ಗೌರವ, ಘನತೆ ಬದುಕಿಗೆ ಶಿಕ್ಷಣವೇ ದಾರಿ

 ಚಿತ್ರದುರ್ಗದಲ್ಲಿ ಶನಿವಾರ ಆಯೋಜಿಸಿದ್ದ ಮಂಜರಿ ಹನುಮಂತಪ್ಪ ಅವರ ಸ್ಮರಣೋತ್ಸವದಲ್ಲಿ ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಶ್ರೀಗಳು, ಡಿ.ಸಿ. ಮೋಹನ್, ಇ. ಮಂಜುನಾಥ್, ಕಾಳಘಟ್ಟ ಹನುಮಂತಪ್ಪ, ಎಚ್. ಆಂಜನೇಯ, ವೈ. ಪ್ರಕಾಶ್ ಇತರರು ಇದ್ದರು.
ಚಿತ್ರದುರ್ಗದಲ್ಲಿ ಶನಿವಾರ ಆಯೋಜಿಸಿದ್ದ ಮಂಜರಿ ಹನುಮಂತಪ್ಪ ಅವರ ಸ್ಮರಣೋತ್ಸವದಲ್ಲಿ ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಶ್ರೀಗಳು, ಡಿ.ಸಿ. ಮೋಹನ್, ಇ. ಮಂಜುನಾಥ್, ಕಾಳಘಟ್ಟ ಹನುಮಂತಪ್ಪ, ಎಚ್. ಆಂಜನೇಯ, ವೈ. ಪ್ರಕಾಶ್ ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಅಭಿಮತ
  • ಮಂಜರಿ ಹನುಮಂತಪ್ಪ ಸ್ಮರಣೋತ್ಸವ
  • ತಾರ್ಕಿಕ ಚಿಂತನೆ
ಚಿತ್ರದುರ್ಗ: ಭೋವಿ ಸಮಾಜವನ್ನು ಮುಖ್ಯವಾಹಿನಿಗೆ ತರಲು ಶಿಕ್ಷಣ ಅಡಿಪಾಯ ಎಂಬುದನ್ನು ಮಂಜರಿ ಹನುಮಂತಪ್ಪ ಅವರು ಅರಿತಿದ್ದರು ಎಂದು ಭೋವಿ ಗುರುಪೀಠದ ಜಗದ್ಗುರು ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಹೇಳಿದರು.
ಶ್ರೀ ಪೀಠದಲ್ಲಿ ಶನಿವಾರ ಆಯೋಜಿಸಿದ್ದ ಮಂಜರಿ ಹನುಮಂತಪ್ಪ ಸ್ಮರಣೋತ್ಸವದ ಸಾನ್ನಿಧ್ಯವಹಿಸಿ ಮಾತನಾಡಿ, ಶಿಕ್ಷಣ ಭೋವಿ ಸಮುದಾಯದ ಗೌರವ,ಘನತೆ ಬದುಕಿಗೆ ದಾರಿ ಮಾಡಿಕೊಡುತ್ತದೆ. ಶಿಕ್ಷಣ ಯುವಜನರನ್ನು ವಿಚಾರವಂತರನ್ನಾಗಿ ಮಾಡುತ್ತದೆ. ಅನ್ಯಾಯ,ದಬ್ಬಾಳಿಕೆ ಮತ್ತು ಶೋಷಣೆ ವಿರುದ್ಧ ಹೋರಾಡಲು ಅಗತ್ಯವಿರುವ ತಾರ್ಕಿಕ ಚಿಂತನೆ ಬೆಳೆಸುತ್ತದೆ ಎಂಬ ನಿಲುವಿನ ಮಂಜರಿ ಹನುಮಂತಪ್ಪ ಅವರು, ಅದಕ್ಕಾಗಿ ಶಿಕ್ಷಣ ಸಂಸ್ಥೆ ಸ್ಥಾಪಿಸಿದ್ದಾರೆ ಎಂದರು.
ಇವರು ಸ್ಥಾಪಿಸಿದ ವಿದ್ಯಾರ್ಥಿ ನಿಲಯಗಳಲ್ಲಿ ಶಿಕ್ಷಣ ಪಡೆದ ಭೋವಿ ವಿದ್ಯಾರ್ಥಿಗಳು ವೈದ್ಯರು, ಇಂಜಿನಿಯರ್‌ಗಳು, ಶಿಕ್ಷಕರು ಮತ್ತು ನಾಯಕರಾಗಿ ರಾಷ್ಟçದ ಅಭಿವೃದ್ಧಿಗೆ ಸಕ್ರಿಯ ಕೊಡುಗೆ ನೀಡುತ್ತಿದ್ದಾರೆ ಎಂದರು. ಮಹಿಳೆಯರ ಸಬಲೀಕರಣ, ಆರ್ಥಿಕ ಪ್ರಗತಿ, ಸಾಮಾಜಿಕ ಸಮಾನತೆ ಮತ್ತು ಆರೋಗ್ಯಕರ ಕುಟುಂಬ ನಿರ್ಮಾಣಕ್ಕೆ ಅತ್ಯಗತ್ಯ.
ಹೆಣ್ಣು ಮಕ್ಕಳು ವಿದ್ಯಾವಂತರಾದರೆ ಲಿಂಗ ಸಮಾನತೆ ಮತ್ತು ದೇಶದ ಪ್ರಗತಿಗೆ ಸಹಕಾರಿಯಾಗಲಿದೆ. ಬಾಲಕಿಯರ ಶಿಕ್ಷಣ ಕೇವಲ ವ್ಯಕ್ತಿಗತ ಬೆಳವಣಿಗೆಯಲ್ಲ, ಅದು ಒಂದು ಕುಟುಂಬದ, ಸಮಾಜದ ಮತ್ತು ದೇಶದ ಸಮಗ್ರ ಪ್ರಗತಿಗೆ ಮುಖ್ಯವಾಗಿದೆ ಎಂದರು.
ಎಸ್‌ಜೆಎಸ್ ಸಂಸ್ಥೆ ಕಾರ್ಯದರ್ಶಿ ಡಿ.ಸಿ. ಮೋಹನ್ ಮಾತನಾಡಿದರು. ಸಂಸ್ಥೆ ನಿರ್ದೇಶಕರಾದ ಇ. ಮಂಜುನಾಥ್, ಕಾಳಘಟ್ಟ ಹನುಮಂತಪ್ಪ, ಎಚ್. ಆಂಜನೇಯ, ವೈ. ಪ್ರಕಾಶ್ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net