ಅದಿರು ಲಾರಿಗಳಿಂದಾಗುತ್ತಿರುವ ಸಮಸ್ಯೆ ನಿವಾರಣೆಗೆ ಒತ್ತಾಯ

ಕಬ್ಬಿಣದ ಅದಿರು ಸಾಗಿಸುವ ಲಾರಿಗಳಿಂದ ಉಂಟಾಗುತ್ತಿರುವ ಸಮಸ್ಯೆ ನಿವಾರಿಸುವಂತೆ ಆಗ್ರಹಿಸಿ ಕರವೇ (ಪ್ರವೀಣ್ ಶೆಟ್ಟಿ ಬಣ)ಚಳ್ಳಕೆರೆ ತಾಲೂಕು ಘಟಕದ ಕಾರ್ಯಕರ್ತರು ಬುಧವಾರ ಚಿತ್ರದುರ್ಗದಲ್ಲಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು. ಪಿ. ಮಂಜುನಾಥ, ಸಿ. ಭೋಜರಾಜ್ ಇತರರು ಇದ್ದರು.
ಕಬ್ಬಿಣದ ಅದಿರು ಸಾಗಿಸುವ ಲಾರಿಗಳಿಂದ ಉಂಟಾಗುತ್ತಿರುವ ಸಮಸ್ಯೆ ನಿವಾರಿಸುವಂತೆ ಆಗ್ರಹಿಸಿ ಕರವೇ (ಪ್ರವೀಣ್ ಶೆಟ್ಟಿ ಬಣ)ಚಳ್ಳಕೆರೆ ತಾಲೂಕು ಘಟಕದ ಕಾರ್ಯಕರ್ತರು ಬುಧವಾರ ಚಿತ್ರದುರ್ಗದಲ್ಲಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು. ಪಿ. ಮಂಜುನಾಥ, ಸಿ. ಭೋಜರಾಜ್ ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಕರವೇ ಚಳ್ಳಕೆರೆ ಘಟಕದಿಂದ ಮನವಿ ಸಲ್ಲಿಕೆ
  • ಸಾರ್ವಜನಿಕರ ಆರೋಗ್ಯ
  • ಬೆಳೆಗಳಿಗೆ ಹಾನಿಯಾಗುತ್ತಿದೆ.
ಚಿತ್ರದುರ್ಗ: ಚಳ್ಳಕೆರೆ ನಗರದ ಬೆಂಗಳೂರು ರಸ್ತೆಯಲ್ಲಿ ಕಬ್ಬಿಣದ ಅದಿರು ಸಾಗಣೆ ಲಾರಿಗಳಿಂದ ಉಂಟಾಗುತ್ತಿರುವ ಧೂಳು, ರಸ್ತೆ ಸಮಸ್ಯೆ ನಿವಾರಿಸುವಂತೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ(ಪ್ರವೀಣ್‌ಶೆಟ್ಟಿ ಬಣ)ಚಳ್ಳಕೆರೆ ತಾಲೂಕು ಘಟಕದ ಕಾರ್ಯಕರ್ತರು ಜಿಲ್ಲಾಽಕಾರಿಗೆ ಬುಧವಾರ ಮನವಿ ಸಲ್ಲಿಸಿದರು.
ಚಳ್ಳಕೆರೆ ನಗರದ ರೈಲ್ವೆ ನಿಲ್ದಾಣದಿಂದ ಹೆಗ್ಗೆರೆ ಭಾಗದಲ್ಲಿರುವ ಕಬ್ಬಿಣದ ಕಾರ್ಖಾನೆಗೆ ಯಾವುದೇ ಸುರಕ್ಷತಾ ಕ್ರಮಗಳನ್ನು ಪಾಲಿ ಸದೆ ನೂರಾರು ಟಿಪ್ಪರ್ ಲಾರಿಗಳ ಮೂಲಕ ನಿತ್ಯ ಕಬ್ಬಿಣದ ಅದಿರು ಸಾಗಿಸಲಾಗುತ್ತಿದೆ. ಇದರಿಂದ ಬೆಂಗಳೂರು ರಸ್ತೆಯಲ್ಲಿ ಉಂಟಾಗುತ್ತಿರುವ ಧೂಳಿನಿಂದ ಸಾರ್ವಜನಿಕರ ಆರೋಗ್ಯಕ್ಕೆ ಹಾಗೂ ಬೆಳೆಗಳಿಗೆ ಹಾನಿಯಾಗುತ್ತಿದೆ.
ರಸ್ತೆಗಳ ಪರಿಸ್ಥಿತಿ ಹದಗೆಡುತ್ತಿದೆ. ಇನ್ನು ರೈಲ್ವೆ ಸೇತುವೆ ಬಳಿ ಜಾಗ ಕಿರಿದಾಗಿರುವುದರಿಂದ ಹಾಗೂ ಲಾರಿಗಳು ವೇಗವಾಗಿ ಸಂಚರಿಸುವುದರಿAದ ಶಾಲೆ, ಕಾಲೇಜಿಗಳಿಗೆ ಹೋಗುವ ವಿದ್ಯಾರ್ಥಿಗಳು ಅಪಾಯ ಎದುರಿಸುವಂತಾಗಿದೆ. ಆದ್ದರಿಂದ ಸುರಕ್ಷತೆಗೆ ಸಂಬAಽಸಿದAತೆ ಜಿಲ್ಲಾಡಳಿತ ಸೂಕ್ತ ಕ್ರಮ ವಹಿಸಬೇಕು. ಇಲ್ಲವಾದಲ್ಲಿ ಡಂಪಿAಗ್‌ಯಾರ್ಡ್ ಸ್ಥಳದಲ್ಲಿ ನಿರಶನ ಹಮ್ಮಿಕೊಳ್ಳ ಲಾಗುವುದು ಎಂದು ಎಚ್ಚರಿಕೆ ನೀಡಿ ಡಿಸಿ ಕಚೇರಿ ತಹಸೀಲ್ದಾರ್ ತನುಜಾ ಪಿ. ಸವದತ್ತಿ ಅವರಿಗೆ ಮನವಿ ಸಲ್ಲಿಸಿದರು.
ವೇದಿಕೆ ತಾಲೂಕು ಘಟಕದ ಅಧ್ಯಕ್ಷÀ ಪಿ. ಮಂಜುನಾಥ, ಗೌರವ ಅಧ್ಯಕ್ಷ ಸಿ. ಭೋಜರಾಜ್, ಮರಿಕುಂಟೆ ಚಂದ್ರಣ್ಣ, ಪಿ. ಗಿರೀಶ್, ಮೋದಿನ್, ಶೇಖರ್, ಇ. ಮಂಜುನಾಥ್, ತಿಪ್ಪೇಸ್ವಾಮಿ, ಬೋರಯ್ಯ ಹಾಗೂ ವೇದಿಕೆಯ ನಾಯಕನಹಟ್ಟಿ ಘಟಕದ ಪದಾಽಕಾರಿಗಳು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net