

ಡಿಪಿಎನ್ ಶ್ರೇಷ್ಠಿ, ಚಿತ್ರದುರ್ಗ
ಸೈಬರ್ ವಂಚನೆ ಪ್ರಕರಣಗಳ ಆರೋಪಿಗಳನ್ನು ಪತ್ತೆ ಮಾಡಿ ನೊಂದವರಿಗೆ ಕಳೆದುಕೊಂಡ ಹಣ ಕೊಡಿಸುವುದು ಪೊಲೀಸ್ ಇಲಾಖೆಗೆ ಸವಾಲಾಗಿದೆ. ರಂಗೋಲಿ ಕೆಳಗೆ ನುಸುಳುವ ಚಾಲಾಕಿ ವಂಚಕರನ್ನು ಹಿಡಿದು ಹೆಡೆಮುರಿ ಕಟ್ಟುವುದು ತಲೆನೋವಾಗಿದೆ.
ಎರಡು ವರ್ಷಗಳಲ್ಲಿ ನಗರದ ಸೈಬರ್ ಅಪರಾಧ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣಗಳಲ್ಲಿ ಹಲವು ತನಿಖೆಯಲ್ಲಿದ್ದರೂ, ಕೋರ್ಟ್ ವಿಚಾರಣೆಯಲ್ಲಿರುವ ಸಂಖ್ಯೆ ಕಡಿಮೆ. ಶಿಕ್ಷೆಗೊಳಗಾದ ಅಪರಾಽಗಳ ಸಂಖ್ಯೆ ಇನ್ನೂ ಕಡಿಮೆ.
ವಂಚನೆ ಕೃತ್ಯಗಳು ದಿನಕ್ಕೊಂದು ಸ್ವರೂಪದಲ್ಲಿರುತ್ತವೆ. ಜನರನ್ನು ನಂಬಿಸಿ, ನೂರಾರು ಕಿ.ಮೀ. ದೂರದಲ್ಲಿ ಕುಳಿತು ಜನರ ಬ್ಯಾಂಕ್ ಖಾತೆಗಳಲ್ಲಿರುವ ಹಣವನ್ನು ಕ್ಷಣಾರ್ಧದಲ್ಲಿ ಎಗರಿಸುವ ಕೃತ್ಯಗಳಿಂದ ಪಾರಾಗಲು ಜಾಗೃತಿ ಅನಿವಾರ್ಯವಾಗಿದೆ. ಮೊಬೈಲ್, ಸಾಮಾಜಿಕ ಜಾಲತಾಣ, ನೆಟ್ ಇಲ್ಲದೆ ಜೀವನವಿಲ್ಲ ಎನ್ನುವ ಇಂದಿನ ವಾತಾವರಣದಲ್ಲಿ ಮೊಬೈಲ್ ಬಳಕೆದಾರರನ್ನು ವಂಚನೆ ಬಲೆಗೆ ಬೀಳಿಸುವುದು ವಂಚಕರಿಗೆ ನೀರು ಕುಡಿದಷ್ಟು ಸುಲಭ ಎನ್ನುವಂತಾಗಿದೆ.
ಗೋಲ್ಡನ್ ಹವರ್ ಗೊತ್ತಿರಲಿ
ಡಿಜಿಟಲ್ ಅರೆಸ್ಟ್, ಎಪಿಕೆ ಫೈಲ್, ಟಾಸ್ಕ್, ನಿತ್ಯ ಬಡ್ಡಿ ಪಾವತಿ ಸ್ಕೀಗಳಂಥ ವಂಚನೆ ಪ್ರಕರಣಗಳ ಬಗ್ಗೆ ಎಚ್ಚರ ವಹಿಸಬೇಕಿದೆ. ಡಿಜಿಟಲ್ ಅರೆಸ್ಟ್ನಂಥ ಬೆದರಿಕೆಗಳಿಗೆ ಜಗ್ಗದೆ ಪೊಲೀಸರಿಗೆ ತಕ್ಷಣ ಮಾಹಿತಿ ನೀಡುವುದು. ಇದನ್ನು ಮೀರಿ ಹಣ ಕಳೆದುಕೊಂಡರೆ ಗೋಲ್ಡನ್ ಹವರ್ (ಪ್ರಕರಣ ನಡೆದ ಒಂದು ಗಂಟೆಯೊಳಗೆ) ೧೯೩೦ಕ್ಕೆ ಕೂಡಲೇ ಕರೆ ಮಾಡಿ ತಿಳಿಸಿದರೆ, ವಂಚಕರ ಬ್ಯಾಂಕ್ ಖಾತೆ ಫ್ರೀಜ್ ಮಾಡಲು ಸಾಧ್ಯವಾಗಲಿದೆ.
