ಬಿತ್ತನೆ ವೈ-Àಲ್ಯ ವಿಮಾ ಶಿ-Áರಸ್ಸಿಗೆ ಡಿಸಿ ನಿರ್ದೇಶನ

ಚಿತ್ರದುರ್ಗದಲ್ಲಿ ಶುಕ್ರವಾರ ಡಿಸಿ ಟಿ. ವೆಂಕಟೇಶ್ ನೇತೃತ್ವದಲ್ಲಿ ಬೆಳೆ ವಿಮೆ ಕುರಿತಂತೆ ಸಭೆ ನಡೆಯಿತು. ಬಿ. ಮಂಜುನಾಥ್, ಶೈಲೇಂದ್ರ ಶರ್ಮ, ಎಂ.ಪಿ.ಪ್ರವೀಣ್‌ಕುಮಾರ್, ಶಿವಕುಮಾರ್, ಉಮೇಶ್, ಎನ್. ಚಂದ್ರಕುಮಾರ್ ಮತ್ತಿತರರು ಇದ್ದರು.
ಚಿತ್ರದುರ್ಗದಲ್ಲಿ ಶುಕ್ರವಾರ ಡಿಸಿ ಟಿ. ವೆಂಕಟೇಶ್ ನೇತೃತ್ವದಲ್ಲಿ ಬೆಳೆ ವಿಮೆ ಕುರಿತಂತೆ ಸಭೆ ನಡೆಯಿತು. ಬಿ. ಮಂಜುನಾಥ್, ಶೈಲೇಂದ್ರ ಶರ್ಮ, ಎಂ.ಪಿ.ಪ್ರವೀಣ್‌ಕುಮಾರ್, ಶಿವಕುಮಾರ್, ಉಮೇಶ್, ಎನ್. ಚಂದ್ರಕುಮಾರ್ ಮತ್ತಿತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ವಾಡಿಕೆಗಿಂತ ಶೇ.೨೯ ಮಳೆಕೊರತೆ
  • ಶೇ.೨೦ ಮೀರದ ಬಿತ್ತನೆ ಪ್ರಮಾಣ
  • ಬಿತ್ತನೆ ವೈ-Àಲ್ಯದ ಪರಿಣಾಮ

ಚಿತ್ರದುರ್ಗ:

ಜಿಲ್ಲೆಯಲ್ಲಿ ಕಳೆದ ಜೂನ್, ಜುಲೈನಲ್ಲಿ ೧೦೧.೭ ಮಿ.ಮೀ.ವಾಡಿಕೆ ಮಳೆ ಬದಲಿಗೆ ೭೨.೬ ಮಿ.ಮೀ.ಮಳೆಯಾಗಿದ್ದು, ಶೇ.೨೯ ರಷ್ಟು ಕೊರತೆಯಾಗಿದೆ. ಈ ಹಿನ್ನೆಲೆಯಲ್ಲಿ ಪ್ರತಿ ತಾಲೂಕಿನಲ್ಲಿ ತಹಸೀಲ್ದಾರ್ ಅಧ್ಯಕ್ಷತೆಯಲ್ಲಿ ರೈತರ ಸಭೆ ನಡೆಸಿ ಬಿತ್ತನೆ ವಿ-Àಲವಾಗಿರುವುದರಿಂದ ವಿಮೆಗೆ ಶಿಫಾರಸು ಮಾಡುವಂತೆ ಜಿಲ್ಲಾಽಕಾರಿ ಟಿ.ವೆಂಕಟೇಶ್ ಕೃಷಿ ಹಾಗೂ ವಿಮಾ ಕಂಪನಿ ಅಽಕಾರಿಗಳಿಗೆ ನಿರ್ದೇಶಿಸಿದರು.

ಡಿಸಿ ಕಚೇರಿಯಲ್ಲಿ ಶುಕ್ರವಾರ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದ ಅವರು, ಪ್ರಸಕ್ತ ಮುಂಗಾರು ಹಂಗಾಮಲ್ಲಿ ೩,೩೯,೩೦೪ ಹೆಕ್ಟೇರ್ ಪೈಕಿ, ಕೇವಲ ೬೫,೩೪೦ ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದೆ. ಬಿತ್ತನೆ ಪ್ರಮಾಣ ಶೇ.೧೯.೨೬ ಇದೆ. ಈ ಹಿನ್ನೆಲೆೆಯಲ್ಲಿ ಬಿತ್ತನೆ ವೈ-Àಲ್ಯ ವಿಮೆಗೆ ಶಿ-Áರಸು ಆಗಬೇಕಿದೆ.

