ಭದ್ರಾಕ್ಕೆ ಅನುದಾನ ನಿರೀಕ್ಷೆಯಲ್ಲಿದ್ದ ರೈತರಿಗೆ ಮತ್ತೆ ನಿರಾಶೆ

ಗೋನೂರು ಆಕ್ವಾಡೆಕ್.
ಗೋನೂರು ಆಕ್ವಾಡೆಕ್.
Published on

ಪ್ರಮುಖ ಮುಖ್ಯಾಂಶಗಳು

  • ಹಿರಿಯೂರಲ್ಲಿ ಹೊಸ ಸಂಚಾರಿ ಠಾಣೆ
  • ಬ್ಯುಸಿನೆಸ್ ಸೆಂಟರ್ ಆಗಲಿದೆ ಬಬ್ಬೂರು ಕೇಂದ್ರ
  • ಹೊಸದುರ್ಗ, ಚಳ್ಳಕೆರೆಯಲ್ಲಿ ಶ್ರಮಿಕ ವಸತಿ ಶಾಲೆ
ಡಿಪಿಎನ್ ಶ್ರೇಷ್ಠಿ, ಚಿತ್ರದುರ್ಗ
\ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ ಮಂಡಿಸಿದ ಬಜೆಟ್ ಬಯಲು ಸೀಮೆ ರೈತರನ್ನು ಮತ್ತೆ ನಿರಾಶೆಗೆ ದೂಡಿದೆ. ಭದ್ರಾ ಮೇಲ್ದಂಡೆ ಯೋಜನೆ ಅನುಷ್ಠಾನ ತ್ವರಿತಕ್ಕೆ ರಾಜ್ಯ ಸರ್ಕಾರ ಈ ಬಾರಿಯ ಬಜೆಟ್‌ನಲ್ಲಿ ವಿಶೇಷ ಆಸಕ್ತಿ ಪ್ರದರ್ಶಿಸಲಿದೆ ಎಂಬ ನಿರೀಕ್ಷೆ ಹುಸಿಯಾಗಿದೆ.
ಅಗತ್ಯ ಅನುದಾನಕ್ಕಾಗಿ ರೈತರು ನಿರಂತರ ಹೋರಾಟಗಳನ್ನು ನಡೆಸುತ್ತಿದ್ದದ್ದು, ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ನೇತೃತ್ವದ ಜಿಲ್ಲೆಯ ಕಾಂಗ್ರೆಸ್ ಶಾಸಕರ ನಿಯೋಗ ಸಿಎಂ, ಡಿಸಿಎಂ ಭೇಟಿ ಮಾಡಿ ಒತ್ತಾಯಿಸಿದ್ದರೂ ಯೋಜನೆಗೆ ನಿರ್ದಿಷ್ಟ ಅನುದಾನ ಘೋಷಣೆಯಾಗಿಲ್ಲ.
ಆದರೆ, ಜಲಸಂಪನ್ಮೂಲ ಇಲಾಖೆಗೆ ಕಾಯ್ದಿರಿಸಿರುವ ೨೨,೪೩೨ ಕೋಟಿ ರೂ.ಅನುದಾನದಲ್ಲಿ ಭದ್ರಾಕ್ಕೆ ಎಷ್ಟು ಎಂಬುದನ್ನು ಕಾದು ನೋಡಬೇಕಿದೆ. ೪-೫ ಸಾವಿರ ಕೋಟಿ ರೂ. ಕೊಟ್ಟರೂ ಅನುಕೂಲವಾಗಲಿದೆ. ಈ ವರ್ಷ ೧೩೫ ಕಿ.ಮೀ. ಚಿತ್ರದುರ್ಗ ಶಾಖಾ ಮತ್ತು ಪೀಡರ್ ಕಾಲುವೆಗಳ ಕಾಮಗಾರಿ ಪೂರ್ಣಗೊಳಿಸುವುದಾಗಿ ಸಿಎಂ ಹೇಳಿದ್ದಾರೆ.
ಹಿರಿಯೂರು ತಾಲೂಕಿನ ಬಬ್ಬೂರು ಜಿಲ್ಲಾ ಕೃಷಿ ತರಬೇತಿ ಕೇಂದ್ರವನ್ನು ರಾಜ್ಯಮಟ್ಟದ ಕೃಷಿ ಉದ್ದಿಮೆ ಕೇಂದ್ರವನ್ನಾಗಿ ಉನ್ನತೀಕರಣ, ಮುಖ್ಯ ಮಂತ್ರಿ ಕೃಷಿ ವಿಸ್ತಾರ ಯೋಜನೆ, ಮಿಲೆಟ್‌ಹಬ್, ಕೃಷಿ ಇಲಾಖೆ ಪ್ರಯೋಗಾಲಯಗಳಿಗೆ ಎನ್‌ಎಬಿಎಲ್ ಮಾನ್ಯತೆ, ವಸುಧಾಮೃತ, ಸಸ್ಯ ಸಂಜೀವಿನಿ, ಹೈಟೆಕ್ ಹಾರ್ವೆಸ್ಟರ್ ಹಬ್ ಮೊದಲಾದ ಕೃಷಿ, ತೋಟಗಾರಿಕೆ ಸಂಬAಽ ಕಾರ್ಯಕ್ರಮಗಳು ಜಿಲ್ಲೆಯಲ್ಲೂ ಜಾರಿಯಾಗಬಹುದು.
