ಡಾ.ಬಿ.ಆರ್.ಅಂಬೇಡ್ಕರ್ ವಿಚಾರ ಧಾರೆಗಳು ಯುವ ಜನರಿಗೆ ಸೂರ್ತಿ

ಚಿತ್ರದುರ್ಗದಲ್ಲಿ ಶನಿವಾರ ಆಯೋಜಿಸಿದ್ದ ಭೀಮಗಾಯನ ಕಾರ್ಯಕ್ರಮವನ್ನು ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಽಕಾರದ ಅಧ್ಯಕ್ಷ ಆರ್. ಶಿವಣ್ಣ ಗಂಜಿಕಟ್ಟೆ ಉದ್ಘಾಟಿಸಿದರು. ಎಂ.ಕೆ. ತಾಜ್‌ಪೀರ್, ಡಿ.ಎನ್. ಮೈಲಾರಪ್ಪ, ಬಿ.ವಿ. ತುಕರಾಂರಾವ್, ಮಲ್ಲಿಕಾರ್ಜುನ, ದಿವಾಕರ್, ಪುಷ್ಪಲತಾ ಭಾವಿಮಠ, ಶಿದ್ರಾಮ ಮಾರಿಹಾಳ, ಭರತ್ ಎಂ. ಕಾಳಿಸಿಂಗೆ, ಗೋವಿಂದರಾಜು, ರೇಖಾ,ಅನಿಲ ಬಗಟಿ ಮತ್ತಿತರರರು ಇದ್ದರು.
ಚಿತ್ರದುರ್ಗದಲ್ಲಿ ಶನಿವಾರ ಆಯೋಜಿಸಿದ್ದ ಭೀಮಗಾಯನ ಕಾರ್ಯಕ್ರಮವನ್ನು ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಽಕಾರದ ಅಧ್ಯಕ್ಷ ಆರ್. ಶಿವಣ್ಣ ಗಂಜಿಕಟ್ಟೆ ಉದ್ಘಾಟಿಸಿದರು. ಎಂ.ಕೆ. ತಾಜ್‌ಪೀರ್, ಡಿ.ಎನ್. ಮೈಲಾರಪ್ಪ, ಬಿ.ವಿ. ತುಕರಾಂರಾವ್, ಮಲ್ಲಿಕಾರ್ಜುನ, ದಿವಾಕರ್, ಪುಷ್ಪಲತಾ ಭಾವಿಮಠ, ಶಿದ್ರಾಮ ಮಾರಿಹಾಳ, ಭರತ್ ಎಂ. ಕಾಳಿಸಿಂಗೆ, ಗೋವಿಂದರಾಜು, ರೇಖಾ,ಅನಿಲ ಬಗಟಿ ಮತ್ತಿತರರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಬಾಬಾ ಸಾಹೇಬರ ಆಶಯಗಳನ್ನು ಸಾರಿದ ಭೀಮಗಾಯನ
  • ಜಿಲ್ಲಾ ಗ್ಯಾರಂಟಿ ಯೋಜನಾ ಪ್ರಾಽಕಾರ ಅಧ್ಯಕ್ಷ ಶಿವಣ್ಣ ಅಭಿಮತ
  • ವಾರ್ತಾ ಇಲಾಖೆ
ಚಿತ್ರದುರ್ಗ : ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರು ಅನುಭವಿಸಿದ ನೋವು, ಹೋರಾಟದ -Àಲವಾಗಿ ನಮಗೆ ಇಂದು ಉತ್ತಮ ಬದುಕು, ಸಂವಿಧಾನಾತ್ಮಕ ಹಕ್ಕುಗಳು ದೊರೆತಿವೆ ಎಂದು ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಽಕಾರ ಅಧ್ಯಕ್ಷ ಆರ್. ಶಿವಣ್ಣ ಗಂಜಿಗಟ್ಟೆ ಹೇಳಿದರು.
