ಒಳಮೀಸಲು ಅನ್ವಯ ಹುದ್ದೆ ಭರ್ತಿಮಾಡಿ

 ಒಳಮೀಸಲು ಅನ್ವಯವೇ ಸರ್ಕಾರಿ ಹುದ್ದೆಗಳ ಭರ್ತಿಗೆ ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಚಿತ್ರದುರ್ಗದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು. ಬಿ. ರಾಜಪ್ಪ, ವಿಶ್ವನಾರಾಯಣಮೂರ್ತಿ, ಹನುಮಂತಪ್ಪ ದುರ್ಗಾ, ಎಂ.ಎಚ್. ಶಶಿಧರ್, ಮಂಜುನಾಥ್ ಎ. ತಾಳಿಕೆರೆ, ತಿಪ್ಪೇಸ್ವಾಮಿ ಇತರರಿದ್ದರು.
ಒಳಮೀಸಲು ಅನ್ವಯವೇ ಸರ್ಕಾರಿ ಹುದ್ದೆಗಳ ಭರ್ತಿಗೆ ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಚಿತ್ರದುರ್ಗದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು. ಬಿ. ರಾಜಪ್ಪ, ವಿಶ್ವನಾರಾಯಣಮೂರ್ತಿ, ಹನುಮಂತಪ್ಪ ದುರ್ಗಾ, ಎಂ.ಎಚ್. ಶಶಿಧರ್, ಮಂಜುನಾಥ್ ಎ. ತಾಳಿಕೆರೆ, ತಿಪ್ಪೇಸ್ವಾಮಿ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ವಿವಿಯನ್ನೇ ಒಂದು ಘಟಕವಾಗಿಸುವ ನಿರ್ಧಾರ ಕೈಬಿಡಿ
  • ಡಿಎಸ್‌ಎಸ್ ಕಾರ್ಯಕರ್ತರ ಆಗ್ರಹ
  • ಜಿಲ್ಲಾಡಳಿತದ ಮೂಲಕ ಮನವಿ
ಚಿತ್ರದುರ್ಗ: ಒಳ ಮೀಸಲಾತಿ ಅನ್ವಯವೇ ರಾಜ್ಯದಲ್ಲಿ ಸರ್ಕಾರಿ ಹುದ್ದೆಗಳ ಭರ್ತಿಗೆ ಕ್ರಮವಹಿಸುವಂತೆ ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಎನ್.ಮೂರ್ತಿ ಬಣ) ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿದರು. ಒಳ ಮೀಸಲಾತಿ ಜಾರಿಗೊಳಿಸದ ಸಿಎಂ ಸಿದ್ದರಾಮಯ್ಯ ವಿರುದ್ಧ ಽಕ್ಕಾರ ಕೂಗಿದರು. ಸಾಮಾಜಿಕ ನ್ಯಾಯಕ್ಕೆ ಒತ್ತಾಯಿಸಿ ರಾಷ್ಟçಪತಿ, ಪ್ರಧಾನಿ, ರಾಜ್ಯಪಾಲರಿಗೆ ಜಿಲ್ಲಾಡಳಿತದ ಮೂಲಕ ಮನವಿ ರವಾನಿಸಿದರು.
ಒಳ ಮೀಸಲಾತಿ ಪರಿಗಣಿಸದೆ ರಾಜ್ಯ ಸರ್ಕಾರ ೫೬,೪೩೨ ಹುz್ದೆಗಳ ನೇಮಕಾತಿಗೆ ಸುತ್ತೋಲೆ ಹೊರಡಿಸಿರುವುದನ್ನು ಕೂಡ ಲೇ ಹಿಂಪಡೆಯಬೇಕು. ಶೇ. ೧೫ರಷ್ಟು ಮೀಸಲಾತಿ ಅನ್ವಯವೇ ಈ ಪ್ರಕ್ರಿಯೆ ನಡೆಯಬೇಕು. ವಿವಿಯನ್ನೇ ಒಂದು ಘಟಕವಾಗಿಸಿ ಉದ್ಯೋಗ ಭರ್ತಿ ನಿರ್ಧಾರ ಕೈಬಿಡಬೇಕು ಎಂದು ಆಗ್ರಹಿಸಿದರು.
ಅಲೆಮಾರಿ, ಅರೆ ಅಲೆಮಾರಿಗಳಿಗೆ ಶೇ. ೧ರಷ್ಟು ಪ್ರತ್ಯೇಕ ಮೀಸಲಾತಿ ನೀಡಬೇಕು. ಎಸ್ಸಿಗೆ ಶೇ. ೧೭, ಎಸ್ಟಿಗೆ ಶೇ. ೭ರಷ್ಟು ಸೇರಿ ಒಟ್ಟು ಶೇ. ೫೬ರಷ್ಟು ಮೀಸಲಾತಿಯನ್ನು ಸಂವಿಧಾನದ ೯ನೇ ಷೆಡ್ಯೂಲ್‌ಗೆ ಸೇರಿಸಬೇಕು. ಉದ್ಯೋಗ ನೇಮಕಾತಿ, ಬ್ಯಾಕ್‌ಲಾಗ್, ಬಡ್ತಿ, ಮುಂಬಡ್ತಿ, ಒಳಗುತ್ತಿಗೆ, ಎಸ್‌ಸಿಎಸ್‌ಪಿ, ಟಿಎಸ್‌ಪಿ ಸೇರಿ ಆರ್ಥಿಕ ಸೌಲಭ್ಯಗಳ ಎಲ್ಲ ಹಂತಗಳಲ್ಲೂ ಸಂಪೂರ್ಣ ಒಳ ಮೀಸಲಾತಿ ಜಾರಿಯಾಗಬೇಕೆಂದು ರಾಜ್ಯ ಸರ್ಕಾರವನ್ನು ಕೋರಿದರು.
ಸಮಿತಿ ಜಿ¯್ಲÁಧ್ಯಕ್ಷ ವಿಶ್ವನಾರಾಯಣಮೂರ್ತಿ, ವಿವಿಧ ವೇದಿಕೆ, ಒಕ್ಕೂಟ, ಸಂಘಟನೆಗಳ ಅಧ್ಯಕ್ಷರಾದ ಹನುಮಂತಪ್ಪ ದುರ್ಗಾ, ಎಂ.ಎಚ್. ಶಶಿಧರ್, ಜಿ.ಎಂ. ಪ್ರಕಾಶ್, ಮಂಜುನಾಥ್ ಎ. ತಾಳಿಕೆರೆ, ತಿಪ್ಪೇಸ್ವಾಮಿ, ಮುಖಂಡರಾದ ಬಿ. ರಾಜಪ್ಪ, ಜಿ. ಗುರುಮೂರ್ತಿ, ಎಚ್. ಶಿವಮೂರ್ತಿ ಬಹದ್ದೂರ್‌ಘಟ್ಟ, ಎಂ. ದೇವರಾಜ್ ಲಕ್ಷಿ÷್ಮÃಸಾಗರ, ಕೆ. ರಾಜಣ್ಣ, ಮಲ್ಲಿಕಾರ್ಜುನ್ ಪಾರ್ಥ, ಕೆ. ಅವಿನಾಶ್, ಭೀಮರಾಜ್ ಹಳವುದರ, ಪಾಪಲಿಂಗೇಶ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net