ಭದ್ರಾ ಕಾಡಾ ವ್ಯಾಪ್ತಿಗೆ ಚಿತ್ರದುರ್ಗ ಸೇರ್ಪಡೆಗೆ ಆಗ್ರಹ

ಬಿ.ಎ.ಲಿಂಗಾರೆಡ್ಡಿ
ಬಿ.ಎ.ಲಿಂಗಾರೆಡ್ಡಿ
Published on

ಚಿತ್ರದುರ್ಗ:

ಭದ್ರಾ ಜಲಾಶಯದ ಕಾಡಾ ವ್ಯಾಪ್ತಿಗೆ ಚಿತ್ರದುರ್ಗ ಜಿಲ್ಲೆ ಸೇರಿಸುವಂತೆ ಜಿಲ್ಲಾ ನೀರಾವರಿ ಅನುಷ್ಠಾನ ಹೋರಾಟ ಸಮಿತಿ ರಾಜ್ಯ ಸರ್ಕಾರವನ್ನು ಒತ್ತಾಯಿಸಿದೆ.

ಮಧ್ಯ ಕರ್ನಾಟಕದ ಬಯಲು ಸೀಮೆ ಪ್ರದೇಶಗಳ ನೀರಾವರಿಗೆ ಭದ್ರಾ ಮೇಲ್ದಂಡೆ ಯೋಜನೆ ಜಾರಿಯಾಗಿದೆ. ಇದಕ್ಕೆ ೨೯.೯೦ ಟಿಎಂಸಿ ನೀರು ಹಂಚಿಕೆ ಆಗಿದ್ದು, ಭದ್ರಾಅಚ್ಚು ಕಟ್ಟು ಪ್ರದೇಶಕ್ಕೆ ಚಿತ್ರದುರ್ಗ ಒಳಪಟ್ಟಿದ್ದರೂ ಕಾಡಾದಿಂದ ಚಿತ್ರದುರ್ಗ ಜಿಲ್ಲೆ ಜನಪ್ರತಿನಿಽಗಳು ಹಾಗೂ ರೈತ ಹೋರಾಟಗಾರರನ್ನು ಹೊರಗಿಡಲಾಗಿದೆ ಎಂದು ಸಮಿತಿ ಪ್ರಮುಖರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
೧.೦೫ ಲಕ್ಷ ಹೆಕ್ಟೇರ್ ಭದ್ರಾ ಅಚ್ಚು ಕಟ್ಟು ಪ್ರದೇಶವಿದೆ. ಮುಂಗಾರು ಹಂಗಾಮಿಗೆ ಅಂದಾಜು ೩೪.೬೨ ಟಿಎಂಸಿ ನೀರು ಬೇಕಾ ಗುತ್ತದೆ. ಕಾಲುವೆಗೆ ನೀರು ಹಾಯಿಸುವಂತೆ ದಾವಣಗೆರೆ ರೈತರು ಒತ್ತಡ ತಂದಿದ್ದರಿAದ ಮಂಗಳವಾರ ಸಚಿವ ಮಧು ಬಂಗಾರ ಪ್ಪ ಅಧ್ಯಕ್ಷತೆಯಲ್ಲಿ ನಡೆದ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ದಾವಣಗೆರೆ ಹಾಗೂ ಶಿಮೊಗ್ಗ ಜಿಲ್ಲೆ ಸಚಿವರು, ಶಾಸಕರು, ರೈತಮುಖಂಡರು ಪಾಲ್ಗೊಂಡಿದ್ದರು.
ಈ ಸಭೆಯಲ್ಲಿ ಮುಂಗಾರು ಹಂಗಾಮಿಗೆ ಭದ್ರಾ ಜಲಾಶಯದಿಂದ ದಾವಣಗೆರೆ ಹಾಗೂ ಶಿವಮೊಗ್ಗ ಜಿಲ್ಲೆಗಳಿಗೆ ೧೨೪ ದಿನ ನೀರು ಹಾಯಿಸಲು ೩೨.೬೨ ಟಿಎಂಸಿ ಹಾಗೂ ಭದ್ರಾ ಮೇಲ್ದಂಡೆಗೆ ೧೨.೪೦ ಟಿಎಂಸಿ ನೀರು ಬಿಡುಗಡೆ ಕುರಿತು ಚರ್ಚೆಯಾಗಿದ್ದರೂ ನೀರು ಹರಿಸುವ ಕುರಿತು ತೀರ್ಮಾನಕ್ಕೆ ಬರಲಾಗದೆ ಅಂತಿಮ ನಿರ್ಣಯಕ್ಕಾಗಿ ಸಿಎಂ ಡಿ.ಕೆ. ಶಿವಕುಮಾರ್ ಅವರನ್ನು ಕೋರಲು ನಿರ್ಧರಿಸಲಾಗಿದೆ.
