ಭದ್ರಾ ಮೇಲ್ದಂಡೆಗೆ ದಾವಣಗೆರೆ ರೈತರ ಕ್ಯಾತೆ

ಬಿ.ಎ.ಲಿಂಗಾರೆಡ್ಡಿ
ಬಿ.ಎ.ಲಿಂಗಾರೆಡ್ಡಿ
Published on

ಪ್ರಮುಖ ಮುಖ್ಯಾಂಶಗಳು

  • ನೀರಾವರಿ ಅನುಷ್ಠಾನ ಹೋರಾಟ ಸಮಿತಿ ಆಕ್ರೋಶ
  • ನೀರು ಕೊಡಬೇಡಿ ಎನ್ನಲು ಇವರಿಗೆ ಏನು ಹಕ್ಕಿದೆ?
  • ಬೆಳೆ ಬೇಯಿಸಿ ಕೊಳ್ಳುವುದು ಸರಿಯಲ್ಲ

ಚಿತ್ರದುರ್ಗ :

ಭದ್ರಾ ಮೇಲ್ದಂಡೆ ಯೋಜನೆ ನೀರು ಪಡೆಯುವುದಕ್ಕೆ ದಾವಣಗೆರೆ ಜಿಲ್ಲೆ ರೈತರು ಮತ್ತೆ ಕ್ಯಾತೆ ತೆಗೆದಿರುವುದಕ್ಕೆ ಜಿಲ್ಲಾ ನೀರಾವರಿ ಅ ನುಷ್ಠಾನ ಹೋರಾಟ ಸಮಿತಿ ಪ್ರಮುಖರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಮಿತಿ ಕಾರ್ಯಾಧ್ಯಕ್ಷ ಬಿ.ಎ.ಲಿಂಗಾರೆಡ್ಡಿ, ರೈತ ಸಂಘದ ಜಿಲ್ಲಾಧ್ಯಕ್ಷ ಹಂಪಯ್ಯನಮಾಳಿಗೆ ಧನಂಜಯ, ಸಿಪಿಐ ಜಿಲ್ಲಾ ಕಾ ರ್ಯದರ್ಶಿ ಜಿ.ಸುರೇಶ್ ಬಾಬು ಶುಕ್ರವಾರ ಪತ್ರಿಕಾ ಹೇಳಿಕೆ ನೀಡಿದ್ದು, ಭದ್ರಾದಿಂದ ೫.೭ ಟಿಎಂಸಿ ನೀರು ಪಡೆದು ಕಾಲುವೆಗೆ ಹಾಯಿಸಲು ಸರ್ಕಾರದ ಮಟ್ಟದಲ್ಲಿ ತೀರ್ಮಾನವಾಗುತ್ತಿರುವ ವೇಳೆ ದಾವಣಗೆರೆ ರೈತರು ಆಕ್ಷೇಪ ವ್ಯಕ್ತಪಡಿಸುವುದರಲ್ಲಿ ಅರ್ಥವಿಲ್ಲ.
ತಮ್ಮ ಜಿಲ್ಲೆ ಕಾಲುವೆಗೆ ನೀರು ಹಾಯಿಸಿ ಎಂದು ಅವರು ಕೇಳಿಕೊಳ್ಳಲಿ, ಚಿತ್ರ ದುರ್ಗಕ್ಕೆ ಬಿಡಬೇಡಿ ಎನ್ನಲು ಅವರಿಗೆ ಏನು ಹಕ್ಕಿದೆ? ಉದ್ಯೋಗವಿಲ್ಲದ ಕೆಲ ರಾಜಕಾರಣಿಗಳು ರೈತರನ್ನು ಪ್ರಚೋದಿಸಿ ಬೆಳೆ ಬೇಯಿಸಿ ಕೊಳ್ಳುವುದು ಸರಿಯಲ್ಲ ಎಂದಿದ್ದಾರೆ.
ಭದ್ರಾ ಮೇಲ್ದಂಡೆಗೆ ತುಂಗಾದಿAದ ೧೭.೫೦ ಹಾಗೂ ಭದ್ರಾದಿಂದ ೧೨.೪೫ ಟಿಎಂಸಿ ನೀರು ಬಳಕೆಗೆ ಅವಕಾಶವಿದೆ. ಭದ್ರಾದಲ್ಲಿ ಹಾಲಿ ೧೭೩ ಅಡಿ ನೀರಿದೆ. ಭದ್ರಾ ಮೇಲ್ದಂಡೆಗೆ ನೀರು ಪಡೆಯಲು ಜಲಾಶಯದಲ್ಲಿ ಕನಿಷ್ಠ ೧೪೪ ಅಡಿ ನೀರಿರಬೇಕಿದ್ದು,
