

ಚಿತ್ರದುರ್ಗ: ಮಾದಕ ವಸ್ತುಗಳ ಸೇವನೆಯಿಂದ ಜನರ ದೈಹಿಕ, ಮಾನಸಿಕ ಆರೋಗ್ಯ ಹಾಗೂ ಸಾಮಾಜಿಕ ಜೀವನದ ಮೇಲೆ ದುಷ್ಪರಿಣಾಮ ಉಂಟು ಮಾಡುತ್ತದೆ ಎಂದು ಎಸ್‌ಪಿ ಕುಶಲ್ ಚೌಕ್ಸೆ ಹೇಳಿದರು.
ನಗರದ ಎಸ್‌ಜೆಎಂ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಶುಕ್ರವಾರ ನಡೆದ ಸಮಾಜಶಾಸ್ತç ವಿಭಾಗದ ವೇದಿಕೆ ಉದ್ಘಾಟನೆ, ವಿಶ್ವ ಹಿರಿಯರ ದಿನ ಹಾಗೂ ನಶೆಮುಕ್ತ ಭಾರತ ಅಭಿಯಾನ ಕರ‍್ಯಕ್ರಮದಲ್ಲಿ ಮಾತನಾಡಿ, ಮಾದಕ ವಸ್ತುಗಳ ಸೇವನೆ ದೇಹಕ್ಕೆ ದುಷ್ಪರಿಣಾಮ ಉಂಟು ಮಾಡುತ್ತದೆ. ಈ ವಸ್ತುಗಳನ್ನು ಸೇವಿಸುವವರ ವಿರುದ್ಧವೂ ಕಠಿಣ ಕಾನೂನು ಜಾರಿಗೊಳಿಸಲಾಗುತ್ತದೆ. ಇತ್ತೀಚೆಗೆ ಮಾದಕ ಸೇವನೆ ಹೆಚ್ಚಾ ಗುತ್ತಿದ್ದು, ಯುವಜನರು ಇಂಥ ದುಶ್ಚಟಗಳಿಂದ ದೂರವಿರಬೇಕು. ಇಲ್ಲವಾದಲ್ಲಿ ಬದುಕು ನಾಶವಾಗಲಿದೆ ಎಂದರು.
ಸಹಾಯಕ ಮಾದಕ ನಿಯಂತ್ರಣಾಽಕಾರಿ ಸಿ.ಎಚ್. ಗಿರೀಶ್ ಮಾತನಾಡಿ, ಮಾದಕ ವಸ್ತುಗಳ ಸೇವನೆ ಅತ್ಯಂತ ಅಪಾಯಕಾರಿ. ಒಮ್ಮೆ ವ್ಯಸನಕ್ಕೆ ಒಳಗಾದರೆ ಅದರಿಂದ ಹೊರ ಬರುವುದು ಕಷ್ಟ. ಅದು ದೈನಂದಿನ ಜೀವನದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಈ ನಿಟ್ಟಿನಲ್ಲಿ ಯುವಜನರು ಜಾಗೃತರಾಗಬೇಕೆಂದರು. ಬ್ರಹ್ಮ ಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ದಿವ್ಯಾ ಪ್ರತಿe್ಞÁವಿಽ ಬೋಽಸಿದರು.
ನಿವೃತ್ತ ಸಹ ಪ್ರಾಧ್ಯಾಪಕ ಎಸ್.ಬಿ. ಶಿವಕುಮಾರ್ ವೃದ್ಧರ ಸಮಸ್ಯೆಗಳ ಕುರಿತು ಉಪನ್ಯಾಸ ನೀಡಿದರು. ಪ್ರಾಚರ‍್ಯ ಡಾ.ಎಲï. ಈಶ್ವರಪ್ಪ ಅಧ್ಯP್ಷÀತೆ ವಹಿಸಿದ್ದರು. ಸಮಾಜಶಾಸ್ತç ಪ್ರಾಧ್ಯಾಪಕ ಟಿ.ಎಸ್. ಗಿರೀಶ್, ಐಕ್ಯೂಎಸಿ ಸಂಚಾಲಕ ಪ್ರೊ. ಎಂ.ಎಸ್. ಪರಮೇಶ್ವರ, ನಗರಠಾಣೆ ಪಿಐ ನಿರಂಜನ್, ಸಮಾಜಶಾಸ್ತç ಉ ಪನ್ಯಾಸಕಿ ಎಸ್.ಡಿ. ನಂದಿನಿ, ವಿದ್ಯಾರ್ಥಿ ಒಕ್ಕೂಟದ ಸಂಚಾಲಕಿ ಡಾ.ಬಿ.ವೈ. ಶ್ವೇತಾ ಮತ್ತಿತರರು ಇದ್ದರು.
ಇದೇ ಸಂದರ್ಭದಲ್ಲಿ ೨೦೨೫-೨೬ನೇ ಸಾಲಿನಲ್ಲಿ ಸಮಾಜಶಾಸ್ತç ವಿಷಯದ ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಕಾವೇರಿ ಸ್ವಾಗತಿಸಿದರು. ಲಾವಣ್ಯ ವಂದಿಸಿದರು. ಸರಸ್ವತಿ ಸಂಗಡಿಗರು ಪ್ರಾರ್ಥಿಸಿದರು. ಎಂ. ಶ್ರೇಯಾ, ಎ. ಸೃಷ್ಟಿ ನಿರೂಪಿಸಿದರು.