ಹರ್‌ಘರ್ ಜಲ್ ಕಾಮಗಾರಿ ಪೂರ್ಣಕ್ಕೆ ಕಾಲಾವಽ ವಿಸ್ತರಣೆ

ಚಿತ್ರದುರ್ಗದಲ್ಲಿ ಬುಧವಾರ ಜಿಲ್ಲಾ ನೀರು ಮತ್ತು ನೈರ್ಮಲ್ಯ ಮಿಷನ್ ಸಮಿತಿ ಸಭೆಯಲ್ಲಿ ಡಾ.ಎಸ್.ಆಕಾಶ್, ಎಂ.ಬಾಬು, ಅಮರನಾಥ್ ಜೈನ್,ದಿವಾಕರ್ ಮತ್ತಿತರರು ಭಾಗವಹಿಸಿದ್ದರು.
ಚಿತ್ರದುರ್ಗದಲ್ಲಿ ಬುಧವಾರ ಜಿಲ್ಲಾ ನೀರು ಮತ್ತು ನೈರ್ಮಲ್ಯ ಮಿಷನ್ ಸಮಿತಿ ಸಭೆಯಲ್ಲಿ ಡಾ.ಎಸ್.ಆಕಾಶ್, ಎಂ.ಬಾಬು, ಅಮರನಾಥ್ ಜೈನ್,ದಿವಾಕರ್ ಮತ್ತಿತರರು ಭಾಗವಹಿಸಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಪ್ರಸ್ತಾವನೆ ಸಲ್ಲಿಕೆಗೆ ಗುತ್ತಿಗೆದಾರರಿಗೆ ಅವಕಾಶ
  • ಜಿಪಂ ಸಿಇಒ ಡಾ.ಎಸ್. ಆಕಾಶ್ ಮಾಹಿತಿ
  • ಕಾಲಾವಽ ವಿಸ್ತರಣೆ ವೇಳಾಪಟ್ಟಿ

ಚಿತ್ರದುರ್ಗ:

ಹರ್ ಘರ್ ಜಲ್ ಘೋಷಣೆಯಾಗಿ ನಿಗದಿತ ಅವಽಯಲ್ಲಿ ಕಾಮಗಾರಿ ಪೂರ್ಣಗೊಳಿಸದ ಗುತ್ತಿಗೆದಾರರಿಗೆ ಕಾಮಗಾರಿ ಪೂರ್ಣಗೊಳಿಸಲು ಕಾಲಾವಽ ವಿಸ್ತರಣೆ ಕೋರಿ ಪ್ರಸ್ತಾವನೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಜಿಪಂ ಸಿಇಒ ಡಾ.ಎಸ್. ಆಕಾಶ್ ಹೇಳಿದರು.