ಜನಕಲ್ಯಾಣ ಯೋಜನೆಗಳು, ಸ್ವಯಂ ಉದ್ಯೋಗ, ವ್ಯಾಪಾರ ವಿಸ್ತರಣೆಗೆ ಸಾಲ, ನಕಲಿ ಮಂಜೂರಾತಿ ಪತ್ರ, ಮಹಾನಗರ ಗ್ಯಾಸ್, ಅಡುಗೆ ಅನಿಲ ಸಂಪರ್ಕ ಕಡಿತಗೊಳಿಸುತ್ತೇವೆ, ಈ ಆ್ಯಪ್ ಡೌನ್ಮಾಡಿಕೊಂಡು, ೧೦/೨೦ ರೂ. ಶುಲ್ಕ ಪಾವತಿಸಿ ಎಂದು ತಿಳಿಸುವ ಎಪಿ ಕೆ ಫೈಲ್ಗಳ ಮೂಲಕ ವಂಚಿಸಲಾಗುತ್ತಿದೆ.
ಇAತಹ ಫೈಲ್ಗಳು ಓಪನ್ ಆದರೆ ಖಾತೆಗಳಲ್ಲಿರುವ ಹಣ ವಂಚಕರ ಪಾಲಾಗುತ್ತದೆ. ಆರ್ಟಿಒ ಚಲನ್, ಟಾಸ್ಕ್, ಇನ್ವೆಸ್ಟ್ಮೆಂಟ್ ಹೆಸರಲ್ಲೂ ವಂಚನೆ ನಡೆಯುತ್ತದೆ.
ಗೊತ್ತಿದ್ದೊ, ಗೊತ್ತಿಲ್ಲದೆಯೋ ಬ್ಯಾಂಕ್ ಖಾತೆಗಳಿಗೆ ಅಪರಿಚಿತರಿಂದ ಹಣ ಹಾಕಿಸಿಕೊಳ್ಳುವುದು ತಪ್ಪು. ಇಂಥ ಖಾತೆಗಳನ್ನು ಪೊಲೀ ಸರು ಮ್ಯೂಲ್ ಅಕೌಂಟ್ಗಳೆAದು, ಖಾತೆದಾರರ ವಿರುದ್ಧವೂ ಕ್ರಮ ತೆಗೆದುಕೊಳ್ಳುತ್ತಾರೆ. ಚಿಕ್ಕಜಾಜೂರಲ್ಲಿ ೨೦೨೪ರಲ್ಲಿ ಇನ್ವೆಸ್ಟ್ಮೆಂಟ್ ಹೆಸರಲ್ಲಿ ನಡೆದಿದ್ದ ಬಹುಕೋಟಿ ಹಗರಣದ ತನಿಖೆಯನ್ನು ಸಿಐಡಿಗೆ ಒಪ್ಪಿಸಲಾಗಿದೆ.
೨ವರ್ಷಗಳಲ್ಲಿ ದಾಖಲಾದ ಪ್ರಕರಣಗಳು
೨೦೨೫ರಲ್ಲಿ ೬೫ ಸೈಬರ್ ಪ್ರಕರಣಗಳು ದಾಖಲಾಗಿದ್ದು, ೧೯ಪತ್ತೆ ಮಾಡಲಾಗಿದೆ, ೩೯ರಲ್ಲಿ ತನಿಖೆ ನಡೆಯುತ್ತಿದೆ. ೭ನ್ಯಾಯಾಲಯದ ವಿಚಾರಣೆಯಲ್ಲಿವೆ. ಕಳೆದ ವರ್ಷ ಇನ್ವೆಸ್ಟ್ಮೆಂಟ್ ಹೆಸರಲ್ಲಿ ೧.೧೦ ಕೋಟಿ ರೂ.ಆನ್ಲೈನ್ ವಂಚನೆ ಪ್ರಕರಣ ನಗರ ಠಾಣೆಯಲ್ಲಿ ದಾಖಲಾಗಿತ್ತು. ಇದಕ್ಕೆ ಸಂಬAಽಸಿದAತೆ ಖಾತೆ ಫ್ರೀಜ್ ಆಗಿದೆ. ದೂರುದಾರನಿಗೆ ೯.೮೬ ಲಕ್ಷ ರೂ. ಹಿಂತಿರುಗಿಸಲಾಗಿದ್ದು, ತನಿಖೆ ಮುಂದುವರಿದಿದೆ.
