ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಆಹ್ವಾನ ಪತ್ರಿಕೆಯನ್ನು ಚಿತ್ರದುರ್ಗದಲ್ಲಿ ಗುರುವಾರ ಸಾಹಿತಿ ಬಿ.ಎಲ್.ವೇಣು ಅವರು ಅನಾವ ರಣಗೊಳಿಸಿದರು. ಎಂ.ಕೆ.ತಾಜ್‌ಪೀರ್,ಕೆ.ಎA.ಶಿವಸ್ವಾಮಿ,ವಿ.ಎಲ್.ಪ್ರಶಾAತ್,ವಿ.ಶ್ರೀನಿವಾಸ ಮಳಲಿ, ಆರ್.ಮಹಾಂತೇಶ್,ಸಿ.ಎA. ಚಂದ್ರಶೇಖರ್,ಡಿ.ಗೋಪಾಲಸ್ವಾಮಿ ನಾಯಕ ಇದ್ದರು.
ಚಿತ್ರದುರ್ಗ: ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಕೆ.ಆರ್. ಸಂಧ್ಯಾ ರೆಡ್ಡಿ ಆಯ್ಕೆಯಾಗಿದ್ದು, ನಗರದಲ್ಲಿ -ೆ. ೧೭ರಿಂದ ೨ ದಿನಗಳ ಕಾಲ ನಡೆಯುವ ೧೮ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ವಿಶೇಷ ಪ್ರಾಮುಖ್ಯ ಪಡೆದಿದೆ ಎಂದು ಹಿರಿಯ ಸಾಹಿತಿ ಬಿ.ಎಲ್. ವೇಣು ಹೇಳಿದರು.
ತಮ್ಮ ನಿವಾಸದಲ್ಲಿ ಗುರುವಾರ ಸಮ್ಮೇಳನದ ಆಹ್ವಾನ ಪತ್ರಿಕೆ ಅನಾವರಣಗೊಳಿಸಿ ಅವರು ಮಾತನಾಡಿದರು. ಈ ಹಿಂದಿನ ಜಿಲ್ಲಾ ಸಮ್ಮೇಳನಗಳಲ್ಲಿ ಮಹಿಳೆಯರಿಗೆ ಅವಕಾಶ ಸಿಕ್ಕಿರಲಿಲ್ಲ. ಆದರೆ ಈ ಬಾರಿ ಆ ಕೊರತೆ ನಿವಾರಣೆಯಾಗಿದೆ. ಮಹಿಳಾ ಪ್ರಾತಿ ನಿಧ್ಯಕ್ಕೆ ಪರಿಷತ್ತು ನಿರ್ಧರಿಸಿರುವುದು ಉತ್ತಮ ಬೆಳವಣಿಗೆ ಎಂದರು.
ಸರ್ವಾಧ್ಯಕ್ಷರ ಬಗ್ಗೆ ಮೆಚ್ಚುಗೆ
ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾದ ಸಂಧ್ಯಾ ರೆಡ್ಡಿ ಅವರು ಚಿತ್ರದುರ್ಗದಲ್ಲಿ ಹುಟ್ಟಿ, ಬೆಳೆದು ಶಿಕ್ಷಣ ಪಡೆದಿದ್ದಾರೆ. ಲೇಖಕಿ ಯರ ಸಂಘದ ಅಧ್ಯಕ್ಷರಾಗಿ ಬಹುಮುಖ ಪ್ರತಿಭೆ ಹೊಂದಿದ್ದಾರೆ. ಜಾನಪದ, ಪ್ರವಾಸ ಸೇರಿದಂತೆ ಸಾಹಿತ್ಯದ ನಾನಾ ಕ್ಷೇತ್ರಗಳಲ್ಲಿ ೭೫ಕ್ಕೂ ಹೆಚ್ಚು ಕೃತಿ ರಚಿಸಿದ್ದಾರೆ. ಸ್ವಾತಂತ್ರ‍್ಯ ಯೋಧರ ಕುಟುಂಬದಿAದ ಬಂದ ಸಂಧ್ಯಾ ರೆಡ್ಡಿ ಅವರ ತಾಯಿ ಅನಸೂಯ ರಾಮರೆಡ್ಡಿ ಅವರೂ ಲೇಖಕಿಯಾಗಿದ್ದು, ಇವರ ಒಂದು ಕಾದಂಬರಿ ಚಲನಚಿತ್ರವಾಗಿದೆ ಎಂದು ಸ್ಮರಿಸಿದರು.
ಸಮ್ಮೇಳನದ ಯಶಸ್ಸಿಗೆ ಮಠಮಾನ್ಯಗಳು, ಸಾಹಿತಿ, ರಾಜಕಾರಣಿಗಳು ಸೇರಿದಂತೆ ಎಲ್ಲ ಕನ್ನಡಿಗರ ಸಹಕಾರದ ಅಗತ್ಯವಿದೆ. ಆರೋಗ್ಯದ ಸಮಸ್ಯೆಯಿಂದ ಸಮ್ಮೇಳನದಲ್ಲಿ ನಾನು ಭಾಗವಹಿಸುತ್ತಿಲ್ಲ. ಸಮ್ಮೇಳನಕ್ಕೆ ಶುಭವಾಗಲಿ ಎಂದರು.
ಕುಡಾ ಅಧ್ಯಕ್ಷ ಎಂ.ಕೆ. ತಾಜ್‌ಪೀರ್ ಮಾತನಾಡಿ, ನಗರದಲ್ಲಿ ಈಗಾಗಲೇ ಸಮ್ಮೇಳನದ ವಾತಾವರಣ ಸೃಷ್ಟಿಯಾಗಿದೆ. ನಗರದ ಪ್ರಮುಖ ಬೀದಿಗಳಲ್ಲಿ ಕನ್ನಡದ ಬಾವುಟಗಳು ರಾರಾಜಿಸುತ್ತಿವೆ. ಜನಪ್ರತಿನಿಽಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು. ಕಸಾಪದಿಂದ ದತ್ತಿ ನಿಽ ಕಾರ್ಯಕ್ರಮಗಳನ್ನು ಆಯೋಜಿಸಬೇಕು ಎಂದರು.
ಕಸಾಪ ಜಿಲ್ಲಾಧ್ಯಕ್ಷ ಕೆ.ಎಂ. ಶಿವಸ್ವಾಮಿ, ತಾಲೂಕು ಅಧ್ಯಕ್ಷ ವಿ.ಎಲ್. ಪ್ರಶಾಂತ್, ಕಾರ್ಯದರ್ಶಿ ವಿ. ಶ್ರೀನಿವಾಸ ಮಳಲಿ, ಶಿಕ್ಷಕರಾದ ಆರ್. ಮಹಾಂತೇಶ್, ಸಿ.ಎಂ. ಚಂದ್ರಶೇಖರ್,ಡಿ.ಗೋಪಾಲಸ್ವಾಮಿ ನಾಯಕ