ವ್ಯವಸ್ಥಿತ ಜನಗಣತಿಗೆ ಕಾರ್ಯಯೋಜನೆ ರೂಪಿಸಿ

 ಚಿತ್ರದುರ್ಗದಲ್ಲಿ ಶುಕ್ರವಾರ ಜನಗಣತಿ ಸಿದ್ಧತೆ ಕುರಿತ ಪೂರ್ವಭಾವಿ ಸಭೆಯಲ್ಲಿ ಡಿಸಿ ಟಿ. ವೆಂಕಟೇಶ್, ಎಡಿಸಿ ಬಿ.ಟಿ. ಕುಮಾರಸ್ವಾಮಿ ಇತರರು ಇದ್ದರು.
ಚಿತ್ರದುರ್ಗದಲ್ಲಿ ಶುಕ್ರವಾರ ಜನಗಣತಿ ಸಿದ್ಧತೆ ಕುರಿತ ಪೂರ್ವಭಾವಿ ಸಭೆಯಲ್ಲಿ ಡಿಸಿ ಟಿ. ವೆಂಕಟೇಶ್, ಎಡಿಸಿ ಬಿ.ಟಿ. ಕುಮಾರಸ್ವಾಮಿ ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಅಽಕಾರಿಗಳಿಗೆ ಜಿಲ್ಲಾಽಕಾರಿ ನಿರ್ದೇಶನ|
  • ಏಪ್ರಿಲ್ ೧ರಿಂದ ಪ್ರಕ್ರಿಯೆ ಆರಂಭ
  • ಪರಿಣಾಮಕಾರಿ ಗಣತಿ
ಚಿತ್ರದುರ್ಗ: ಜಿಲ್ಲೆಯಲ್ಲಿ ವ್ಯವಸ್ಥಿತವಾಗಿ ಜನಗಣತಿ ನಡೆಸಲು ಸೂಕ್ತ ಕಾರ್ಯಯೋಜನೆ ರೂಪಿಸುವಂತೆ ಜಿಲ್ಲಾಽಕಾರಿ ಟಿ. ವೆಂಕ ಟೇಶ್ ಅಽಕಾರಿಗಳಿಗೆ ನಿರ್ದೇಶಿಸಿದರು.
ಡಿಸಿ ಕಚೇರಿಯಲ್ಲಿ ಶುಕ್ರವಾರ ೨೦೨೭ರ ಜನಗಣತಿ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಏಪ್ರಿಲ್೧ರಿಂದ ಅಽಕೃತವಾಗಿ ಜನ ಗಣತಿ ಪ್ರಕ್ರಿಯೆಗೆ ಚಾಲನೆ ಸಿಗಲಿದೆ. ಯಾವುದೇ ಲೋಪವಿಲ್ಲದೆ ಹಾಗೂ ಅತ್ಯಂತ ಪರಿಣಾಮಕಾರಿಯಾಗಿ ಗಣತಿ ನಡೆಸಲು ಜಿಲ್ಲೆಯನ್ನು ವಿವಿಧ ಬ್ಲಾಕ್‌ಗಳಾಗಿ ವಿಂಗಡಿಸಲಾಗಿದೆ ಎಂದು ತಿಳಿಸಿದರು.
ಜಿಲ್ಲಾ ಮಟ್ಟದಲ್ಲಿ ತಾವು ಮುಖ್ಯ ಜನಗಣತಿ ಅಽಕಾರಿ ಹಾಗೂ ಎಡಿಸಿ ಜಿಲ್ಲಾ ಜನಗಣತಿ ಅಽಕಾರಿಯಾಗಿ ಜವಾಬ್ದಾರಿ ನಿರ್ವಹಿಸ ಬೇಕಿದೆ. ತಹಸೀಲ್ದಾರ್‌ಗಳು, ಉಪವಿಭಾಗಾಽಕಾರಿ, ನಗರ ಸ್ಥಳೀಯ ಸಂಸ್ಥೆಗಳ ಪೌರಾಯುಕ್ತರು, ಮುಖ್ಯಾಽಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ಚಾರ್ಜ್ ಆಫೀಸರ್‌ಗಳಾಗಿ ಗಣತಿ ನೇತÊತ್ವ ವಹಿಸಬೇಕಾಗಿದೆ. ಜನಗಣತಿ ನಿರ್ದೇಶನಾಲಯದ ಅನುಸಾರ ಕಾರ್ಯನಿರ್ವಹಿಸಲು ಅಗತ್ಯ ಸಿದ್ಧತೆ ಕೈಗೊಳ್ಳಬೇಕು ಎಂದು ತಿಳಿಸಿದರು.
ಪ್ರತಿ ಮತಗಟ್ಟೆಗೆ ಒಬ್ಬ ಬಿಎಲ್‌ಒ ಇರಲಿದ್ದು, ಒಂದು ಮತಗಟ್ಟೆ ವ್ಯಾಪ್ತಿಯಲ್ಲಿ ೧೫೦ ರಿಂದ ೨೦೦ ಮನೆಗಳಿವೆ. ಪ್ರತಿ ೧೫೦ ರಿಂದ ೨೦೦ ಮನೆಗಳಿಗೆ ಒಬ್ಬರು ಗಣತಿದಾರ ನೇಮಕ ಹಾಗೂ ಪ್ರತಿ ಆರು ಗಣತಿದಾರರ ಕಾರ್ಯವೈಖರಿ ಉಸ್ತುವಾರಿಗೆ ಒಬ್ಬರು ಮೇಲ್ವಿಚಾರಕರನ್ನು ನೇಮಿಸಲಾಗುತ್ತದೆ.
ಎಸ್‌ಐಆರ್ ಹಾಗೂ ಶಾಲಾ, ಕಾಲೇಜುಗಳ ಪರೀಕ್ಷೆ ಮತ್ತು ಮೌಲ್ಯಮಾಪನ ಕಾರ್ಯಕ್ಕೆ ಅಡ್ಡಿಯಾಗದಂತೆ ಅಽಕಾರಿಗಳು ಹಾಗೂ ಸಿಬ್ಬಂದಿ ಪಟ್ಟಿ ಸಿದ್ದಪಡಿಸಬೇಕು ಎಂದು ತಿಳಿಸಿದರು.
ಎಡಿಸಿ ಬಿ.ಟಿ. ಕುಮಾರಸ್ವಾಮಿ, ಎಸಿ ಕಾಂತರಾಜ್, ಜಿಪಂ ಮುಖ್ಯ ಯೋಜನಾಽಕಾರಿ ಸಿ.ಎಸ್. ಗಾಯತ್ರಿ, ಡಿಡಿಪಿಐ ಎಂ.ಆರ್. ಮಂಜುನಾಥ್, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ರೇಷ್ಮಾ ಹಾನಗಲ್, ಚಿತ್ರದುರ್ಗ ನಗರಸಭೆ ಆಯುಕ್ತೆ ಎಸ್. ಲಕ್ಷಿ÷್ಮÃ ಮತ್ತಿತರ ಅಽಕಾರಿಗಳು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net