ಚಿತ್ರದುರ್ಗದ ರೈತ ಭವನದಲ್ಲಿ ಮಂಗಳವಾರ ಆಯೋಜಿಸಿದ್ದ ರಾಜ್ಯ ರೈತ ಸಂಘದ ಕಾರ್ಯಕಾರಿಣಿ ಸಮಿತಿ ಸಭೆಯಲ್ಲಿ ಅಧ್ಯಕ್ಷ ಎಚ್.ಆರ್. ಬಸವರಾಜಪ್ಪ ಮಾತನಾಡಿದರು. ತರೀಕೆರೆ ಮಹೇಶ್, ಅಮೀನ್‌ಪಾಷಾ ದಿದ್ಗಿ, ರಾಜು ಹಿಟ್ಟೂರು, ಶಂಕರಮ್ಮ, ಮಲ್ಲಮ್ಮ ಇತರರು ಇದ್ದರು.
ಚಿತ್ರದುರ್ಗ:ಕÊಷಿಗೆ ಮಾರಕವಾಗಿರುವ ಅಂತಾರಾಷ್ಟಿçÃಯ ವಾಣಿಜ್ಯ ಒಪ್ಪಂದದಿAದ ಕೇಂದ್ರ ಹಿಂದೆ ಸರಿಯದಿದ್ದರೆ ಮುಂದಿನ ತಿಂಗಳು ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಚಳವಳಿ ನಡೆಸಲಾಗುವುದು ಎಂದು ರಾಜ್ಯರೈತ ಸಂಘ ಹಾಗೂ ಹಸಿರುಸೇನೆ ಅಧ್ಯಕ್ಷ ಎಚ್.ಆರ್.ಬಸವರಾಜಪ್ಪ ಹೇಳಿದರು.
ನಗರದ ರೈತ ಭವನದಲ್ಲಿ ಮಂಗಳವಾರ ಆಯೋಜಿಸಿದ್ದ ಸಂಘದ ರಾಜ್ಯಸಮಿತಿ ಸಭೆಯಲ್ಲಿ ಮಾತನಾಡಿ, ಬೆಳೆಗಳಿಗೆ ವೈಜ್ಞಾನಿಕ ಬೆಲೆ ಸಿಗದೆ ಸಾಲಬಾಧೆಯಿಂದ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ವಿದ್ಯುತ್ ಸಮಸ್ಯೆಯಿದೆ. ಬೆಳೆವಿಮೆ ಪಾವತಿಸಿರುವ ರೈತರಿಗೆ ವಿಮಾ ಕಂಪನಿಗಳು ಪರಿಹಾರ ನೀಡುತ್ತಿಲ್ಲ. ಅನಽಕÊತ ಗಣಿಗಾರಿಕೆಗಳು ನಿಲ್ಲಬೇಕು. ಇದರ ವಿರುದ್ದ ರೈತರು ಮೊದ ಲು ಜಾಗÊತರಾಗಬೇಕು ಎಂದರು.
ಅಮೆರಿಕ, ಜಪಾನ್, ಕೊರಿಯಾ, ಯೂರೋಪ್ ದೇಶಗಳಲ್ಲಿ ರೈತರಿಗೆ ಉತ್ತಮ ಸಹಾಯಧನ ಸಿಗುತ್ತಿದೆ. ಆದರೆ, ನಮ್ಮ ದೇಶ ದಲ್ಲಿ ಇಲ್ಲದಂತಾಗಿದೆ. ಕÊಷಿಯಲ್ಲಿ ಕೈ ಸುಟ್ಟುಕೊಂಡಿರುವ ರೈತರು ಹೈನುಗಾರಿಕೆಯಲ್ಲಿ ಜೀವ ಹಿಡಿದುಕೊಂಡಿದ್ದಾರೆ. ಇಂತಹ ಸಂದಿಗ್ದ ಪರಿಸ್ಥಿತಿಯಲ್ಲಿ ನಂದಿನಿ ಉತ್ಪನ್ನಗಳ ಅಸ್ಮಿತೆಗೆ ಧಕ್ಕೆಯಾಗುತ್ತಿದೆ. ತೆಂಗು, ತರಕಾರಿಗಳಿಗೆ ಹೊಡೆತ ಬೀಳುತ್ತಿದೆ ಎಂ ದರು.
ಕೇAದ್ರ ಸರ್ಕಾರದ ವಾಣಿಜ್ಯ ಒಪ್ಪಂದವನ್ನು ಪಂಜಾಬ್, ಹಿಮಾಚಲ ಪ್ರದೇಶದಲ್ಲಿ ವಿರೋಽಸಲಾಗಿದೆ. ರಾಜ್ಯ ಸರ್ಕಾರವೂ ವಿಶೇಷ ಅಽವೇಶನದಲ್ಲಿ ಚರ್ಚಿಸಿ ಕೇಂದ್ರದ ಏಕಪಕ್ಷೀಯ ನೀತಿ ವಿರೋಽಸಿ ಕೃಷಿ ಬಿಕ್ಕಟ್ಟಿನಿಂದ ರೈತರನ್ನು ರಕ್ಷಿಸಬೇಕು. ಸಿಬಿಲ್‌ಸ್ಕೋರ್ ಕೈಬಿಡಬೇಕು.
ಸಾಲ ವಸೂಲಾತಿಗೆ ರೈತರು ಅನುಭವಿಸುತ್ತಿರುವ ಕಿರುಕುಳ ನಿಲ್ಲಬೇಕು. ಇಲ್ಲವಾದಲ್ಲಿ ಹೋರಾಟ ಅನಿವಾರ್ಯವಾಗಲಿದೆ ಎಂದು ಸರ್ಕಾರಗಳನ್ನು ಎಚ್ಚರಿಸಿದರು. ಬಗರ್‌ಹುಕುಂ ರೈತರಿಗೆ ಹಕ್ಕುಪತ್ರ ನೀಡದ ಸರ್ಕಾರದ ನಿಲುವನ್ನು ಖಂಡಿಸಿದರು.
ತರೀಕೆರೆ ಮಹೇಶ್, ಅಮೀನ್‌ಪಾಷಾ ದಿದ್ಗಿ, ರಾಜು ಹಿಟ್ಟೂರು, ಶಂಕರಮ್ಮ, ಮಲ್ಲಮ್ಮ, ನಾಗರಾಜ್, ನಿಂಗಪ್ಪ, ಮುನಿಯಪ್ಪ, ಕಬ್ಬಿಗೆರೆ ನಾಗರಾಜ್, ಜಿಲ್ಲಾಧ್ಯಕ್ಷ ಡಿಎಸ್‌ಹಳ್ಳಿ ಮಲ್ಲಿಕಾರ್ಜುನ್, ವಿವಿಧ ಜಿಲ್ಲೆಗಳ ಅಧ್ಯಕ್ಷರು ಹಾಜರಿದ್ದರು.