ಮೊದಲ ಪ್ರಾಶಸ್ತ್ತç್ಯದ ಮತದಿಂದ ಎನ್‌ಡಿಎ ಗೆಲ್ಲಿಸಿ

 ವಿಧಾನ ಪರಿಷತ್ ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆ ಸಿದ್ಧತಾ ಸಭೆಯಲ್ಲಿ ಜಿ.ಎಚ್. ತಿಪ್ಪಾರೆಡ್ಡಿ, ಎಸ್.ಕೆ. ಬಸವರಾಜನ್, ಕೇಶವಪ್ರಸಾದ್, ಕೆ.ಎಸ್. ನವೀನ್, ಡಿ.ಎಸ್.ಅರುಣ್, ಡಾ. ಶಿವಯೋಗಿ ಸ್ವಾಮಿ, ಕೆ.ಟಿ.ಕುಮಾರಸ್ವಾಮಿ ಇತರರು ಇದ್ದರು.
ವಿಧಾನ ಪರಿಷತ್ ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆ ಸಿದ್ಧತಾ ಸಭೆಯಲ್ಲಿ ಜಿ.ಎಚ್. ತಿಪ್ಪಾರೆಡ್ಡಿ, ಎಸ್.ಕೆ. ಬಸವರಾಜನ್, ಕೇಶವಪ್ರಸಾದ್, ಕೆ.ಎಸ್. ನವೀನ್, ಡಿ.ಎಸ್.ಅರುಣ್, ಡಾ. ಶಿವಯೋಗಿ ಸ್ವಾಮಿ, ಕೆ.ಟಿ.ಕುಮಾರಸ್ವಾಮಿ ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ವಿಧಾನ ಪರಿಷತ್ ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆ ಪೂರ್ವಭಾವಿ ಸಭೆ
  • ಎನ್‌ಡಿಎ ಅಭ್ಯರ್ಥಿ ಕೆ.ಎಂ. ಸುರೇಶ್
  • ಮಾಜಿ ಶಾಸಕ ಜಿ.ಎಚ್. ತಿಪ್ಪಾರೆಡ್ಡಿ
ಚಿತ್ರದುರ್ಗ: ವಿಧಾನ ಪರಿಷತ್ ಆಗ್ನೇಯ ಪದವೀಧರರ ಕ್ಷೇತ್ರಕ್ಕೆ ನಡೆಯಲಿರುವ ಚುನಾವಣೆಯಲ್ಲಿ ಮೊದಲ ಪ್ರಾಶಸ್ತ್ತç್ಯದ ಮತದೊಂದಿಗೆ ಮೊ ದಲ ಸುತ್ತಿನಲ್ಲೇ ಎನ್‌ಡಿಎ ಅಭ್ಯರ್ಥಿ ಕೆ.ಎಂ. ಸುರೇಶ್ ಅವರು ಗೆಲುವು ಸಾಽಸಬೇಕಿದೆ ಎಂದು ಮಾಜಿ ಶಾಸಕ ಜಿ.ಎಚ್. ತಿಪ್ಪಾರೆಡ್ಡಿ ಹೇಳಿದರು.
ಖಾಸಗಿ ಹೋಟೆಲ್‌ನಲ್ಲಿ ಬಿಜೆಪಿ ಶನಿವಾರ ಆಯೋಜಿಸಿದ್ದ ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆ ಪೂರ್ವಭಾವಿ ಸಭೆ ಉದ್ಘಾ ಟಿಸಿ ಮಾತನಾಡಿದರು.
೩೩ ವಿಧಾನಸಭೆ, ೫ ಪಾರ್ಲಿಮೆಂಟರಿ ಕ್ಷೇತ್ರಗಳನ್ನು ಒಳಗೊಂಡAತೆ ಐದು ಜಿಲ್ಲೆಗಳ ವಿಶಾಲ ವ್ಯಾಪ್ತಿಯ ಈ ಕ್ಷೇತ್ರಕ್ಕೆ ನಡೆಯುವ ಈ ಚುನಾವಣೆ ಅಭ್ಯರ್ಥಿಯದ್ದಲ್ಲ. ಇದು ಪಕ್ಷ ಸಂಘಟನೆ ಚುನಾವಣೆ. ಪ್ರತಿ ಕಾರ್ಯಕರ್ತನೂ ತಾನೇ ಅಭ್ಯರ್ಥಿ ಎಂದು ಭಾವಿಸಿ ಇನ್ನೊಂದು ತಿಂಗಳ ಕಾಲ ಗೆಲುವಿಗೆ ಯುದ್ಧೋಪಾದಿಯಲ್ಲಿ ಶ್ರಮಿಸಬೇಕು ಎಂದು ಮನವಿ ಮಾಡಿದರು.
