ಆಧುನಿಕತೆಯಿಂದ ಜಾನಪದ ಸಂಸ್ಕೃತಿ ಕಣ್ಮರೆ

 ಚಿತ್ರದುರ್ಗದಲ್ಲಿ ಶುಕ್ರವಾರ ಏರ್ಪಡಿಸಿದ್ದ ತಾಲೂಕು ಮಟ್ಟದ ಪ್ರತಿಭಾಕಾರಂಜಿ ಸ್ಪರ್ಧೆಯನ್ನು ಎಡಿಸಿ ಬಿ.ಟಿ. ಕುಮಾರಸ್ವಾಮಿ ಉದ್ಘಾಟಿಸಿದರು. ಎಂ.ಆರ್.ಮAಜುನಾಥ್, ಮಾಲತೇಶ ಮುದ್ದಜ್ಜಿ, ಮಹಾಂತೇಶ್, ಕೆಂಚಪ್ಪ, ಬಸವರಾಜ್, ವಿಮಲಾಕ್ಷಿ, ವಿದ್ಯಾ ಇತರರಿದ್ದರು.
ಚಿತ್ರದುರ್ಗದಲ್ಲಿ ಶುಕ್ರವಾರ ಏರ್ಪಡಿಸಿದ್ದ ತಾಲೂಕು ಮಟ್ಟದ ಪ್ರತಿಭಾಕಾರಂಜಿ ಸ್ಪರ್ಧೆಯನ್ನು ಎಡಿಸಿ ಬಿ.ಟಿ. ಕುಮಾರಸ್ವಾಮಿ ಉದ್ಘಾಟಿಸಿದರು. ಎಂ.ಆರ್.ಮAಜುನಾಥ್, ಮಾಲತೇಶ ಮುದ್ದಜ್ಜಿ, ಮಹಾಂತೇಶ್, ಕೆಂಚಪ್ಪ, ಬಸವರಾಜ್, ವಿಮಲಾಕ್ಷಿ, ವಿದ್ಯಾ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಎಡಿಸಿ ಬಿ.ಟಿ.ಕುಮಾರಸ್ವಾಮಿ ಹೇಳಿಕೆ
  • ತಾಲೂಕು ಮಟ್ಟದ ಪ್ರತಿಭಾ ಕಾರಂಜಿ
  • ಜಾನಪದ ಪರಂಪರೆ ಕಣ್ಮರೆ
ಚಿತ್ರದುರ್ಗ: ಆಧುನಿಕತೆಯಿಂದಾಗಿ ಗ್ರಾಮೀಣ ಸೊಗಡಿನ ಜಾನಪದ ಪರಂಪರೆ ಕಣ್ಮರೆಯಾಗುತ್ತಿದೆ ಎಂದು ಎಡಿಸಿ ಬಿ.ಟಿ.ಕುಮಾರಸ್ವಾಮಿ ಹೇಳಿದರು.
ನಗರದ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದಲ್ಲಿ ಶುಕ್ರವಾರ ಆಯೋಜಿಸಿದ್ದ ಚಿತ್ರದುರ್ಗ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಕರ‍್ಯಕ್ರಮ ಉದ್ಘಾಟಿಸಿ ಮಾತನಾಡಿ, ವೀರಗಾಸೆ, ಬಯಲಾಟ, ಸೋಬಾನೆ ಪದ, ಜಾನಪದ ನೃತ್ಯ ಕಣ್ಮರೆಯಾಗುತ್ತಿವೆ. ಮಕ್ಕಳು ಪಠ್ಯಕ್ಕೆ ಸೀಮಿತವಾಗದೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸುವುದರಿಂದ ಹಿರಿಯರ ಆಚರಣೆ, ಪರಂಪರೆ, ಸಂಸ್ಕೃತಿ ಹಾಗೂ ಮೌಲ್ಯಗಳ ಪರಿಚಯವಾಗುತ್ತಿದೆ ಎಂದರು.
ಡಿಡಿಪಿಐ ಎಂ.ಆರ್.ಮAಜುನಾಥ್ ಮಾತನಾಡಿ, ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಶಾಲೆಯಲ್ಲಿ ನಡೆಸುವ ಸಹಪಠ್ಯ ಚಟುವಟಿಕೆಗಳಲ್ಲಿ ಭಾಗವಹಿಸಬೇಕು. ಸ್ಪರ್ಧಾ ಚಟುವಟಿಕೆಗಳಲ್ಲಿ ಭಾಗವಹಿಸುವುದರಿಂದ ಆರೋಗ್ಯಕರ ಸ್ಪರ್ಧಾ ಮನೋ ಭಾವನೆ, ಸಹಕಾರ, ಹೊಂದಾಣಿಕೆ ಗುಣ ಬೆಳೆಸಿಕೊಳ್ಳಲು ಅನುಕೂಲವಾಗುತ್ತದೆ. ಜಿಲ್ಲಾ ಮತ್ತು ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿ ಜಿಲ್ಲೆಯ ಹೆಸರನ್ನು ರಾಜ್ಯಮಟ್ಟದಲ್ಲಿ ಕಂಗೊಳಿಸುವAತೆ ಮಾಡಬೇಕು ಎಂದು ತಿಳಿಸಿದರು.
ಕ್ಷೇತ್ರ ಶಿಕ್ಷಣಾಽಕಾರಿ ಎಚ್.ಗಿರಿಜಾ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ, ಮಾತುಗಾರಿಕೆ, ಅಭಿವ್ಯಕ್ತಿ ಕೌಶಲ, ಜ್ಞಾಪಕ ಶಕ್ತಿ ವೃದ್ಧಿಸಿ ಕೊಳ್ಳಲು ಪ್ರತಿಭಾ ಕಾರಂಜಿ ಪೂರಕವಾಗಿದೆ ಎಂದರು.
ನೋಡಲ್ ಅಽಕಾರಿ ಕೆ.ಆರ್.ಲೋಕೇಶ್, ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಮಾಲತೇಶ್ ಮುದ್ದಜ್ಜಿ, ಜಿಲ್ಲಾ ಪ್ರಾಥ ಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಮಹಾಂತೇಶ್, ಕೆಂಚಪ್ಪ, ಬಸವರಾಜ್, ಪ್ರಶಾಂತ್, ರಂಗನಾಯ್ಕ್, ರಾಜಪ್ಪ,ಹನುಮಂ ತಪ್ಪ, ವಿಮಲಾಕ್ಷಿ, ಮಲ್ಲಿಕಾರ್ಜುನ್, ಬೈರೇಶಿ, ರೂಪ, ಉಮೇಶಯ್ಯ, ಮೂರ್ತಾಚಾರ್, ರವೀಂದ್ರನಾಥ್, ವಿದ್ಯಾ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net