ಹುz್ದೆಗಳ ಭರ್ತಿಯಲ್ಲಿ ಒಳಮೀಸಲು ಖಚಿತಪಡಿಸಿ

 ಒಳಮೀಸಲು ಅನ್ವಯವೇ ಸರ್ಕಾರಿ ಹುz್ದÉಗಳ ಭರ್ತಿಗೆ ಆಗ್ರಹಿಸಿ ಮಾದಿಗ ಸಂಘಟನೆಗಳ ಒಕ್ಕೂಟದ ಕಾರ್ಯಕರ್ತರು ಕೊರಳಿಗೆ ಮಡಕೆ ಕಟ್ಟಿಕೊಂಡು ಚಿತ್ರದುರ್ಗದಲ್ಲಿ ಗುರುವಾರ ವಿನೂತನ ಪ್ರತಿಭಟನೆ ನಡೆಸಿದರು. ಹನುಮಂತಪ್ಪ ದುರ್ಗ, ಎಂ. ಲಕ್ಷ÷್ಮಣ, ರಾಜಪ್ಪ, ಶಂಕರ್, ಮಂಜುನಾಥ್ ಎ. ತಾಳಿಕೆರೆ, ನಗರಂಗೆರೆ ದೇವರಾಜ್ ಇತರರು ಇದ್ದರು.
ಒಳಮೀಸಲು ಅನ್ವಯವೇ ಸರ್ಕಾರಿ ಹುz್ದÉಗಳ ಭರ್ತಿಗೆ ಆಗ್ರಹಿಸಿ ಮಾದಿಗ ಸಂಘಟನೆಗಳ ಒಕ್ಕೂಟದ ಕಾರ್ಯಕರ್ತರು ಕೊರಳಿಗೆ ಮಡಕೆ ಕಟ್ಟಿಕೊಂಡು ಚಿತ್ರದುರ್ಗದಲ್ಲಿ ಗುರುವಾರ ವಿನೂತನ ಪ್ರತಿಭಟನೆ ನಡೆಸಿದರು. ಹನುಮಂತಪ್ಪ ದುರ್ಗ, ಎಂ. ಲಕ್ಷ÷್ಮಣ, ರಾಜಪ್ಪ, ಶಂಕರ್, ಮಂಜುನಾಥ್ ಎ. ತಾಳಿಕೆರೆ, ನಗರಂಗೆರೆ ದೇವರಾಜ್ ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಕೊರಳಿಗೆ ಮಡಕೆ, ಬೆನ್ನಿಗೆ ಪೊರಕೆ ಕಟ್ಟಿಕೊಂಡು ಆಕ್ರೋಶ
  • ಮಾದಿಗ ಸಂಘಟನೆಗಳ ಒಕ್ಕೂಟದಿಂದ ಪ್ರತಿಭಟನೆ
  • ಸಿಎಂ ಸಿದ್ದರಾಮಯ್ಯ, ಸರ್ಕಾರ
ಚಿತ್ರದುರ್ಗ: ಒಳಮೀಸಲು ಖಚಿತಪಡಿಸಿ ಶೇ. ೧೫ರಷ್ಟು ಮೀಸಲಿನೊಂದಿಗೆ ಸರ್ಕಾರಿ ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಮಾದಿಗ ಸಂಘಟನೆಗಳ ಒಕ್ಕೂಟದ ಕಾರ್ಯಕರ್ತರು ನಗರದಲ್ಲಿ ಗುರುವಾರ ವಿನೂತನವಾಗಿ ಪ್ರತಿಭಟನೆ ನಡೆಸಿದರು.
ಕೊರಳಿಗೆ ಮಡಕೆ, ಸೊಂಟಕ್ಕೆ ಪೊರಕೆ ಕಟ್ಟಿಕೊಂಡು ಪ್ರವಾಸಿ ಮಂದಿರದಿAದ ಮೆರವಣಿಗೆ ಆರಂಭಿಸಿ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದ ಬಳಿ ಬಾಬಾಸಾಹೇಬರಿಗೆ ಗೌರವ ಸಮರ್ಪಿಸಿ ಓಬವ್ವ ವೃತ್ತಕ್ಕೆ ಆಗಮಿಸಿದರು. ಅಲ್ಲಿ ಸಿಎಂ ಸಿದ್ದರಾಮಯ್ಯ, ಸರ್ಕಾರದ ವಿರುದ್ಧ ಽಕ್ಕಾರ ಕೂಗಿದರು.
ಒಳಮೀಸಲು ಜÁರಿ ಸೇರಿ ಎಲ್ಲ ವಿಚಾರಗಳಲ್ಲೂ ಸಾಮಾಜಿಕ ನ್ಯಾಯ ಕಲ್ಪಿಸುವಂತೆ ಒತ್ತಾಯಿಸಿ ಜಿ¯್ಲÁಡಳಿತದ ಮೂಲಕ ಸಿಎಂಗೆ ಮನವಿ ರವಾನಿಸಿದರು.
ಮುಖಂಡ ಹನುಮಂತಪ್ಪ ದುರ್ಗ ಮಾತನಾಡಿ, ಮಾದಿಗ ಸಮುದಾಯವನ್ನು ನೂರಾರು ವರ್ಷಗಳ ಹಿಂದೆ ಮನುಷ್ಯರಂತೆ ಕಾಣ ದೆ, ಎಲ್ಲೂ ಉಗುಳದಂತೆ ಕೊರಳಿಗೆ ಮಡಕೆ ಕಟ್ಟಿಕೊಂಡು, ತಮ್ಮ ಹೆಜ್ಜೆ ಗುರುತು ಅಳಿಸಿ ಹೋಗಲು ಸೊಂಟಕ್ಕೆ ಪೊರಕೆ ಕಟ್ಟಿ ಕೊಂಡು ಓಡಾಡುವ ದುಸ್ಥಿತಿ ಇತ್ತು.
