ಶ್ರಮ ಜೀವಿಗಳಿಗೆ ಸಿಗಬೇಕು ಮನ್ನಣೆ

ಚಿತ್ರದುರ್ಗದಲ್ಲಿ ಶುಕ್ರವಾರ ಆಯೋಜಿಸಿದ್ದ ಶಿವಶರಣ ಒಕ್ಕಲಿಗ ಮುದ್ದಣ್ಣ ಜಯಂತ್ಯುತ್ಸವದಲ್ಲಿ ಡಾ. ಬಸವಕುಮಾರ ಸ್ವಾಮೀಜಿ, ಕಾಳೇಗೌಡ ಬಸಪ್ಪ ಗುಡಸಿ, ಬಸವರಾಜಕಟ್ಟಿ ಇತರರು ಇದ್ದರು.
ಚಿತ್ರದುರ್ಗದಲ್ಲಿ ಶುಕ್ರವಾರ ಆಯೋಜಿಸಿದ್ದ ಶಿವಶರಣ ಒಕ್ಕಲಿಗ ಮುದ್ದಣ್ಣ ಜಯಂತ್ಯುತ್ಸವದಲ್ಲಿ ಡಾ. ಬಸವಕುಮಾರ ಸ್ವಾಮೀಜಿ, ಕಾಳೇಗೌಡ ಬಸಪ್ಪ ಗುಡಸಿ, ಬಸವರಾಜಕಟ್ಟಿ ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಡಾ. ಬಸವಕುಮಾರ ಸ್ವಾಮೀಜಿ ಅಭಿಮತ
  • ಶಿವಶರಣ ಒಕ್ಕಲಿಗ ಮುದ್ದಣ್ಣ ಜಯಂತಿ ಆಚರಣೆ
  • ದುಡಿಯುವ ವರ್ಗ
ಚಿತ್ರದುರ್ಗ: ಬೆವರು ಸುರಿಸಿ ಯಾರು ದುಡಿಯುತ್ತಾರೋ ಅವರಿಗೆ ಸಮಾಜ ತಕ್ಕ ಪ್ರತಿ-Àಲ, ಗೌರವ ಕೊಡದ ಹೊರತು ಸುಧಾರಣೆ ಕಷ್ಟ ಎಂಧು ಮುರುಘಾ ಮಠದ ಆಡಳಿತ ಮಂಡಳಿ ಸದಸ್ಯ ಡಾ. ಬಸವಕುಮಾರ ಸ್ವಾಮೀಜಿ ಹೇಳಿದರು.
ಶ್ರೀಮಠದಲ್ಲಿ ಶುಕ್ರವಾರ ಆಯೋಜಿಸಿದ್ದ ಶಿವಶರಣ ಒಕ್ಕಲಿಗ ಮುದ್ದಣ್ಣನವರ ಜಯಂತಿ ಆಚರಣೆ ಸಾನ್ನಿಧ್ಯವಹಿಸಿ ಮಾತನಾಡಿ, ದುಡಿ ಯುವ ವರ್ಗದ ಬಗ್ಗೆ ತಾರತಮ್ಯ, ನಿರ್ಲಕ್ಷ್ಯ, ಕೀಳಾಗಿ ಕಾಣುವ ಪ್ರವÊತ್ತಿ ಹೋಗದಿದ್ದರೆ, ಶರಣರು ಕಂಡAಥ ಸಮ ಸಮಾಜ ನಿರ್ಮಾಣ ಕೇವಲ ಬಾಯಿ ಮಾತಾಗುತ್ತದೆ ಎಂದರು.
ಒಕ್ಕಲಿಗ ಮುದ್ದಣ್ಣ ಶಿವಶರಣರದು ನೇಗಿಲ ಧರ್ಮ. ಈ ಕಾಯಕವನ್ನು ಮಾಡುತ್ತಲೇ ಅವರು ಅನ್ನ ನೀಡುವುದರ ಜತೆಗೆ ವಚನಗಳನ್ನು ರಚಿಸಿದ್ದಾರೆ ಎಂದರು.
ಶ್ರೀ ಜಗದ್ಗುರು ಮುರುಘರಾಜೇಂದ್ರ ವಿಶ್ವವಿದ್ಯಾಲಯದ ಕುಲಪತಿ ಕಾಳೇಗೌಡ ಬಸಪ್ಪ ಗುಡಸಿ ಉಪಸ್ಥಿತರಿದ್ದರು. ಜಾಗತಿಕ ಲಿಂಗಾಯತ ಮಹಾಸಭಾದ ಉಪಾಧ್ಯಕ್ಷ ಬಸವರಾಜ ಕಟ್ಟಿ ಅವರು ವಚನ ಪ್ರಾರ್ಥಿಸಿದರು. ಪ್ರಾಧ್ಯಾಪಕರಾದ ಪೂಜಾ ಸ್ವಾಗತಿಸಿ, ಮೇಘನಾ ವಂದಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net