ಭದ್ರಾದಿಂದ ನೀರು ಲಿ-ï್ಟ ಮಾಡಿದರೆ ದಾವಣಗೆರೆ ಜನರು ಕಳೆದುಕೊಳ್ಳುವುದಾದರೂ ಏನು?
ಭದ್ರಾ ಮೇಲ್ದಂಡೆ ಯೋಜನೆಗೆ ತುಂಗಾ ನೀರಿನದ್ದು ಹೆಚ್ಚು ಪಾಲಿದೆ. ತುಂಗಾ ಕಾಮಗಾರಿ ಪೂರ್ಣಗೊಳಿಸಿ ನೀರು ಒಯ್ಯಲಿ, ಅಲ್ಲಿ ವರೆಗೂ ಭದ್ರಾ ಮೇಲ್ದಂಡೆಗೆ ನೀರು ಕೊಡಬಾರದು ಎನ್ನಲು ಯಾವುದೇ ನೈತಿಕತೆ ಇಲ್ಲ. ಕಾಮಗಾರಿ ಬೇಗನೆ ಪೂರ್ಣಗೊಳಿಸು ವಂತೆ ರಾಜ್ಯ ಸರ್ಕಾರದ ಮೇಲೆ ಒತ್ತಡ ತರುವ ಕೆಲಸವನ್ನು ದಾವಣಗೆರೆ ರೈತರು ಮಾಡಲಿ.
ಭದ್ರಾ ಮೇಲ್ದಂಡೆಯಿAದ ನಾಲ್ಕು ಜಿಲ್ಲೆಗಳ ೩೬೭ ಕೆರೆಗಳ ತುಂಬಿಸಲಾಗುತ್ತಿದೆ. ಇದರಲ್ಲಿ ಜಗಳೂರು ಕೂಡ ಸೇರಿದೆ. ದಾವಣ ಗೆರೆ ರೈತರು ಜಗಳೂರಿಗೆ ಬೇಗನೆ ನೀರು ಕೊಡಿ ಎಂದು ಸರ್ಕಾರವನ್ನು ಆಗ್ರಹಿಸಬೇಕು. ಕೆರೆಗಳಿಗೆ ನೀರು ತುಂಬಿ ಸುವುದರಿAದ ಅಂತರ್ಜಲ ಮಟ್ಟ ಹೆಚ್ಚಳವಾಗಿ ಕುಡಿವ ನೀರು ಪೂರೈಕೆಗೆ ಅನುಕೂಲವಾಗುತ್ತದೆ. ಸದಾ ಬರವಿರುವ ಚಿತ್ರದುರ್ಗ ಜಿಲ್ಲೆ ರೈತರಿಗೆ ನೀರಿನ ಮಿತ ಬಳಕೆ ಪ್ರಜ್ಞೆ ಇದೆ.
ಭದ್ರಾ ಜಲಾಶಯ ನಿರ್ಮಿಸಿದಾಗ ಅರೆ ನೀರಾವರಿ ಒಂದು ಬೆಳೆಗೆ ನೀರು ಪೂರೈಕೆ ಎಂಬ ಒಡಂಬಡಿಕೆ ಇದೆ. ಅಂದರೆ ಶೇಂಗಾ, ಸೂರ್ಯಕಾಂತಿ, ಮೆಕ್ಕೇಜೋಳದಂತಹ ಪೈರು ಬೆಳೆಯಬೇಕು. ಎಲ್ಲಿಯೂ ಭತ್ತ ಬೆಳೆಯುವಂತಿಲ್ಲ. ಆದರೆ ದಾವಣಗೆರೆ ರೈತರು ಭತ್ತದ ಎರಡು -Àಸಲು ಪಡೆಯುತ್ತಿದ್ದಾರೆ.
ಭದ್ರಾ ಮೇಲ್ದಂಡೆಗೆ ಈಗಾಗಲೇ ೧೧ ಸಾವಿರ ಕೋಟಿ ರೂ.ಖರ್ಚಾಗಿದೆ. ವಿವಿ ಸಾಗರ ಜಲಾಶಯಕ್ಕೆ ೨೦ಕ್ಕೂ ಹೆಚ್ಚು ಟಿಎಂಸಿ ನೀರನ್ನು ಲಿ-ï್ಟ ಮಾಡಿ ಯೋಜನೆ ಸಾಕಾರಗೊಂಡಿರುವುದನ್ನು ತೋರಿಸಲಾಗಿದೆ ಎಂದು ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net