ಕೇಂದ್ರೀಯ ವಿದ್ಯಾಲಯ ಆರಂಭಕ್ಕೆ ಶೀಘ್ರ ಮಹೂರ್ತ

 ತಾತ್ಕಾಲಿಕವಾಗಿ ಕೇಂದ್ರೀಯ ವಿದ್ಯಾಲಯ ಆರಂಭವಾಗಲಿರುವ ಚಿತ್ರದುರ್ಗ ಸರ್ಕಾರಿ ವಿಜ್ಞಾನ ಕಾಲೇಜು.
ತಾತ್ಕಾಲಿಕವಾಗಿ ಕೇಂದ್ರೀಯ ವಿದ್ಯಾಲಯ ಆರಂಭವಾಗಲಿರುವ ಚಿತ್ರದುರ್ಗ ಸರ್ಕಾರಿ ವಿಜ್ಞಾನ ಕಾಲೇಜು.
Published on

ಪ್ರಮುಖ ಮುಖ್ಯಾಂಶಗಳು

  • ಕೇಂದ್ರ ಶಿಕ್ಷಣ ಇಲಾಖೆಯಿಂದ ಸದ್ಯದಲ್ಲೇ ಆದೇಶ
  • ವಸತಿ ರಹಿತ ಶಾಲೆಯಲ್ಲಿ ೧ರಿಂದ ೫ನೇ ತರಗತಿಗೆ ಪ್ರವೇಶ
  • ಬೋಧನಾ ಕೊಠಡಿಗಳು ಸಜ್ಜು
ಡಿಪಿಎನ್ ಶ್ರೇಷ್ಠಿ, ಚಿತ್ರದುರ್ಗ
ಚಿತ್ರದುರ್ಗ ನಗರದಲ್ಲಿ ಕೇಂದ್ರೀಯ ವಿದ್ಯಾಲಯ ಆರಂಭಕ್ಕೆ ಮಹೂರ್ತ ಕೂಡಿ ಬರುತ್ತಿದೆ. ವಸತಿ ರಹಿತ ಈ ಶಾಲೆಯ ಪ್ರಾರಂಭಕ್ಕೆ ಜಿಲ್ಲೆಯ ಜನಪ್ರತಿನಿಽಗಳ ಹಲವು ವರ್ಷಗಳ ಸತತ ಪ್ರಯತ್ನ ಕೊನೆಗೂ ಫಲ ನೀಡುವ ಹಂತಕ್ಕೆ ಬಂದದೆ.
ಚಿತ್ರದುರ್ಗದ ಸರ್ಕಾರಿ ವಿಜ್ಞಾನ ಕಾಲೇಜಿನ ನೂತನ ಕಟ್ಟಡದಲ್ಲಿ ತಾತ್ಕಾಲಿವಾಗಿ ೨೦೨೬-೨೭ರ ಶೈಕ್ಷಣಿಕ ವರ್ಷದಿಂದ ಶಾಲೆ ಕರ‍್ಯಾರಂಭಕ್ಕೆ ಇನ್ನೊಂದು ವಾರದೊಳಗೆ ಕೇಂದ್ರ ಶಿಕ್ಷಣ ಇಲಾಖೆಯಿಂದ ಆದೇಶ ಹೊರಬೀಳುವುದು ಬಹುತೇಕ ಖಚಿತವಾಗಿದೆ.
ನಿರೀಕ್ಷೆಯಂತೆ ಅನುಮತಿ ದೊರೆತರೆ, ತಲಾ ೪೦ ವಿದ್ಯಾರ್ಥಿಗಳ ಸಾಮರ್ಥ್ಯದೊಂದಿಗೆ ಒಂದರಿAದ ೫ನೇ ತರಗತಿವರೆಗೆ ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ಪ್ರವೇಶಾತಿ ಆರಂಭವಾಗಲಿದೆ. ತಾತ್ಕಾಲಿಕ ಕಟ್ಟಡದಲ್ಲಿ ಅಗತ್ಯ ಮೂಲ ಸೌಕರ್ಯಗಳಿವೆ ಎಂದಾದರೆ ಬಾಲವಾಡಿ(ಎಲ್‌ಕೆಜಿ, ಯುಕೆಜಿ)ಆರಂಭಿಸಲು ಕೇಂದ್ರೀಯ ವಿದ್ಯಾಲಯದ ಅಽಕಾರಿಗಳು ಚಿಂತನೆ ನಡೆಸಿದ್ದಾರೆ.
