ಜಾನಪದದಲ್ಲಿದೆ ಜೀವನಾನುಭವ, ಪರಂಪರೆ

ಜಾನಪದ ಸಮಾವೇಶ

ಶರಣ ಸಂಸ್ಕೃತಿ ಉತ್ಸವದ ಅಂಗವಾಗಿ ಚಿತ್ರದುರ್ಗದಲ್ಲಿ ಮಂಗಳವಾರ ಏರ್ಪಡಿಸಿದ್ದ ಜಾನಪದ ಸಮಾವೇಶದಲ್ಲಿ ಗುರು ಬಸವ ಶ್ರೀ, ಸಿದ್ದಬಸವ ಕಬೀರಾನಂದ ಶ್ರೀ , ಡಾ.ಲಕ್ಷ÷್ಮಣದಾಸ್ ಮತ್ತಿತರರು ಇದ್ದರು.
ಶರಣ ಸಂಸ್ಕೃತಿ ಉತ್ಸವದ ಅಂಗವಾಗಿ ಚಿತ್ರದುರ್ಗದಲ್ಲಿ ಮಂಗಳವಾರ ಏರ್ಪಡಿಸಿದ್ದ ಜಾನಪದ ಸಮಾವೇಶದಲ್ಲಿ ಗುರು ಬಸವ ಶ್ರೀ, ಸಿದ್ದಬಸವ ಕಬೀರಾನಂದ ಶ್ರೀ , ಡಾ.ಲಕ್ಷ÷್ಮಣದಾಸ್ ಮತ್ತಿತರರು ಇದ್ದರು.
Published on: 

ಚಿತ್ರದುರ್ಗ: ಜಾನಪದದೊಂದಿಗೆ ಕನ್ನಡ ಸಾಹಿತ್ಯ ಹಾಗೂ ವಚನ ಸಾಹಿತ್ಯದೊಂದಿಗೆ ಅವಿನಾಭಾವ ಸಂಬ Aಧವಿದೆ ಎಂದು ಪಾಂಡೋಮಟ್ಟಿ ಶ್ರೀ ವಿರಕ್ತ ಮಠದ ಶ್ರೀ ಗುರುಬಸವ ಸ್ವಾಮೀಜಿ ಹೇಳಿದರು.

ಮಂಗಳವಾರ ಮುರುಘಾಮಠದಲ್ಲಿ ಆಯೋಜಿಸಿದ್ದ ಜಾನಪದ ಸಮಾವೇಶದಲ್ಲಿ ಮಾತನಾಡಿ, ಜಾನಪದ ಹಾಡುಗಳು, ನಮ್ಮ ಸಂಸ್ಕೃತಿ, ಪರಂಪರೆ, ಧರ್ಮ, ಬಾಂಧವ್ಯ ಹಾಗೂ ಜೀವನ ಮೌಲ್ಯ ಉಳಿಸಿ ಬೆಳೆಸುವಲ್ಲಿ ಮಹತ್ವದ ಪಾತ್ರ ವಹಿಸಿವೆ. ಜಾನಪದದಲ್ಲಿ ಜೀವನಾನುಭವ, ನೀತಿ, ಧರ್ಮ, ಅರ್ಥಪೂರ್ಣ ಸಂದೇಶ ಹಾಗೂ ಸಾಮಾಜಿಕ ಸಂಬAಧಗಳು ಅಡಕವಾಗಿವೆ. ಸಂಬAಧ ಬೆಸೆಯುವ ಜತೆಗೆ ನಮ್ಮ ಪರಂಪರೆ ಮುಂದಿನ ಪೀಳಿಗೆಗೆ ತಲುಪಿಸುತ್ತಿವೆ ಎಂದರು.

ಶ್ರೀ ಸಿದ್ಧಬಸವ ಕಬೀರಾನಂದ ಸ್ವಾಮೀಜಿ ಮಾತನಾಡಿ, ಬಸವ ಸಾಹಿತ್ಯದ ಪ್ರಸಾರ ಮತ್ತು ಬೆಳವಣಿಗೆಯಲ್ಲಿ ಪಾಂಡೋಮಟ್ಟಿ ಮಠದ ಪಾತ್ರ ಮಹತ್ವದ್ದಾಗಿದೆ. ಜಾನಪದ ಸಾಹಿತ್ಯದ ಉಗಮ ಮತ್ತು ಬೆಳವಣಿಗೆ ಸಂಪೂರ್ಣವಾಗಿ ಗುರುತಿಸುವುದು ಕಷ್ಟ. ಏಕೆಂದರೆ ಇದಕ್ಕೆ ನಿರ್ದಿಷ್ಟ ದಾಖಲೆಗಳಿಲ್ಲ. ಜಾನಪದ ಸಾಹಿತ್ಯ ಜನರಲ್ಲಿ ಜಾಗೃತಿ ಮೂಡಿಸಿ, ಬದುಕನ್ನು ಕಟ್ಟಿಕೊಳ್ಳಲು ಪ್ರೇರಣೆ ನೀಡುವ ಜಾನಪದ ಸಾ ಹಿತ್ಯ ಇತರ ಸಾಹಿತ್ಯ ಪ್ರಕಾರಗಳಿಗೂ ಸೊಗಸು ನೀಡುತ್ತದೆ ಎಂದರು.

ಕೇAದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಡಾ.ಲಕ್ಷ÷್ಮಣದಾಸ್ ಮಾತನಾಡಿ, ಚಿತ್ರದುರ್ಗ ವೀರರು, ಶೂರರು, ಶರಣರು, ಸಂತರು, ರಾಜರು ಹಾಗೂ ವೀರವನಿತೆಯರು ಜನ್ಮತಾಳಿದ ಪುಣ್ಯಭೂಮಿಯಾಗಿದೆ. ಇಂದಿನ ತಲೆಮಾರಿನ ಮಕ್ಕಳು ಗುರುಗಳು ಹಾಗೂ ಹಿರಿಯರನ್ನು ಗೌರವಿಸುವ ಸಂಸ್ಕಾರ ಬೆಳೆಸಿಕೊಳ್ಳಬೇಕು. ಸನ್ಯಾಸಿಗಳು, ಸ್ವಾಮೀಜಿ ಮತ್ತು ಶರಣರ ಪರಂಪರೆ ಹೊಂದಿರುವ ಈ ನಾಡಿನ ಸಾಂಸ್ಕೃತಿಕ ವೈಭವವನ್ನು ಮುಂದಿನ ಪೀಳಿಗೆಗೆ ಪರಿಚಯಿಸುವುದು ಅಗತ್ಯ ಎಂದರು.

ರವಿ ಯಡೇಹಳ್ಳಿ ಮಾತನಾಡಿದರು. ಡಾ.ಬಸವಪ್ರಭು ಶ್ರೀ, ಮೋಕ್ಷಪತಿ ಸ್ವಾಮಿಗಳು, ಬಸವಮೂರ್ತಿ ಮಾದಾರ ಚನ್ನಯ್ಯ ಶ್ರೀ, ನಿಶ್ಚಲಾನಂದ ಶ್ರೀ, ಬಸವಮಹಾಂತ ಶ್ರೀ, ಜಾಗತಿಕ ಲಿಂಗಾಯತ ಮಹಾಸಭೆ ಪ್ರತಿನಿಽ ಕೆÀಂಚವೀರಪ್ಪ, ಹಾವೇರಿ ಬಸವ ಬಳಗದ ಅಧ್ಯಕ್ಷ ವಿ.ಜಿ. ಎಳಗೇರಿ, ತಳವಾರ ಸಮಾಜದ ಎಂ.ನಾಗರಾಜ್, ಬಂಜಾರ ಸಮಾಜದ ಎಂ. ಮಂಜನಾಯ್ಕ, ಕಮ್ಮಾರ ಸಮಾಜದ ಎನ್.ಹನುಮಂತಪ್ಪ, ಮಮತಾ, ಹನುಮಂತಪ್ಪ, ಟಿ.ಡಿ. ಧನಂಜಯಸ್ವಾಮಿ, ಮಾರಮ್ಮ ಸಂಘದ ತಿಪ್ಪೇ ಸ್ವಾಮಿ, ಕೆಇಬಿ ಷಣ್ಮುಖಪ್ಪ ಹಾಗೂ ಯರೇಹಳ್ಳಿ ಬಸವ ಕೇಂದ್ರದ ಪ್ರತಿನಿಽಗಳು, ಹರ ಗುರುಚರಮೂರ್ತಿಗಳು ಇದ್ದರು.

ಬೆಂಗಳೂರಿನ ರೈಬೊ ಜನರೇಟರ್ಸ್ ಮಾಲೀಕ ಸುಭಾಷ್ ಸಿ. ಕುಬ್ಸದ್ ಅವರನ್ನು ಸನ್ಮಾನಿಸಲಾಯಿತು. ಜಮುರಾ ಕಲಾವಿದರು ಪ್ರಾರ್ಥಿಸಿದರು. ಕೊಟ್ರೇಶಪ್ಪ ಸ್ವಾಗತಿಸಿ, ರವಿಕಲಾ ನಿರೂಪಿಸಿದರು. ಡಾ.ಬಸವಕುಮಾರ ಸ್ವಾಮೀಜಿ ವಂದಿಸಿದರು. ಬೆಂಗಳೂರಿನ ನೆಲ ಸೊಗಡು ಸಂಸ್ಥೆ ಕಲಾವಿದರು ಕಂಸಾಳೆ, ಯಕ್ಷಗಾನ, ವೀರಗಾಸೆ, ಹಾಲಕ್ಕಿ ಸುಗ್ಗಿ ಕುಣಿತ, ಪಟ ಕುಣಿತ, ಸೋಮನ ಕುಣಿತ ಸೇರಿದಂತೆ ವಿವಿಧ ಜಾನಪದ ನÊತ್ಯ ಕಾರ್ಯಕ್ರಮ ನಡೆಸಿಕೊಟ್ಟರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net