ಬೆಳೆ ವಿಮೆ ಪರಿಹಾರ ಪಾವತಿಗೆ ಫೆ.೨೮ರ ಗಡುವು

 ಬೆಳೆವಿಮೆ ಪರಿಹಾರ ಪಾವತಿಗೆ ಗಡುವು ವಿಽಸಿ ರೈತರು ಚಿತ್ರದುರ್ಗದಲ್ಲಿ ಸೋಮವಾರ ಎಡಿಸಿ ಬಿ.ಟಿ.ಕುಮಾರಸ್ವಾಮಿ ಅವರಿಗೆ ಮನವಿ ಸಲ್ಲಿಸಿದರು. ಕೃಷಿ ಇಲಾಖೆ ಜಂಟಿ ನಿರ್ದೇಶಕ ಮಂಜುನಾಥ್, ಕೆ.ಪಿ.ಭೂತಯ್ಯ, ಹಂಪಯ್ಯನಮಾಳಿಗೆ ಧನಂಜಯ, ವಿ. ಶ್ರೀನಿವಾಸ್, ಕೆ.ಸಿ. ಹೊರಕೇರಪ್ಪ, ಟಿ. ಹಂಪಣ್ಣ, ಚಂದ್ರಣ್ಣ, ಉಮಾಪತಿ, ಶಿವಣ್ಣ ಇತರರು ಇದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ಅನಿರ್ದಿಷ್ಟಾವಽ ನಿರಶನ
  • ಎಡಿಸಿ ಬಿ.ಟಿ.ಕುಮಾರಸ್ವಾಮಿ
  • ತೀವ್ರ ಆರ್ಥಿಕ ಸಂಕಷ್ಟ
ಚಿತ್ರದುರ್ಗ: ಬೆಳೆ ವಿಮೆ ಪರಿಹಾರ ಪಾವತಿಗೆ ಆಗ್ರಹಿಸಿ ಮಾ. ೨ರಿಂದ ಚಳ್ಳಕೆರೆಯಲ್ಲಿ ಅನಿರ್ದಿಷ್ಟಾವಽ ನಿರಶನ ನಡೆಸುವುದಾಗಿ ರೈತರು ಎಚ್ಚರಿಕೆ ನೀಡಿದರು.
ಎಡಿಸಿ ಬಿ.ಟಿ.ಕುಮಾರಸ್ವಾಮಿ ಅವರಿಗೆ ಮನವಿ ಸಲ್ಲಿಸಿದ ಅವರು, ಚಳ್ಳಕೆರೆ, ಹಿರಿಯೂರು ಮತ್ತು ಮೊಳಕಾಲ್ಮೂ ರು ತಾಲೂಕುಗಳ ೨೦೨೫-೨೬ನೇ ಸಾಲಿನ ಮುಂಗಾರು ಹಂಗಾಮಿನ ರೈತರ ಬೆಳೆ ವಿಮೆ ಪರಿಹಾರ ಮೊತ್ತವನ್ನು -É.೨೮ ರ ಒಳಗಾಗಿ ವಿಮಾ ಕಂ ಪನಿಗಳು ಜಮಾ ಮಾಡಬೇಕು.
ಕಳೆದ ವರ್ಷ ರೈತರು ಬೆಳೆದ ಶೇಂಗಾ, ಈರುಳ್ಳಿ, ಮೆಕ್ಕೆಜೋಳ ಹಾಗೂ ಟೊಮ್ಯಾಟೊ ಬೆಳೆಗಳು ಮಳೆಯಿಲ್ಲದೆ ಸಂಪೂರ್ಣ ನಾಶ ವಾಗಿವೆ. ಇದರಿಂದ ರೈತರು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಪರಿಹಾರ ವಿತರಣೆ ವಿಳಂಬದಿAದ ರೈತರ ಕಷ್ಟ ಇನ್ನಷ್ಟು ಹೆಚ್ಚಾಗಿದೆ. ಯುಗಾದಿ ಸಮೀಪಿಸುತ್ತಿರುವ ಈ ಸಂದರ್ಭದಲ್ಲಿ ರೈತರ ಕೈಯಲ್ಲಿ ಹಣವಿಲ್ಲದಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ರಾಜ್ಯ ರೈತ ಸಂಘದ ಉಪಾಧ್ಯಕ್ಷ ಕೆ.ಪಿ. ಭೂತಯ್ಯ, ಜಿಲ್ಲಾಧ್ಯಕ್ಷ ಹಂಪಯ್ಯನಮಾಳಿಗೆ ಧನಂಜಯ, ವಿ. ಶ್ರೀನಿವಾಸ್, ಕೆ.ಸಿ. ಹೊರಕೇರಪ್ಪ, ಟಿ. ಹಂಪಣ್ಣ, ಚಂದ್ರಣ್ಣ, ಬಸ್ತಿಹಳ್ಳಿ ಸುರೇಶ್‌ಬಾಬು, ಉಮಾಪತಿ, ಶಿವಣ್ಣ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net