ಚಿತ್ರದುರ್ಗ : ಜಿಲ್ಲೆಯಲ್ಲಿ ಮುಂಗಾರು ಮಳೆ ಕೈಕೊಟ್ಟಿದ್ದು, ಬರಪೀಡಿತ ಪ್ರದೇಶ ಘೋಷಿಸುವಂತೆ ರಾಜ್ಯ ಸರ್ಕಾರವನ್ನು ಒತ್ತಾ ಯಿಸಿ ರೈತಸಂಘ ಹಾಗೂ ಹಸಿರುಸೇನೆ (ಹುಚ್ಚವ್ವನಹಳ್ಳಿ ಮಂಜುನಾಥ್)ಕಾರ್ಯಕರ್ತರು ಸೋಮವಾರ ಪ್ರತಿಭಟನೆ ನಡೆಸಿ ದರು.
ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿದ ಕಾರ್ಯಕರ್ತರು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತ ವಿರೋಽ ನೀತಿ ಅನುಸರಿಸುತ್ತಿವೆ ಎಂದು ಽಕ್ಕಾರ ಕೂಗಿದರು. ಬರಪೀಡಿತ ಪ್ರವೇಶ ಘೋಷಣೆ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಜಿ¯್ಲÁಡಳಿ ತದ ಮೂಲಕ ಸಿಎಂಗೆ ಮನವಿ ರವಾನಿಸಿದರು.
ಮುಂಗಾರು ಮಳೆ ನಂಬಿದ್ದ ರೈತರು ಸಾಲ ಮಾಡಿ ಬೀಜ, ಗೊಬ್ಬರ ಖರೀದಿಸಿ ಬಿತ್ತನೆ ಮಾಡಿz್ದÁರೆ. ವರುಣ ಕೃಪೆ ತೋರದ ಪರಿಣಾಮ ದಿಕ್ಕು ತೋಚದಂತಾಗಿದ್ದಾರೆ. ಸಾಲ ಮರು ಪಾವತಿಗೆ ರೈತರ ಮೇಲೆ ಒತ್ತಡ ಹಾಕಬಾರದು ಎಂದು ಆಗ್ರಹಿಸಿದರು.
ಸರ್ಕಾರಿ ಗೋಮಾಳದಲ್ಲಿ ಉಳುಮೆ ಮಾಡುತ್ತಿರುವ ರೈತರಿಗೆ ಬೆಳೆ ಪರಿಹಾರ ನೀಡಬೇಕು. ಚಿಕ್ಕಬೆನ್ನೂರು ಗ್ರಾಮದ ರಿ.ಸ.ನಂ ೬೯ರ -Àಲಾನುಭವಿಗೆ ನಿವೇಶನ ಹಕ್ಕು ಪತ್ರ ವಿತರಿಸಬೇಕು. ರಾಷ್ಟಿçÃಕೃತ ಬ್ಯಾಂಕ್‌ಗಳಲ್ಲಿ ರೈತರು ಪಡೆದ ಬೆಳೆ ಸಾಲ ಸಂ ಪೂರ್ಣ ಮನ್ನಾಮಾಡಬೇಕು ಎಂದು ಒತ್ತಾಯಿಸಿದರು.
ಸಂಘದ ಜಿ¯್ಲÁಧ್ಯಕ್ಷ ಪಿ. ಸೂರಪ್ಪ, ಪದಾಽಕಾರಿಗಳಾದ ಶೇಖರಪ್ಪ ಡಿ. ಮೆದಕೇರಿಪುರ, ಚಂದ್ರಪ್ಪ, ಅಜ್ಜಪ್ಪ ಚಿಕ್ಕಬೆನ್ನೂರು, ತಣಿಗೆಹಳ್ಳಿ ಕುಮಾರಸ್ವಾಮಿ, ಸಿದ್ದರಾಜು, ಎನ್.ಟಿ. ಶಿವಣ್ಣ, ವಸಂತಕುಮಾರ್, ಕಾಗಲಗೆರೆ ನಿಂಗರಾಜು, ಮಂಜುನಾಥ ಬೊಮ್ಮನಹಳ್ಳಿ, ಚಂದ್ರಮ್ಮ, ಓಬಮ್ಮ, ಶಾರದಮ್ಮ, ಸರಸ್ವತಿ ಇತರರಿದ್ದರು.
ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಮನವಿ
ಚಿತ್ರದುರ್ಗ: ಜು.೨೪ರಂದು ಪ್ರದರ್ಶಿಸಲಿರುವ `ಸರ್ಕಾರಿ ನ್ಯಾಯಬೆಲೆ ಅಂಗಡಿ' ಚಲನಚಿತ್ರದ ವಿಶೇಷ ಪ್ರೀಮಿಯರ್ ಶೋಗೆ ಸಂಬAಽಸಿದ ಟೋಕನ್ ೧೫೦ ರೂ.ಗೆ ಮಾರಾಟ ಮಾಡಲಾಗುತ್ತಿದೆ ಎಂದು ಆರೋಪಿಸಿ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾ ಣ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘದ ಕಾರ್ಯಕರ್ತರು ಸೋಮವಾರ ಜಿ¯್ಲÁಡಳಿತಕ್ಕೆ ಮನವಿ ಸಲ್ಲಿಸಿದರು.
ರಾಜ್ಯ ಸರ್ಕಾರ ಅನ್ನಭಾಗ್ಯ ಯೋಜನೆಯ ಪಡಿತರ ವಿತರಣೆ ಸಂಬAಧ -Àಲಾನುಭವಿಗಳಲ್ಲಿ ಜಾಗೃತಿ ಮೂಡಿಸುವ ಉದ್ದೇಶ ದಿಂದ ಸರ್ಕಾರಿ ನ್ಯಾಯಬೆಲೆ ಅಂಗಡಿಯಲ್ಲಿ ಟೋಕನ್‌ಗಳನ್ನು ವಿತರಿಸಲಾಗುತ್ತಿದೆ. ಆದರೆ, ಇದಕ್ಕೆ ಹಣ ಪಡೆಯಲಾಗುತ್ತಿದೆ. ಕರ್ತವ್ಯ ಲೋಪವೆಸಗಿರುವ ಜಿಲ್ಲೆಯ ಆಹಾರ ಇಲಾಖೆ ಅಽಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
ರಾಜ್ಯದ ಎಲ್ಲ ಜಿ¯್ಲÉ, ತಾಲೂಕುಗಳಲ್ಲೂ ಈ ಸಿನಿಮಾ ಪ್ರದರ್ಶನಕ್ಕೆ ಅನುವು ಮಾಡಿಕೊಡುವಂತೆ ಆಹಾರ ಇಲಾಖೆ ಆಯುಕ್ತರು ಪ್ರತಿ ಜಿ¯್ಲÉಯ ಜಂಟಿ ನಿರ್ದೇಶಕರು ಹಾಗೂ ಉಪನಿರ್ದೇಶಕರಿಗೆ ಸೂಚಿಸಿz್ದÁರೆ. ಆದರೆ, ಒಂದು ಟೋಕನ್‌ಗೆ ೧೫೦ ರೂ. ಪಡೆಯಬೇಕೆಂದು ನಿರ್ದೇಶಿಸಿಲ್ಲ ಎಂದು ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ವೈ. ಕುಮಾರ್ ತಿಳಿಸಿದರು.
ಟೋಕನ್ ಮೇಲೆ ಒಬ್ಬರಿಗೆ ಮಾತ್ರ ಪ್ರವೇಶವೆಂದು ಇದೆಯೇ ಹೊರತು ದರವಾಗಲಿ, ಉಚಿತವೆಂದಾಗಲೀ ಮುದ್ರಿಸಿಲ್ಲ. ಹೀಗಿರುವಾಗ ಹಣ ಪಡೆದು ಮಾರಾಟ ಮಾಡುವುದು ಸರಿಯಲ್ಲ ಎಂದರು. ಸAಘದ ಗೌರವಾಧ್ಯಕ್ಷ ಕೆ. ರಾಜಣ್ಣ, ಸಹ ಕಾರ್ಯದರ್ಶಿ ಎಂ. ತಿಮ್ಮಯ್ಯ ಇತರರಿದ್ದರು.