ಜಿಲ್ಲಾಡಳಿತ, ಜಿಪಂ, ವಾರ್ತಾ, ಸಮಾಜ ಕಲ್ಯಾಣ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಆಶ್ರಯದಲ್ಲಿ ನಗರದ ಶ್ರೀ ಶಿವಶರಣ ಮಾದಾರ ಚನ್ನಯ್ಯ ಸಭಾಭವನದಲ್ಲಿ ಶನಿವಾರ ಆಯೋಜಿಸಿದ್ದ ಭೀಮಗಾಯನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಯುವ ಜನರು ಅಂಬೇಡ್ಕರ್ ವಿಚಾರಧಾರೆಗಳನ್ನು ಮೈಗೂಡಿಸಿಕೊಳ್ಳಬೇಕು ಎಂದರು. 
ರಾಜ್ಯ ಸರ್ಕಾರ`ಜೈ ಬಾಪು,ಜೈ ಭೀಮ್, ಜೈ ಸಂವಿಧಾನ'ತತ್ವದಡಿ ಅನೇಕ ಕಾರ್ಯಕ್ರಮಗಳನ್ನು ರೂಪಿಸಿದೆ. ಅಂಬೇಡ್ಕರ್ ಅವರ ಜೀವನದ ನೋವು-ನಲಿವುಗಳನ್ನು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಭೀಮಗಾಯನ ಒಂದು ಸ್ಮರಣೀಯ ಕಾರ್ಯಕ್ರಮ ವಾಗಿದೆ. ಅಂಬೇಡ್ಕರ್ ಅವರ ಹೋರಾಟ, ಸಂವಿಧಾನ ಅಸ್ಪÈಶ್ಯತೆಯಂಥ ಕರಾಳ ಆಚರಣೆಗಳನ್ನು ಕೊನೆಗಾಣಿಸಲು ಇದೊಂದು ಉತ್ತಮ ಕಾರ್ಯಕ್ರಮವಾಗಿದೆ ಎಂದರು. 
ಸಂವಿಧಾನ ಪ್ರತಿಯೊಬ್ಬರಿಗೂ ಸಾಮಾಜಿಕ ಭದ್ರತೆ, ಆರ್ಥಿಕ ಸಮಾನತೆ ಮತ್ತು ರಾಜಕೀಯ ಸ್ಥಾನಮಾನಗಳನ್ನು ಕಲ್ಪಿಸಿದೆ. ನಂಬಿಕೆ,ಧರ್ಮ ಮತ್ತು ಉಪಾಸನೆ ಸ್ವಾತಂತ್ರ‍್ಯ ನೀಡಿದೆ. ಶಿಕ್ಷಣ, ಹಾಸ್ಟೆಲ್ ಮತ್ತಿತರ ಶೈಕ್ಷಣಿಕ ಸೌಲಭ್ಯಗಳು ಅಂಬೇಡ್ಕರ್ ಅವರು ಹಾಕಿಕೊಟ್ಟ ಭದ್ರ ಬುನಾದಿಯಾಗಿದೆ. ಅಂಬೇಡ್ಕರ್ ಅವರ ಭಾತೃತ್ವದ ಗುಣ ಅಳವಡಿಸಿಕೊಂಡು ಸೌಹಾರ್ದತೆಯಿಂದ ಬದುಕಬೇಕಾಗಿದೆ ಎಂದು ಶಿವಣ್ಣ ಹೇಳಿದರು.
