ರೈಲ್ವೆಗೆ ಭೂಮಿ ಕೊಡುವ ರೈತರಿಗೆ ಅನ್ಯಾಯವಾಗದು

 ಚಿತ್ರದುರ್ಗದಲ್ಲಿ ಮಂಗಳವಾರ ಚಿಕ್ಕಜಾಜೂರು-ಬಳ್ಳಾರಿ ರೈಲ್ವೆ ಡಬ್ಲಿಂಗ್ ಮಾರ್ಗದ ಭೂಸ್ವಾಽÃನಕ್ಕೆ ಸಂಬAಽಸಿದAತೆ ಕರೆದಿದ್ದ ಅಽಕಾರಿಗಳು ಮತ್ತು ರೈತರ ಸಭೆಯಲ್ಲಿ ಎಡಿಸಿ ಬಿ.ಟಿ. ಕುಮಾರಸ್ವಾಮಿ, ನಾಗರಾಜ್, ಗೋಪ್ಯಾನಾಯ್ಕ, ಗೋವಿಂದರಾಜು, ಜಿ. ಸವಿತಾ ಇತರರು ಇದ್ದರು.
ಚಿತ್ರದುರ್ಗದಲ್ಲಿ ಮಂಗಳವಾರ ಚಿಕ್ಕಜಾಜೂರು-ಬಳ್ಳಾರಿ ರೈಲ್ವೆ ಡಬ್ಲಿಂಗ್ ಮಾರ್ಗದ ಭೂಸ್ವಾಽÃನಕ್ಕೆ ಸಂಬAಽಸಿದAತೆ ಕರೆದಿದ್ದ ಅಽಕಾರಿಗಳು ಮತ್ತು ರೈತರ ಸಭೆಯಲ್ಲಿ ಎಡಿಸಿ ಬಿ.ಟಿ. ಕುಮಾರಸ್ವಾಮಿ, ನಾಗರಾಜ್, ಗೋಪ್ಯಾನಾಯ್ಕ, ಗೋವಿಂದರಾಜು, ಜಿ. ಸವಿತಾ ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಸಮರ್ಪಕ ಪರಿಹಾರದ ಭರವಸೆ ನೀಡಿದ ಎಡಿಸಿ
  • ಚಿಕ್ಕಜಾಜೂರು-ಬಳ್ಳಾರಿ ಡಬ್ಲಿಂಗ್ ಮಾರ್ಗ
  • ರೈಲ್ವೆ ಯೋಜನೆ
ಚಿತ್ರದುರ್ಗ: ರೈಲ್ವೆ ಯೋಜನೆಗೆ ಭೂಮಿ ಬಿಟ್ಟುಕೊಡುವ ರೈತರಿಗೆ ಯಾವುದೇ ಅನ್ಯಾಯವಾಗದಂತೆ, ಪ್ರಸ್ತುತ ಮಾರುಕಟ್ಟೆ ದರ ದಲ್ಲೇ ಪರಿಹಾರ ಒದಗಿಸಲು ಜಿಲ್ಲಾಡಳಿತ ಬದ್ಧವಾಗಿದೆ ಎಂದು ಅಪರ ಜಿಲ್ಲಾಽಕಾರಿ ಬಿ.ಟಿ.ಕುಮಾರಸ್ವಾಮಿ ಭರವಸೆ ನೀಡಿದರು.

ಡಿಸಿ ಕಚೇರಿಯಲ್ಲಿ ಏರ್ಪಡಿಸಿದ್ದ ಚಿಕ್ಕಜಾಜೂರು ಮತ್ತು ಬಳ್ಳಾರಿ ನಡುವಿನ ರೈಲ್ವೇ ಡಬ್ಲಿಂಗ್ ಮಾರ್ಗದ ಭೂಸ್ವಾಽÃನ ಪ್ರಕ್ರಿಯೆ ಕುರಿತಂತೆ ಅ ಽಕಾರಿಗಳು ಹಾಗೂ ರೈತರ ಸಭೆಯಲ್ಲಿ ಮಾತನಾಡಿದರು.
ಚಿಕ್ಕಜಾಜೂರು-ಚಿತ್ರದುರ್ಗ-ಚಳ್ಳಕೆರೆ-ಬಳ್ಳಾರಿ ಮಾರ್ಗದ ರೈಲ್ವೆ ಡಬ್ಲಿಂಗ್‌ಗೆ ಭೂ ಸ್ವಾಽÃನ ನಡೆದಿದೆ. ಇದು ಸಾರ್ವಜನಿಕ ಸಾರಿಗೆ ವ್ಯವಸ್ಥೆ ಸುಧಾರಣೆಗಾಗಿ ನಡೆಯುತ್ತಿದೆ. ಇದರಿಂದ ಅಡಕೆ ಹಾಗೂ ಇತರ ಬೆಳೆಗಳ ಸಾಗಾಟಕ್ಕೆ ಹೆಚ್ಚಿನ ಅನುಕೂಲವಾಗಲಿದೆ.
ಭೂಸ್ವಾಽÃನದೆಡೆ ಆತಂಕ ಬೇಡ, ಸಬ್‌ರಿಜಿಸ್ಟಾçರ್ ಕಚೇರಿ ಮಾರುಕಟ್ಟೆ ಮೌಲ್ಯ ಹಾಗೂ ಕಳೆದ ೩ ವರ್ಷಗಳ ಮಾರಾಟದ ಸರಾಸರಿ ದರ ಆಧರಿಸಿ ಬೆಲೆ ನಿಗದಿಪಡಿಸಲಾಗುತ್ತದೆ ಎಂದರು.
