Country: ಗಡಿಭಾಗದ ಕನ್ನಡಿಗರಿಗೆ ನಾಡು-ನುಡಿ ಅಭಿಮಾನ

Country: ನಾಗಪ್ಪನಹಗಳ್ಳಿಗೇಟ್ ಮುಖ್ಯವೃತ್ತದಲ್ಲಿ ಭಾನುವಾರ ಕನ್ನಡ ರಾಜ್ಯೋತ್ಸವದಲ್ಲಿ ಭುವನೇಶ್ವರಿ ದೇವಿಗೆ ಪುಷ್ಪಾರ್ಚನೆ ಸಲ್ಲಿಸಲಾಯಿತು.
Country: ನಾಗಪ್ಪನಹಗಳ್ಳಿಗೇಟ್ ಮುಖ್ಯವೃತ್ತದಲ್ಲಿ ಭಾನುವಾರ ಕನ್ನಡ ರಾಜ್ಯೋತ್ಸವದಲ್ಲಿ ಭುವನೇಶ್ವರಿ ದೇವಿಗೆ ಪುಷ್ಪಾರ್ಚನೆ ಸಲ್ಲಿಸಲಾಯಿತು.
Published on

ಪ್ರಮುಖ ಮುಖ್ಯಾಂಶಗಳು

  • ಪಿಲ್ಲಹಳ್ಳಿ ಸಿ. ಚಿತ್ರಲಿಂಗಪ್ಪ ಕರೆ
  • ನಾಗಪ್ಪನಹಳ್ಳಿಗೇಟ್‌ನಲ್ಲಿ ವಿಜೃಂಭಣೆಯಿಂದ ಕನ್ನಡ ರಾಜ್ಯೋತ್ಸವ ಆಚರಣೆ
  • ನಮ್ಮ ನಾಡು, ನುಡಿ, ನೆಲ ಮತ್ತು ಜಲದ ಬಗ್ಗೆ ಅಭಿಮಾನ ಮತ್ತು ಪ್ರೀತಿಯನ್ನು ಬೆಳೆಸಿಕೊಳ್ಳಬೇಕು

ಪರಶುರಾಮಪುರ:ಆಂಧ್ರ ಗಡಿಭಾಗದಪ್ರದೇಶಗಳಲ್ಲಿ ವಾಸಿಸುವ ಕನ್ನಡಿಗರುಕಡ್ಡಾಯವಾಗಿ ನಮ್ಮ ನಾಡು,ನುಡಿ,ನೆಲ ಮತ್ತು ಜಲದಬಗ್ಗೆ ಅಪಾರ ಅಭಿಮಾನ ಮತ್ತುಪ್ರೀತಿಯನ್ನು ಬೆಳೆಸಿಕೊಳ್ಳಬೇಕುಎಂದು ಸಾಮಾಜಿಕ ಹೋರಾಟಗಾರಪಿಲ್ಲಹಳ್ಳಿ ಸಿ.ಚಿತ್ರಲಿಂಗಪ್ಪಅವರು ಕರೆ ನೀಡಿದರು.

ಗಡಿಭಾಗದಹೆಬ್ಬಾಗಿಲಲ್ಲಿ ರಾಜ್ಯೋತ್ಸವ

ಸಮೀಪದ ನಾಗಪ್ಪನಹಳ್ಳಿಗೇಟ್ಮುಖ್ಯವೃತ್ತದಲ್ಲಿ ಭಾನುವಾರನಾಗರಿಕ ಹಿತರಕ್ಷಣಾ ವೇದಿಕೆಹಾಗೂ ಸಮಾನ ಮನಸ್ಕ ಯುವಕರುಆಯೋಜಿಸಿದ್ದ ಕನ್ನಡ ರಾಜ್ಯೋತ್ಸವಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸೀಮಾಂಧ್ರ ಮತ್ತುಕರ್ನಾಟಕದ ಹೆಬ್ಬಾಗಿಲಾಗಿರುವನಾಗಪ್ಪನಹಳ್ಳಿಗೇಟ್‌ನಲ್ಲಿಕನ್ನಡ ಭಾಷೆಯ ಉಳಿವಿಗೆ ಹಲವುಕಾರ್ಯಕ್ರಮಗಳನ್ನು ನಿರಂತರವಾಗಿಆಯೋಜಿಸಬೇಕು.ಇದು ಈ ಭಾಗದಜನರಲ್ಲಿ ನಾಡು,ನುಡಿ ಬಗ್ಗೆಪ್ರೀತಿ, ಅಭಿಮಾನವನ್ನುಮೂಡಿಸಲು ಸಹಾಯಕವಾಗುತ್ತದೆ ಎಂದುಚಿತ್ರಲಿಂಗಪ್ಪ ತಿಳಿಸಿದರು.