ನರೇಂದ್ರ ಮೋದಿ ನೇತೃತ್ವದ ಕೇಂದ್ರ, ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರದ ಆಡಳಿತಾವಽ ರಾಜ್ಯದಲ್ಲಿ ಆಗಿದ್ದ ಜನಪರ ಕೆಲಸಗಳು, ಬಿ.ವೈ.ವಿಜಯೇಂದ್ರ ನೇತೃತ್ವದ ಪಕ್ಷದ ಸಂಘಟನೆ ಬಗ್ಗೆ ಮತದಾರರಿಗೆ ಮನವರಿಕೆ ಮಾಡಿ ಎಂದು ಮನವಿ ಮಾಡಿ ದರು.
ಮಾಜಿ ಶಾಸಕ ಎಸ್.ಕೆ. ಬಸವರಾಜನ್ ಮಾತನಾಡಿ, ಮತಪತ್ರದಲ್ಲಿ ರೈಟ್‌ಮಾರ್ಕ್, ಫಸ್ಟ್, ಒನ್ ಇತ್ಯಾದಿ ಬರೆದರೆ ಮತ ಇನ್‌ವ್ಯಾಲಿಡ್ ಆಗುತ್ತವೆ. ಈ ರೀತಿ ಆಗಿದ್ದರಿಂದಲೇ ಹಿಂದೆ ಜೆಡಿಎಸ್‌ನಿಂದ ಸ್ಪಽðಸಿದ್ದ ನನಗೆ ಸೋಲಾಗಿತ್ತು. ಆದ್ದರಿಂದ ಆಯೋಗದ ಸೂಚನೆಯಂತೆ ಮತ ಹಾಕುವಂತೆ ಮತದಾರರಿಗೆ ಮನವರಿಕೆ ಮಾಡಿಕೊಡಬೇಕಾಗಿದೆ ಎಂದು ಹೇಳಿದರು.
ಕೆ.ಎಂ. ಸುರೇಶ್ ಮಾತನಾಡಿ, ೧೨ ವರ್ಷಗಳ ನಂತರ ಅಖಂಡ ಚಿತ್ರದುರ್ಗ ಜಿಲ್ಲೆಗೆ ಟಿಕೆಟ್ ದೊರಕಿದ್ದು, ಮೈತ್ರಿಕೂಟಕ್ಕೆ ಜಯ ಸಿಗಬೇಕಿದೆ ಎಂದರು. ಮಾಜಿ ಎಂಎಲ್‌ಸಿ ಡಾ. ಶಿವಯೋಗಿ ಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಚಿತ್ರದುರ್ಗ ಗ್ರಾಮಾಂತರ ಮಂಡಲ ಅಧ್ಯಕ್ಷ ನಾಗರಾಜ್ ಅಧ್ಯಕ್ಷತೆ ವಹಿಸಿದ್ದರು.
ಎಂಎಲ್‌ಸಿಗಳಾದ ಕೆ.ಎಸ್. ನವೀನ್, ಡಿ.ಎಸ್. ಅರುಣ್, ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಟಿ. ಕುಮಾರಸ್ವಾಮಿ, ಮಾಜಿ ಅಧ್ಯಕ್ಷ ಟಿ.ಜಿ. ನರೇಂದ್ರ, ಜಿ.ಎಂ. ಸುರೇಶ್, ಕಲ್ಲೇಶ್,ಲಿಂಗರಾಜು, ಶೈಲಜಾರೆಡ್ಡಿ, ಕಲ್ಲೇಶಯ್ಯ, ವೆಂಕಟೇಶ್‌ಯಾದವ್, ಜಿ.ಎಚ್. ಮೋಹನ್‌ಕುಮಾರ್ ಮತ್ತಿತರರು ಇದ್ದರು.
ರಾಜ್ಯದ ಸಮಗ್ರ ಅಭಿವೃದ್ಧಿ
ವಿಧಾನ ಪರಿಷತ್‌ನಲ್ಲಿ ರಾಜ್ಯದ ಸಮಗ್ರ ಅಭಿವೃದ್ಧಿ, ಸಮಸ್ಯೆಗಳ ಕುರಿತು ಚರ್ಚಿಸಲಾಗುತ್ತದೆ. ಈ ಕ್ಷೇತ್ರದ ೧೦ ಚುನಾವಣೆಗಳಲ್ಲಿ ೮ ಬಾರಿ ಬಿಜೆಪಿ, ೨ ಬಾರಿ ಜೆಡಿಎಸ್ ಗೆದ್ದಿದೆ. ಅಂದಾಜು ೨ ಲಕ್ಷ ಸಂಖ್ಯೆಯಲ್ಲಿರುವ ಮತದಾರರಿಗೆ ಕಾಂಗ್ರೆಸ್‌ನ ದುರಾಡಳಿತವನ್ನು ತಿಳಿಸಬೇಕಿದೆ ಎಂದು ಎಂಎಲ್‌ಸಿ ಚುನಾವಣೆ ಉಸ್ತುವಾರಿ ಕೇಶವ ಪ್ರಸಾದ್ ಹೇಳಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net