ಸಂವಿಧಾನ ಪೀಠಿಕೆ ಬೋಽಸಿ, ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ವಾರ್ತಾಽಕಾರಿ ಬಿ.ವಿ.ತುಕಾರಾಂರಾವ್, ಅಂಬೇಡ್ಕರ್ ಅವರ ವಿಚಾರ ಧಾರೆಗಳೆಡೆ ಜಾಗೃತಿ ಮೂಡಿಸಲು ಇಲಾಖೆಯಿಂದ ರಾಜ್ಯದ ೧೨ ಜಿಲ್ಲೆಗಳಲ್ಲಿ ಭೀಮಗಾಯನ ಆಯೋಜಿಸ ಲಾಗಿದೆ. ಹಾಡುಗಳ ಮೂಲಕ ಸಂವಿಧಾನದ ಆಶಯಗಳನ್ನು ಜನರಿಗೆ ತಲುಪಿಸುವ ಕಾರ್ಯಕ್ರಮ ಇದಾಗಿದೆ ಎಂದರು.
ಸಂವಿಧಾನ ಶಿಲ್ಪಿ, ಭಾರತ ರತ್ನ ಡಾ.ಬಿ.ಆರ್.ಅಂಬೇಡ್ಕರ್ ಅವರು ಜ್ಞಾನದ ಅಪ್ರತಿಮ ಸಂಕೇತ. ಅವರ ಜೀವನದ ಸಾಧನೆ ಮತ್ತು ತತ್ವಗಳು ಈ ತಲೆಮಾರಿಗೆ ದಾರಿದೀಪವಾಗಬೇಕು. ಬಾಲ್ಯದಲ್ಲಿ ಅಸ್ಪÈಶ್ಯತೆಯಂತಹ ಕಡು ಕಷ್ಟಗಳನ್ನು ಅನುಭವಿಸಿದ್ದ ಅವರು ಶಿಕ್ಷಣ, ಜ್ಞಾನದ ಮೂಲಕ ಜಗತ್ತನ್ನೇ ಗೆದ್ದರು. ಅಂದಿನ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರು ಅವರು ಅಂಬೇಡ್ಕರ್ ಅವರನ್ನು ವಜ್ರದಂತಹ ಸಚಿವ ಎಂದು ಬಣ್ಣಿಸಿದ್ದರು ಎಂದರು.
ಕುಡಾ ಅಧ್ಯಕ್ಷ ಎಂ.ಕೆ. ತಾಜ್‌ಪೀರ್, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಽಕಾರ ಉಪಾಧ್ಯಕ್ಷ ಡಿ.ಎನ್. ಮೈಲಾರಪ್ಪ ಮಾತನಾಡಿ ದರು. ಕಾರ್ಯಕ್ರಮದಲ್ಲಿ ಬುದ್ಧ, ಬಸವ, ಅಂಬೇಡ್ಕರ್ ಭಾವಚಿತ್ರಗಳಿಗೆ ಪುಷ್ಪ ನಮನ ಸಲ್ಲಿಸಿಲಾಯಿತು. 
ಮೈಸೂರು ಜಿಲ್ಲೆ ಸರಗೂರಿನ ಅಮ್ಮ ವಸುಂಧರೆ ಕಲಾತಂಡ, ಭೀಮಗಾಯನ ಸಮಾನತೆ ಸ್ವರ ಸಂಭ್ರಮದಲ್ಲಿ ಅಂಬೇಡ್ಕರ್ ಕುರಿತಾದ ನಿಮಗಿದೋ ನಮನ ಜೈ ಭೀಮ್, ಭೀಮನಂತಾಗುವ ಆಸೆ, ಜೈ ಭೀಮ್ ಮಹಾರಾಷ್ಟçದ ಹಣತೆ ನೀನೊಂದು ಮುಗಿಯದ ಚರಿತೆ, ಜಯ ಹೇ ಭಾರತ ಭಾಗ್ಯವಿಧಾತ ಮುಂತಾದ ಅದ್ಭುತ ಗೀತೆಗಳನ್ನು ಹಾಡಿದರು. 
ಬುದ್ಧನ ಕುರಿತಾದ ಸುವ್ವಮ್ಮ ಸುವ್ವಲಾಲಿ, ಬುದ್ಧಂ ದಮ್ಮಮ್ ಸುಂದರA ಗೀತೆಗಳನ್ನು ಪ್ರಸ್ತುತ ಪಡಿಸಿದರು. ಕುಲದಲ್ಲಿ ಕೀಳ್ಯಾವುದೋ ಗೀತೆ ಮೂಲಕ ಸಭಿಕರನ್ನು ರಂಜಿಸಿದರು.
