ಬಕ್ರೀದ್ ಹಬ್ಬದ ಸಂದರ್ಭದಲ್ಲಿ ಗೋವುಗಳ ಅಕ್ರಮ ಸಾಗಾಣಿಕೆ, ಹತ್ಯೆ ತಡೆಗಟ್ಟುವ ಕುರಿತು ಕಠಿಣ ಕ್ರಮ ಕೈಗೊಳ್ಳುವಂತೆ ವಿಶ್ವ ಹಿಂದೂ ಪರಿಷತ್, ಬಜರಂಗದಳದ ಕಾರ್ಯಕರ್ತರು ಚಿತ್ರದುರ್ಗದಲ್ಲಿ ಸೋಮವಾರ ಎಡಿಸಿ ಬಿ.ಟಿ.ಕುಮಾರಸ್ವಾಮಿ ಅವರಿಗೆ ಮನವಿ ಸಲ್ಲಿಸಿದರು. ಸಂದೀಪ್, ತೇಜೇಶ್ವರ್ ಎಂ.ಜೆ. ಮಠ್, ರಾಮಾಂಜನೇಯ, ಪ್ರೇಮ್ ಇತರರಿದ್ದರು.
ವಿಎಚ್‌ಪಿ, ಬಜರಂಗದಳ ಕಾರ್ಯಕರ್ತರಿಂದ ಜಿಲ್ಲಾಡಳಿತಕ್ಕೆ ಮನವಿ
ಜಿಲ್ಲಾಡಳಿತಕ್ಕೆ ಮನವಿ
ಚಿತ್ರದುರ್ಗ: ಬಕ್ರೀದ್ ಹಬ್ಬದ ಸಂದರ್ಭದಲ್ಲಿ ಗೋವುಗಳ ಅಕ್ರಮ ಸಾಗಾಣಿಕೆ, ಹತ್ಯೆ ತಡೆಗಟ್ಟುವ ಕುರಿತು ಕಠಿಣ ಕ್ರಮ ಕೈಗೊ ಳ್ಳುವಂತೆ ವಿಶ್ವ ಹಿಂದೂ ಪರಿಷತ್, ಬಜರಂಗದಳದ ಕಾರ್ಯಕರ್ತರು ಸೋಮವಾರ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
ರಾಜ್ಯದಾದ್ಯಂತ ಕಾನೂನು ಬಾಹಿರವಾಗಿ ಪ್ರಾಣಿಗಳ ಸಾಗಾಣಿಕೆ ಮತ್ತು ಗೋಹತ್ಯೆ (ಕುರ್ಬಾನಿ) ನಡೆಯುವ ಸಾಧ್ಯತೆಯಿದೆ. ಇದನ್ನು ತಡೆಯಲು ಪೊಲೀಸ್ ಇಲಾಖೆಯ ಪ್ರತಿ ಠಾಣಾ ವ್ಯಾಪ್ತಿಯಲ್ಲಿ ಗಸ್ತು ಹೆಚ್ಚಿಸಬೇಕು ಎಂದು ಒತ್ತಾಯಿಸಿದರು.
ಅಕ್ರಮ ಕಸಾಯಿ ಖಾನೆಗಳನ್ನು ಗುರುತಿಸಿ ದಾಳಿಗಳ ಮೂಲಕ ಗೋಹತ್ಯೆ ತಡೆಗೆ ಶಾಶ್ವತ ಪರಿಹಾರ ನೀಡಬೇಕು. ಹತ್ಯೆ ನಡೆದ ಮನೆ, ಕಟ್ಟಡ, ಖಾಲಿ ಜಮೀನುಗಳನ್ನು ಜಪ್ತಿ ಮಾಡಿ ಸರ್ಕಾರ ಮುಟ್ಟುಗೋಲು ಹಾಕಬೇಕು. ಆರೋಪಿಗಳಿಗೆ ೭ ವರ್ಷ ಶಿಕ್ಷೆ, ವಧೆ ಅಥವಾ ಅದಕ್ಕೆ ಯತ್ನಿಸಿದ್ದಲ್ಲಿ ಪ್ರತಿ ಜಾನುವಾರು ಲೆಕ್ಕಕ್ಕೆ ೧ ಲಕ್ಷ ರೂ. ದಂಡ ವಿಽಸಬೇಕು ಎಂದು ಆಗ್ರಹಿಸಿದರು.
ಅನಽಕೃತ ಸ್ಥಳ, ಕಟ್ಟಡಗಳಲ್ಲಿ ಕಟ್ಟಿ ಹಾಕಿದ ಜಾನುವಾರುಗಳನ್ನು ವಧೆಗಾಗಿ ತಯಾರಿ ಎಂದು ಪರಿಗಣಿಸಿ ಸ್ವಾಽÃನ ಪಡಿಸಿಕೊ ಳ್ಳಬೇಕು. ಅವುಗಳನ್ನು ಯಾರಿಗೂ ಹಿಂದಿರುಗಿಸದೆ ಸರ್ಕಾರಿ ಗೋಶಾಲೆಗೆ ಹಸ್ತಾಂತರಿಸಬೇಕು ಎಂದು ಒತ್ತಾಯಿಸಿದರು.
ರಾಜ್ಯದಲ್ಲಿ ಅಕ್ರಮ ಗೋವುಗಳ ಸಾಗಾಟ ನಡೆಯುತ್ತಿದ್ದು, ಜಾನುವಾರು ಸಂತೆ ಹಾಗೂ ಅದರ ಸುತ್ತಮುತ್ತಲು ಕನಿಷ್ಟ ೧೦ ಕಿ.ಮೀ ವ್ಯಾಪ್ತಿಯಲ್ಲಿ ಬಿಗಿ ಪೊಲೀಸ್ ಬಂದೋ ಬಸ್ತ್ ಕೈಗೊಳ್ಳಬೇಕು. ಕಸಾಯಿಖಾನೆಗಳಲ್ಲಿ ಗೋ ಮಾಂಸ ಖರೀದಿಸುವವರನ್ನು ಅಪರಾಽ ಎಂದು ಪರಿಗಣಿಸಿ ಶಿಕ್ಷೆಗೆ ಗುರಿಪಡಿಸಬೇಕು. ಬಳಸಿದ ವಾಹನಗಳನ್ನು ವಶಕ್ಕೆ ಪಡೆಯಬೇಕು ಎಂದು ಕೋರಿದರು.
ಶಿವಮೊಗ್ಗ ವಿಭಾಗ ಸಹ ಸಂಯೋಜಕ ಸಂದೀಪ್, ಜಿ¯್ಲÁ ಗೋರಕ್ಷಾ ಪ್ರಮುಖ್ ತೇಜೇಶ್ವರ್ ಎಂ.ಜೆ. ಮಠ್, ಪದಾಽಕಾರಿ ಗಳಾದ ರಾಮಾಂಜನೇಯ, ಪ್ರೇಮ್, ದರ್ಶನ್, ಸಿz್ದÁರ್ಥ್, ನವೀನ್, ಗಿರೀಶ್, ಸಂತೋಷ್ ಇತರರಿದ್ದರು.