ಮನುಕುಲವನ್ನೇ ನಾಚಿಸುವಂತಹ ಹೀನಾಯ ಪದ್ಧತಿಯಂತೆ ಬಾಳಬೇಕೆಂಬ ಮನಸ್ಥಿತಿ ಮುಖ್ಯಮಂತ್ರಿ ಹಾಗೂ ಅವರ ಅಕ್ಕ ಪಕ್ಕವಿರುವ ಎಸ್ಸಿಯೊಳಗಿನ ಪಟಾಲಂಗಳಿಗೆ ಇದ್ದಂತೆ ಕಾಣುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಾ. ೨೭ರ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಒಳಮೀಸಲು ಜÁರಿಗೆ ತೀರ್ಮಾನಿಸದಿದ್ದರೆ, ದಾವಣಗೆರೆ ಹಾಗೂ ಬಾಗಲ ಕೋಟೆ ವಿಧಾನಸಭೆ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಸೋಲಿಸುವ, ೨೦೨೮ರ ಚುನಾವಣೆಯಲ್ಲೂ ಕಾಂಗ್ರೆ ಸ್‌ಗೆ ತಕ್ಕಪಾಠ ಕಲಿಸಲು ರಾಜ್ಯದ ಸಮಸ್ತ ಮಾದಿಗ ಸಮುದಾಯ ದಿಟ್ಟ ಹೆಜ್ಜೆ ಇಡಲಿದೆ ಎಂದು ಎಚ್ಚರಿಸಿದರು.
ಹಕ್ಕೊತ್ತಾಯಗಳು:
ಒಳ ಮೀಸಲು ಜÁರಿಗೊಳಿಸದೆ ರಾಜ್ಯ ಸರ್ಕಾರ ೫೬,೪೩೨ ಹುz್ದÉಗಳ ನೇಮಕಾತಿಗೆ ಸುತ್ತೋಲೆ ಹೊರ ಡಿಸಿರುವುದನ್ನು ಕೂ ಡಲೇ ಹಿಂಪಡೆಯಬೇಕು. ವಿಶ್ವವಿದ್ಯಾಲಯವನ್ನೇ ಒಂದು ಘಟಕವಾಗಿಸಿ ಉದ್ಯೋಗ ಭರ್ತಿ ನಿರ್ಧಾರ ಕೈಬಿಡ ಬೇಕು. ಅಲೆಮಾರಿ, ಅರೆ ಅಲೆಮಾರಿ ಸಮುದಾಯಗಳಿಗೆ ಶೇ.೧ರಷ್ಟು ಪ್ರತ್ಯೇಕ ಮೀಸಲಾತಿ ನೀಡಬೇಕು ಎಂದು ಆಗ್ರಹಿಸಿದರು.
ಎಸ್ಸಿಗೆ ಶೇ. ೧೭, ಎಸ್ಟಿಗೆ ಶೇ. ೭ರಷ್ಟು ಸೇರಿ ಒಟ್ಟು ಶೇ. ೫೬ರಷ್ಟು ಮೀಸಲಾತಿಯನ್ನು ಸಂವಿಧಾನದ ೯ ಷೆಡ್ಯೂಲ್‌ಗೆ ಸೇರಿಸ ಬೇಕು. ಉದ್ಯೋಗ ನೇಮಕಾತಿ, ಬ್ಯಾಕ್‌ಲಾಗ್, ಬಡ್ತಿ, ಮುಂಬಡ್ತಿ, ಒಳಗುತ್ತಿಗೆ, ಎಸ್‌ಸಿಎಸ್‌ಪಿ, ಟಿಎಸ್‌ಪಿ ಸೇರಿ ಆರ್ಥಿಕ ಸೌಲಭ್ಯ ಗಳ ಎಲ್ಲ ಹಂತಗಳಲ್ಲೂ ಸಂಪೂರ್ಣ ಒಳ ಮೀಸಲಾತಿ ಜÁರಿಯಾಗಬೇಕೆಂದು ರಾಜ್ಯ ಸರ್ಕಾರವನ್ನು ಕೋರಿದರು.
ಜಿಪಂ ಮಾಜಿ ಸದಸ್ಯ ಎಂ. ಲಕ್ಷ÷್ಮಣ, ಒಕ್ಕೂಟದ ಮುಖಂಡರಾದ ಜೆ.ಜೆ. ಹಟ್ಟಿ ಬಿ. ರಾಜಪ್ಪ, ಹೆಗ್ಗೆರೆ ಶಂಕರ್, ಪ್ರಕಾಶ್ ತುರು ವನೂರು, ಮಂಜುನಾಥ್ ಎ. ತಾಳಿಕೆರೆ, ತಿಪ್ಪೇಸ್ವಾಮಿ, ಹರೀಶ್ ಜೈಭೀಮ್, ಎಂ. ದೇವರಾಜ್ ಲಕ್ಷಿ÷್ಮÃಸಾಗರ, ಕೆ. ರಾಜಣ್ಣ, ವಿಶ್ವನಾರಾಯಣಮೂರ್ತಿ, ಸೋಮಣ್ಣ ಚಿಕ್ಕಪ್ಪನಹಳ್ಳಿ, ಮಲ್ಲಿಕಾರ್ಜುನ್ ಚಿಕ್ಕಗೊಂಡನಹಳ್ಳಿ, ರಘು ಇಂಗಳದಾಳ್, ವೆಂಕಟೇಶ್ ಎಂ.ಕೆ. ಹಟ್ಟಿ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net