ಪ್ರಸಕ್ತ ವರ್ಷದ ಅ. ೧೫ರವರೆಗೆ ೭೬ ಪ್ರಕರಣಗಳು ದಾಖಲಾಗಿದ್ದು, ಒಂದು ಪತ್ತೆಯಾಗಿದೆ. ೭೩ ಪ್ರಕರಣಗಳ ತನಿಖೆ ಪ್ರಗತಿಯಲ್ಲಿದೆ. ೨ ಪ್ರಕರಣಗಳ ವಿಚಾರಣೆ ನ್ಯಾಯಾಲದಲ್ಲಿದ್ದು, ಈ ವರ್ಷದಲ್ಲಿ ಇನ್ವೆಸ್ಟ್ಮೆಂಟ್ ಹೆಸರಲ್ಲಿ ಆನ್ಲೈನ್ ವಂಚನೆಯಲ್ಲಾದ ೮೧.೩೪ ಲಕ್ಷ ರೂ. ಫೈಕಿ ೧೧.೪೦ ಲಕ್ಷ ರೂ.ಫ್ರೀಜ್ ಆಗಿದೆ. ಈ ಹಣವನ್ನು ದೂರುದಾರನಿಗೆ ಹಿಂತಿರುಗಿಸಲು ಕೋರ್ಟಿಗೆ ಪತ್ರ ಬರೆಯಲಾಗಿದೆ.
ರಿಟ್ರೆÊವರ್ ಇಲ್ಲ
ನಗರದ ಸೈಬರ್ ಅಪರಾಧ ಪೊಲೀಸ್ ಠಾಣೆಗೆ ೨೦೨೦ರಲ್ಲಿ ಸರಬರಾಜಾಗಿದ್ದ ಮೊಬೈಲ್ ಫೋರೆನ್ಸಿಕ್ಸ್ ಉಪಕರಣ(ರಿಟ್ರೆÊವರ್)ವನ್ನು ಬೆಂಗಳೂರು ಮಡಿವಾಳದ ಎಫ್ಎಸ್ಎಲ್ಗೆ ಮರಳಿಸಲಾಗಿದೆ.
ದಿನಕ್ಕೊಂದು ಸಂದೇಶ
ಎಸ್ಪಿ ಕುಶಲ್ಚೌಕ್ಸೆ ಅವರು ಸೈಬರ್ ಅಪರಾಧಗಳು, ಸರಗಳ್ಳತನ, ಅಪಾಯಕಾರಿ ಮೋಟಾರು ಬೈಕ್ ಇತ್ಯಾದಿ ವಾಹನ ಸವಾರಿ ವಿರುದ್ಧ ಸಾಮಾಜಿಕ ಜಾಲಾತಾಣಗಳ ಮೂಲಕ ನಿತ್ಯ ಸಂದೇಶಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಸೈಬರ್ ಅಪರಾಧ ಠಾಣೆ ಪೊಲೀಸರು ಕೂಡ ಜಿಲ್ಲಾದ್ಯಂತ ಶಾಲಾ, ಕಾಲೇಜು, ಉದ್ಯಾನ, ಸಂತೆ, ಬಸ್ ನಿಲ್ದಾಣ ಇತ್ಯಾದಿ ಸ್ಥಳಗಳಲ್ಲಿ ಸೈಬರ್ ವಂಚನೆ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ, ವಿಶೇಷವಾಗಿ ಟ್ರೆಂಡಿAಗ್ ವಂಚನೆ ಕುರಿತಂತೆ ಜನರನ್ನು ಎಚ್ಚರಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.