ಕನ್ನಡದಲ್ಲೇಶಿಕ್ಷಣ:ಗಡಿಭಾಗದಜನರ ಪ್ರೀತಿ

ಕಾರ್ಯಕ್ರಮದಲ್ಲಿಮಾತನಾಡಿದ ಗ್ರಾಮದ ಸರ್ಕಾರಿಕಿರಿಯ ಪ್ರಾಥಮಿಕ ಶಾಲಾ ಸಮಿತಿಅಧ್ಯಕ್ಷ ಎನ್.ಟಿ.ಪ್ರಹ್ಲಾದ್,ಆಂಧ್ರ ಪ್ರದೇಶಕ್ಕೆಸೇರಿರುವ ನಾಗಪ್ಪನಹಳ್ಳಿ,ಸೀಗಲಹಳ್ಳಿ,ಮಲಯನೂರು ಸೇರಿದಂತೆಈ ಪ್ರದೇಶದ ಹತ್ತಾರು ಗ್ರಾಮಗಳಜನರು ಕನ್ನಡ ಭಾಷೆಯಲ್ಲೇ ಮಕ್ಕಳಿಗೆಶಿಕ್ಷಣ ಕೊಡಿಸುತ್ತಿರುವುದುಹೆಮ್ಮೆಯ ವಿಷಯ ಎಂದು ತಿಳಿಸಿದರು.

ವಾರದಸಂತೆ ಪುನಾರಂಭದಿಂದ ಸಂತಸ

ಕನ್ನಡ ರಾಜ್ಯೋತ್ಸವದೊಂದಿಗೆಈ ಸಂದರ್ಭದಲ್ಲಿ ವಾರದ ಸಂತೆಪುನಾರಂಭ ಕಾರ್ಯಕ್ರಮವನ್ನುಕೂಡ ಆಯೋಜಿಸಲಾಗಿತ್ತು.ಆಂಧ್ರದ ಜನರುಕರ್ನಾಟಕದ ಈ ಪ್ರದೇಶಗಳಿಗೆ ಸಂತೆಸೇರಿ ಅಗತ್ಯ ವಸ್ತುಗಳ ಖರೀದಿಗೆಹೆಚ್ಚು ಬರುತ್ತಿರುವುದರಿಂದ,ಸಂತೆ ಪುನಾರಂಭಗೊಂಡಿರುವುದುಗಡಿಭಾಗದ ವ್ಯಾಪಾರ ವಹಿವಾಟಿಗೆಸಂತಸ ತಂದಿದೆ ಎಂದು ಎನ್.ಟಿ.ಪ್ರಹ್ಲಾದ್ಹೇಳಿದರು.

ಕಾರ್ಯಕ್ರಮದಲ್ಲಿಗ್ರಾಪಂ ಮಾಜಿ ಸದಸ್ಯ ಪಿಲ್ಲಹಳ್ಳಿಚಂದ್ರಣ್ಣ,ಹನುಮಂತರಾಯ,ಪಿ.ಹನುಮಂತಪ್ಪ,ಮಂಜುನಾಥ,ಮಾರುತಿ,ಶಿವಣ್ಣ,ಜಿ.ದಾಸಪ್ಪ,ರವೀಂದ್ರನಾಥಶೆಟ್ಟಿ,ಚಿನ್ನು,ಪಿ.ವಿ.ಮಂಜು ಮತ್ತುಎಸ್. ಮಹೇಶಸೇರಿದಂತೆ ಹಲವು ಗಣ್ಯರು ಹಾಗೂಸಾರ್ವಜನಿಕರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net