ಚಿತ್ರದುರ್ಗದಲ್ಲಿ ೮ ಲಕ್ಷ ಲೀಟರ್ ಸಾಮರ್ಥ್ಯದ ಡೇರಿ ಸ್ಥಾಪನೆ

 ಚಿತ್ರದುರ್ಗದಲ್ಲಿ ಶುಕ್ರವಾರ ಆಯೋಜಿಸಿದ್ದ ಹಾಲು ಉತ್ಪಾದಕರ ಸಂಘಗಳ ಅಧ್ಯಕ್ಷರು, ಕಾರ್ಯದರ್ಶಿಗಳ ಸಭೆಯಲ್ಲಿ ಜಿ.ಪಿ. ರೇವಣಸಿದ್ದಪ್ಪ, ಜಿ.ಬಿ. ಶೇಖರ್, ಬಿ.ಸಿ. ಸಂಜೀವಮೂರ್ತಿ, ರವಿಕುಮಾರ್, ಸತೀಶ್, ಮುಕುಂದ, ಅಶ್ವಿನಿ, ರಂಜಿತಾ ಇದ್ದರು.
ಚಿತ್ರದುರ್ಗದಲ್ಲಿ ಶುಕ್ರವಾರ ಆಯೋಜಿಸಿದ್ದ ಹಾಲು ಉತ್ಪಾದಕರ ಸಂಘಗಳ ಅಧ್ಯಕ್ಷರು, ಕಾರ್ಯದರ್ಶಿಗಳ ಸಭೆಯಲ್ಲಿ ಜಿ.ಪಿ. ರೇವಣಸಿದ್ದಪ್ಪ, ಜಿ.ಬಿ. ಶೇಖರ್, ಬಿ.ಸಿ. ಸಂಜೀವಮೂರ್ತಿ, ರವಿಕುಮಾರ್, ಸತೀಶ್, ಮುಕುಂದ, ಅಶ್ವಿನಿ, ರಂಜಿತಾ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಜಿ.ಪಿ. ರೇವಣಸಿದ್ದಪ್ಪ ಹೇಳಿಕೆ
  • ಹಾಲು ಉತ್ಪಾದಕರ ಸಂಘಗಳ ಅಧ್ಯಕ್ಷರು, ಕಾರ್ಯದರ್ಶಿಗಳ ಸಭೆ
  • ಕೃಷಿ ತಂತ್ರಜ್ಞರ ಸಂಸ್ಥೆ
ಚಿತ್ರದುರ್ಗ: ಗುಣಮಟ್ಟದ ಹಾಲನ್ನು ಡೇರಿಗೆ ಹಾಕುವ ಮೂಲಕ ಸಹಕರಿಸುವಂತೆ ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ನಿರ್ದೇಶಕ ಜಿ.ಪಿ. ರೇವಣಸಿದ್ದಪ್ಪ, ಹಾಲು ಉತ್ಪಾದಕರ ಸಂಘಗಳ ಅಧ್ಯಕ್ಷರು, ಕಾರ್ಯದರ್ಶಿಗಳಿಗೆ ಮನವಿ ಮಾಡಿದರು.
ನಗರದ ಕೃಷಿ ತಂತ್ರಜ್ಞರ ಸಂಸ್ಥೆಯಲ್ಲಿ ಶುಕ್ರವಾರ ಆಯೋಜಿಸಿದ್ದ ಅಧ್ಯಕ್ಷರು, ಕಾರ್ಯದರ್ಶಿಗಳ ಸಭೆಯಲ್ಲಿ ಮಾತನಾಡಿದ ಅವ ರು, ಆರು ತಿಂಗಳಿಗೊಮ್ಮೆ ಅಧ್ಯಕ್ಷರು, ಕಾರ್ಯದರ್ಶಿಗಳ ಸಭೆ ಕರೆದು ಕುಂದುಕೊರತೆ ಆಲಿಸಲಾಗುತ್ತಿದೆ. ಒಕ್ಕೂಟದಿಂದ ಸಂಘ ಗಳಿಗೆ ಏನೇನು ಕೊಡಲಾಗುತ್ತಿದೆ ಎಂಬುದರ ಬಗ್ಗೆ ಸಂಘಗಳ ಅಧ್ಯಕ್ಷರ ಗಮನದಲ್ಲಿರಬೇಕು. ಮುಂದಿನ ಸಭೆಯಲ್ಲಿ ಎಲ್ಲ ಸಂಘ ಗಳ ಅಧ್ಯಕ್ಷರು ಹಾಜರಿರುವಂತೆ ನೋಡಿಕೊಳ್ಳಬೇಕೆಂದು ಕಾರ್ಯದರ್ಶಿಗಳಿಗೆ ತಾಕೀತು ಮಾಡಿದರು.
