ಮಕ್ಕಳಲ್ಲಿ ಪರಿಣಾಮಕಾರಿ ಸಂವಹನಾ ಸಾಮರ್ಥ್ಯ ಹೆಚ್ಚಿಸಿ

 ಚಿತ್ರದುರ್ಗ ಡಯಟ್‌ನಲ್ಲಿ ಗುರುವಾರ ದ್ವಿಭಾಷಾ ತರಗತಿ ಬೋಧನೆ ಕುರಿತ ತರಬೇತಿ ಕಾರ್ಯಾಗಾರವನ್ನು ಪ್ರಾಚಾರ್ಯ ಎಂ. ನಾಸಿರುದ್ದೀನ್ ಉದ್ಘಾಟಿಸಿದರು. ಎಸ್. ನಾಗಭೂಷಣ್, ಎಸ್.ಸಿ.ಪ್ರಸಾದ್, ಅರ್ಜುಮಂದ್‌ಬಾನು ಇತರರು ಇದ್ದರು.
ಚಿತ್ರದುರ್ಗ ಡಯಟ್‌ನಲ್ಲಿ ಗುರುವಾರ ದ್ವಿಭಾಷಾ ತರಗತಿ ಬೋಧನೆ ಕುರಿತ ತರಬೇತಿ ಕಾರ್ಯಾಗಾರವನ್ನು ಪ್ರಾಚಾರ್ಯ ಎಂ. ನಾಸಿರುದ್ದೀನ್ ಉದ್ಘಾಟಿಸಿದರು. ಎಸ್. ನಾಗಭೂಷಣ್, ಎಸ್.ಸಿ.ಪ್ರಸಾದ್, ಅರ್ಜುಮಂದ್‌ಬಾನು ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಇಂಗ್ಲಿಷ್ ಸಂವಹನಾ ಸಾಮರ್ಥ್ಯ
  • ಡಯಟ್‌
  • ಪ್ರಾಥಮಿಕ ಶಾಲಾ ಶಿಕ್ಷಕರಿಗೆ ದ್ವಿಭಾಷಾ ತರಗತಿ ಬೋಧನೆ
ಚಿತ್ರದುರ್ಗ: ಮಕ್ಕಳಲ್ಲಿ ಇಂಗ್ಲಿಷ್ ಸಂವಹನಾ ಸಾಮರ್ಥ್ಯ ಪರಿಣಾಮಕಾರಿಯಾಗಿ ಹೆಚ್ಚಿಸುವಂತೆ ಡಯಟ್ ಪ್ರಾಚಾರ್ಯ ಎಂ. ನಾಸಿರುದ್ದೀನ್ ಶಿಕ್ಷಕರಿಗೆ ಸಲಹೆ ನೀಡಿದರು.
ಪ್ರಾಥಮಿಕ ಶಾಲಾ ಶಿಕ್ಷಕರಿಗೆ ದ್ವಿಭಾಷಾ ತರಗತಿ ಬೋಧನೆ ಕುರಿತು ಡಯಟ್‌ನಲ್ಲಿ ಗುರುವಾರ ಆಯೋಜಿಸಿದ್ದ ಜಿಲ್ಲಾ ಹಂತದ ಎಂಆರ್‌ಪಿ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಜಿಲ್ಲೆಯಲ್ಲಿ ಕೆಪಿಎಸ್, ಪಿಎಂಶ್ರೀ ಮತ್ತು ದ್ವಿಭಾಷಾ ತರಗತಿ ಪ್ರಾರಂಭಿಸಿರುವ ಸರ್ಕಾರಿ ಶಾಲೆಗಳು, ಗಣಿಬಾಽತ ತಾಲೂಕು ಗಳಾ ದ ಚಿತ್ರದುರ್ಗ, ಹೊಳಲ್ಕೆರೆ, ಮೊಳಕಾಲ್ಮೂರು, ಹೊಸದುರ್ಗದ ಎಲ್ಲ ಸರ್ಕಾರಿ ಶಾಲೆಗಳ ೧-೫ನೇ ತರಗತಿಗಳ ಶಿಕ್ಷಕರಿಗೆ ತರ ಬೇತಿ ನೀಡಲಾಗುತ್ತದೆ. ತರಬೇತಿಯಲ್ಲಿ ಕಲಿತ ಅಂಶಗಳನ್ನು ತರಗತಿಯಲ್ಲಿ ಅನುಷ್ಠಾನ ಮಾಡುವ ಮೂಲಕ ಮಕ್ಕಳಲ್ಲಿ ಭಾಷಾ ಕೌಶಲ ಸಾಮರ್ಥ್ಯ ಬೆಳೆಸಬೇಕು ಎಂದು ಸಲಹೆ ನೀಡಿದರು.
ಉಪ ಪ್ರಾಚಾರ್ಯ ಎಸ್. ನಾಗಭೂಷಣ್ ಮಾತನಾಡಿ, ಜಿಲ್ಲಾ ಹಂತದಲ್ಲಿ ತರಬೇತಿ ಪಡೆಯುತ್ತಿರುವವರು ತಾಲೂಕು ಹಂತದಲ್ಲಿ ಶಿಕ್ಷಕರಿಗೆ ಪರಿಣಾಮಕಾರಿಯಾಗಿ ತರಬೇತಿ ನೀಡುವಂತೆ ಸೂಚಿಸಿದರು.
ಹಿರಿಯ ಉಪನ್ಯಾಸಕ ಎಸ್.ಸಿ. ಪ್ರಸಾದ್ ಮಾತನಾಡಿದರು. ನೋಡಲ್ ಅಽಕಾರಿ ಅರ್ಜುಮಂದ್‌ಬಾನು, ಉಪನ್ಯಾಸಕರಾದ ಎಸ್.ಬಸವರಾಜು,ರಾಮಣ್ಣ,ಶಿವಲೀಲಾ,ಸಂಪನ್ಮೂಲ ವ್ಯಕ್ತಿಗಳಾದ ಜಿ.ಜಿ. ನಾಗರಾಜು, ಸಿ.ಬಿ. ಮಂಜುನಾಥ್, ಸಿ.ಎಂ. ಸುಂ ದರ್‌ರಾಜ್, ರೀಟಾಮಣಿ, ಜ್ಯೋತ್ಸಾ÷್ನ, ವಿ. ರಾಧಾ, ಕೆ.ಜಿ. ರಂಜಿತಾ, ಪ್ರಕಾಶ್, ಆರೀ-Àಬಾನು, ವಿನಯ್ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net