ನೇರ ರೈಲು ಮಾರ್ಗ ೨ ವರ್ಷದಲ್ಲಿ ಪೂರ್ಣ

 ಚಿತ್ರದುರ್ಗದಲ್ಲಿ ಭಾನುವಾರ ರೈಲ್ವೇ ಮೇಲ್ಸೇತುವೆಗೆ ಕೇಂದ್ರ ಸಚಿವ ವಿ. ಸೋಮಣ್ಣ ಭೂಮಿಪೂಜೆ ನೆರವೇರಿಸಿದರು. ಶಾಸಕ ಕೆ.ಸಿ. ವೀರೇಂದ್ರಪಪ್ಪಿ, ಮಾಜಿ ಶಾಸಕರಾದ ಜಿ.ಎಚ್. ತಿಪ್ಪಾರೆಡ್ಡಿ ಇತರರು ಇದ್ದರು.
ಚಿತ್ರದುರ್ಗದಲ್ಲಿ ಭಾನುವಾರ ರೈಲ್ವೇ ಮೇಲ್ಸೇತುವೆಗೆ ಕೇಂದ್ರ ಸಚಿವ ವಿ. ಸೋಮಣ್ಣ ಭೂಮಿಪೂಜೆ ನೆರವೇರಿಸಿದರು. ಶಾಸಕ ಕೆ.ಸಿ. ವೀರೇಂದ್ರಪಪ್ಪಿ, ಮಾಜಿ ಶಾಸಕರಾದ ಜಿ.ಎಚ್. ತಿಪ್ಪಾರೆಡ್ಡಿ ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ರೈಲ್ವೆ ಸಚಿವ ವಿ. ಸೋಮಣ್ಣ ವಾಗ್ದಾನ
  • ದುರ್ಗದ ಮೇಲು ಸೇತುವೆಗೆ ಭೂಮಿ ಪೂಜೆ
  • ದುರ್ಗದ ಮೇಲು ಸೇತುವೆಗೆ ಭೂಮಿ ಪೂಜೆ
ಚಿತ್ರದುರ್ಗ: ನಗರದ ದಾವಣಗೆರೆ ಮಾರ್ಗದ ಎಲ್‌ಸಿ-೨೨ರ ಮೇಲು ಸೇತುವೆ ನಿರ್ಮಾಣ ಕಾಮಗಾರಿ ೧೫ ತಿಂಗಳಲ್ಲಿ ಪೂರ್ಣಗೊಳ್ಳಲಿದೆ ಎಂದು ಕೇಂದ್ರ ರೈಲ್ವೆ, ಜಲಶಕ್ತಿ ರಾಜ್ಯ ಸಚಿವ ವಿ. ಸೋಮಣ್ಣ ಭರವಸೆ ನೀಡಿದರು.
೩೨.೫೧ಕೋಟಿ ರೂ.ವೆಚ್ಚದಲ್ಲಿ ನಗರದ ರೈಲು ನಿಲ್ದಾಣ ಸಮೀಪದ ಆರ್‌ಒಬಿಗೆ ಭಾನುವಾರ ಭೂಮಿ ಪೂಜೆ ನೆರವೇರಿಸಿ ಮಾತನಾಡಿ, ೧೮೦೦ ಕೋಟಿ ರೂ. ವೆಚ್ಚದ ತುಮಕೂರು-ಚಿತ್ರದುರ್ಗ-ದಾವಣಗೆರೆ ೧೮೨ ಕಿ.ಮೀ. ಹೊಸ ನೇರ ರೈಲು ಮಾರ್ಗದ ಕಾಮಗಾರಿ ೨೦೨೯ ರೊಳಗೆ ಪೂರ್ಣವಾಗಲಿದೆ. ಇದಕ್ಕಾಗಿ ಅಗತ್ಯವನಿರುವ ೨೫೧೦ ಎಕರೆ ಭೂಮಿ ಪೈಕಿ ಶೇ.೯೨ರಷ್ಟು ಭೂಮಿ ರೈಲ್ವೆಗೆ ಹಸ್ತಾಂತರವಾಗಿದೆ. ೧೦ ಕಿ.ಮೀ. ಭಾಗದ ಭೂ ಸ್ವಾಽÃನ ಬಾಕಿ ಇದೆ ಎಂದು ತಿಳಿಸಿದರು.
ಜಿಲ್ಲೆಯ ಜನರ ೩೦ ವರ್ಷಗಳ ಈ ಬೇಡಿಕೆ ಈಡೇರುತ್ತಿದೆ. ೨೧೦ ಕೋಟಿ ರೂ. ವೆಚ್ಚದಲ್ಲಿ ಜಿಲ್ಲೆಯ ವಿವಿಧೆಡೆ ನಿರ್ಮಿಸುತ್ತಿರುವ ೩೨ ಆರ್‌ಯುಬಿ ಹಾಗೂ ೨ ಆರ್‌ಒಬಿಗಳ ಕಾಮಗಾರಿ ಎಂಟತ್ತು ತಿಂಗಳ ಒಳಗೆ ಪೂರ್ಣಗೊಳ್ಳಲಿವೆ. ಅಮೃತ್ ಯೋಜನೆಯಡಿ ೧೨ ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ ಚಿತ್ರದುರ್ಗದ ಹೊಸ ರೈಲು ನಿಲ್ದಾಣವನ್ನು ಶೀಘ್ರ ಉದ್ಘಾಟಿಸಲಾಗುವುದು. ಚಿಕ್ಕ ಜಾಜೂರು ರೈಲು ನಿಲ್ದಾಣವನ್ನೂ ಆಧುನೀಕರಣ ಗೊಳಿಸಲಾಗುತ್ತಿದೆ ಎಂದು ತಿಳಿಸಿದರು.