ಭದ್ರಾ ಜಲಾಶಯದಲ್ಲಿ ಪಾಲಿದ್ದರೂ ಕಾಡಾ, ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಪಾಲ್ಗೊಂಡು ಚಿತ್ರದುರ್ಗ ಜಿಲ್ಲೆ ರೈತರ ಹಿತ ರಕ್ಷಣೆಗೆ ಯಾರೂ ಇಲ್ಲದಂತಾಗಿದೆ. ಇದು ನೀರು ಪಡೆಯಲು ಹಿನ್ನಡೆ ಉಂಟು ಮಾಡುವ ಸಾಧ್ಯತೆ ಇದೆ. ಈ ಬಗ್ಗೆ ಜಿಲ್ಲೆಯ ಜನ ಪ್ರತಿನಿಽಗಳು ಆಲೋಚಿಸದೆ ಇರುವುದನ್ನು ಜಿಲ್ಲಾ ನೀರಾವರಿ ಅನುಷ್ಠಾನ ಹೋರಾಟ ಸಮಿತಿ ಖಂಡಿಸುತ್ತದೆ. ಕಾಡಾ ವ್ಯಾಪ್ತಿಗೆ ಚಿತ್ರದುರ್ಗ ಜಿಲ್ಲೆ ಸೇರ್ಪಡೆ ಕೋರಿ ಹಿಂದಿನ ಜಲಸಂಪನ್ಮೂಲ ಸಚಿವರಾಗಿದ್ದ ಡಿ.ಕೆ.ಶಿವಕುಮಾರ್‌ಗೆ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ.
ಚಿತ್ರದುರ್ಗ ಜಿಲ್ಲೆಯಿಂದ ಸಚಿವ ಟಿ.ರಘುಮೂರ್ತಿ ಸೇರಿ ಐವರು ಶಾಸಕರು, ಇಬ್ಬರು ವಿಧಾನ ಪರಿಷತ್ ಸದಸ್ಯರು ಕಾಡಾ ವ್ಯಾಪ್ತಿ ಗೆ ಒಳಪಡಬೇಕಾಗುತ್ತದೆ. ನೀರಾವರಿ ಸಲಹಾ ಸಮಿತಿ ಸಭೆ ಕರೆದಾಗ ನಮ್ಮ ಪ್ರದೇಶದ ನೀರಿನ ಹಕ್ಕನ್ನು ಪ್ರತಿಪಾದಿಸಲು ಸಾಧ್ಯವಾಗುತ್ತದೆ.
ಆದ್ದರಿಂದ ರಾಜ್ಯಸರ್ಕಾರ ಕೂಡಲೇ ಭದ್ರಾ ಕಾಡಾ ವ್ಯಾಪ್ತಿಗೆ ಚಿತ್ರದುರ್ಗ ಜಿಲ್ಲೆಯನ್ನು ಸೇರಿಸಬೇಕು. ಚಿತ್ರದುರ್ಗ ಶಾಖಾ ಕಾಲು ವೆ ಕಾಮಗಾರಿ ಮುಗಿದಿರುವುದರಿಂದ ವಾರದೊಳಗೆ ಭದ್ರಾ ನೀರು ಹಾಯಿಸಿ ಹೊಳಲ್ಕೆರೆ ತಾಲೂಕಿನ ಎಲ್ಲ ಕೆರೆಗಳು ಹಾಗೂ ಗೋನೂರು ಕೆರೆವರೆಗೆ ನೀರು ಪೂರೈಕೆ ಮಾಡಬೇಕೆಂದು ಸಮಿತಿ ಕಾರ್ಯಾಧ್ಯಕ್ಷ ಬಿ.ಎ.ಲಿಂಗಾರೆಡ್ಡಿ, ಕೆ.ಆರ್. ದಯಾನಂದ, ಚಿಕ್ಕಪ್ಪನಹಳ್ಳಿ ಷಣ್ಮುಖ, ಹಂಪಯ್ಯನಮಾಳಿಗೆ ಧನಂಜಯ, ಜಿ. ಸುರೇಶ್‌ಬಾಬು ಅವರು ಹೇಳಿಕೆಯಲ್ಲಿ ಆಗ್ರಹಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net