ಎಂಟು ಲಕ್ಷ ಲೀಟರ್ ಸಾಮರ್ಥ್ಯದ ಡೇರಿಯನ್ನು ಚಿತ್ರದುರ್ಗದಲ್ಲಿ ಸ್ಥಾಪಿಸಲಾಗುವುದು. ದಾವಣಗೆರೆಯಲ್ಲೂ ಡೇರಿ ನಿರ್ಮಾಣ ವಾಗಲಿದೆ. ಸಂಘಗಳ ಆಡಳಿತದಲ್ಲಿ ನಾವು ಹಸ್ತಕ್ಷೇಪ ಮಾಡುವುದಿಲ್ಲ. ಒಂಬತ್ತೂವರೆ ಲಕ್ಷ ಲೀಟರ್ ಹಾಲು ನಿತ್ಯವೂ ನಮಗೆ ಬರುತ್ತದೆ.
ಇದರಲ್ಲಿ ಮೂರು ಲಕ್ಷ ಲೀಟರ್ ಹಾಲು ಖರ್ಚಾಗಲಿದೆ. ಬೆಣೆ್ಣ, ತುಪ್ಪ, ಹಾಲಿನ ಪೌಡರ್ ಹಾಗೂ ಇತರೆ ಸಿಹಿ ಉತ್ಪನ್ನಗಳ ತ ಯಾರಿಕೆಗೆ ಉಳಿದ ಹಾಲನ್ನು ಬೇರೆ ಬೇರೆ ಘಟಕಗಳಿಗೆ ಕಳಿಸಲಾಗುತ್ತಿದೆ. ಸಂಘಗಳಿಗೆ ಅಗತ್ಯವಿರುವ ಕಂಪ್ಯೂಟರ್‌ಗಳನ್ನು ಒದ ಗಿಸಲಾಗುವುದು ಎಂದು ಭರವಸೆ ನೀಡಿದರು.
ನಿರ್ದೇಶಕ ಬಿ.ಸಿ. ಸಂಜೀವಮೂರ್ತಿ ಮಾತನಾಡಿ, ಚಿತ್ರದುರ್ಗ ತಾಲೂಕಿನಲ್ಲಿದ್ದ ೨೮೦ ಸಂಘಗಳ ಸಂಖ್ಯೆ ಈಗ ೩೮೦ಕ್ಕೆ ಏರಿ ಕೆಯಾಗಿದೆ. ಚಳ್ಳಕೆರೆ, ಹೊಸದುರ್ಗ ಭಾಗಗಳಲ್ಲಿಯೂ ಹೊಸ ಸಂಘಗಳು ಸ್ಥಾಪನೆ ಆಗಿವೆ ಎಂದರು. ನಿರ್ದೇಶಕರಾದ ಜಿ.ಬಿ. ಶೇಖರ್, ರವಿಕುಮಾರ್ ಮಾತನಾಡಿದರು. ಒಕ್ಕೂಟದ ವ್ಯವಸ್ಥಾಪಕ ಸತೀಶ್, ಉಪ ವ್ಯವಸ್ಥಾಪಕ ಮುಕುಂದ, ಅಶ್ವಿನಿ ,ರಂಜಿತಾ ಇದ್ದರು.
ಲಾಭಾಂಶ ಹೆಚ್ಚಳದ ಭರವಸೆ
ಸಂಘಗಳ ಅಧ್ಯಕ್ಷರು, ಕಾರ್ಯದರ್ಶಿಗಳ ಕುಂದುಕೊರತೆ ಆಲಿಸಿದ್ದೇವೆ ಎಂದು ನಿರ್ದೇಶಕ ಜಿ.ಬಿ. ಶೇಖರ್ ಹೇಳಿದರು. ಗುಣ ಮಟ್ಟದ ಹಾಲು ಪೂರೈಸಿದರೆ ಮುಂದಿನ ದಿನಗಳಲ್ಲಿ ಲಾಭಾಂಶ ಹೆಚ್ಚಿಸಲಾಗುವುದು ಎಂದು ಭರವಸೆ ನೀಡಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net