ಚಿತ್ರದುರ್ಗ, ಹೊಳಲ್ಕೆರೆ ಹಾಗೂ ಮೊಳಕಾಲ್ಮೂರು ತಾಲೂಕುಗಳನ್ನು ಬರಪೀಡಿತ ತಾಲೂಕುಗಳ ಪಟ್ಟಿಗೆ ಸೇರಿಸುವಂತೆ ಕೇಂದ್ರಕ್ಕೆ ಪತ್ರ ಬರೆಯುವುದಾಗಿ ತಿಳಿಸಿದರು.
ಕುಡಾ ಅಧ್ಯಕ್ಷ ಎಂ.ಕೆ. ತಾಜ್‌ಪೀರ್, ಎಡಿಸಿ ಬಿ.ಟಿ. ಕುಮಾರಸ್ವಾಮಿ, ಮಾಜಿ ಶಾಸಕರಾದ ಜಿ.ಎಚ್. ತಿಪ್ಪಾರೆಡ್ಡಿ, ಎಸ್.ಕೆ. ಬಸವರಾಜನ್, ಹೆಚ್ಚುವರಿ ರೈಲ್ವೆ ವಿಭಾಗೀಯ ಅಽಕಾರಿ ಶಬ್ಬಾಸ್‌ಅಹ್ಮದ್, ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಟಿ. ತಿಪ್ಪೇಸ್ವಾಮಿ, ಉಪಾಧ್ಯಕ್ಷ ಡಾ. ಸಿದ್ದಾರ್ಥಗುಂಡಾರ್ಫಿ, ಮುಖಂಡ ಜಿ.ಎಸ್. ಅನಿತ್‌ಕುಮಾರ್ ಮತ್ತಿತರರು ಇದ್ದರು.
ಹಳಿಯೂರು ಆರ್‌ಒಬಿಗೆ ಶೀಘ್ರ ಭೂಮಿ ಪೂಜೆ
೮೩ ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಜಿಲ್ಲೆಯ ೩ ಮೇಲ್ಸೇತುವೆಗಳ ಪೈಕಿ ಇಂದು ೨ ಆರ್‌ಒಬಿಗಳಿಗೆ ಭೂಮಿ ಪೂಜೆ ಆಗಿದೆ. ೨೭ ಕೋಟಿ ರೂ. ವೆಚ್ಚದ ಹಳಿಯೂರು ಎಲ್‌ಸಿ-೧೫ರ ಆರ್‌ಒಬಿಗೆ ಶೀಘ್ರ ಭೂಮಿ ಪೂಜೆ ಮಾಡಲಾಗುವುದು. ಚಿಕ್ಕಜಾಜೂರು ಬಳಿ ಗೇಟ್ ೧ರ ಆರ್‌ಒಬಿಗೆ ೨೪.೬೧ ಕೋಟಿ ರೂ. ವೆಚ್ಚವಾಗುತ್ತಿದೆ ಎಂದು ಸಂಸದ ಗೋವಿಂದ ಎಂ. ಕಾರಜೋಳ ತಿಳಿಸಿದರು.
ಹರಿಯಾಣದಲ್ಲಿ ಹೈಡ್ರೋಜನ್ ರೈಲಿಗೆ ಚಾಲನೆ ನೀಡಲಾಗಿದೆ. ಬುಲೆಟ್ ಟ್ರೆÊನ್ ಯೋಜನೆಯೂ ವೇಗದಲ್ಲಿ ಸಾಗುತ್ತಿದೆ. ದೇಶ ದಲ್ಲಿ ಅಂದಾಜು ೯೦೦೦ ಮಾನವರಹಿತ ಲೆವೆಲ್ ಕ್ರಾಸಿಂಗ್ ತೆಗೆದು ಮೇಲು/ಕೆಳ ಸೇತುವೆ ನಿರ್ಮಿಸಲಾಗಿದೆ. ೨೦೧೪ರಿಂದ ನಿತ್ಯ ೮.೫೭ ಕಿ.ಮೀ.ಮಾರ್ಗ ನಿರ್ಮಾಣವಾಗುತ್ತಿದೆ. ಎನ್‌ಡಿಎ ಅವಽಯಲ್ಲಿ ೩೪,೪೩೮ ಕಿ.ಮೀ. ಹೊಸ ರೈಲು ಮಾರ್ಗ ನಿ ರ್ಮಾಣವಾಗಿದೆ. ಯುಪಿಎ ಅವಽಯಲ್ಲಿದ್ದ ರೈಲ್ವೆ ಬಜೆಟ್ ೪೦-೫೦ ಸಾವಿರ ಕೋಟಿ ರೂ. ಮೊತ್ತವೀಗ ೨.೬೨ ಲಕ್ಷ ಕೋಟಿ ರೂ.ಗೆ ಏರಿದೆ ಎಂದು ವಿವರಿಸಿದರು.
