ಮಾಸಿಕ ೧೫ ಸಾವಿರ ಗೌರವಧನಕ್ಕೆ ಆಗ್ರಹ

ಆಶಾ ಕಾರ್ಯಕರ್ತೆಯರಿಂದ ಪ್ರತಿಭಟನೆ
ಮಾಸಿಕ ೧೫ ಸಾವಿರ ರೂ. ಗೌರವಧನ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಎಐಯುಟಿಯುಸಿ ಕಾರ್ಯಕರ್ತೆಯರು ಪ್ರತಿಭಟನೆ ನಡೆಸಿದರು.
ಮಾಸಿಕ ೧೫ ಸಾವಿರ ರೂ. ಗೌರವಧನ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಎಐಯುಟಿಯುಸಿ ಕಾರ್ಯಕರ್ತೆಯರು ಪ್ರತಿಭಟನೆ ನಡೆಸಿದರು.
Published on: 

ಚಿತ್ರದುರ್ಗ: ಮಾಸಿಕ ೧೫ ಸಾವಿರ ರೂ. ಗೌರವಧನಕ್ಕೆ ಆಗ್ರಹಿಸಿ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಜಿಲ್ಲಾ ಸಮಿತಿಯ ನೂರಾರು ಸದಸ್ಯರು ಪ್ರತಿಭಟನೆ ನಡೆಸಿದರು.

ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿದರು. ತಮ್ಮ ಜ್ವಲಂತ ಸಮಸ್ಯೆಗಳನ್ನು ಪರಿಹರಿಸುವಂತೆ ಒತ್ತಾಯಿಸಿ ಜಿಪಂ ಮೂಲಕ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಮನವಿ ಪತ್ರ ರವಾನಿಸಿದರು.

ಕಳೆದ ಹಲವು ತಿಂಗಳಿಂದ ಪ್ರೋತ್ಸಾಹಧನ ನೀಡದೆ ತೊಂದರೆ ಅನುಭವಿಸುವಂತಾಗಿದೆ. ತಕ್ಷಣವೇ ಅರ್ಹರ ಖಾತೆಗಳಿಗೆ ಜಮಾ ಮಾಡಬೇಕು ಎಂದು ಒತ್ತಾಯಿಸಿದರು.

ಸಮಸ್ತ ಆ್ಯಪ್ ಮೂಲಕ ದಾಖಲಾತಿ ಮಾಡಿಸುವುದನ್ನು ಕೈಬಿಡಬೇಕು. ಇಲ್ಲವೇ ಜಿಲ್ಲೆಯ ಎಲ್ಲ ಆಶಾ ಕಾರ್ಯಕರ್ತೆಯರಿಗೆ ಉತ್ತಮ ಗುಣಮಟ್ಟದ ಮೊಬೈಲ್ ನೀಡಬೇಕು. ಮಾಸಿಕ ಕರೆನ್ಸಿ ಮೊತ್ತವನ್ನು ಸರ್ಕಾರವೇ ಭರಿಸಬೇಕು. ಪಿಎಚ್‌ಸಿವಾರು ಎಲ್ಲ ಕಾರ್ಯಕರ್ತೆಯರ ಕ್ಲೇಮ್ ಮತ್ತು ರಿಲೀಸ್ ವಿವರಗಳ ಸಾ-ï್ಟ ಕಾಪಿ ಕೊಡಬೇಕು ಎಂದು ಆಗ್ರಹಿಸಿದರು.

ಮಾಸಿಕ ನಿಗದಿತ ಸಮಯಕ್ಕೆ ವೇತನ ಬಿಡುಗಡೆ ಮಾಡಬೇಕು. ಮೊಬೈಲ್ ಆಧಾರಿತ ಕಾರ್ಯನಿರ್ವಹಣೆಗೆ ಉಂಟಾಗಿರುವ ಸಮಸ್ಯೆಗಳ ಪರಿಹಾರಕ್ಕೆ ಸೂಕ್ತ ಕ್ರಮ ಕೈಗೊಳ್ಳಬೇಕು. ನಿವೃತ್ತರಾದ ಆಶಾಗಳಿಗೆ ಇಡಿಗಂಟು ನೀಡಬೇಕು ಎಂದು ಕೋರಿದರು.

ಮನವಿ ಆಲಿಸಿದ ಜಿಪಂ ಸಿಇಒ ಡಾ.ಎಸ್. ಆಕಾಶ್ ಮಾತನಾಡಿ, ಅ.೧೪ರಂದು ಡಿಎಚ್‌ಒ, ಆರ್‌ಸಿಎಚ್ ಅಽಕಾರಿಗಳ ಸಮ್ಮುಖದಲ್ಲಿ ಆಶಾಗಳ ಕುಂದು ಕೊರತೆಗಳ ಬಗ್ಗೆ ಚರ್ಚಿಸಲು, ಸಂಘಟನೆಯ ಮುಖಂಡರ ಸಭೆ ಕರೆಯಲಾಗುವುದು ಎಂದು ತಿಳಿಸಿದರು.

ಎಐಯುಟಿಯುಸಿ ಮುಖಂಡ ರವಿಕುಮಾರ್, ಸಂಘದ ಜಿಲ್ಲಾಧ್ಯಕ್ಷೆ ಗಿರಿಜಮ್ಮ, ಸಂಘಟನೆಯ ಮಂಜುಳಮ್ಮ, ಲಕ್ಷಿ÷್ಮÃಬಾಯಿ, ರತ್ನಮ್ಮ, ಗುರುಶಾಂತ, ನಂದಕುಮಾರಿ, ರಾಜಮ್ಮ, ಬೋರಮ್ಮ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net