ಕಂದಾಯ ಸಚಿವರಿಗೆ ರೈತರ ಮನವಿ

ಕಂದಾಯ ಸಚಿವ ಕೃಷ್ಣಬೈರೇಗೌಡ
ಕಂದಾಯ ಸಚಿವ ಕೃಷ್ಣಬೈರೇಗೌಡ
Published on

ಪ್ರಮುಖ ಮುಖ್ಯಾಂಶಗಳು

  • ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹ
  • ಬೆಳೆನಷ್ಟದ ತಿರಸ್ಕೃತ ಅರ್ಜಿಗಳ ಮರು ಪರಿಶೀಲನೆಗೂ ಒತ್ತಾಯ
  • ಕಂದಾಯ ಸಚಿವ ಕೃಷ್ಣಬೈರೇಗೌಡ
ಚಿತ್ರದುರ್ಗ: ಬಂಡಿ ದಾರಿ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆ ಆಗ್ರಹಿಸಿ ರೈತರು ಶುಕ್ರವಾರ ನಗರದಲ್ಲಿ ಕಂದಾಯ ಸಚಿವ ಕೃಷ್ಣಬೈರೇಗೌಡ ಅವರಿಗೆ ಮನವಿ ಸಲ್ಲಿಸಿದರು.
ಜಮೀನುಗಳಿಗೆ ಹೋಗಲು ಬಳಸುವ ಹಳೆಯ ಬಂಡಿ ದಾರಿ ಮತ್ತು ರೂಢಿಗತ ದಾರಿಗಳನ್ನು ಸರ್ಕಾರಿ ನಕ್ಷೆ ವ್ಯಾಪ್ತಿಗೆ ಸೇರಿಸ ಬೇಕು.
ನಕ್ಷೆಯಲ್ಲಿ ದಾರಿಗಳಿಲ್ಲದೆ ಕೃಷಿ ಚಟುವಟಿಕೆಗಳಿಗೆ ತೊಂದರೆಯಾಗುತ್ತಿದೆ. ೨೦೨೫-೨೬ನೇ ಸಾಲಿನ ಮುಂಗಾರು ಹಂಗಾಮಿನ ಅತಿವೃಷ್ಟಿಯಿಂದ ಬೆಳೆ ಹಾನಿಯಾಗಿದ್ದರೂ ೭೬೯ ರೈತರಿಗೆ ಅಲ್ಪ ಪ್ರಮಾಣದ ಪರಿಹಾರ ವಿತರಿಸಲಾಗಿದೆ. ಅನೇಕ ರೈತರು ಪರಿಹಾರದಿಂದ ವಂಚಿತರಾಗಿದ್ದು, ತಿರಸ್ಕೃತ ಅರ್ಜಿಗಳನ್ನು ಮರುಪರಿಶೀಲಿಸಿ ಕೂಡಲೇ ಪರಿಹಾರ ವಿತರಿಸಬೇಕು.
ಕಳೆದ ಸೆಪ್ಟೆಂಬರ್, ಅಕ್ಟೋಬರ್‌ನಲ್ಲಿ ಮಳೆ ಇಲ್ಲದೆ ಜಿಲ್ಲೆಯಲ್ಲಿ ಬರದ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದರಿಂದ ಶೇಂಗಾ ಮತ್ತಿತರ ಹಲವು ಪ್ರಮುಖ ಬೆಳೆಗಳು ಸಂಪೂರ್ಣ ಹಾಳಾಗಿವೆ. ಬೆಳೆ ವಿಮೆ ಪಾವತಿಸಿರುವ ರೈತರಿಗೆ ವಿಮಾ ಪರಿಹಾರ ಮೊತ್ತ ಕೊಡಿಸಬೇಕೆಂದು ಆಗ್ರಹಿಸಿದರು.
೨೦೨೨-೨೩ನೇ ಸಾಲಿನಲ್ಲಿ ಬೆಳೆ ಪರಿಹಾರವಾಗಿ ೪೭.೯೯ ಕೋಟಿ ರೂ. ಅನರ್ಹ ಖಾತೆಗಳಿಗೆ ಜಮೆ ಆಗಿದೆ. ರೈತರಿಗೆ ಅನ್ಯಾಯ ಮಾಡಿದ ಅಽಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.
ಜಿಲ್ಲೆಯಲ್ಲಿ ಈ ವರ್ಷ ಈರುಳ್ಳಿ, ಶೇಂಗಾ, ತೊಗರಿ ಮೊದಲಾದ ಬೆಳೆಗಳು ಅತಿವೃಷ್ಟಿ ಮತ್ತು ಅನಾವೃಷ್ಟಿಯಿಂದ ಹಾನಿಗೀಡಾಗಿವೆ. ರೈತರಿಗೆ ಹವಾಮಾನ ಆಧಾರಿತ ಬೆಳೆ ವಿಮೆ ಪರಿಹಾರ ಕೊಡಬೇಕು ಎಂದು ಆಗ್ರಹಿಸಿದರು.
ಹಂಪಯ್ಯನ ಮಾಳಿಗೆ ಧನಂಜಯ, ಕೆ.ಪಿ. ಭೂತಯ್ಯ, ಆರ್. ಚೇತನ್ ಯಳನಾಡು, ಚಿಕ್ಕಪ್ಪನಹಳ್ಳಿ ರುದ್ರಸ್ವಾಮಿ, ಡಿ.ಎಸ್. ಹಳ್ಳಿ ಮಲ್ಲಿಕಾರ್ಜುನ್, ನಿಜಲಿಂಗಪ್ಪ, ಚಿಕ್ಕಬ್ಬಿಗೆರೆ ನಾಗರಾಜ್, ಎಚ್.ಆರ್. ತಿಮ್ಮಯ್ಯ, ಸುರೇಶ್, ಮುದ್ದಾಪುರ ನಾಗಣ್ಣ, ಬಾಗೇನಹಳ್ಳಿ ತಿಪ್ಪೇಸ್ವಾಮಿ, ಶಿವಕುಮಾರ್‌ಆಡನೂರು, ಸಂತೋಷ್ ಮಲ್ಲಾಡಿಹಳ್ಳಿ, ಸಂಜೀವಪ್ಪ, ಅಂಜಿನಪ್ಪ, ಎಸ್. ಸಿದ್ದರಾಮಪ್ಪ, ಮಹಾಂತೇಶ್, ಹನುಮಂತರೆಡ್ಡಿ ಇನ್ನಿತರ ರೈತ ಪ್ರಮುಖರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net