"
"

ಮೇಲ್ಸೇತುವೆ ಕಾಮಗಾರಿ ಗುಣಮಟ್ಟದಲ್ಲಿ ರಾಜಿ ಆಗಬಾರದು. ಸಚಿವರು, ಅಽಕಾರಿಗಳು ಅತ್ಯುನ್ನತ ಗುಣಮಟ್ಟದ ಕಾಮಗಾರಿಗೆ ಉಸ್ತುವಾರಿ ಮಾಡಬೇಕು. ತಮ್ಮ ಕ್ಷೇತ್ರದಲ್ಲಿ ಈವರೆಗೂ ನಿರ್ಮಾಣವಾಗಿರುವ ಕೆಳ ಸೇತುವೆಗಳ ಕಾಮಗಾರಿ ಕಳಪೆಯಾಗಿವೆ. ಪ್ರತಿ ಬಾರಿಯೂ ಅವುಗಳನ್ನು ದುರಸ್ತಿ ಮಾಡುವ ಸ್ಥಿತಿ ನಿರ್ಮಾಣವಾಗಿದೆ. ಇಂಥ ಲೋಪಗಳು ಮತ್ತೆ ಮರುಕಳಿಸಬಾರದು.

ನಾಡಗೀತೆ ವೇಳೆ ವಿದ್ಯುತ್ ತೊಂದರೆ
ವಿದ್ಯುತ್ ಪೂರೈಕೆ ಅಡಚಣೆಯಿಂದಾಗಿ ಸಭಾ ಕಾರ್ಯಕ್ರಮದ ಆರಂಭದಲ್ಲಿ ನಾಡಗೀತೆ ಗಾಯನ ಮೊಟಕಾಯಿತು. ಇದಕ್ಕಾಗಿ ಸಚಿವ ಸೋಮಣ್ಣ ಕ್ಷಮೆಯಾಚಿಸುವುದಾಗಿ ಹೇಳಿದರು. ಅವರು ಮಾತನಾಡುವ ಸಂದರ್ಭದಲ್ಲೂ ಮತ್ತೊಮ್ಮೆ ವಿದ್ಯುತ್ ಪೂರೈಕೆಯಲ್ಲಿ ತೊಂದರೆ ಆಯಿತು. ಇದರಿಂದ ಮತ್ತೆ ಮುಜುಗರಕ್ಕೆ ಒಳಗಾದ ಸಚಿವರು, ಕಾರ್ಯಕ್ರಮದಲ್ಲಿ ಸಣ್ಣ ಪುಟ್ಟ ಯಡವಟ್ಟುಗಳಾಗಿವೆ ಎಂದರು.
ಶಿಷ್ಟಾಚಾರ ಉಲ್ಲಂಘನೆ ಆರೋಪ
ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಶಿಷ್ಟಾಚಾರ ಉಲ್ಲಂಘನೆಯಾಗಿದೆ ಎಂದು ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಽಕಾರದ ಅಧ್ಯಕ್ಷ ಆರ್. ಶಿವಣ್ಣ ಆರೋಪಿಸಿದರು. ಪ್ರತ್ಯೇಕ ಹೇಳಿಕೆ ನೀಡಿರುವ ಅವರು, ಶಿಷ್ಟಾಚಾರ ವ್ಯಾಪ್ತಿಯಲ್ಲಿರದ ಬಿಜೆಪಿ ಪ್ರಮುಖರನ್ನು ವೇದಿಕೆಯಲ್ಲಿ ಕೂರಿಸಿದ್ದಕ್ಕೆ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಜಿಲ್ಲಾಡಳಿತ ಈ ನಿಟ್ಟಿನಲ್ಲಿ ಕ್ರಮ ವಹಿಸಬೇಕೆಂದು ಆಗ್ರಹಿಸಿದ್ದಾರೆ.
ಚಿತ್ರದುರ್ಗದಲ್ಲಿ ಭಾನುವಾರ ರೈಲ್ವೆ ಮೇಲ್ಸೇತುವೆ ನಿರ್ಮಾಣಕ್ಕೆ ರೈಲ್ವೆ ಸಚಿವ ವಿ. ಸೋಮಣ್ಣ ಭೂಮಿ ಪೂಜೆ ನೆರವೇರಿಸಿದರು. ಸಂಸದ ಗೋವಿಂದ ಎಂ. ಕಾರಜೋಳ, ಶಾಸಕ ಕೆ.ಸಿ. ವೀರೇಂದ್ರಪಪ್ಪಿ, ಮಾಜಿ ಶಾಸಕ ಜಿ.ಎಚ್. ತಿಪ್ಪಾರೆಡ್ಡಿ ಮತ್ತಿತರರು ಇದ್ದರು.
ಆಲಮಟ್ಟಿ-ಚಿತ್ರದುರ್ಗ-ಕುಷ್ಟಗಿ ರೈಲು ಮಾರ್ಗಕ್ಕೆ ಡಿಸೆಂಬರ್‌ನೊಳಗೆ ಡಿಪಿಆರ್
ರೈಲ್ವೆ, ರಾಷ್ಟಿçÃಯ ಹೆದ್ದಾರಿ ಜಾಲ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಬದ್ಧವಾಗಿದೆ ಎಂದು ಕೇಂದ್ರ ರೈಲ್ವೆ, ಜಲಶಕ್ತಿ ರಾಜ್ಯ ಸಚಿವ ವಿ.ಸೋಮಣ್ಣ ಹೇಳಿದರು.
