ಬಂದಿ ಅಣ್ಣಪ್ಪನಾಯ್ಕ,ಇ.ಎಂ.ಬಾಷಾ,ಹನುಮಂತು,ಶಿವಣ್ಣ,ಲಕ್ಷ್ಮಿದೇವಿ,ಚೈತ್ರ ಮತ್ತುಸಾರ್ವಜನಿಕರಾದ ಚಂದು,ಅಭಿಷೇಕ್,ಟಿ.ಕುಶಾ,ನಾಗೇಶ್,ರಾಧಾ ಸೇರಿದಂತೆಹಲವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.