ಹೊಸದಾಗಿ ಕರ್ನಾಟಕ ಪಬ್ಲಿಕ್ ಶಾಲೆಗಳ ಪ್ರಾರಂಭ, ಪಶುವೈದ್ಯಕೀಯ ಸಂಸ್ಥೆಗಳಿಗೆ ನೂತನ ಕಟ್ಟಡ, ಆರೋಗ್ಯ ಸಂಬAಽ ಸೇವೆಗಳೊಂದಿಗೆ ಚಿತ್ರದುರ್ಗದ ಕಾರ್ಮಿಕ ರಾಜ್ಯ ವಿಮಾ ಚಿಕಿತ್ಸಾಲಯ ಮೇಲ್ದರ್ಜೆಗೇರಿಸಲು ಉದ್ದೇಶಿಸಲಾಗಿದೆ. ಸಶಕ್ತ ಕರ್ನಾಟಕ ಹೆಸರಲ್ಲಿ ಚಿತ್ರದುರ್ಗ ರಾಷ್ಟಿçÃಯ ಮ್ಯಾರಾಥಾನ್ ನಡೆಯಲಿದೆ.
ಜಿಲ್ಲಾ ಕೇಂದ್ರದಲ್ಲಿ ಬಾಲಕ, ಬಾಲಕಿಯರ ಮೆಟ್ರಿಕ್ ನಂತರದ ತಲಾ ಒಂದೊAದು ಹಾಸ್ಟೆಲ್ ನಿರ್ಮಾಣ. ಹಿರಿಯೂರಿನಲ್ಲಿ ಹೊಸದಾಗಿ ಸಂಚಾರ ಪೊಲೀಸ್ ಠಾಣೆ ಸ್ಥಾಪನೆ, ಹೊಸದುರ್ಗ, ಚಳ್ಳಕೆರೆಯಲ್ಲಿ ಶ್ರಮಿಕ ವಸತಿ ಶಾಲೆ ಪ್ರಾರಂಭ, ೪ ಕೋಟಿ ರೂ.ವೆಚ್ಚದಲ್ಲಿ ತಾರಾಲಯ ನಿರ್ಮಾಣ. ಮೊಳಕಾಲ್ಮೂರಲ್ಲಿ ಸರ್ಕಾರಿ ಪಾಲಿಟೆಕ್ನಿಕ್ ಸ್ಥಾಪನೆ.
ಚಳ್ಳಕೆರೆ ತಾಲೂಕು ಗೋಸಿಕೆರೆ ಬಳಿ, ಗುಡಿಹಳ್ಳಿ ಮತ್ತು ತಪ್ಪಗೊಂಡನಹಳ್ಳಿ ಗ್ರಾಮಗಳ ನಡುವೆ, ತೊರೆಬೀರನಹಳ್ಳಿ ಮತ್ತು ಬೆಳಗೆರೆ ಗ್ರಾಮಗಳ ನಡುವೆ ವೇದಾವತಿ ನದಿಗೆ ಅಡ್ಡಲಾಗಿ ಬ್ರಿಡ್ಜ್ ಕಂ ಬ್ಯಾರೇಜ್‌ಗಳ ನಿರ್ಮಾಣ, ಚಳ್ಳಕೆರೆ ತಾಲೂಕು ಕರಿ ಯಮ್ಮನಹಟ್ಟಿ ಸಣ್ಣ ಕೆರೆ ಕೋಡಿ ನಿರ್ಮಾಣ.
ಚಿತ್ರನಾಯಕನಹಳ್ಳಿ ಹಳ್ಳಕ್ಕೆ ಚೆಕ್ ಡ್ಯಾಂ ನಿರ್ಮಾಣ, ಚಿತ್ರದುರ್ಗ ತಾಲೂಕು ಕೊಳಾಲು ದೊಡ್ಡ ಕೆರೆಗೆ ತಡೆಗೋಡೆ ಮತ್ತು ದುರಸ್ತಿ. ಮೊಳಕಾಲ್ಮೂರು ತಾಲೂಕು ವೆಂಕಟಾಪುರ ಡೈಕ್ ಪಾಥ್‌ವೇ ದುರಸ್ತಿಗೆ ಯೋಜಿಸಲಾಗಿದೆ.
ಹಲವು ಇಲಾಖೆಗಳ ಇನ್ನಷ್ಟು ಕಾರ್ಯಕ್ರಮಗಳು ಚಿತ್ರದುರ್ಗಕ್ಕೆಂದೇ ನಿರ್ದಿಷ್ಟವಾಗಿ ಘೋಷಣೆ ಆಗದಿದ್ದರೂ, ಅವುಗಳು ಕೂಡ ಜಿಲ್ಲೆಯಲ್ಲೂ ಅನುಷ್ಠಾನ ಭರವಸೆ ಇದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net