ನಗರದಲ್ಲಿ ೩೨ ಕೋಟಿ ರೂ.ವೆಚ್ಚದ ರೈಲ್ವೆ ಮೇಲ್ಸೇತುವೆ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿ ಮಾತನಾಡಿ, ವಿಶ್ವದ ಭೂಪಟದಲ್ಲಿ ಭಾರತವನ್ನು ಮುಂಚೂಣಿಯಲ್ಲಿ ನಿಲ್ಲಿಸಲು ಸಾರಿಗೆ ಮೂಲ ಸೌಕರ್ಯಗಳಿಗೆ ಆದ್ಯತೆ ನೀಡಲಾಗುತ್ತಿದೆ. ದೇಶಾದ್ಯಂತ ರೈಲ್ವೆ ವಿದ್ಯುದ್ಧೀಕರಣ ಶೇ.೯೯ರಷ್ಟು ಪೂರ್ಣಗೊಂಡಿದೆ. ಈ ವರ್ಷಾಂತ್ಯದೊಳಗೆ ಶೇ.೧೦೦ ಗುರಿ ಸಾಽಸಿ, ವಿಶ್ವ ದಾಖಲೆ ಬರೆಯಲಾಗುವುದು ಎಂದರು.
ಕುಕ್ಕೆ ಸುಬ್ರಹ್ಮಣ್ಯ ಮಾರ್ಗದ ವಿದ್ಯುದ್ದೀಕರಣ ಕಾರ್ಯ ೨ತಿಂಗಳಲ್ಲಿ ಪೂರ್ಣಗೊಳ್ಳಲಿದೆ. ಡಿಸೆಂಬರ್‌ಒಳಗೆ ಕರ್ನಾಟಕ ಶೇ.೧೦೦ ರೈಲ್ವೆ ವಿದ್ಯುದ್ದೀಕರಣ ಸಾಽಸಿದ ರಾಜ್ಯವೆಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ. ಆಲಮಟ್ಟಿ-ಯಾದಗಿರಿ ೧೬೨ ಕಿ.ಮೀ., ಭದ್ರಾವತಿ-ಚಿಕ್ಕಜಾಜೂರು ೭೩ ಕಿ.ಮೀ., ಮಾರ್ಗಗಳ ಸರ್ವೆಗೆ ಆದೇಶಿಸಲಾಗಿದೆ. ಆಲಮಟ್ಟಿ- ಚಿತ್ರದುರ್ಗ-ಕುಷ್ಟಗಿಯ ಅಂದಾಜು ೮೫೦೦ ಕೋಟಿ ರೂ. ವೆಚ್ಚದ, ೨೮೦ ಕಿ.ಮೀ. ಹೊಸ ಮಾರ್ಗಕ್ಕೆ ಡಿಸೆಂಬರ್ ಅಂತ್ಯದೊಳಗೆ ಡಿಪಿಆರ್ ಸಲ್ಲಿಕೆಯಾಗಲಿದೆ. ೪೭೫೮ ಕೋಟಿ ರೂ.ವೆಚ್ಚದ ಗುಂತಕಲ್-ವಾಡಿ ೩ನೇ ಮತ್ತು ೪ನೇ ೨೩೮ ಕಿ.ಮೀ. ರೈಲು ಮಾರ್ಗಕ್ಕೆ ಸಂಪುಟ ಅನುಮೋದನೆ ನೀಡಿದೆ ಎಂದರು.
ಕಳೆದ ೧೧ವರ್ಷಗಳಲ್ಲಿ ಕರ್ನಾಟಕ ರೈಲ್ವೆ ಯೋಜನೆಗಳಿಗೆ ೫೨ ಸಾವಿರ ಕೋಟಿ ರೂ.ಗಿಂತಲೂ ಅಽಕ ಅನುದಾನ ದೊರೆತಿದೆ. ಹೊಸ ರೈಲ್ವೆ ಮಾರ್ಗ ಯೋಜನೆಗಳಿಗೆ ೧೫ ಸಾವಿರ ಕೋಟಿ ರೂ. ನೀಡಲಾಗಿದೆ. ಗದಗ-ವಾಡಿ, ಗಿಣಿಗೇರಾ-ರಾಯಚೂರು, ಶಿವಮೊಗ್ಗ-ರಾಣೆಬೆನ್ನೂರು, ಕಡೂರು-ಚಿಕ್ಕಮಗಳೂರು-ಬೇಲೂರು ಹಾಗೂ ಆಲಮಟ್ಟಿ-ಯಾದಗಿರಿ, ಮಾರಿಕುಪ್ಪಂ-ಕುಪ್ಪA ರೈಲ್ವೆ, ತುಮಕೂರು-ದಾವಣಗೆರೆ,ಬಾಗಲಕೋಟೆ-ಕುಡಚಿ, ಧಾರವಾಡ-ಬೆಳಗಾವಿ ಮತ್ತಿತರ ಹೊಸ ಮಾರ್ಗ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದೆ.
