Earth worship ಇನ್ನು 50 ವರ್ಷಗಳ ಕಾಲ ದಿನಕ್ಕೆ 10 ಗಂಟೆ ವಿದ್ಯುತ್

Earth worshipಹಿರಿಯ ಪ್ರಾಥಮಿಕ ಶಾಲಾ ಕೊಠಡಿಗಳ ನಿರ್ಮಾಣ ಕಾಮಗಾರಿಗೆ ಶಾಸಕ ಡಾ.ಎಂ.ಚಂದ್ರಪ್ಪ ಭೂಮಿ ಪೂಜೆ ಸಲ್ಲಿಸಿದರು.
Earth worshipಹಿರಿಯ ಪ್ರಾಥಮಿಕ ಶಾಲಾ ಕೊಠಡಿಗಳ ನಿರ್ಮಾಣ ಕಾಮಗಾರಿಗೆ ಶಾಸಕ ಡಾ.ಎಂ.ಚಂದ್ರಪ್ಪ ಭೂಮಿ ಪೂಜೆ ಸಲ್ಲಿಸಿದರು.
Published on

ಪ್ರಮುಖ ಮುಖ್ಯಾಂಶಗಳು

  • ಹಿರೇಎಮ್ಮಿಗನೂರು ಶಾಲಾ ಕೊಠಡಿಗಳಿಗೆ ಭೂಮಿ ಪೂಜೆ ನೆರವೇರಿಸಿದ ಶಾಸಕ ಡಾ. ಎಂ. ಚಂದ್ರಪ್ಪ
  • ರೈತರಿಗೆ 50 ವರ್ಷಗಳ ಕಾಲ ದಿನಕ್ಕೆ 10 ಗಂಟೆ ವಿದ್ಯುತ್ ಪೂರೈಕೆ ಮಾಡುವ ಭರವಸೆ
  • ಚಿಕ್ಕಜಾಜೂರಿನ ಕೋಟೆಹಾಳ್ ಬಳಿ ₹500 ಕೋಟಿ ವೆಚ್ಚದಲ್ಲಿ ಪವರ್ ಸ್ಟೇಷನ್

ಹೊಳಲ್ಕೆರೆ:ಇನ್ನು 50ವರ್ಷಗಳ ಕಾಲದಿನಕ್ಕೆ 10 ಗಂಟೆವಿದ್ಯುತ್ ನೀಡುತ್ತೇವೆ.ರೈತರು ಅಡಿಕೆಗಿಡಗಳನ್ನು ಬೆಳೆಸಿದರೆ ಮುಂದಿನಜೀವನ ಸುಖಕರವಾಗಿರುತ್ತದೆ ಎಂದುಶಾಸಕ ಡಾ. ಎಂ.ಚಂದ್ರಪ್ಪತಿಳಿಸಿದರು.

ಅವರುಹಿರೇಎಮ್ಮಿಗನೂರು ಗ್ರಾಮದಲ್ಲಿಪ್ರಾಥಮಿಕ ಶಾಲೆಯ ₹35ಲಕ್ಷ ವೆಚ್ಚದಎರಡು ನೂತನ ಕೊಠಡಿಗಳಿಗೆ ಶನಿವಾರಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.earth worship

ವಿದ್ಯುತ್ಸಮಸ್ಯೆ ನಿವಾರಣೆಗೆ ಕ್ರಮ

ಮುಖ್ಯಮಂತ್ರಿಯಾಗಿದ್ದಬಿ.ಎಸ್.ಯಡಿಯೂರಪ್ಪನವರಅವಧಿಯಲ್ಲಿ 43ಕೆರೆಗಳಿಗೆನೀರು ನೀಡಲು ಶ್ರಮಿಸಲಾಯಿತು.ಸಿರಿಗೆರೆ ಗುರುಗಳಒತ್ತಡಕ್ಕೆ ಮಣಿದ ಫಲವಾಗಿ ತುಂಗಭದ್ರಾಡ್ಯಾಂನಿಂದ ಕೆರೆಗಳಿಗೆ ನೀರುಬಂದಿದೆ. ಇದರಿಂದರೈತರಿಗೆ ಅನುಕೂಲವಾಗಿದೆ.

ಚಿಕ್ಕಜಾಜೂರಿನಕೋಟೆಹಾಳ್ ಬಳಿ ₹500ಕೋಟಿ ವೆಚ್ಚದಲ್ಲಿಪವರ್ ಸ್ಟೇಷನ್ ನಿರ್ಮಾಣವಾಗುತ್ತಿದೆ.13 ಎಕರೆ ಜಾಗದಲ್ಲಿಈ ಯೋಜನೆ ನಡೆಯುತ್ತಿದೆ.ಇಲ್ಲಿಗೆ ಜೋಗ್ಫಾಲ್ಸ್‌ನಿಂದ ನೇರವಾಗಿ ವಿದ್ಯುತ್ಬರಲಿದೆ. ಇದರಿಂದರೈತರಿಗೆ ವಿದ್ಯುತ್ ಸಮಸ್ಯೆಕಾಡುವುದಿಲ್ಲ ಎಂದು ಶಾಸಕರುಭರವಸೆ ನೀಡಿದರು.

ಮಾನವೀಯತೆಗೆಆದ್ಯತೆ

ಚುನಾವಣೆಯಲ್ಲಿಓಟು ಹಾಕುವುದು ಮುಖ್ಯವಲ್ಲ.ರಾಜಕೀಯದಲ್ಲಿಮಾನವೀಯತೆ ಮತ್ತು ಮನುಷ್ಯತ್ವವಿರಬೇಕು.ಅಧಿಕಾರ ಶಾಶ್ವತವಲ್ಲ.ಇರುವಷ್ಟು ದಿನಹತ್ತಾರು ಜನಕ್ಕೆ ಒಳ್ಳೆಯದುಮಾಡಬೇಕು. ಈಆಲೋಚನೆಯೊಂದಿಗೆ ಕ್ಷೇತ್ರದಅಭಿವೃದ್ಧಿಗೆ ಶ್ರಮಿಸುತ್ತಿದ್ದೇನೆ.ಶಾಲೆಗೆ ₹50ಲಕ್ಷ ನೀಡಿದ್ದೇನೆ.ಚೌಡೇಶ್ವರಿದೇವಸ್ಥಾನದ ಗೋಪುರಕ್ಕೆ ₹10ಲಕ್ಷ ಕೊಟ್ಟಿದ್ದೇನೆ.ಎಲ್ಲಾ ಕಡೆಗುಣಮಟ್ಟದ ಸಿ.ಸಿ.ರಸ್ತೆಗಳು ಆಗಿವೆಎಂದು ತಮ್ಮ ಅಭಿವೃದ್ಧಿ ಕೆಲಸಗಳನ್ನುವಿವರಿಸಿದರು.

ಈಸಂದರ್ಭದಲ್ಲಿ ಗ್ರಾಮ ಪಂಚಾಯಿತಿಅಧ್ಯಕ್ಷ ಪ್ರಕಾಶ್,ಜಿಲ್ಲಾ ಪಂಚಾಯಿತಿಮಾಜಿ ಸದಸ್ಯ ತಿಪ್ಪೇಸ್ವಾಮಿ,ಎಸ್.ಡಿ.ಎಂ.ಸಿ.ಅಧ್ಯಕ್ಷ ಬಸಣ್ಣಹಾಗೂ ಗ್ರಾಮದ ಮುಖಂಡರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net