ಮುಖ್ಯವಾಗಿ ರೈತರಿಗೆ ಬಿತ್ತನೆ ವೈ-Àಲ್ಯದಡಿ ನೀಡುವ ವಿಮೆ ಹಾಗೂ ಮಧ್ಯಂತರ ಪರಿಹಾರದ ಬಗೆಗಿನ ಗೊಂದಲಗಳನ್ನು ನಿವಾರಿಸಬೇಕು ಎಂದು ತಿಳಿಸಿದರು.

ಪ್ರತಿಕೂಲ ಹವಾಮಾನ ಪರಿಸ್ಥಿತಿಗಳಿಂದ ಅಽಸೂಚಿತ ಘಟಕದಲ್ಲಿ ಶೇ.೭೫ಕ್ಕಿಂತ ಹೆಚ್ಚಿನ ಕ್ಷೇತ್ರದಲ್ಲಿ ಬಿತ್ತನೆ ವಿ-Àಲಗೊಂಡಲ್ಲಿ, ಗರಿಷ್ಠ ಶೇ.೨೫ ಪರಿಹಾರವನ್ನು ವಿಮಾ ಸಂಸ್ಥೆ ವಿಮೆ ಮಾಡಿಸಿದ ರೈತರಿಗೆ ಇತ್ಯರ್ಥಪಡಿಸಿ, ಮುಂದಿನ ಅವಽಗೆ ವಿಮೆ ರದ್ದು ಪಡಿಸತ್ತದೆ. ಸದ್ಯ ಜಿಲ್ಲೆಯಲ್ಲಿ ಇದೇ ಪರಿಸ್ಥಿತಿ ನಿರ್ಮಾಣವಾಗಿದೆ.
ಜಿಲ್ಲೆಯಲ್ಲಿ ಅತಿ ಹೆಚ್ಚು ಬಿತ್ತನೆ ಮಾಡುವ ಅಽಸೂಚಿತ ಬೆಳೆಗಳಿಗೆ ಮಾತ್ರ ಬಿತ್ತನೆ ವೈ-Àಲ್ಯ ವಿಮೆ ಅನ್ವಯಿಸುತ್ತದೆ. ಇದನ್ನು ಹೊರತಾಗಿ, ಬಿತ್ತಿರುವ ಇತರೆ ಬೆಳೆಗಳಿಗೆ ವಿಮೆ ಸೌಲಭ್ಯ ಮುಂದುವರಿಯುತ್ತದೆ. ಮುಂಬರುವ ದಿನಗಳಲ್ಲಿ ಮಳೆ ಕೊರತೆ ಉಂಟಾಗಿ ಅಽಸೂಚಿಸದ ಬೆಳೆಗಳಿಗೂ ತೊಂದರೆಯಾದರೆ,
ಮಿಮಾ ಕಂಪನಿ ಅಽಕಾರಿಗಳ ಸಮ್ಮುಖದಲ್ಲಿ ಜಂಟಿ ಬೆಳೆ ಸಮೀಕ್ಷೆ ನಡೆಸಿ ಮಧ್ಯಂತರ ಬೆಳೆ ಪರಿಹಾರಕ್ಕೆ ಶಿ-Áರಸು ಮಾಡಲಾ ಗುವುದು. ಬೆಳೆ ವಿಮೆ ರೈತರ ಸಂಕಷ್ಟಕ್ಕೆ ನೀಡುವ ಒಂದು ಸಣ್ಣ ಉಪಕ್ರಮವಾಗಿದೆ. ಇದರಿಂದ ರೈತರಿಗೆ ಹೊರೆಯಾಗುವುದನ್ನು ತಡೆಯಬಹುದು. ಆದ್ದರಿಂದ ಶೀಘ್ರ ತಾಲೂಕು ಮಟ್ಟದಲ್ಲಿ ಸಭೆ ನಡೆಸಿ ವರದಿ ಸಲ್ಲಿಸುವಂತೆ ಡಿಸಿ ಸೂಚಿಸಿದರು.
ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ -Àಸಲ್ ಭೀಮಾ ಯೊಜನೆಯಡಿ ಜಿಲ್ಲೆಯಲ್ಲಿ ೧.೨೩ ಲಕ್ಷಕ್ಕೂ ಅಽಕ ರೈತರು ನೋಂ ದಾಯಿಸಿದ್ದಾರೆ ಎಂದು ಜಂಟಿ ಕೃಷಿ ನಿರ್ದೇಶಕ ಬಿ. ಮಂಜುನಾಥ್ ತಿಳಿಸಿದರು. ಯೋಜನೆಯಡಿ ಹೊಸದುರ್ಗ ತಾಲೂಕಿನಲ್ಲಿ ರಾಗಿ ಅಽಸೂಚಿತ ಬೆಳೆಯಾಗಿದ್ದು, ಆ.೧೪ರವರೆಗೆ ನೋಂದಣಿಗೆ ಅವಕಾಶವಿದೆ. ಉಳಿದಂತೆ ೫ ತಾಲೂಕುಗಳಲ್ಲೂ ಜುಲೈ ೩೧ಕ್ಕೆ ಬೆಳೆವಿಮೆ ನೋಂದಣಿ ಕೊನೆಗೊಂಡಿದೆ.
ಮಳೆ ಕೊರತೆ ಹಾಗೂ ಬಿತ್ತನೆ ವೈ-Àಲ್ಯದ ಪರಿಣಾಮ, ಈ ೫ ತಾಲೂಕುಗಳಲ್ಲಿ ಬೆಳೆ ವಿಮೆ ನೋಂದಣಿಗೆ ಆ.೧೫ರವರೆಗೆ ಅವ ಕಾಶ ನೀಡಬೇಕು. ಹೊಸದುರ್ಗ ತಾಲೂಕಿನಲ್ಲಿ ರಾಗಿಗೆ ಆ.೨೯ ರವರೆಗೆ ದಿನಾಂಕ ವಿಸ್ತರಿಸುವ ಶಿ-Áರಸಿಗೆ ಕ್ರಮ ಕೈಗೊಳ್ಳಲಾ ಗಿದೆ. ಸದ್ಯ ಬಿತ್ತನೆ ವೈ-Àಲ್ಯದಡಿ ವಿಮೆ ಪರಿಹಾರ ಬಿಡುಗಡೆಯಾದರೆ, ರೈತರಿಗೆ ವಿಮಾ ಕಂತಿನ ಮೊತ್ತದ ೧೦-೧೧ಪಟ್ಟು ಪರಿಹಾರ ದೊರೆಯಲಿದೆ.
ಜಿಲ್ಲೆಯಲ್ಲಿ ಶೇ.೨೦ಕ್ಕಿಂತ ಕಡಿಮೆ ಬಿತ್ತನೆಯಾಗಿದ್ದು, ಬಿತ್ತನೆ ವೈ-Àಲ್ಯ ವಿಮೆಗೆ ಶಿ-Áರಸ್ಸು ಮಾಡಿದರೆ ಕೂಡಲೇ ಎಲ್ಲ ರೈತರಿಗೂ ಪರಿಹಾರ ನೀಡುವುದಾಗಿ ಇ-ÉÆ್ಕÃ ಟೋಕಿಯೋ ವಿಮಾ ಕಂಪನಿಯ ರಾಜ್ಯ ಕ್ಲೇಮ್ ಇನ್‌ಚಾರ್ಜ್ ಶೈಲೇಂದ್ರಶರ್ಮ ಹೇಳಿದರು.
ಲೀಡ್‌ಬ್ಯಾಂಕ್ ವ್ಯವಸ್ಥಾಪಕ ಎಂ.ಪಿ. ಪ್ರವೀಣ್‌ಕುಮಾರ್, ಕೃಷಿ ಇಲಾಖೆ ಉಪ ನಿರ್ದೇಶಕರಾದ ಶಿವಕುಮಾರ್, ಉಮೇಶ್, ಎನ್. ಚಂದ್ರಕುಮಾರ್ ಸೇರಿ ವಿವಿಧ ತಾಲೂಕುಗಳ ಕೃಷಿ ಸಹಾಯಕ ನಿರ್ದೇಶಕರು, ಅಂಕಿ ಸಂಖ್ಯೆ ಸಂಗ್ರಹಣ ಇಲಾಖೆ ಅಽಕಾರಿಗಳು, ರೈತ ಮುಖಂಡರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net