ಚಿಕ್ಕಜಾಜೂರು-ಬಳ್ಳಾರಿ ೧೮೫ ಕಿ.ಮಿ.ಡಬ್ಲಿಂಗ್ ಯೋಜನೆಗೆ ೩೩೪೦ ಕೋಟಿ ರೂ.ಅನುದಾನ ಕೊಡಲಾಗಿದೆ. ರಾಜ್ಯದ ಪ್ರಮುಖ ರೈಲ್ವೆ ಯೋಜನೆಗಳಿಗೆ ಕಳೆದ ೨ ವರ್ಷಗಳಲ್ಲಿ ೧೬೦೦ ಎಕರೆ ಭೂಮಿಯನ್ನು ರಾಜ್ಯ ಸರ್ಕಾರದಿಂದ ಪಡೆಯಲಾಗಿದೆ. ಕರ್ನಾಟಕಕ್ಕೆ ಪ್ರಸಕ್ತ ರೈಲ್ವೆ ಬಜೆಟ್‌ನಲ್ಲಿ ೩೦೮೫ ಕೋಟಿ ರೂ.ವೆಚ್ಚದಲ್ಲಿ ಹೊಸಲೈನ್‌ಗಳು, ಡಬ್ಲಿಂಗ್‌ಗೆ ೧೫೩೪ ಕೋಟಿ ರೂ ಹಾಗೂ ಆರ್‌ಒಬಿ/ಆರ್‌ಯುಬಿ ೪೬೧ ಕೋಟಿ ರೂ. ಕೊಡಲಾಗಿದೆ. ೨೦೧೪ರಿಂದ ಅಂದಾಜು ೧೭೫೦ ಕಿ.ಮೀ. ಟ್ರ‍್ಯಾಕ್ ನಿರ್ಮಿಸಲಾಗಿದೆ. ಇನ್ನು ೨ ವರ್ಷಗಳಲ್ಲಿ ೭೦೦ ಕಿ.ಮೀ. ಹೊಸಲೈನ್‌ಗಳ ಅನುಷ್ಠಾನದೊಂದಿಗೆ ರಾಜ್ಯದಲ್ಲಿ ರೈಲ್ವೆ ವಿಸ್ತರಣೆ ಹೊಸ ಕ್ರಾಂತಿಯಾಗಲಿದೆ ಎಂದರು.
೨೦೨೬-೨೭ನೇ ಸಾಲಿನ ಹಣಕಾಸು ವರ್ಷದಲ್ಲಿ ದೇಶಾದ್ಯಂತ ರೈಲ್ವೆ ಅಭಿವೃದ್ಧಿಗೆ ದಾಖಲೆ ಮಟ್ಟದ ೨,೯೩,೦೩೦ ಕೋಟಿ ರೂ.ಹಂಚಿಕೆ ಆಗಿದೆ. ಇದು ೨೦೦೯-೨೦೧೪ರ ಅವಽಯಲ್ಲಿ ಕೊಟ್ಟಿದ್ದಕ್ಕಿಂತ ೯ ಪಟ್ಟು ಹೆಚ್ಚಾಗಿದೆ. ಕರ್ನಾಟಕಕ್ಕೆ ಈ ಸಾಲಿನಲ್ಲಿ ೭೭೪೮ ಕೋಟಿ ರೂ.ದೊರಕಿದೆ ಎಂದರು.
ಕವಚ್ ತಂತ್ರಜ್ಞಾನ
ಅಪಘಾತ ತಡೆಗೆ ಕವಚ್ ತಂತ್ರಜ್ಞಾನದಡಿ ರಾಷ್ಟçದಲ್ಲಿ ೧೦ ಸಾವಿರ ಇಂಜಿನ್‌ಗಳಲ್ಲಿ ಮತ್ತು ೧೫ ಸಾವಿರ ಕಿ.ಮಿ.ಗಳಲ್ಲಿ ಕವಚ್ ತಂತ್ರಜ್ಞಾನ ಅಳವಡಿಕೆ ಕಾರ್ಯ ಪ್ರಗತಿಯಲ್ಲಿದೆ. ಕರ್ನಾಟಕದಲ್ಲಿ ಅಂದಾಜು ೩೫೦೦ ಕಿ.ಮೀ. ಮಾರ್ಗದಲ್ಲಿ ಕವಚ್ ಅಳವಡಿಕೆಗೆ ಅನುಮೋದನೆ ದೊರೆತಿದೆ. ಯಾದಗಿರಿ ರೈಲು ಬೋಗಿ ಕಾರ್ಖಾನೆ ಉತ್ಪಾದನೆ ಸಾಮರ್ಥ್ಯ ಹೆಚ್ಚಿಸಲು ೨೦೦ ಕೋಟಿ ರೂ. ಬಿಡುಗಡೆಗೊಳಿಸಲಾಗಿದೆ.
ಕರ್ನಾಟಕದಲ್ಲಿ ೨೨ ಹೊಸ ರೈಲು ನಿಲ್ದಾಣಗಳು, ೭೩ ನಿಲುಗಡೆಗಳ ಮತ್ತು ೩೨ ರೈಲುಗಳ ಸಂಚಾರ ವಿಸ್ತರಣೆಯಾಗಿದೆ. ೨೦೪೭ ವಿಕಸಿತ ಭಾರತಕ್ಕೆ ಪೂರಕವಾಗಿ ಇಲಾಖೆ ಹತ್ತು ಹಲವು ಅಭಿವೃದ್ಧಿ ಕೆಲಸಗಳನ್ನು ಕೈಗೆತ್ತಿಕೊಳ್ಳುತ್ತಿದೆ ಎಂದು ಸಚಿವ ಸೋಮಣ್ಣ ವಿವರಿಸಿದರು.
ಮೈಸೂರು ವ್ಯಾಪ್ತಿಗೆ ನೈಋತ್ಯ ರೈಲ್ವೆ ಸೇರ್ಪಡೆ
ಮಂಗಳೂರು ರೈಲ್ವೆ ಪ್ರದೇಶವನ್ನು ದಕ್ಷಿಣ ರೈಲ್ವೆಯ ಪಾಲಕ್ಕಾಡ್ ವಿಭಾಗದಿಂದ ನೈಋತ್ಯ ರೈಲ್ವೆ ಮೈಸೂರು ವಿಭಾಗದ ವ್ಯಾಪ್ತಿಗೆ ತಂದಿರುವ ಐತಿಹಾಸಿಕ ನಿರ್ಧಾರ ಕರ್ನಾಟಕಕ್ಕೆ ಪ್ರಧಾನಿ ಮೋದಿ ಅವರು ಕೊಟ್ಟಿರುವ ನ್ಯಾಯವಾಗಿದೆ ಎಂದು ಕೇಂದ್ರ ರೈಲ್ವೆ ರಾಜ್ಯ ಸಚಿವ ವಿ. ಸೋಮಣ್ಣ ಹೇಳಿದರು.
ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಈಗಾಗಲೇ ಆದೇಶವಾಗಿದೆ. ಇದರಲ್ಲಿ ಯಾವುದೇ ಸಣ್ಣ ಅಪಚಾರವಾಗಿಲ್ಲ. ಪ್ರಾಥಮಿಕ ಹಂತದಿAದ ಚರ್ಚಿಸಿ, ಸೂಕ್ತ ಫಾಲೋಅಪ್, ಪರಿಶೀಲನೆ ಬಳಿಕ ತೆಗೆದುಕೊಂಡಿರುವ ನಿರ್ಧಾರವಿದು. ಕೇರಳಂ ಜನರು ಪ್ರತಿಭಟನೆ ಮಾಡಲಿ, ನಮ್ಮ ಜನರು ಬದುಕಬೇಕಲ್ಲವೇ ಎಂದು ಪ್ರಶ್ನಿಸುವ ಮೂಲಕ, ಹೋರಾಟಕ್ಕೆ ಕೇಂದ್ರ ಜಗ್ಗುವುದಿಲ್ಲವೆಂಬ ಸುಳಿವು ನೀಡಿದರು.
ಮುಂದಿನ ಲೋಕಸಭೆ ಚುನಾವಣೆ ಅವಽಯೊಳಗೆ ದಾವಣಗೆರೆ-ತುಮಕೂರು ನೇರ ರೈಲು ಮಾರ್ಗ ಶೇ.೧೦೦ ಪೂರ್ಣಗೊಳ್ಳಲಿದೆ ಎಂದರು. ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿರುವ ಬಿ. ನಾಗೇಂದ್ರ ಅವರು ಕಾಂಗ್ರೆಸ್ ಷಡ್ಯಂತ್ರಕ್ಕೆ ಬಲಿಯಾಗಿದ್ದಾರೆ. ಆರೋಪಗಳಿರುವುದು ಗೊತ್ತಿದ್ದರೂ ಮತ್ತೆ ಅವರನ್ನು ಮಂತ್ರಿ ಮಾಡಿದ್ದು ತಪ್ಪು. ಮಂತ್ರಿಯನ್ನು ಒಂದು ಸಮುದಾಯಕ್ಕೆ ಸೀಮಿತಗೊಳಿಸುವುದು ಸರಿಯಲ್ಲ. ಕೆಪಿಎಸ್‌ಇ ಹಗರಣದ ತನಿಖೆ ಆರಂಭವಾಗಿದೆ, ಎಲ್ಲವೂ ಬಯಲಾಗಲಿದೆ, ಯಾರು ಏನೆಂದು ಗೊತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಹರಿಪ್ರಸಾದ್ ಹೇಳಿಕೆಗೆ ಪ್ರತಿಕ್ರಿಯಿಸಲು ನಿರಾಕರಿಸಿದರು.
ಸಂಸದ ಗೋವಿಂದ ಎಂ. ಕಾರಜೋಳ ಮಾತನಾಡಿ, ಕಳೆದ ಲೋಕಸಭಾ ಚುನಾವಣೆಯಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಅನುದಾನ ದುರುಪಯೋಗ ಪಡಿಸಿಕೊಂಡಿರುವ ಕಾಂಗ್ರೆಸ್ ದಲಿತರಿಗೆ ಅನ್ಯಾಯ ಮಾಡಿದೆ. ಕಾಂಗ್ರೆಸ್ ಆಡಳಿತದಲ್ಲಿ ದಲಿತರು ಮತ್ತು ಅಲ್ಪಸಂಖ್ಯಾತರಿಗೆ ಅನ್ಯಾಯವಾಗುತ್ತಿದೆ. ತುಮಕೂರಿನ ರಾಜಣ್ಣ ಅವರನ್ನು ಮಂತ್ರಿ ಮಂಡಳದಿAದ ಕೈಬಿಡಲಾಗಿದೆ. ನಿಗಮದ ಅನುದಾನ ಬೊಕ್ಕಸಕ್ಕೆ ಮರಳುವವರೆಗೆ ನಮ್ಮ ಹೋರಾಟ ಮುಂದುವರಿಯಲಿದೆ ಎಂದರು.
ರೈಲ್ವೆ ಮೇಲ್ಸೇತುವೆ ನಿರ್ಮಾಣಕ್ಕೆ ಚಾಲನೆ
ಚಿಕ್ಕಜÁಜೂರು: ಚಿಕ್ಕಜÁಜೂರಿನ ರೈಲ್ವೆ ಗೇಟ್ ೧ ರ ಮೇಲ್ಸೇತುವೆ ನಿರ್ಮಾಣ ಕಾಮಗಾರಿಗೆ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಭಾನುವಾರ ಚಾಲನೆ ನೀಡಿದರು.