ಐದು ಎಕರೆ ಜಮೀನು: ಶಾಲಾ ಆರಂಭಕ್ಕೆ ಅನುಮತಿ ದೊರಕುತ್ತಿದ್ದಂತೆ ತರಗತಿಗಳಿಗೆ ಅಗತ್ಯ ಬೋಧಕ, ಬೋಧಕೇತರ ಸಿಬ್ಬಂದಿಯನ್ನು ತುಮಕೂರು ಮತ್ತು ದಾವಣಗೆರೆ ಮತ್ತಿತರ ಕೇಂದ್ರೀಯ ವಿದ್ಯಾಲಯಗಳಿಂದ ಚಿತ್ರದುರ್ಗಕ್ಕೆ ನಿಯೋಜಿಸಲಾಗುತ್ತದೆ.
ಈಗಾಗಲೇ ಜಿಲ್ಲಾಡಳಿತ ಕೇಂದ್ರೀಯ ವಿದ್ಯಾಲಯದ ನೂತನ ಕಟ್ಟಡ, ಬೋಧಕ, ಬೋಧಕೇತರ ಸಿಬ್ಬಂದಿ, ವಸತಿ ಗೃಹ ನಿರ್ಮಾಣಕ್ಕೆ ಚಿತ್ರದುರ್ಗ ಜಾಲಿಕಟ್ಟೆ ಗ್ರಾಮದಲ್ಲಿ ಐದು ಎಕರೆ ಜಮೀನು ಮಂಜೂರು ಮಾಡಿದೆ.
ಶಾಲೆ, ವಸತಿಗೃಹ ನಿರ್ಮಾಣಕ್ಕೆ ಈ ಮೊದಲು ಸೀಬಾರ, ಕುಂಚಿಗನಾಳ್‌ನಲ್ಲಿ ಗುರುತಿಸಿದ್ದ ಜಾಗ ಸೂಕ್ತ ಎನಿಸದ ಕಾರಣಕ್ಕೆ ಹಾಗೂ ವಿದ್ಯಾಲಯದ ಅಽಕಾರಿಗಳು ಸಮ್ಮತಿಸಿದ ಜಾಲಿಕಟ್ಟೆ ಗ್ರಾಮದಲ್ಲಿ ವಿದ್ಯಾಲಯದ ಕಟ್ಟಡ ತಲೆ ಎತ್ತಲಿದೆ. ಕಟ್ಟಡ ನಿc ರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಕೆ, ಆಡಳಿತಾತ್ಮಕ ಅನುಮತಿ, ಟೆಂಡರ್ ಪ್ರಕ್ರಿಯೆಗಳೊಂದಿಗೆ ಕಟ್ಟಡ ನಿರ್ಮಾಣ ಕಾಮಗಾರಿ ೨ ವರ್ಷದೊಳಗೆ ಪೂರ್ಣಗೊಳ್ಳಬಹುದಾಗಿದೆ.
