ಗರ್ಭಿಣಿಯ ಉತ್ತಮ ಆರೈಕೆಯಿಂದ ಆರೋಗ್ಯವಂತ ಮಗು

 ಚಿತ್ರದುರ್ಗದಲ್ಲಿ  ಏರ್ಪಡಿಸಿದ್ದ ಕಾರ್ಯಾಗಾರವನ್ನು ಡಿಎಚ್‌ಒ ಡಾ.ಜಿ.ಪಿ. ರೇಣುಪ್ರಸಾದ್,ವಿಜಯಕುಮಾರ್, ಡಾ.ರಂಗಸ್ವಾಮಿ,ಡಾ.ಅಭಿನವ್,ಡಾ.ಬಸವAತಪ್ಪ, ಡಾ.ಪÊಥ್ವೀಶ್,ಡಾ.ಗಿರೀಶ್,ಡಾ.ರಾಘವೇಂದ್ರ ಪ್ರಸಾದ್,ಡಾ.ಪ್ರಾರ್ಥನಾ,ಡಾ ಆಯೇಷಾ ಇತರರು ಇದ್ದರು.
ಚಿತ್ರದುರ್ಗದಲ್ಲಿ ಏರ್ಪಡಿಸಿದ್ದ ಕಾರ್ಯಾಗಾರವನ್ನು ಡಿಎಚ್‌ಒ ಡಾ.ಜಿ.ಪಿ. ರೇಣುಪ್ರಸಾದ್,ವಿಜಯಕುಮಾರ್, ಡಾ.ರಂಗಸ್ವಾಮಿ,ಡಾ.ಅಭಿನವ್,ಡಾ.ಬಸವAತಪ್ಪ, ಡಾ.ಪÊಥ್ವೀಶ್,ಡಾ.ಗಿರೀಶ್,ಡಾ.ರಾಘವೇಂದ್ರ ಪ್ರಸಾದ್,ಡಾ.ಪ್ರಾರ್ಥನಾ,ಡಾ ಆಯೇಷಾ ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಗರ್ಭಿಣಿಯ ಉತ್ತಮ ಆರೈಕೆ
  • ಮಹಿಳಾ ಮತ್ತು ಮಕ್ಕಳ ಕಲ್ಯಾಣ
  • ಗರ್ಭಿಣಿಯರ ಆರೈಕೆ ಕುರಿತ ಕಾರ್ಯಾಗಾರ
ಚಿತ್ರದುರ್ಗ: ಆರೋಗ್ಯವಂತ ಶಿಶುವಿಗಾಗಿ ಗರ್ಭಿಣಿಯ ಉತ್ತಮ ಆರೈಕೆ ತೀರಾ ಅಗತ್ಯ ಎಂದು ಡಿಎಚ್‌ಒ ಡಾ.ಜಿ.ಪಿ. ರೇಣುಪ್ರಸಾದ್ ಹೇಳಿದರು.
ಆರೋಗ್ಯ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಗ್ರಾಮೀಣಾಭಿವÊದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ, ಕರ್ನಾಟಕ ಹೆಲ್ತ್ ಪ್ರಮೋ ಷನ್ ಟ್ರಸ್ಟ್(ಕೆಎಚ್‌ಪಿಟಿ)ಹಾಗೂ ಸೆಂಟ್ ಜಾನ್ಸ್ ವೈದ್ಯಕೀಯ ಕಾಲೇಜಿನ ಸಹಯೋಗದಲ್ಲಿ ನಗರದ ಖಾಸಗಿ ಹೋಟೆಲ್‌ನಲ್ಲಿ ಏರ್ಪಡಿಸಿದ್ದ ಗರ್ಭಿಣಿಯರ ಆರೈಕೆ ಕುರಿತ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ತಾಯಿ ಮತ್ತು ಶಿಶುವಿನ ಆರೋಗ್ಯ ಕಾಪಾಡುವಲ್ಲಿ ಆರೋಗ್ಯ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ವಿಜಯಕುಮಾರ್ ಮಾತನಾಡಿ, ಭ್ರೂಣ ಹತ್ಯೆ ತಡೆದು, ತಾಯಿ ಆ ರೋಗ್ಯವಂತ ಮಗು ಪಡೆಯುವುದು ಮುಖ್ಯವಾಗಿದೆ. ಈ ನಿಟ್ಟಿನಲ್ಲಿ ವಿವಿಧ ಇಲಾಖೆೆಗಳು ಒಟ್ಟುಗೂಡಿ ಕೆಲಸ ಮಾಡಬೇಕಾಗಿದೆ ಎಂದರು.
ಜಿಪA ಉಪ ಕಾರ್ಯದರ್ಶಿ ಡಾ. ರಂಗಸ್ವಾಮಿ ಮಾತನಾಡಿ, ಜಿಲ್ಲೆಯಲ್ಲಿ ತಾಯಿ ಮತ್ತು ಶಿಶು ಮರಣ ಕಡಿಮೆ ಮಾಡಬೇಕಾದರೆ ಎಲ್ಲ ಇಲಾಖೆಗಳ ಸಹಕಾರ ಅಗತ್ಯವಿದೆ ಎಂದರು.
ಜಿಲ್ಲಾ ಆರ್‌ಸಿಎಚ್ ಅಽಕಾರಿ ಡಾ. ಅಭಿನವ್, ಮಕ್ಕಳ ತಜ್ಞರಾದ ಡಾ. ಬಸವಂತಪ್ಪ, ಡಾ. ಪÊಥ್ವೀಶ್, ತಾಲೂಕು ಆರೋಗ್ಯಾಽಕಾ ರಿಗಳಾದ ಡಾ.ಬಿ.ವಿ. ಗಿರೀಶ್, ಡಾ. ರಾಘವೇಂದ್ರ ಪ್ರಸಾದ್, ಕೆಎಚ್‌ಪಿಟಿ ಯೋಜನಾ ನಿರ್ದೇಶಕರಾದ ಡಾ. ಪ್ರಾರ್ಥನಾ, ಡಾ. ಆಯೇಷಾ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net