ಕೇಂದ್ರದಲ್ಲಿ ಯುಪಿಎ ಸರ್ಕಾರ ಇದ್ದಾಗ, ಕರ್ನಾಟಕಕ್ಕೆ ಕೇವಲ ೩೮೦ ಕೋಟಿ ರೂ. ಅನುದಾನ ನೀಡಲಾಗುತ್ತಿತ್ತು. ಮೋದಿ ಸ ರ್ಕಾರ ೫೨,೦೦೦ ಕೋಟಿ ರೂ. ಅನುದಾನ ನೀಡಿದೆ. ಮೋದಿ ಅವರ ನೇತೃತ್ವದಲ್ಲಿ ೧೪ ಸಾವಿರ ಮೇಲ್ಸೇತುವೆಗಳನ್ನು ನಿ ರ್ಮಿಸಲಾಗಿದೆ. ರೈಲ್ವೆ ಇಲಾಖೆ ಅಭಿವೃದ್ಧಿ ಕಾಮಗಾರಿಗಳಿಗೆ ರಾಜ್ಯ ಸರ್ಕಾರ ತನ್ನ ಪಾಲಿನ ಅನುದಾನ ಬಿಡುಗಡೆ ಮಾಡದೆ ನಿರ್ಲಕ್ಷ್ಯ ತೋರಿದೆ ಎಂದು ಆಪಾದಿಸಿದರು. ಸಾಸಲು ಬಳಿ ಮೇಲ್ಸೇತುವೆ ನಿರ್ಮಾಣದ ಬಗ್ಗೆ ವಾರದೊಳಗೆ ಅಽಕಾರಿಗಳೊಂದಿಗೆ ಚರ್ಚಿಸಿ ನಿರ್ಮಿಸಿಕೊಡುವ ಭರವಸೆ ನೀಡಿದರು.
ಶಾಸಕ ಡಾ.ಎಂ. ಚಂದ್ರಪ್ಪ ಮಾತನಾಡಿ, ಈ ಹಿಂದೆ ೨೨ ಸೇತುವೆಗಳ ನಿರ್ಮಾಣಕ್ಕೆ ಅನುದಾನ ಬಿಡುಗಡೆಗೆ ರಾಜ್ಯದ ಕಾಂಗ್ರೆ ಸ್ ಸರ್ಕಾರಕ್ಕೆ ಮನವಿ ಮಾಡಿದ್ದೆ. ಕಾಂಗ್ರೆಸ್ ಸರ್ಕಾರ ನಮ್ಮ ಮನವಿಗೆ ಸ್ಪಂದಿಸದೆ, ಕೇಂದ್ರ ಸರ್ಕಾರಕ್ಕೂ ಮನವಿ ಪತ್ರ ಕಳಿಸದೆ,
ನಿರ್ಲರ್ಕ್ಷ್ಯ ತೋರಿತ್ತು. ಈಗ ಸಚಿವ ವಿ. ಸೋಮಣ್ಣ ಅವರ ಪ್ರಯತ್ನದಿಂದ ಸೇತುವೆ ನಿರ್ಮಾಣಕ್ಕೆ ೨೫.೧೫ ಕೋಟಿ ರೂ. ಅನುದಾನ ನೀಡಿರುವುದಕ್ಕೆ ಮೋದಿ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸುವಬುದಾಗಿ ತಿಳಿಸಿದರು. ಸಾಸಲು ಗ್ರಾಮದ ಭೂತಪ್ಪ ದೇವಸ್ಥಾನ ಬಳಿ ರೈಲ್ವೆ ರಸ್ತೆ ಇದ್ದು, ಅಲ್ಲಿಯೂ ಸೇತುವೆ ನಿರ್ಮಿಸಿ ಸಾರಿಗೆಗೆ ಹಾಗೂ ರೈತಾಪಿ ವರ್ಗದವರಿಗೆ ಅನುಕೂಲ ಮಾಡಿಕೊಡುವಂತೆ ಕೇಂದ್ರ ಸಚಿವರಲ್ಲಿ ಮನವಿ ಮಾಡಿದರು.
ಬರ ತಾಲೂಕು ಘೋಷಣೆಗೆ ಆಗ್ರಹ
ಮಳೆಯಾಗದ ಹಿನ್ನೆಲೆಯಲ್ಲಿ ಹೊಳಲ್ಕೆರೆ ತಾಲೂಕಿನ ರೈತರು ಸಂಕಷ್ಟದಲ್ಲಿದ್ದಾರೆ. ಕೆಲ ಗ್ರಾಮಗಳಲ್ಲಿ ಕುಡಿವ ನೀರಿಗೂ ಬರವಿದೆ. ರಾಜ್ಯ ಸರ್ಕಾರ ಹೊಳಲ್ಕೆರೆ ತಾಲೂಕನ್ನು ಬರಪೀಡಿತವೆಂದು ಪರಿಗಣಿಸುವಂತೆ ಜಿಲ್ಲಾ ಸಚಿವ ಟಿ. ರಘುಮೂರ್ತಿ ಅವರಿಗೆ ಮನವಿ ಮಾಡಲಾಗಿದೆ. ಶೀಘ್ರ ಸಚಿವ ಸಂಪುಟದಲ್ಲಿ ಚರ್ಚಿಸಿ, ಸೇರ್ಪಡೆ ಮಾಡಿಸುವುದಾಗಿ ಸಚಿವರು ಭರವಸೆ ನೀಡಿದ್ದಾರೆ ಎಂದು ಚಂದ್ರಪ್ಪ ತಿಳಿಸಿದರು.
ನಾಲ್ಕೂಪಟ್ಟು ಅಭಿವೃದ್ಧಿ
ಯುಪಿಎ ಸರ್ಕಾರ ಇದ್ದಾಗ ರೈಲ್ವೆ ಇಲಾಖೆಯಲ್ಲಿ ನಿರೀಕ್ಷಿತ ಅಭಿವೃದ್ಧಿ ಕೆಲಸಗಳು ಆಗಿರಲಿಲ್ಲ. ಮೋದಿ ಸರ್ಕಾರ ನಾಲ್ಕು ಪಟ್ಟು ಅಭಿವೃದ್ಧಿ ಸಾಽಸಿದೆ ಎಂದು ಸಂಸದ ಗೋವಿಂದ ಎಂ. ಕಾರಜೋಳ ಹೇಳಿದರು.