ಜಿಲ್ಲಾಡಳಿತದಿಂದ ಕ್ಲಿಯರೆನ್ಸ್ ಸಲ್ಲಿಕೆ: ಜಿಲ್ಲಾಡಳಿತ ಈಗಾಗಲೇ ಕೇಂದ್ರೀಯ ವಿದ್ಯಾಲಯದ ಬೆಂಗಳೂರು ಆಯುಕ್ತಾಲಯಕ್ಕೆ ಜಮೀನು ಮಂಜೂರು ಮಾಡಿರುವ, ತಾತ್ಕಾಲಿಕ ಕಟ್ಟಡಕ್ಕೆ ಸಂಬAಽಸಿದAತೆ ವಿಜ್ಞಾನ ಕಾಲೇಜಿನ ಪ್ರಾಚಾರ್ಯರ ಹಸ್ತಾಂತರ ಪತ್ರ, ಲೋಕೋಪಯೋಗಿ ಇಲಾಖೆ ಮತ್ತು ಅಗ್ನಿಶಾಮಕದಳದ ಕ್ಲಿಯರೆನ್ಸ್ ಹಾಗೂ ನಿರ್ಮಿತಿ ಕೇಂದ್ರದಿAದ ತರಗತಿಗಳಿಗೆ ಅಗತ್ಯವಿರುವ ಪೀಠೋಪಕರಣಗಳನ್ನು ಒದಗಿಸಿರುವ ಕುರಿತಂತೆ ಪತ್ರ ಬರೆದಿದೆ. ಇದನ್ನಾಧರಿಸಿ ಶಾಲೆ ಆರಂಭಕ್ಕೆ ಆಯು ಕ್ತಾಲಯ ಅನುಮತಿ ಕೋರಿದೆ. ಆಯುಕ್ತಾಲಯದ ಮೂಲಗಳ ಪ್ರಕಾರ ಇನ್ನೊಂದು ವಾರದೊಳಗೆ ಶಾಲೆ ಆರಂಭಕ್ಕೆ ಅನುಮತಿ ಗ್ಯಾರಂಟಿ ಎನ್ನಲಾಗಿದೆ.
ತಾತ್ಕಾಲಿಕ ಕಟ್ಟಡದಲ್ಲಿ ಕಂಪ್ಯೂಟರ್‌ಲ್ಯಾಬ್ ಸೇರಿ ೮-೧೦ ಬೋಧನಾ ಕೊಠಡಿಗಳು, ಅವುಗಳಿಗೆ ಅಗತ್ಯ ಪೀಠೋಪಕರಣಗಳನ್ನು ಅಳವಡಿಸಲಾಗಿದೆ. ಶುದ್ಧ ನೀರಿನ ಘಟಕ, ಶೌಚಗೃಹ ಮೊದಲಾದ ಅಗತ್ಯ ಸೌಲಭ್ಯಗಳನ್ನು ಒದಗಿಸಿ, ವಿಜ್ಞಾನ ಕಾಲೇಜು ಕಟ್ಟಡದಿಂದ ಪ್ರತ್ಯೇಕಿಸಿ, ಪ್ರವೇಶಕ್ಕೂ ಅವಕಾಶ ಮಾಡಿಕೊಡಲಾಗಿದೆ. ಚಿತ್ರದುರ್ಗಕ್ಕೆ ನಿಯೋಜಿತರಾಗಿರುವ ತುಮಕೂರು ಕೇಂದ್ರೀಯ ವಿದ್ಯಾಲಯದ ಪ್ರಾಚಾರ್ಯ ಮನೀಶ್‌ಸೈನಿ ಅವರು ಕೂಡ ಈಚೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
----
"

ಇನ್ನೊಂದು ವಾರ-ಹತ್ತು ದಿನದೊಳಗೆ ಕೇಂದ್ರೀಯ ವಿದ್ಯಾಲಯ ಪ್ರಾರಂಭವಾಗುವ ನಿರೀಕ್ಷೆ ಇದೆ. ಕೇಂದ್ರ ಶಿಕ್ಷಣ ಸಚಿವ ಧರ್ಮೆಂಧ್ರ ಪ್ರಧಾನ ಶೀಘ್ರದಲ್ಲೇ ಈ ಶಾಲಾ ಆರಂಭಕ್ಕೆ ಅನುಮತಿ ಕೊಡಲಿದ್ದಾರೆ. ಹೊಸ ಕಟ್ಟಡ ನಿರ್ಮಾಣಕ್ಕೂ ಸಚಿವರೊಂದಿಗೆ ಚರ್ಚಿಸುವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net