ಹೆಚ್ಚಿಸಿದ ಮೀಸಲು ಪ್ರಮಾಣ ಶೆಡ್ಯೂಲ್ ೯ಕ್ಕೆ ಸೇರಿಸಲು ಆಗ್ರಹ
ಚಿತ್ರದುರ್ಗದಲ್ಲಿ ಶುಕ್ರವಾರ ಸಂಸದ ಗೋವಿಂದ ಎಂ. ಕಾರಜೋಳ ಅವರ ಕಚೇರಿ ಎದುರು ಭಾರತ ಕಮ್ಯುನಿಸ್ಟ್ ಪಕ್ಷ(ಮಾರ್ಕ್ಸ್ವಾದಿ)ದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಡಿ.ಎಂ. ಮಲಿಯಪ್ಪ, ಟಿ. ತಿಪ್ಪೇಸ್ವಾಮಿ, ಟಿ. ನಿಂಗಣ್ಣ, ಎಚ್.ಓ. ನಾಗರಾಜ್, ಸಿ.ಕೆ. ಗೌಸ್‌ಪೀರ್, ನೇರ್ಲಹಳ್ಳಿ ನಾಗರಾಜ್, ಎಚ್.ಒ. ನಾಗರಾಜ್, ಶಿವಮ್ಮ ಇತರರು ಇದ್ದರು.
ಚಿತ್ರದುರ್ಗ: ರಾಜ್ಯದ ಪರಿಶಿಷ್ಟ ಜÁತಿ, ಪರಿಶಿಷ್ಟ ಪಂಗಡಕ್ಕೆ ಹೆಚ್ಚಿಸಲಾಗಿರುವ ಮೀಸಲು ಪ್ರಮಾಣ ಅನುಷ್ಠಾನಕ್ಕೆ ಭಾರತ ಸರ್ಕಾರ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಮುತುವರ್ಜಿ ವಹಿಸುವಂತೆ ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್ವಾದಿ)ದ ಕಾರ್ಯ ಕರ್ತರು ಸಂಸದ ಗೋವಿಂದ ಎಂ. ಕಾರಜೋಳ ಅವರ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದರು.
ಪರಿಶಿಷ್ಟ ಜÁತಿ ಮತ್ತು ಪರಿಶಿಷ್ಟ ಪಂಗಡದ ಮೀಸಲಾತಿ ಪ್ರಮಾಣ ಹೆಚ್ಚಿಸಿರುವ ಕರ್ನಾಟಕ ಸರ್ಕಾರದ ತೀರ್ಮಾನಕ್ಕೆ ಕೇಂದ್ರದ ಎನ್‌ಡಿಎ ಸರ್ಕಾರ ಕೂಡಲೇ ಅನುಮೋದನೆ ನೀಡಿ ಸಂವಿಧಾನದ ಷೆಡ್ಯೂಲï-೯ ರಲ್ಲಿ ಸೇರಿಸಬೇಕು. ಕೇಂದ್ರದಲ್ಲಿ ಇರುವಂತೆ ಶೇ.೧೭ ಮತ್ತು ಶೇ.೭ರ ಮೀಸಲು ಜÁರಿಗೆ ಅನುವು ಮಾಡಿಕೊಡಬೇಕು. ಇದಕ್ಕಾಗಿ ರಾಜ್ಯದ ಸಂಸದರು ಕೇಂದ್ರದ ಮೇಲೆ ಒತ್ತಡ ತರಬೇಕು ಎಂದು ಆಗ್ರಹಿಸಿದರು.
ಷೆಡ್ಯೂಲï-೯ ಕ್ಕೆ ಸೇರಿಸದೇ ಇರುವುದು ಇಂದಿನ ಸಮಸ್ಯೆಗೆ ಒಂದು ಪ್ರಧಾನ ಅಂಶವಾಗಿದೆ ಎನ್ನುವುದನ್ನು ಗಂಭೀರವಾಗಿ ಪರಿ ಗಣಿಸ ಬೇಕು. ನಿರುದ್ಯೋಗ ಸಮಸ್ಯೆಯನ್ನು ಅರ್ಥಮಾಡಿಕೊಂಡು ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿಯಿರುವ ಹುz್ದೆಗ ಳಿಗೆ ನೇಮಕಾತಿ ಮಾಡಬೇಕು. ಬ್ಯಾಕ್‌ಲಾಗ್ ಹುz್ದÉಗಳನ್ನು ಯಾವುದೇ ಕಾರಣಕ್ಕೂ ಸಾಮಾನ್ಯ ಗುಂಪಿಗೆ ವರ್ಗಾಯಿಸ ಬಾ ರದು. ಹಾಗೆಯೇ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿಯಿರುವ ಮೂರು ಲಕ್ಷ ಉದ್ಯೋಗಗಳನ್ನು ತುಂಬಬೇಕು ಎಂದು ಒತ್ತಾಯವಿಸಿದರು.
ಇತ್ತೀಚಿನ ವರ್ಷಗಳಲ್ಲಿ ಸಾರ್ವಜನಿಕ ಕ್ಷೇತ್ರದ ಉದ್ದಿಮೆಗಳು ಮತ್ತು ಸಂಸ್ಥೆಗಳಲ್ಲಿ ಕಾಯಂ ನೇಮಕಾತಿ ಸ್ಥಗಿತಗೊಂಡAತಾಗಿದೆ. ಇದರಿಂದ ವಾಸ್ತವವಾಗಿ ಮೀಸಲಾತಿಯೇ ಇಲ್ಲದಂತಾಗಿದೆ. ಎಲ್ಲ ಸಾರ್ವಜನಿಕ ರಂಗಗಳಲ್ಲೂ ಕಾಯಂ ಉದ್ಯೋಗಗಳನ್ನು ಭರ್ತಿ ಮಾಡಿ ಮೀಸಲಾತಿ ರಕ್ಷಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ರೋಸ್ಟರ್ ಬಿಂದುವಿನಲ್ಲಿರುವ ಲೋಪದೋಷಗಳನ್ನು ಮೊದಲು ಸರಿಪಡಿಸಿ ಎಲ್ಲ ಜÁತಿಯವರಿಗೂ ಒಳ ಮೀಸಲಾತಿ
ಅನ್ವಯವಾಗುವಂತೆ ನೇರ ನೇಮಕಾತಿ ಮಾಡಿಕೊಳ್ಳಬೇಕು ಎಂದು ಆಗ್ರಹಿಸಿದರು.
ಸಂಘದ ಪದಾಽಕಾರಿಗಳಾದ ಡಿ.ಎಂ. ಮಲಿಯಪ್ಪ, ಟಿ. ತಿಪ್ಪೇಸ್ವಾಮಿ, ಟಿ. ನಿಂಗಣ್ಣ, ಎಚ್.ಓ. ನಾಗರಾಜ್, ಸಿ.ಕೆ. ಗೌಸ್‌ಪೀರ್, ನೇರ್ಲಹಳ್ಳಿ ನಾಗರಾಜ್, ಎಚ್.ಒ. ನಾಗರಾಜ್, ಶಿವಮ್ಮ, ವೆಂಕಟೇಶ್, ಪ್ರಭು ಕೆ. ನಾಗರಾಜ್, ಜಯಣ್ಣ ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.