ಆರೋಗ್ಯ ಇಲಾಖೆ ಚಿತ್ರದುರ್ಗದಲ್ಲಿ ಗುರುವಾರ ಏರ್ಪಡಿಸಿದ್ದ ಕರ‍್ಯಾಗಾರದಲ್ಲಿ ಆರ್‌ಸಿಎಚ್ ಅಽಕಾರಿ ಡಾ.ಡಿ.ಎಂ.ಅಭಿನವ್, ಡಾ.ಸುಮನ್‌ರಾವ್, ಡಾ.ಎಲ್.ಪಾಲಾಕ್ಷಯ್ಯ, ಡಾ.ಪÊಥ್ವೀಶ್, ಡಾ.ರವಿಕುಮಾರ್, ಡಾ.ಬಸವಂತಪ್ಪ, ಭಾಗ್ಯಮ್ಮ ಇತರರು ಇದ್ದರು.
ಚಿತ್ರದುರ್ಗ: ಆರೋಗ್ಯ ಕ್ಷೇತ್ರದಲ್ಲಿ ವ್ಯವಸ್ಥಿತ ಮೈಕ್ರೋ ಪ್ಲಾನಿಂಗ್ ಮತ್ತು ನಿರಂತರ ನಿಗಾ, ಬದಲಾವಣೆಗಳು ತಾಯಿ-ಶಿಶು ಮರಣ ದರ ಕಡಿಮೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂದು ಜಿಲ್ಲಾ ಆರ್‌ಸಿಎಚ್ ಅಽಕಾರಿ ಡಾ. ಜಿ.ಎಂ. ಅಭಿನವ್ ಅಭಿಪ್ರಾಯಪಟ್ಟರು.
ಜಿಲ್ಲಾಡಳಿತ, ಜಿಪಂ, ಆರೋಗ್ಯ ಇಲಾಖೆ, ಕೆಎಚ್‌ಪಿಟಿ ಹಾಗೂ ಸೇಂಟ್ ಜಾನ್ಸ್ ಮೆಡಿಕಲ್ ಕಾಲೇಜ್ ಆಸ್ಪತ್ರೆ ಸಹಯೋಗದಲ್ಲಿ ಐಸಿಎಂಆರ್ ಕಾರ್ ಪ್ರಾಜೆಕ್ಟ್ ಕುರಿತು, ಮಗುವಿನ ಜೀವನದ ಮೊದಲ ೧೦೦೦ ದಿನಗಳ ಬಲಪಡಿಸುವ ಅವಲೋಕನ ಗಳೊಂದಿಗೆ ಮುಂದಿನ ಕಾರ್ಯತಂತ್ರ ರೂಪಿಸಲು ಜಿಪಂನಲ್ಲಿ ಗುರುವಾರ ಹಮ್ಮಿಕೊಂಡಿದ್ದ ೨ನೇ ಸಹ-ವಿನ್ಯಾಸ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಅಂದಾಜು ೧೫ ವರ್ಷಗಳ ಹಿಂದೆ ಪೋಲಿಯೋ ಅಭಿಯಾನದ ವೇಳೆ ಅಳವಡಿಸಿದ್ದ ಮೈಕ್ರೋ ಪ್ಲಾನಿಂಗ್ ಮತ್ತು ವರ್ಕಿಂಗ್ ವಿಧಾ ನವು ರಾಷ್ಟಿçಯ ಮಟ್ಟದಲ್ಲಿ ಮೆಚ್ಚುಗೆಗೆ ಪಾತ್ರವಾಗಿತ್ತು. ಅಂತಹ ಹಳೆಯ ಯಶಸ್ವಿ ಮಾದರಿಗಳನ್ನು ಇವತ್ತಿನ ಕಾರ್ಯಕ್ರಮಗ ಳಿಗೂ ಅಳವಡಿಸಿಕೊಳ್ಳುವ ಅಗತ್ಯವಿದೆ. ಕೆಎಚ್‌ಪಿಟಿ ಮತ್ತು ಸೇಂಟ್ ಜಾನ್ಸ್ ಸಂಸ್ಥೆ ಸಹಯೋಗದಲ್ಲಿ ನಡೆಯುತ್ತಿರುವ ಈ ಕಾರ್ಯಾಗಾರವು, ವ್ಯವಸ್ಥೆಯಲ್ಲಿರುವ ಸಣ್ಣಪುಟ್ಟ ಲೋಪಗಳನ್ನು ಸರಿಪಡಿಸಿ, ಕೆಲಸದ ಗುಣಮಟ್ಟ ಹೆಚ್ಚಿಸಲು ಸಹಕಾರಿಯಾಗಲಿದೆ ಎಂದರು.