ಮಲ್ಲಿಕಾರ್ಜುನ, ದಿವಾಕರ್, ಪುಷ್ಪಲತಾಭಾವಿಮಠ, ಶಿದ್ರಾಮ ಮಾರಿಹಾಳ, ಭರತ್ ಎಂ. ಕಾಳಿಸಿಂಗೆ, ಗೋವಿಂದರಾಜು, ರೇಖಾ, ಅನಿಲ ಬ. ಬಗಟಿ ಸೇರಿ ನಾನಾ ಅಽಕಾರಿಗಳು, ದಲಿತ ಸಂಘ-ಸAಸ್ಥೆಗಳ ಪದಾಽಕಾರಿಗಳು, ಮುಖಂಡರು, ವಿವಿಧ ಸಂಘಟನೆಗಳ ಪದಾಽ ಕಾರಿಗಳು, ಎಲ್ಲ ಸಮುದಾಯಗಳ ಮುಖಂಡರು ಇದ್ದರು.
ಕಲಾತಂಡದ ಮುಖ್ಯಗಾಯಕ ಡಾ. ಅಮ್ಮರಾಮಚಂದ್ರ, ಜಿ. ಶಿವಕುಮಾರ್, ನವೀನ್‌ಕುಮಾರ್, ಗಾಯಕಿಯರಾದ ಸಿಂಚನ ಮತ್ತು ಮೀನಾಕ್ಷಮ್ಮ ಅವರು ಭೀಮಗಾಯನ ಪ್ರಸ್ತುತಪಡಿಸಿದರು. ಶಿವಕುಮಾರ್- ಕೀಬೋರ್ಡ್, ರಘು -ಡೋಲಕ್, ಪ್ರದೀಪ್‌ಕುಮಾರ್-ರಿದಂ ಪ್ಯಾಡ್ ನುಡಿಸಿದರು. ಡಾ.ನವೀನ್ ಮಸ್ಕಲ್ ನಿರೂಪಿದರು.
---
"

ವಾರ್ತಾ, ಸಮಾಜ ಕಲ್ಯಾಣ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಗಳೊಂದಿಗೆ ಶಿಕ್ಷಣ ಇಲಾಖೆಯನ್ನೂ ಭೀಮಗಾಯನ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು. ಇದರಿಂದ ವಿದ್ಯಾರ್ಥಿಗಳಿಗೆ ಅಂಬೇಡ್ಕರ್ ವಿಚಾರಧಾರೆಗಳನ್ನು ತಲುಪಿಸಲು ಸಾಧ್ಯವಾಗಲಿದೆ. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಕಾರ್ಯಕ್ರಮವನ್ನು ಪ್ರತಿವರ್ಷ ಡಿಸೆಂಬರ್/ಜನವರಿಯಲ್ಲಿ ಏರ್ಪಡಿಸಬೇಕು.

"

ದೇಶಕ್ಕೆ ದೊಡ್ಡ ಶಕ್ತಿಯಾಗಿರುವ ಅಂಬೇಡ್ಕರ್ ಅವರು ಶೋಷಿತ ಸಮುದಾಯಗಳಿಗೆ ಸಂವಿಧಾನದ ಮೂಲಕ ಹಕ್ಕುಗಳನ್ನು ನೀಡಿ ದ್ದಾರೆ. ಅಂಬೇಡ್ಕರ್ ಅವರ ರಾಷ್ಟç ಪ್ರೇಮ ಗೌರವಿಸಲು ಅವರ ಭಾವಚಿತ್ರವನ್ನು ನೋಟುಗಳಲ್ಲಿ ಮುದ್ರಿಸಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net