ಚಿತ್ರದುರ್ಗ: ನಗರದ ಹೊರವಲಯ ಮಾರಗಟ್ಟದ ರೇಷ್ಮೆ ಕೃಷಿ ಸಂಶೋಧನಾ ವಿಸ್ತರಣಾ ಕೇಂದ್ರವನ್ನು ಪ್ರಾದೇಶಿಕ ರೇಷ್ಮೆ ಕÊಷಿ ಸಂಶೋಧನಾ ಕೇಂದ್ರವನ್ನಾಗಿ ಮೇಲ್ದರ್ಜೆಗೇರಿಸಿ ಕೇಂದ್ರ ರೇಷ್ಮೆ ಮಂಡಳಿ ಆದೇಶಿಸಿದೆ ಎಂದು ಸಂಸದ ಗೋವಿಂದ ಎಂ.ಕಾರಜೋಳ ತಿಳಿಸಿದ್ದಾರೆ.
೧೯೮೨ರಲ್ಲಿ ಆರಂಭವಾದ ಈ ವಿಸ್ತರಣಾ ಕೇಂದ್ರವು ಚಿತ್ರದುರ್ಗ, ಬಳ್ಳಾರಿ ಮತ್ತು ದಾವಣಗೆರೆ ಜಿಲ್ಲೆಗಳ ರೇಷ್ಮೆ ಬೆಳೆಗಾರರ ಅಗತ್ಯತೆಗಳನ್ನು ಪೂರೈಸುತ್ತಿತ್ತು. ಈಚೆಗೆ ನಡೆದ ಕೇಂದ್ರ ರೇಷ್ಮೆ ಮಂಡಳಿ ಸಭೆ ನಿರ್ಧಾರದಂತೆ ಬೆಂಗಳೂರು ಸರ್ಜಾಪುರದ ಕೊಡತಿ ಪ್ರಾದೇಶಿಕ ರೇಷ್ಮೆ ಕÊಷಿ ಸಂಶೋಧನಾ ಕೇಂದ್ರವನ್ನು ಮಾರಗಟ್ಟಕ್ಕೆ ಸ್ಥಳಾಂತರಿಸಿ ಮೇಲ್ದರ್ಜೆಗೇರಿಸಲಾಗಿದೆ. ಮಾರಗಟ್ಟದ ಕೇಂದ್ರವನ್ನು ರಾಣೆ ಬೆನ್ನೂರಿಗೆ ಸ್ಥಳಾಂತರಿಸಲಾಗಿದೆ.
ಪ್ರಾದೇಶಿಕ ಕೇಂದ್ರವು ಈ ತಿಂಗಳಾAತ್ಯದಿAದ ತಾಂತ್ರಿಕ ಹಾಗೂ ಆಡಳಿತಾತ್ಮಕವಾಗಿ ಸಂಪೂರ್ಣ ಕಾರ್ಯಾರಂಭ ಮಾಡಲಿದೆ. ೧೦ ಉಪಘಟಕಗಳ(ಸಂಶೋಧನಾ ಕೇಂದ್ರಗಳ)ತಾAತ್ರಿಕ ಚಟುವಟಿಕೆಗಳು ಮತ್ತು ರಾಣೆಬೆನ್ನೂರು, ಕೊಪ್ಪಳ ಮತ್ತು ಬೀದರ್ ಸಂಶೋಧನಾ ವಿಸ್ತರಣಾ ಕೇಂದ್ರಗಳನ್ನು ಸಮನ್ವಯಗೊಳಿಸುತ್ತದೆ.
ಇದರೊಂದಿಗೆ ದಕ್ಷಿಣದ ೨ ಘಟಕಗಳಾದ ಮದ್ದೂರು ಮತ್ತು ಮಡಿವಾಳ ಘಟಕಗಳು, ಮಹಾರಾಷ್ಟçದ ನಾಲ್ಕು ಮತ್ತು ಮಧ್ಯಪ್ರದೇಶದ ಒಂದು ರೇಷ್ಮೆ ವಿಸ್ತರಣಾ ಕೇಂದ್ರಗಳು ಚಿತ್ರದುರ್ಗದ ಕೇಂದ್ರದ ವ್ಯಾಪ್ತಿಗೆ ಒಳಪಡಲಿವೆ. ಚಿತ್ರದುರ್ಗ ಜಿಲ್ಲೆಯಲ್ಲಿ ೨೮೮ ಹಳ್ಳಿಗಳಲ್ಲಿ ೩೮ ೦೦ಕ್ಕೂ ಹೆಚ್ಚು ರೇಷ್ಮೆ ಬೆಳೆಗಾರರಿದ್ದಾರೆ ಹಾಗೂ ೧೧೧.೪೯ ಮೆಟ್ರಿಕ್ ಟನ್ ಕಚ್ಚಾ ರೇಷ್ಮೆ ಉತ್ಪಾದನೆಯಾಗುತ್ತಿದೆ. ಚಿತ್ರದುರ್ಗದಲ್ಲಿ ಪ್ರಾದೇ ಶಿಕ ರೇಷ್ಮೆ ಸಂಶೋಧನಾ ಕೇಂದ್ರ ಸ್ಥಾಪನೆಯಿಂದ ರೇಷ್ಮೆ ಬೆಳೆಗಾರರಿಗೆ ಸಾಕಷ್ಟು ಉತ್ತೇಜನ ಮತ್ತು ಪ್ರೇರಣÉ ದೊರೆಯಲಿದೆ.
ಬೈವೋಲ್ಟೀನ್ ರೇಷ್ಮೆ ಉತ್ಪಾದನೆ ಮತ್ತು ಗುಣಮಟ್ಟ ಹೆಚ್ಚಿಸಲು ಈ ಕೇಂದ್ರ ಸಹಕಾರಿಯಾಗಲಿದೆ. ಉತ್ತಮ ತಂತ್ರಜ್ಞಾನ ವರ್ಗಾ ವಣೆ,ಪಾಲುದಾರರಿಗೆ ತರಬೇತಿ ನೀಡುವುದು, ಕೀಟ ಮತ್ತು ರೋಗಗಳ ಮುನ್ಸೂಚನೆ ಹಾಗೂ ಮುನ್ನೆಚ್ಚರಿಕೆ ನೀಡುವುದನ್ನೂ ಸಹ ಈ ಕೇಂದ್ರ ಮಾಡಲಿದೆ.
ಗೂಡುಗಳ ಮಾರಾಟಕ್ಕಾಗಿ ಮಾರುಕಟ್ಟೆ ಮೂಲ ಸೌಕರ್ಯ ಸೃಜನೆಯಾಗಲಿದೆ. ಈ ಪ್ರದೇಶದಲ್ಲಿ ಬೃಹತ್ ಪ್ರಮಾಣದ ರೇಷ್ಮೆ ಕೃಷಿಗೆ ಅವಕಾಶ ಒದಗಿಬರಲಿದೆ ಎಂದು ಸಂಸದ ಗೋವಿಂದ ಕಾರಜೋಳ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.