ಸ್ವಚ್ಛತೆ, ಶಿಸ್ತು ದೈನಂದಿನ ಅಭ್ಯಾಸವಾಗಬೇಕು. ಮಿಷನ್ ಜೀರೋ ಪ್ರಿವೆಂಟಬಲ್ ಮೆಟರ್ನಲ್ ಡೆತ್ ಅಡಿ ತಾಯಿ ಮರಣಗಳನ್ನು ಶೂನ್ಯಕ್ಕೆ ತರುವುದು ಮತ್ತು ಶಿಶು ಮರಣ ದರವನ್ನು ಒಂದAಕಿಗೆ ಇಳಿಸುವ ಗುರಿ ತಲುಪಲು ಖಾಸಗಿ, ಸರ್ಕಾರಿ ಆಸ್ಪತ್ರೆ ವೈದ್ಯಾಽಕಾರಿಗಳು ಒಟ್ಟಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.
ಶೂನ್ಯ ತಾಯಿ ಮರಣ ದಾಖಲು
ಆರೋಗ್ಯ ಇಲಾಖೆ ಸಂಘಟಿತ ಪ್ರಯತ್ನದಿಂದಾಗಿ ಕಳೆದ ೩ ತಿಂಗಳ ಅವಽಯಲ್ಲಿ ಜಿಲ್ಲೆಯಲ್ಲಿ ಯಾವುದೇ ತಾಯಿ ಮರಣ ಸಂಭವಿಸಿಲ್ಲ. ಜಿಲ್ಲೆಯಲ್ಲಿ ಇದು ಅತ್ಯಂತ ಗಮನಾರ್ಹ ಸಾಧನೆಯಾಗಿದೆ. ಜನರಲ್ಲಿ ಆರೋಗ್ಯದೆಡೆ ಜಾಗೃತಿ ಮೂಡುತ್ತಿರುವುದು ಈ ಬದಲಾವಣೆಗೆ ಮುಖ್ಯ ಕಾರಣವಾಗಿದೆ ಎಂದರು.
ಮೆದುಳಿನ ಬೆಳವಣಿಗೆ ಮತ್ತು ೧೦೦೦ ದಿನಗಳು
ಸೇಂಟ್ ಜಾನ್ಸ್ ಮೆಡಿಕಲ್ ಕಾಲೇಜು ಆಸ್ಪತ್ರೆ ಮುಖ್ಯಸ್ಥ, ನವಜಾತ ಶಿಶು ತಜ್ಞ ಡಾ. ಸುಮನ್ ರಾವ್ ಮಾತನಾಡಿ, ಚಿತ್ರದುರ್ಗ ಜಿಲ್ಲೆಯಲ್ಲಿ ತಾಯಿ ಮತ್ತು ನವಜಾತ ಶಿಶುಗಳ ಮರಣ ಪ್ರಮಾಣ ಶೂನ್ಯಕ್ಕೆ ಇಳಿಸುವ ನಿಟ್ಟಿನಲ್ಲಿ ಕೆಎಚ್‌ಪಿಟಿ, ಸೇಂಟ್ ಜಾನ್ಸ್ ತಂಡ ಮಹತ್ವದ ಹೆಜ್ಜೆ ಇಟ್ಟಿದೆ. ಗರ್ಭಧಾರಣೆ ಪೂರ್ವದಿಂದ, ಹೆರಿಗೆ ಸಮಯ ಹಾಗೂ ಶಿಶು ಜನನದ ನಂತರದ ಬೆಳವಣಿಗೆಯವರೆಗೆ ಆರು ಹಂತಗಳಲ್ಲಿ ವಿಶೇಷ ನಿಗಾ ವಹಿಸಲಾಗುತ್ತದೆ ಎಂದರು.
ಮಗುವಿನ ಮೆದುಳಿನ ಶೇ.೮೦ ಬೆಳವಣಿಗೆ ಮೊದಲ ಎರಡು ವರ್ಷಗಳಲ್ಲಾಗುತ್ತದೆ. ಹೀಗಾಗಿ ಮಗುವಿನ ಜೀವನದ ಮೊದಲ ಸಾವಿರ ದಿನಗಳ ವಿಶೇಷ ಆರೈಕೆ ಮಾದರಿಯನ್ನು ಜಿಲ್ಲೆಯಲ್ಲಿ ಪ್ರಾಯೋಗಿಕವಾಗಿ ಜÁರಿಗೆ ತರಲಾಗುತ್ತಿದೆ ಎಂದು ತಿಳಿಸಿದರು.
ಐಎಂಎ ಅಧ್ಯಕ್ಷ ಡಾ. ಎಲ್. ಪಾಲಾಕ್ಷಯ್ಯ, ಐಎಪಿ ಅಧ್ಯಕ್ಷ ಡಾ. ಪೃಥ್ವೀಶ್, ಜಿಲ್ಲಾಸ್ಪತ್ರೆ ಪ್ರಸೂತಿ ಮತ್ತು ಸಿöÃರೋಗ ತಜ್ಞ ಡಾ. ರವಿಕುಮಾರ್, ಬಸವೇಶ್ವರ ಆಸ್ಪತ್ರೆ ನವಜಾತ ಶಿಶು ತಜ್ಞ ಡಾ. ಬಸವಂತಪ್ಪ, ರೋಟರಿ ಸಂಸ್ಥೆ ಅಧ್ಯಕ್ಷೆ ಭಾಗ್ಯಮ್ಮ ಇತರರು ಇದ್ದರು.