ಜಿಪಂನಲ್ಲಿ ಬುಧವಾರ ಜರುಗಿದ ಜಿಲ್ಲಾ ನೀರು ಮತ್ತು ನೈರ್ಮಲ್ಯ ಮಿಷನ್ ಸಮಿತಿ ಸಭೆಯಲ್ಲಿ ಮಾತನಾಡಿ, ಕಾಲಾವಽ ವಿಸ್ತರಣೆ ಕೋರಿ ೪ ದಿನಗಳ ಒಳಗೆ ನಿಗದಿತ ನಮೂನೆಯಲ್ಲಿ ಗುತ್ತಿಗೆದಾರರು ಮನವಿ ಸಲ್ಲಿಸಬಹುದು.
ಜಿಲ್ಲೆಯಲ್ಲಿ ಜೆಜೆಎಂಅಡಿ ಅನುಷ್ಠಾ ನಗೊಳಿಸುತ್ತಿರುವ ಹರ್‌ಘರ್ ಜಲ್ ಕಾಮಗಾರಿಗಳನ್ನು ನಿಗದಿತ ಸಮಯದೊಳಗೆ ಪೂರ್ಣಗೊ ಳಿಸಬೇಕೆಂಬ ಷರತ್ತಿನೊಂದಿಗೆ ಗುತ್ತಿಗೆದಾರರಿಗೆ ಈ ಹಿಂದೆ ಕಾರ್ಯಾದೇಶ ನೀಡಲಾಗಿತ್ತು. ಆದರೆ, ಕಾಮಗಾರಿಗಳನ್ನು ಪೂರ್ಣಗೊಳಿಸದೆ ಹರ್ ಘರ್ ಜಲ್ ಗ್ರಾಮಗಳ ಘೋಷಣೆ ವಿಳಂಬವಾಗಿತ್ತು.
ಈ ಹಿಂದೆ ಜುಲೈ ೨ರಂದು ಜರುಗಿದ ಸಭೆಯಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡುವ ಗುತ್ತಿಗೆದಾರರು ಮುಂದೆ ಬಂದು ಕೆಲಸ ಪೂ ರ್ಣಗೊಳಿಸಲು ಇಚ್ಛಿಸಿದರೆ ಜಲಜೀವನ್ ಮಿಷನ್ ಕಾಮಗಾರಿ ವಿಳಂಬಕ್ಕೆ ವಿಽಸುವ ದಂಡಕ್ಕೆ ವಿನಾಯಿತಿ ನೀಡಲು ತೀರ್ಮಾನಿ ಸಲಾಗಿತ್ತು. ಇದರ ಮುಂದುವರಿದ ಭಾಗವಾಗಿ ಗುತ್ತಿಗೆದಾರರು ಮನವಿ ಪತ್ರ ಸಲ್ಲಿಸಲು ಅವಕಾಶ ನೀಡಲಾಗಿದೆ. ಇದಕ್ಕಾಗಿ ಕಾಲಾವಽ ವಿಸ್ತರಣೆ ವೇಳಾಪಟ್ಟಿ ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದರು.
ಗುತ್ತಿಗೆದಾರರು ತಮ್ಮ ವ್ಯಾಪ್ತಿಯ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪವಿಭಾಗದ ಎಇಗಳಿಗೆ ವಿಳಂಬಕ್ಕೆ ಕಾರಣ ನೀಡಿ ಮನವಿ ಸಲ್ಲಿಸಬೇಕು. ಇದಕ್ಕಾಗಿ ೪ ದಿನಗಳ ಕಾಲಾವಕಾಶ ನೀಡಲಾಗಿದೆ. ಈ ಮನವಿ ಪತ್ರ ಆಧರಿಸಿ ಆಯಾ ಗ್ರಾಪಂಗಳ ಪಿಡಿಒ ಹಾಗೂ ಆಡಳಿತಾಽಕಾರಿ, ಶಾಖಾಽಕಾರಿ ಹಾಗೂ ಕಾರ್ಯನಿರ್ವಾಹಕ ಅಽಕಾರಿಗಳು ದೃಢೀಕರಣ ವರದಿ ನೀಡಬೇಕು.
ಎಇಗಳು ೭ ದಿನಗಳ ಒಳಗಾಗಿ ಪ್ರಸ್ತಾವನೆ ವರದಿಗಳನ್ನು ಇಇಗಳಿಗೆ ಸಲ್ಲಿಸಬೇಕು. ಎಲ್ಲ ಕಾಮಗಾರಿಗಳ ಪ್ರಸ್ತಾವನೆ ಕ್ರೂಢೀಕರಿಸಿ, ಸೆ. ೪ರೊಳಗೆ ವಿಭಾಗೀಯ ಕಚೇರಿಗೆ ಸಲ್ಲಿಸಲು ಸಿಇಒ ಅವರು, ಇಇ ಅಮರನಾಥ್ ಜೈನ್‌ಗೆ ಸೂಚಿಸಿದರು.
ಬಹುಗ್ರಾಮ ಕುಡಿವ ನೀರು ಯೋಜನೆ ಸೇರಿ ಜಿಲ್ಲೆಯ ಎಲ್ಲ ಗ್ರಾಮಗಳಲ್ಲಿ ಪ್ರತಿ ವ್ಯಕ್ತಿಗೆ ಪ್ರತಿ ದಿನ ೫೫ ಲೀಟರ್ ಸರಬರಾಜು ಮಾಡುವುದನ್ನು ದೃಢೀಡಿಕರಿಸಲು ಹಾಗೂ ಮಾಹಿತಿ ಸಂಗ್ರಹಿಸಲು ತಂತ್ರಜ್ಞಾನ ಬಳಕೆ ಮಾಡಲಾಗುತ್ತಿದೆ. ಇದರ ಭಾಗವಾಗಿ ಈಗಾಗಲೇ ನೀರ್‌ಲ್ಯಾಬ್ ಸ್ಥಾಪಿಸಲಾಗಿದೆ.
ಇದೇ ಮಾದರಿಯಲ್ಲಿ ಆರ್‌ಒ ಪ್ಲಾಂಟ್ ಕಾರ್ಯಾಚರಣೆ ಸ್ಥಿತಿಗತಿ ಮಾಹಿತಿ ಪಡೆಯಲು ಅಂದಾಜು ೧೦೦೦ ಆರ್‌ಒಗಳಲ್ಲಿ ತಂತ್ರಜ್ಞಾನ ಆಧಾರಿತ ನೀರಿನ ಹರಿವಿನ ಮೀಟರ್ ಅಳವಡಿಸಲು ಚಿಂತಿಸಲಾಗುತ್ತಿದೆ ಎಂದರು.
ಜಿಪA ಉಪ ಕಾರ್ಯದರ್ಶಿ ಎಂ. ಬಾಬು, ಆರ್‌ಎಫ್‌ಒ ಆರ್. ವಸಂತಕುಮಾರ್, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಽಕಾರಿ ದಿವಾಕರ್, ಜಲತಜ್ಞ ದೇವರಾಜ ರೆಡ್ಡಿ, ಜೆಜೆಎಂ ಜಿಲ್ಲಾ ವ್ಯವಸ್ಥಾಪಕ ಮಂಜುನಾಥ್ ನಾಡಾರ್ ಮತ್ತಿತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net