ಎಕರೆಗೆ 20ಸಾವಿರ ರೂ. ಪರಿಹಾರ ನೀಡಲು ಒತ್ತಾಯ compensation
ಬರ ಅಧ್ಯಯನ, ವಿಪತ್ತು ನಿರ್ವಹಣೆ ಕುರಿತ ತಾಲೂಕು ಮಟ್ಟದ ಪ್ರಗತಿ ಪರಿಶೀಲನಾ ಸಭೆ ನಡೆಸಲು ಮೊಳಕಾಲ್ಮೂರಿಗೆ ಸೋಮವಾರ ಆಗಮಿಸಿದ್ದ ಸಚಿವ ಟಿ.ರಘುಮೂರ್ತಿ ಅವರಿಗೆ ರೈತಸಂಘದ ಪದಾಧಿಕಾರಿಗಳು ನಾನಾ ಬೇಡಿಕೆಗಳ ಮನವಿ ಪತ್ರ ಸಲ್ಲಿಸಿದರು. ಶಾಸಕರಾದ ಎನ್.ವೈ. ಗೋಪಾಲಕೃಷ್ಣ, ವೀರೇಂದ್ರಪಪ್ಪಿ ಇತರರು ಇದ್ದರು. compensation
ಭದ್ರಾ ಮೇಲ್ದಂಡೆ ಯೋಜನೆಯಿಂದ ಹೊರಗುಳಿದ 14 ಕೆರೆಗಳಿಗೂ ನೀರು ತುಂಬಿಸಲು ಮನವಿ
ಮೊಳಕಾಲ್ಮೂರು:ತಾಲೂಕಿನಲ್ಲಿ ಬರದ ತಾಪಕ್ಕೆ ತುತ್ತಾಗಿರುವ ರೈತರ ಅನುಕೂಲಕ್ಕೆ ಎಕರೆಗೆ 20 ಸಾವಿರ ರೂ. ಪರಿಹಾರ ಘೋಷಣೆ ಮಾಡಬೇಕೆಂದು ಒತ್ತಾಯಿಸಿ ಸೋಮವಾರ ತಾಲೂಕು ಆಡಳಿತ ಸೌಧದ ಮುಂದೆ ರೈತರು ಪ್ರತಿಭಟನೆ ನಡೆಸಿದರು.
compensation
ಮೊಳಕಾಲ್ಮೂರು ಅತ್ಯಂತ ಬರಪೀಡಿತ ಪ್ರದೇಶ. ನೀರಾವರಿ ಸೌಲಭ್ಯಗಳಿಂದ ವಂಚಿತ ಪ್ರದೇಶವಾಗಿದೆ. ಪ್ರಸ್ತುತ ಭದ್ರಾ ಮೇಲ್ದಂಡೆ ಯೋಜನೆಯಡಿ 21ಕೆರೆಗಳಿಗೆ ನೀರು ತುಂಬಿಸುವ ಪ್ರಸ್ತಾವನೆ ಇದೆ. ಉಳಿದ 14 ಕೆರೆಗಳು ಯೋಜನೆಯಿಂದ ಹೊರಗುಳಿದಿವೆ. ಅವುಗಳಿಗೂ ನೀರು ತುಂಬಿಸುವ ಕಾರ್ಯವಾಗಬೇಕು. ಒಟ್ಟಾರೆಯಾಗಿ ಮೊಳಕಾಲ್ಮೂರು ತಾಲೂಕಿಗೆ 5 ಟಿಎಂಸಿ ನೀರು ಹಂಚಿಕೆ ಮಾಡಲು ಸಚಿವರು ಸರ್ಕಾರದ ಗಮನ ಸೆಳೆಯಬೇಕೆಂದು ಆಗ್ರಹಿಸಿದರು.
ಸತತ ಮಳೆಯ ಅಭಾವಕ್ಕೆ ತುತ್ತಾಗಿರುವ ಮೊಳಕಾಲ್ಮೂರು, ಚಳ್ಳಕೆರೆ ತಾಲೂಕುಗಳನ್ನು ಬರಪೀಡ ಪ್ರದೇಶ ಎಂದು ಸರ್ಕಾರ ಘೋಷಣೆ ಮಾಡಬೇಕು. ಎಕರೆಗೆ ಕನಿಷ್ಠ 20 ಸಾವಿರ ರೂ. ಪರಿಹಾರ ನೀಡಬೇಕು. ಜಾನುವಾರು ರಕ್ಷಣೆಗೆ ಶೀಘ್ರ ಗೋಶಾಲೆ ತೆರೆಯಬೇಕು. ದುಡಿಯುವ ಕೈಗಳಿಗೆ ಕೆಲಸ ಕೊಡಬೇಕು. ರೈತರ ಸಾಲ ಮನ್ನಾ ಮಾಡಲು ಸರ್ಕಾರಕ್ಕೆ ಮನವರಿಕೆ ಮಾಡುವಂತೆ ಆಗ್ರಹಿಸಿದರು.
ತಾಲೂಕಿನಲ್ಲಿ ಮಳೆಯಾಶ್ರಿತ ಬೆಳೆಗಳು ಮಳೆ ಅಭಾವದಿಂದ ನಷ್ಟಕ್ಕೆ ತುತ್ತಾಗಿವೆ. ಪ್ರತಿ ರೈತರಿಗೂ ಬೆಳೆ ವಿಮಾ ಪರಿಹಾರ ಕೊಡಿಸಲು ಸರ್ಕಾರ ಭದ್ದತೆ ತೋರಬೇಕೆಂದು ಒತ್ತಾಯಿಸಿ ಪಟ್ಟಣದ ತಾಲೂಕು ಆಡಳಿತ ಸೌಧದಲ್ಲಿ ವಿಪತ್ತು ನಿರ್ವಹಣೆ ಕುರಿತು ಕೈಗೊಂಡಿದ್ದ ತಾಲೂಕು ಮಟ್ಟದ ಪ್ರಗತಿ ಪರಿಶೀಲನಾ ಸಭೆಗೆ ಸೋಮವಾರ ಆಗಮಿಸಿದ್ದ ಸಚಿವ ಟಿ. ರಘುಮೂರ್ತಿ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ರೈತ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಬೇಡರಡ್ಡಿಹಳ್ಳಿ ಬಸವರಡ್ಡಿ ಜಿಲ್ಲಾಧ್ಯಕ್ಷ ರವಿಕುಮಾರ, ತಾಲೂಕು ಅಧ್ಯಕ್ಷ ಸೂರಮ್ಮನಹಳ್ಳಿ ರಾಜಣ್ಣ, ಕೊಂಡಾಪುರ ಪರಮೇಶಿ, ಎನ್. ಮಹದೇವ, ಟಿ. ವೀರಣ್ಣ, ಶ್ರೀನಿವಾಸ, ನಿಂಗಣ್ಣ, ಮುಕ್ಕಣ್ಣ, ದಾಸಪ್ಪ, ಶ್ರೀನಿವಾಸ, ತಿಪ್ಪೇಸ್ವಾಮಿ, ಮಲ್ಲಿಕಾರ್ಜುನ ಮುತ್ತಯ್ಯ ಇತರರಿದ್ದರು.