ನಗರಸಭೆ ನಾಮನಿರ್ದೇಶನ ಸದಸ್ಯ ಆರ್. ಪ್ರಸನ್ನ ಕುಮಾರ್ ಮಾತನಾಡಿ, ನಗರಸಭೆಯಿಂದ ಸಾರ್ವಜನಿಕರಿಗೆ ಯಾವುದೇ ಅನುಕೂಲ ಇಲ್ಲ. ಇಸ್ವತ್ತು ಪಡೆಯಲು ವರ್ಷಗಟ್ಟಲೆ ಅಲೆದಾಡುವ ಪರಿಸ್ಥಿತಿ ಇದೆ. ಜನರಿಂದ ತೆರಿಗೆ ಪಡೆಯುವುದು ಬಿಟ್ಟರೆ ಅಗತ್ಯ ಸೌಕರ್ಯಗಳನ್ನು ಕಲ್ಪಿಸುವ ಕೆಲಸ ಆಗುತ್ತಿಲ್ಲ. ಕೆಲ ವಾರ್ಡ್‌ಗಳಲ್ಲಿ ಚರಂಡಿ, ರಸ್ತೆ ಮಾಡಿಸಿಲ್ಲ. ಸ್ವಚ್ಛತೆ ಇಲ್ಲದೆ ತೊಂದರೆ ಅನುಭವಿಸಿರುವ ನಾಗರಿಕರು ನಗರಸಭೆ ಸಹವಾಸ ಸಾಕಪ್ಪ ಎಂದು ಶಾಪ ಹಾಕುತ್ತಿದ್ದಾರೆ ಎಂದರು.