ನಗರ ಪ್ರದೇಶದ ಭೂಮಿಗೆ ಮೂಲ ಬೆಲೆಯ ೨ ಪಟ್ಟು ಪರಿಹಾರ ನೀಡಿದರೆ, ಗ್ರಾಮೀಣ ಭಾಗದ ಭೂಮಿಗೆ ಅದರ ದರಕ್ಕೆ ಅನು ಗುಣವಾಗಿ ೩-೪ ಪಟ್ಟು ಹೆಚ್ಚಿನ ಮೊತ್ತ ಸಿಗಲಿದೆ. ಜಮೀನಿನಲ್ಲಿರುವ ಬೆಳೆ, ತೋಟಗಾರಿಕೆ ಬೆಳೆಗಳು, ಕೊಟ್ಟಿಗೆ, ಕೃಷಿ ಚಟುವಟಿಕೆ ಕಟ್ಟಡಗಳಿಗೂ ಪರಿಹಾರ ದೊರಕಲಿದೆ. ಪರಿಹಾರದ ಮೊತ್ತದ ಜತೆಗೆ ಭೂಮಿ ನೀಡುವ ರೈತರಿಗೆ ಸರ್ಕಾರದಿಂದ ಹಲವು ವಿಶೇಷ ಸೌಲಭ್ಯಗಳನ್ನು ನೀಡ ಲಾಗುತ್ತದೆ ಎಂದು ತಿಳಿಸಿದರು.
ಕಾಲು ಭಾಗಕ್ಕಿಂತ ಹೆಚ್ಚು ಜಮೀನು ಕಳೆದುಕೊಳ್ಳುವ ರೈತರಿಗೆ ಯೋಜನಾ ನಿರಾಶ್ರಿತ ಪ್ರಮಾಣಪತ್ರ ನೀಡಲಾಗುವುದು. ಈ ಮೂಲಕ ಅವರ ಮಕ್ಕಳಿಗೆ ಇಂಜಿನಿಯರಿAಗ್, ವೈದ್ಯಕೀಯ ಶಿಕ್ಷಣ, ಸರ್ಕಾರಿ ಉದ್ಯೋಗಗಳಲ್ಲಿ ವಿಶೇಷ ಮೀಸಲಾತಿ ದೊರೆಯ ಲಿದೆ.ಪರಿಹಾರದ ಹಣದಿಂದ ರೈತರು ಬೇರೆಡೆ ಭೂಮಿ ಖರೀದಿಸಿದರೆ ನೋಂದಣಿ ಶುಲ್ಕದಲ್ಲಿ ವಿನಾಯಿತಿ ನೀಡಲಾಗುವುದು ಎಂದು ಕುಮಾರಸ್ವಾಮಿ ಹೇಳಿದರು.
ವಿಳಂಬಕ್ಕೆ ಆಸ್ಪದವಿಲ್ಲ
ಸಾಮಾನ್ಯ ಭೂಸ್ವಾಽÃನ ಪ್ರಕ್ರಿಯೆ ೨-೩ ವರ್ಷಗಳ ದೀರ್ಘಾವಽ ತೆಗೆದುಕೊಳ್ಳುತ್ತದೆ. ಆದರೆ, ರೈಲ್ವೆ ಯೋಜನೆಗೆ ನೇರ ಖರೀದಿ ಪದ್ಧತಿ ಅನುಸರಿಸಲಾಗುತ್ತಿದೆ. ಇದರಿಂದಾಗಿ ರೈತರು ಪರಿಹಾರಕ್ಕೆ ವರ್ಷಗಟ್ಟಲೆ ಕಾಯುವ ಅಗತ್ಯವಿಲ್ಲ. ಮೂರು ತಿಂಗಳ ಅವಽಯಲ್ಲೇ ಪ್ರಕ್ರಿಯೆ ಪೂರ್ಣಗೊಳಿಸಿ ಪರಿಹಾರದ ಹಣ ಬಿಡುಗಡೆಯಾಗಲಿದೆ.
ಜಮೀನು ಸಮೀಕ್ಷೆ ಕಾರ್ಯ ಪ್ರಗತಿಯಲ್ಲಿದೆ. ಯಾವ ಸರ್ವೆ ನಂಬರ್‌ನಲ್ಲಿ ಎಷ್ಟು ಭೂಮಿ ಸ್ವಾಽÃನವಾಗುತ್ತದೆ ಎಂಬ ನಿಖರ ಮಾ ಹಿತಿ ಲಭ್ಯವಾದ ತಕ್ಷಣ ರೈತರಿಗೆ ಅಽಕೃತ ನೋಟಿಸ್ ನೀಡಲಾಗುವುದು. ದಾವಣಗೆರೆ-ಚಿತ್ರದುರ್ಗ-ತುಮಕೂರು ನೇರ ರೈಲು ಮಾರ್ಗದ ಯೋಜನೆ ಭೂಸ್ವಾಽÃನ ಹಾಗೂ ಪ್ರಗತಿ ಕುರಿತಂತೆ ಶೀಘ್ರವೇ ಪ್ರತ್ಯೇಕ ಸಭೆ ನಡೆಸಲಾಗುವುದು ಎಂದು ಎಡಿಸಿ ತಿಳಿ ಸಿದರು.
ವಿಶೇಷ ಭೂ ಸ್ವಾಽÃನಾಽಕಾರಿ ವೆಂಕಟೇಶ್‌ನಾಯಕ್, ಲೋಕೋಪಯೋಗಿ ಇಲಾಖೆ ಇಇ ನಾಗರಾಜ್, ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕಿ ಜಿ. ಸವಿತಾ, ವಲಯ ಅರಣ್ಯಾಽಕಾರಿ ವಸಂತಕುಮಾರ್, ತಹಸೀಲ್ದಾರ್ ಗೋವಿಂದರಾಜು ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net