ಕೃಷಿ ಕಾಯ್ದೆ ಹಿಂಪಡೆಯಲು ಒತ್ತಾಯ

ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ
ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ
Published on

ಪ್ರಮುಖ ಮುಖ್ಯಾಂಶಗಳು

  • ಶಾಸಕ ದರ್ಶನ್ ಪುಟ್ಟಣ್ಣಯ್ಯ ಹೇಳಿಕೆ
  • ೨೩ರಂದು ಕೆ.ಎಸ್.ಪುಟ್ಟಣ್ಣಯ್ಯ ಜನ್ಮ ದಿನಾಚರಣೆ
  • ರೈತ ಸಮಾವೇಶ
ಚಿತ್ರದುರ್ಗ: ಮೈಸೂರಿನ ಇಲವಾಲದ ಸಂತೆಮೈದಾನದಲ್ಲಿ ರಾಜ್ಯ ರೈತ ಸಂಘದಿAದ ಡಿ.೨೩ ರಂದು ಬೃಹತ್ ರೈತ ಜಿಲ್ಲಾ ಸಮಾವೇಶ, ರೈತ ನಾಯಕ ಕೆ.ಎಸ್.ಪುಟ್ಟಣ್ಣಯ್ಯ ೭೬ನೇ ಜನ್ಮದಿನ ಹಾಗೂ ರೈತ ದಿನವನ್ನು ಆಚರಿಸಲಾಗುತ್ತಿದೆ ಎಂದು ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಹೇಳಿದರು.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅಂದು ಬೆಳಗ್ಗೆ ೧೧ ಗಂಟೆಗೆ ಪುಟ್ಟಣ್ಣಯ್ಯ ಅವರ ಪ್ರತಿಮೆ ಅನಾವರಣ ಹಾಗೂ ಮಧ್ಯಾಹ್ನ ೧೨ಗಂಟೆಗೆ ಸಮಾವೇಶ ನಡೆಯಲಿದೆ ಎಂದರು.
ಕೇAದ್ರ ಸರ್ಕಾರ ರೈತ ವಿರೋಽ ೩ ಕೃಷಿ ಕಾಯ್ದೆಗಳನ್ನು ಹಿಂಪಡೆದಿದ್ದರೂ ರಾಜ್ಯಸರ್ಕಾರ ಪಡೆದಿಲ್ಲ. ಬೆಳಗಾವಿ ಅಽವೇಶನದಲ್ಲಿ ಕರಾಳ ಕಾಯ್ದೆಗಳನ್ನು ಹಿಂಪಡೆಯದಿದ್ದರೆ ಸರ್ಕಾರಗಳ ವಿರುದ್ಧ ಹೋರಾಟಕ್ಕೆ ನಿರ್ಣಯಿಸಲಾಗುವುದು ಎಂದು ತಿಳಿಸಿದರು.
ಸ್ಥಳೀಯ ಉತ್ಪಾದಕತೆ, ಪಂಚಾಯಿತಿ ಮಟ್ಟದಲ್ಲಿ ವಹಿವಾಟು ವೃದ್ಧಿಗೊಳಿಸುವ ಮೂಲಕ ರೈತರ ಆರ್ಥಿಕ ಸಬಲೀಕರಣಕ್ಕೆ ಒತ್ತು ನೀಡಬೇಕಿದೆ. ಈ ನಿಟ್ಟಿನಲ್ಲಿ ಸಹಕಾರಿ ಸಂಘಗಳ ಬಲವರ್ಧನೆ ಆಗಬೇಕು. ಮಣ್ಣಿನ ಫಲವತ್ತತೆ, ಬಹು ಬೆಳೆ ಪದ್ಧತಿ, ನೀರಿನ ಸದ್ಬ ಳಕೆ ಬಗ್ಗೆ ರೈತರಲ್ಲಿ ಜಾಗೃತಿ ಮೂಡಿಸಬೇಕಿದೆ ಎಂದರು.
ಅಪಾಯಕಾರಿ ಕೀಟನಾಶಕಗಳ ಬಳಕೆಯಿಂದ ಮಣ್ಣಿನ ಫಲವತ್ತತೆ ನಾಶದ ಜತೆಗೆ ಜನರ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುತ್ತಿದೆ. ಕೇಂದ್ರದ ನೀತಿಯಿಂದಾಗಿ ರಾಜ್ಯ ಸರ್ಕಾರಗಳಿಗೆ ಕೀಟನಾಶಕಗಳ ಬಳಕೆ ನಿಷೇಽಸುವ ಅಽಕಾರವಿಲ್ಲ. ಆದರೆ ನಿಯಂತ್ರಿಸಬಹುದಾಗಿದೆ. ಕೇಂದ್ರದ ಉದ್ದೇಶಿತ ಕೀಟನಾಶಕ ಕಾಯ್ದೆಯಲ್ಲಿ ಕೀಟನಾಶಕಗಳ ಬಳಕೆ ಮೇಲೆ ನಿಷೇಧ ವಿಽಸುವ
