ಟಾಪ್‌ಟೆನ್‌ನಲ್ಲಿ ಜಿಲ್ಲೆಯ ಎಸ್ಸೆಸ್ಸೆಲ್ಸಿ ಫಲಿತಾಂಶ

ಚಿತ್ರದುರ್ಗದಲ್ಲಿ ಬುಧವಾರ ಏರ್ಪಡಿಸಿದ್ದ ಎಸ್ಸೆಸ್ಸೆಲ್ಸಿ -Àಲಿತಾಂಶ ಸುಧಾರಣಾ ಕಾರ್ಯಾಗಾರವನ್ನು ಡಿಡಿಪಿಐ ಎಂ.ಆರ್. ಮಂಜುನಾಥ್ ಉದ್ಘಾಟಿಸಿದರು. ನಿತ್ಯಾನಂದ, ಶ್ರೀನಿವಾಸ, ಬಸವರಾಜ್, ಎಂ.ಆರ್. ನಾಗರಾಜ್, ಪ್ರಭುಪ್ರಸಾದ್, ಶ್ರೀನಿವಾಸ್ ಇತರರು ಇದ್ದರು.
ಚಿತ್ರದುರ್ಗದಲ್ಲಿ ಬುಧವಾರ ಏರ್ಪಡಿಸಿದ್ದ ಎಸ್ಸೆಸ್ಸೆಲ್ಸಿ -Àಲಿತಾಂಶ ಸುಧಾರಣಾ ಕಾರ್ಯಾಗಾರವನ್ನು ಡಿಡಿಪಿಐ ಎಂ.ಆರ್. ಮಂಜುನಾಥ್ ಉದ್ಘಾಟಿಸಿದರು. ನಿತ್ಯಾನಂದ, ಶ್ರೀನಿವಾಸ, ಬಸವರಾಜ್, ಎಂ.ಆರ್. ನಾಗರಾಜ್, ಪ್ರಭುಪ್ರಸಾದ್, ಶ್ರೀನಿವಾಸ್ ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಡಿಡಿಪಿಐ ಎಂ.ಆರ್. ಮಂಜುನಾಥ ಸೂಚನೆ
  • ಎಸ್ಸೆಸ್ಸೆಲ್ಸಿ -Àಲಿತಾಂಶ ಸುಧಾರಣಾ ಕಾರ್ಯಾಗಾರ
  • ಪ್ರೌಢಶಾಲಾ ಶಿಕ್ಷಕರು
ಚಿತ್ರದುರ್ಗ: ನಿಧಾನಗತಿ ಕಲಿಕೆ ಮಕ್ಕಳ ಕಡೆ ವಿಶೇಷ ಗಮನಹರಿಸುವ ಮೂಲಕ ಎಸ್ಸೆಸ್ಸೆಲ್ಸಿ -Àಲಿತಾಂಶ ಉತ್ತಮಗೊಳಿಸಬೇಕು ಎಂದು ಡಿಡಿಪಿಐ ಎಂ.ಆರ್. ಮಂಜುನಾಥ ಹೇಳಿದರು.
ಶಿಕ್ಷಣ ಇಲಾಖೆ ನಗರದ ಮಹಾರಾಣಿ ಪ್ರೌಢಶಾಲೆಯಲ್ಲಿ ಬುಧವಾರ ಏರ್ಪಡಿಸಿದ್ದ ಎಸ್ಸೆಸ್ಸೆಲ್ಸಿ -Àಲಿತಾಂಶ ಸುಧಾರಣಾ ಕಾರ್ಯಾ ಗಾರ ಉದ್ಘಾಟಿಸಿ ಮಾತನಾಡಿ, ನಿಧಾನ ಗತಿ ಕಲಿಕಾ ಮಕ್ಕಳಿಗೆ `ಗುರಿ ೪೦+' ಕ್ರಿಯಾಯೋಜನೆಯೊಂದಿಗೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ನೀಲನಕ್ಷೆ ಹಾಗೂ ನಾಲ್ಕು ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಬಿಡುಗಡೆಗೊಳಿಸಿದೆ.
ಈ ನಿಟ್ಟಿನಲ್ಲಿ ವಿಶೇಷ ಗಮನಹರಿಸಿ ಟಾಪ್ ೧೦ರಲ್ಲಿ ಜಿಲ್ಲೆಯ -Àಲಿತಾಂಶ ತರಲು ಪ್ರೌಢಶಾಲಾ ಶಿಕ್ಷಕರು ಕ್ರಮ ವಹಿಸಬೇಕು ಎಂದರು. ಉಪ ನಿರ್ದೇಶಕರ ಕಚೇರಿ ವಿಷಯ ಪರಿವೀಕ್ಷಕ ನಿತ್ಯಾನಂದ ಪ್ರಾಸ್ತಾವಿಕವಾಗಿ ಮಾತನಾಡಿ, ಶೈಕ್ಷಣಿಕ ವರ್ಷದ ಆರಂಭದಿAದಲೂ ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ಬುನಾದಿ ಸಾಕ್ಷರತೆ ಮತ್ತು ಸಂಖ್ಯಾಜ್ಞಾನ ಹಾಗೂ ಪಾಠ ಆಧಾರಿತ ಘಟಕ ಪರೀಕ್ಷೆ ನಡೆಸಲಾಗುತ್ತಿದೆ. ಮಕ್ಕಳ ಕಲಿಕಾ ಮಟ್ಟ ಸುಧಾರಿಸುತ್ತಿದೆ ಎಂದರು.
ರಾಜ್ಯ ಸರ್ಕಾರಿ ನೌಕರರ ಜಿಲ್ಲಾ ಕಾರ್ಯದರ್ಶಿ ಶ್ರೀನಿವಾಸ, ಚಿತ್ರದುರ್ಗ ತಾಲೂಕು ಪ್ರೌಢಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಬಸವರಾಜ್, ತಾಲೂಕು ಸಮಾಜ ವಿಜ್ಞಾನ ಸಂಘದ ಅಧ್ಯಕ್ಷ ಎಂ.ಆರ್. ನಾಗರಾಜ್, ಸಂಪನ್ಮೂಲ ವ್ಯಕ್ತಿಗಳಾದ ಪ್ರಭುಪ್ರಸಾದ್, ಶ್ರೀನಿವಾಸ್ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net