ದೇಶದೆಲ್ಲೆಡೆ ವಿದ್ಯುದ್ಧೀಕರಣ ಮಾಡಿ ಡೀಸೆಲ್ ಮೇಲಿನ ಖರ್ಚು ಗಣನೀಯವಾಗಿ ಕಡಿಮೆ ಮಾಡಲಾಗಿದೆ. ಖರ್ಚು ಮತ್ತಷ್ಟು ಕಡಿಮೆ ಮಾಡಲು ಹೈಡ್ರೋಜನ್ ರೈಲನ್ನು ಪರಿಚಯಿಸಲಾಗಿದೆ. ಹರಿಯಾಣ ರಾಜ್ಯದಲ್ಲಿ ಮೊದಲ ಬಾರಿಗೆ ಹೈಡ್ರೋಜನ್ ರೈಲು ಸಂಚಾರಕ್ಕೆ ಚಾಲನೆ ನೀಡಿರುವುದು ಮೋದಿ ಅವರ ದೂರದೃಷ್ಟಿಗೆ ಸಾಕ್ಷಿಯಾಗಿದೆ ಎಂದರು.
ಹೊಳಲ್ಕೆರೆ ರೈಲು ನಿಲ್ದಾಣದಲ್ಲಿ ಸಿದ್ಧಗಂಗಾ, ವಿಶ್ವಮಾನವ ಎಕ್ಸ್ಪ್ರೆಸ್ ರೈಲು, ಚಿಕ್ಕಜÁಜೂರಿನಲ್ಲಿ ಸಂಪರ್ಕ ಕ್ರಾಂತಿ ರೈಲು ನಿಲುಗಡೆಗೆ ಸೋಮಣ್ಣ ಅವರಿಗೆ ಮನವಿ ಮಾಡಿದರು.
ಚಿಕ್ಕಜÁಜೂರಿನ ಜನತಾ ಕಾಲನಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಸಿದ್ಧರಾಮೇಶ್ವರ ಪ್ರೌಢಶಾಲೆಗಳು ರೈಲು ನಿಲ್ದಾಣದ ಆಚೆ ಇದ್ದು, ಸುಮಾರು ೫೦೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ರೈಲು ಹಳಿ ದಾಟಿ ಶಾಲೆಗೆ ಹೋಗುವಂತಾಗಿದೆ. ಆದ್ದರಿಂದ ಸ್ಕೆÊವಾಕ್ ನಿರ್ಮಿಸುವಂತೆ ಶಿಕ್ಷಕರು ಮನವಿ ಸಲ್ಲಿಸಿದರು.
ಮನವಿ
ಇದಕ್ಕೆ ಸ್ಪಂದಿಸಿದ ಸಚಿವರು ಕೂಡಲೇ ಸ್ಕೆÊವಾಕ್ ನಿರ್ಮಿಸುವಂತೆ ರೈಲ್ವೆ ಇಲಾಖೆ ಅಽಕಾರಿಗಳಿಗೆ ಸೂಚನೆ ನೀಡಿದರು. ಮನವಿ ಸಲ್ಲಿಕೆ ರೈಲು ನಿಲ್ದಾಣದಲ್ಲಿ ಲಿ-ï್ಟ ವ್ಯವಸ್ಥೆ, ಎಕ್ಸ್ಪ್ರೆಸ್ ರೈಲುಗಳ ನಿಲುಗಡೆ, ಚಿಕ್ಕಜÁಜೂರು ಹಾಗೂ ಸಾಸಲು ರೈಲು ನಿಲ್ದಾಣ ಬಳಿಯ ಮೇಲು ಸೇತುವೆಗಳ ದುರಸ್ತಿ, ವಿದ್ಯುತ್ ದೀಪ ಅಳವಡಿಕೆ ಮತ್ತಿತರ ಬೇಡಿಕೆಗಳನ್ನೊಳಗೊಂಡ ಮನವಿ ಪತ್ರವನ್ನು ಚಿಕ್ಕಜÁಜೂರಿನ ವಾಯುವಿಹಾರಿ ಸಂಘದ ಸದಸ್ಯರು, ವಿವಿಧ ಗ್ರಾಮಗಳಿಂದ ಆಗಮಿಸಿದ್ದ ರೈತರಾದ ಜೆ. ಓಂಕಾರಸ್ವಾಮಿ, ವೆಂಕಟೇಶ್, ಸಾಸಲು ದೇವರಾಜ್ ಮೊದಲಾದವರು ಸಚಿವರಿಗೆ ಮನವಿ ಸಲ್ಲಿಸಿದರು.
ಎಡಿಸಿ ಕುಮಾರಸ್ವಾಮಿ, ಗ್ರಾಪಂ ಮಾಜಿ ಅಧ್ಯಕ್ಷ ಡಿ.ಸಿ. ಮೋಹನ್, ಬಿಜೆಪಿ ಮುಖಂಡರಾದ ಜಿ.ಬಿ. ಅಮಿತ್ ಕುಮಾರ್, ಪ್ರತಾಪ್, ರೈಲ್ವೆ ಇಲಾಖೆ ಅಽಕಾರಿಗಳು, ರೈತ ಮುಖಂಡರು ಮತ್ತು ಗ್ರಾಮಸ್ಥರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net