ಅಽಕಾರವನ್ನು ರಾಜ್ಯ ಸರ್ಕಾರಗಳಿಗೆ ಕೊಡಬೇಕೆಂದು ಶಾಸಕರು ಒತ್ತಾಯಿಸಿದರು.
ರಾಜ್ಯರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಮಾತನಾಡಿ, ಹರಿಹರದ ಪ್ರೊ.ಬಿ.ಕೃಷ್ಣಪ್ಪ ಸಭಾಭವನದಲ್ಲಿ ಡಿ.೨೦ ರಂದು ಯವಜನರಿಗೆ ಸಾಮಾಜಿಕ ಚಳವಳಿಗಳ ಕುರಿತು ಒಂದು ದಿನದ ಅಧ್ಯಯನ ಶಿಬಿರ ಏರ್ಪಡಿಸಲಾಗಿದೆ. ೨೧ರಂದು ಸುಂದರೇಶ್ ಸಂಸ್ಮರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ರಾಜ್ಯಾದ್ಯAತ ೧೦೦ ಜನರು ಅಧ್ಯಯನ ಶಿಬಿರದಲ್ಲಿ ಭಾಗವಹಿಸಲಿದ್ದಾರೆ. ಕರ್ನಾಟಕ ಭೂ ಸುಧಾರಣೆ ಕಾಯ್ದೆ ಸರಿಪಡಿಸುವ ಕಾಂಗ್ರೆಸ್ ಸರ್ಕಾರದ ಭರವಸೆ ಈಡೇರಿಲ್ಲ. ಕೇಂದ್ರ ಮೂರು ಕೃಷಿ ಕಾಯ್ದೆ ಹಿಂಪಡೆದಿದ್ದರೂ, ಇನ್ನೂ ಅತ್ಯಂತ ಕರಾಳವಾದ ಕÊಷಿ ಮಾರುಕಟ್ಟೆ ಚೌಕಟ್ಟು ನೀತಿ, ಸೀಡ್ಸ್ ಆ್ಯಕ್ಟ್, ವಿದ್ಯುತ್ ಸಂಬAಽ ಕಾಯ್ದೆ ಜಾರಿಗೊಳಿಸಲು ಸಜ್ಜಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಉಪಾಧ್ಯಕ್ಷ ಕೆ.ಪಿ.ಭೂತಯ್ಯ ಮಾತನಾಡಿ, ರಸ್ತೆ ಮಾರ್ಗದಲ್ಲಿ ಅದಿರು ಸಾಗಾಣಿಕೆಯಿಂದ ಚಿತ್ರದುರ್ಗ ತಾಲೂಕು ಭೀಮಸಮುದ್ರ ಸುತ್ತಮುತ್ತಲಿನ ೧೬ ಗ್ರಾಮಗಳಿಗೆ ತೀವ್ರ ಸಮಸ್ಯೆಗಳಾಗುತ್ತಿವೆ. ಈ ಹಿನ್ನೆಲೆ ಡಿ.೨೨ರಂದು ಭೀಮಸಮುದ್ರದಲ್ಲಿ ರಸ್ತೆ ತಡೆ ಚಳವಳಿ ನಡೆಸಲಾಗುವುದು. ಬೆಳೆವಿಮೆ ಪರಿಹಾರ ಹಾಗೂ ಬೆಳೆ ನಷ್ಟ ಪರಿಹಾರವನ್ನು ಸರ್ಕಾರ ಕೂಡಲೇ ರೈತರ ಖಾತೆಗಳಿಗೆ ಜಮಾ ಮಾಡಬೇಕು ಎಂದರು.
ಶಿವಾನAದ ಕುಗ್ವೆ, ಕೆ.ಸಿ.ಹೊರಕೇರಪ್ಪ, ಹಂಪಯ್ಯನಮಾಳಿಗೆ ಧನಂಜಯ, ಸುರೇಶ್‌ಬಾಬು ಬಸ್ತಿಹಳ್ಳಿ, ಎ.ಗೋವಿಂದರಾಜ್, ಕೆಂಪೇಗೌಡ, ಸಿದ್ದನಗೌಡ, ಅರುಣಕುಮಾರ್ ಕುರುಡಿ, ಚಿಕ್ಕಪ್ಪನಹಳ್ಳಿ ರುದ್ರಸ್ವಾಮಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net