ಪಿಎಸ್‌ಐ ಅಮಾನತುಗೊಳಿಸಲು ಆಗ್ರಹ

ಚಿಕ್ಕಜಾಜೂರು ಠಾಣೆಯ ಪಿಎಸ್‌ಐ ನೇತ್ರಾವತಿ ಅಮಾನತಿಗೆ ಆಗ್ರಹಿಸಿ ಎಸ್ಪಿ ರಂಜಿತ್‌ಕುಮಾರ್ ಬಂಡಾರು ಅವರಿಗೆ ಚಿತ್ರದುರ್ಗದಲ್ಲಿ ಬುಧವಾರ ಕರುನಾಡ ವಿಜಯಸೇನೆ ಕಾರ್ಯಕರ್ತರು ಮನವಿ ಸಲ್ಲಿಸಿದರು. ಕೆ.ಟಿ.ಶಿವಕುಮಾರ್, ವೀಣಾ ಗೌರಣ್ಣ, ಗೋಪಿನಾಥ್ ಇತರರಿದ್ದರು.

Published on

ಪ್ರಮುಖ ಮುಖ್ಯಾಂಶಗಳು

  • psi
  • ಚಿಕ್ಕಜಾಜೂರು ಪೊಲೀಸ್ ಠಾಣೆ
  • ಪಥಸಂಚಲನ
ಚಿತ್ರದುರ್ಗ: ಜಿಲ್ಲೆಯ ಚಿಕ್ಕಜಾಜೂರು ಪೊಲೀಸ್ ಠಾಣೆಯ ೧೨ ಮಂದಿ ಸಿಬ್ಬಂದಿಯನ್ನು ಇತ್ತೀಚೆಗೆ ೩ ಗಂಟೆ ಸುಡು ಬಿಸಿಲಿನಲ್ಲಿ ನಿಲ್ಲಿಸಿ, ಶಿಕ್ಷೆ ವಿಽಸಿರುವ ಅಲ್ಲಿನ ಪಿಎಸ್‌ಐ ನಡೆ ಖಂಡಿಸಿ ಕರುನಾಡ ವಿಜಯಸೇನೆ ಕಾರ್ಯಕರ್ತರು ಬುಧವಾರ ಪ್ರತಿಭಟನೆ ನಡೆಸಿದರು.
ಬಿಸಿಲಿನಲ್ಲಿ ಪಥಸಂಚಲನ ಹಾಗೂ ಬಂದೂಕು ಹೊತ್ತು ನಿಲ್ಲುವ ಶಿಕ್ಷೆ ನೀಡಿರುವ ಪಿಎಸ್‌ಐ ನೇತ್ರಾವತಿ ಸರ್ವಾಽಕಾರಿಯಂತೆ ವರ್ತಿಸಿರುವುದು ಸರಿಯಲ್ಲ. ಕೂಡಲೇ ಅವರನ್ನು ಅಮಾನತುಗೊಳಿಸಬೇಕು ಎಂದು ಜಿಲ್ಲಾ ಪೊಲೀಸ್ ಇಲಾಖೆಗೆ ಒತ್ತಾಯಿಸಿ ಮನವಿ ಸಲ್ಲಿಸಿದರು.
ನಿರ್ಲಕ್ಷ್ಯ ತೋರುವ ಸಿಬ್ಬಂದಿ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು ಮೇಲಽಕಾರಿಗಳ ಗಮನಕ್ಕೆ ತರಬಹುದಿತ್ತು. ಈ ರೀತಿ ಶಿಕ್ಷೆ ವಿಽಸುವುದು ಯಾವ ನ್ಯಾಯ ಎಂದು ಪ್ರಶ್ನಿಸಿದರು.
ಆದ್ದರಿಂದ ಪಿಎಸ್‌ಐ ಅವರನ್ನು ಅಮಾನತುಗೊಳಿಸಬೇಕು ಎಂದು ಕೋರಿದರು. ಸಂಘಟನೆ ಜಿ¯್ಲÁಧ್ಯಕ್ಷ ಕೆ.ಟಿ.ಶಿವಕುಮಾರ್, ಮಹಿಳಾಧ್ಯಕ್ಷೆ ವೀಣಾ ಗೌರಣ್ಣ, ಪದಾಽಕಾರಿಗಳಾದ ಗೋಪಿನಾಥ್, ಜಗದೀಶ್, ಪ್ರದೀಪ್, ಮುಜಾಹಿದ್, ಅವಿನಾಶ್, ಶಶಿ, ನಿಸಾರ್ ಅಹಮದ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net